Ayodhya ರಾಮಮಂದಿರ ಕುರಿತ ರಾಜಣ್ಣ ಹೇಳಿಕೆ ಮೂರ್ಖತನದ್ದು: ನಳಿನ್
Team Udayavani, Jan 19, 2024, 10:35 PM IST
ಮಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ, ಅದರ ಉದ್ಘಾಟನೆಗೆ ಸಮಯ ಸನ್ನಿಹಿತವಾಗುವಾಗ ದೇಶವಿಡೀ ಸಂಭ್ರಮ ತುಂಬಿದೆ, ಆದರೆ ಇದೇ ವೇಳೆ ಸಚಿವ ರಾಜಣ್ಣ ಮೂರ್ಖತನದ ಹೇಳಿಕೆ ನೀಡಿದ್ದು, ಇದು ಕಾಂಗ್ರೆಸ್‌ನ ಮಾನಸಿಕತೆಯನ್ನು ತೋರಿಸುತ್ತದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಅಯೋಧ್ಯೆಯ ರಾಮ ಮಂದಿರವನ್ನು ಟೂರಿಂಗ್ ಟಾಕೀಸ್‌ಗೆ ಹೋಲಿಸಿರುವುದು, ಅಯೋಧ್ಯೆಯ ರಾಮ ಮಂದಿರದ ಬಗ್ಗೆ ಕೀಳಾಗಿ ಮಾತನಾಡಿರುವುದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದರು.
ರಾಜಣ್ಣ ಅಧಿಕಾರದ ದಾಹ, ಮೋಹ, ಸ್ಥಾನಕ್ಕಾಗಿ ಈ ರೀತಿಯ ಹೇಳಿಕೆ ಕೊಡುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಅನ್ನು ಮೆಚ್ಚಿಸುವ ಕೆಲಸ ಮಾಡಿದ್ದಾರೆ. ರಾಜಣ್ಣನಂತಹವರ ಮಾತು ರಾಮಮಂದಿರಕ್ಕೆ ಆವಶ್ಯಕತೆಯಿಲ್ಲ. ಅವರ ಮಾತು ಬಹುಸಂಖ್ಯಾಕ ಹಿಂದೂಗಳಿಗೆ ಮಾಡಿರುವ ಅವಮಾನ ಎಂದರು.
ಒಳ ಮೀಸಲು ಕಾಂಗ್ರೆಸ್ ನಾಟಕ
ಒಳ ಮೀಸಲಾತಿ ಜಾರಿಗೆ ಕೇಂದ್ರ ಸರಕಾರಕ್ಕೆ ರಾಜ್ಯ ಶಿಫಾರಸು ಮಾಡಿದ ವಿಚಾರದ ಬಗ್ಗೆ ಮಾತಾಡಿದ ನಳಿನ್ , ಜಾತಿ-ಜಾತಿ, ಸಮುದಾಯವನ್ನು ಒಡೆಯುವುದು ಕಾಂಗ್ರೆಸ್ ಜಾಯಮಾನ. ಅವರಿಗೆ ಇಚ್ಛಾಶಕ್ತಿ ಇದ್ದರೆ ಅವರೇ ಒಂದು ನಿರ್ಣಯ ತೆಗೆದುಕೊಳ್ಳಬಹುದಿತ್ತು. ಅವರಿಗೆ ಇಚ್ಛಾಶಕ್ತಿಯ ಕೊರತೆ ಇದೆ. ಕೇವಲ ಓಟಿಗಾಗಿ ಸಿಎಂ ಸಿದ್ದರಾಮಯ್ಯ ಈ ರೀತಿ ನಾಟಕ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.