Ram Mandir: ಜ.1ರಿಂದ 15ರವರೆಗೆ ಮನೆ ಮನೆಗೆ ಮಂತ್ರಾಕ್ಷತೆ ವಿತರಣೆ ಅಭಿಯಾನ
Team Udayavani, Dec 31, 2023, 2:28 PM IST
ಮಂಗಳೂರು: ಜನವರಿ 22ರ ರಾಮಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಅಯೋಧ್ಯೆಯಿಂದ ಬಂದಂತಹ ಪವಿತ್ರ ಮಂತ್ರಾಕ್ಷತೆಯನ್ನು ರಾಜ್ಯದ ಎಲ್ಲಾ ಗ್ರಾಮಗಳ ಪ್ರತಿ ಮನೆಗಳಿಗೆ ವಿತರಿಸುವ ಅಭಿಯಾನವು ಜನವರಿ 1ರಿಂದ 15ರವರೆಗೆ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪುವೆಲ್ ಹೇಳಿದ್ದಾರೆ.
ಮಂತ್ರಾಕ್ಷತೆಯೊಂದಿಗ ಶ್ರೀ ರಾಮ ದೇವರ ಭಾವಚಿತ್ರ ಮತ್ತು ಆಮಂತ್ರಣ ಪತ್ರಿಕೆ ಪತ್ರವನ್ನು ನೀಡಲಿದ್ದು, ಮಂತ್ರಾಕ್ಷತೆ ವಿತರಣೆ ಸಂದರ್ಭದಲ್ಲಿ ಯಾರೂ ಕೂಡ ಹಣವನ್ನು ನೀಡಿವಂತಿಲ್ಲ. ಯಾವುದೇ ಹಣವನ್ನು ಅಥವಾ ಯಾವುದೇ ವಸ್ತು ರೂಪದಲ್ಲಿ ನೀಡಬಾರದು. ಇದೊಂದು ಅಭಿಯಾನವಾಗಿರುವ ಕಾರಣ ಯಾವುದೇ ರೀತಿಯ ವ್ರತಾಚಾರಣೆ, ಕಟ್ಟು ಪಾಡು ನಿಯಮಗಳು ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಯೋದ್ಯೆಯಲ್ಲಿ ರಾಮ ಪ್ರಾಣಪ್ರತಿಷ್ಠೆಯ ಸಂದರ್ಭದಲ್ಲಿ ರಾಜ್ಯದ ಸಾವಿರಾರು ಕೇಂದ್ರಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪೂಜೆ, ಹವನ ಸತ್ಸಂಗ, ಭಜನೆ ಮುಂತಾದ ಕಾರ್ಯಕ್ರಮ ನಡೆಯಲಿದೆ. ಪ್ರಾಣ ಪ್ರತಿಷ್ಠೆಯ ನೇರಪ್ರಸಾರ ಕೂಡ ಆಯಾಯ ಕೇಂದ್ರಗಳಲ್ಲಿ ನಡೆಯಲಿದೆ. ಆ ದಿನ ಸಂಜೆ ವೇಳೆ ಪ್ರತಿ ಮನೆಯಲ್ಲಿ ಕನಿಷ್ಠ 5 ದೀಪಗಳನ್ನು ಉರಿಸಿ, ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಉತ್ತರದ ಕಡೆಗೆ ಮುಖ ಮಾಡಿ ಆರತಿ ಮಾಡಬೇಕು ಈ ಮೂಲಕ ಆ ದಿನವನ್ನು ಸಂಭ್ರಮಿಸಬೇಕೆಂದು ಟ್ರಸ್ಟ್ ಕರೆ ನೀಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.