60ರ ದಶಕವನ್ನು ನೆನಪಿಸಿದ ಜಾವಾ ಯಜ್ಡಿ ಬೈಕ್‌ಗಳ ರ‍್ಯಾಲಿ
Team Udayavani, Jul 15, 2019, 5:42 AM IST
ಸುರತ್ಕಲ್: ಪಣಂಬೂರು ಕಡಲ ಕಿನಾರೆಯಲ್ಲಿ ರವಿವಾರ 60ರ ದಶಕವನ್ನು ನೆನಪಿಸುವಂತೆ ಹಳೆಯ ಆ್ಯಂಟಿಕ್ ಪೀಸ್ ಜಾವಾ ಯಜ್ಡಿ ಬೈಕ್‌ಗಳ ಪ್ರದರ್ಶನ ರ‍್ಯಾಲಿ ಜರಗಿತು. ಮಂಗಳೂರು ಜಾವಾ ಯಜ್ಡಿ ಮೋಟಾರ್ ಸೈಕಲ್ ಕ್ಲಬ್ ಆಯೋಜಿಸಿತ್ತು.
ಮಂಗಳೂರಿನ 60, ಬೆಂಗಳೂರಿನ 14, ಉಡುಪಿಯ 18, ಮೈಸೂರಿನ 2 ಹಾಗೂ ಮಡಿಕೇರಿಯ ಓರ್ವ ಮಹಿಳಾ ಬೈಕ್ ರೈಡರ್ ಸಹಿತ ಸುಮಾರು ನೂರು ಬೈಕ್‌ಗಳ ಮಾಲಕರು ಜಾಗೃತಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ 1960ರಿಂದ 1996ರ ತನಕವು ಭಾರತದಲ್ಲಿ ತನ್ನದೆ ಆದ ಜನಪ್ರಿಯತೆ ಹೊಂದಿದ್ದ ಐಡಿಯಲ್ ಜಾವಾ ಸಂಸ್ಥೆಯು ಜಾವಾ 250, ಜಾವಾ 50 ಜೆಟ್, ಯೆಜ್ಡಿ 250, ಯೆಜ್ಡಿ 250 ಕ್ಲಾಸಿಕ್, ಯೆಜ್ಡಿ 250 ರೋಡ್ ಕಿಂಗ್, ಯೆಜ್ಡಿ 250 ಮೋನಾರ್ಚ್, ಯೆಜ್ಡಿ 175 ಡಿಲಕ್ಸ್ ಮತ್ತು ಯೆಜ್ಡಿ 350 ಟಿನ್ವ್ ಬೈಕ್‌ಗಳಲ್ಲಿ ಹಲವು ಮಾಡೆಲ್ಗಳ ಬೈಕ್ ಭಾಗವಹಿಸಿ ಮೆಚ್ಚುಗೆ ಗಳಿಸಿತು. ಪಣಂಬೂರು ಚಿತ್ರಾಪುರ ಮಾರ್ಗವಾಗಿ ರ್ಯಾಲಿ ನಡೆದು ಚಿತ್ರಾಪುರ ಬೀಚ್ ಕಿನಾರೆಯಲ್ಲಿ ಸಮಾರೋಪಗೊಂಡಿತು. ಈ ಸಂದರ್ಭ ಬೈಕ್ ಚಾಲನೆಯಲ್ಲಿ ಸುರಕ್ಷತೆ ಬಗ್ಗೆ ಮಾಹಿತಿ ನೀಡಲಾಯಿತು.
ಜಾವಾ ಯೆಜ್ಡಿ ಬೈಕ್‌ಗಳ ಉತ್ಪಾದನೆ ಮತ್ತು ಮಾರಾಟ ಇಲ್ಲವಾದ್ರೂ ಅವುಗಳ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ. ಇದೀಗ ಹೊಸ ಮಾಡಲೆಗಳು ಮಾರುಕಟ್ಟೆಗಳಲ್ಲಿ 2 ಲಕ್ಷ ರೂ. ವರೆಗೆ ದರದಲ್ಲಿ ಸಿಗುತ್ತವೆ. ಹಳೆಯ ಬೈಕ್‌ಗಳ ಮಾಲಕರು ಇಂದಿಗೂ ಇದನ್ನು ಸುಸ್ಥಿತಿಯಲ್ಲಿಟ್ಟುಕೊಂಡಿದ್ದಾರೆ. ಕೆಲವರು ಖರೀದಿಸಿ ದುರಸ್ತಿ ಮಾಡಿದ್ದಾರೆ. ಇದೀಗ ಹಳೆಯ ಬೈಕಿನ ಬಿಡಿ ಭಾಗಗಳು ಸಿಗುವುದೇ ಕಷ್ಟ. 2009ರಿಂದ ನಾವು ಜಾವಾ ಯಜ್ಡಿ ಬೈಕ್ ರ‍್ಯಾಲಿ ನಡೆಸುತ್ತಾ ಬರುತ್ತಿದ್ದೇವೆ ಎಂದು ಮಂಗಳೂರು ಜಾವಾ ಯಜ್ಡಿ ಮೋಟಾರ್ ಸೈಕಲ್ ಕ್ಲಬ್‌ನ ಶಾನ್ ಫೆರ್ನಾಂಡಿಸ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
MUST WATCH
ಹೊಸ ಸೇರ್ಪಡೆ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.