ಮನಸ್ಸಿನ ಸ್ವಚ್ಛತೆಗೂ ಒತ್ತು ನೀಡಬೇಕಿದೆ: ಡಾ| ಜಿ.ವಿ. ಹೆಗಡೆ
ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ
Team Udayavani, Apr 16, 2019, 6:17 AM IST
ಮಹಾನಗರ: ಇಂದಿನ ಸಮಾಜದಲ್ಲಿ ಬಾಹ್ಯ ಶುಚಿತ್ವಕ್ಕೆ ಒತ್ತು ಕೊಟ್ಟಂತೆ ಮನಸ್ಸಿನ ಸ್ವಚ್ಛತೆಗೂ ಒತ್ತು ನೀಡಬೇಕಿದೆ ಎಂದು ರಾಜ್ಯ ಹಾಲು ಉತ್ಪಾದಕರ ಒಕ್ಕೂಟ, ದಕ್ಷಿಣ ಕನ್ನಡ ಇದರ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಜಿ.ವಿ. ಹೆಗಡೆ ಹೇಳಿದರು.
ಕುಲಶೇಖರ ಚೌಕಿಯಲ್ಲಿ ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಎ. 14ರಂದು ಆಯೋಜಿಸಿದ್ದ ಸ್ವಚ್ಛ ಮಂಗಳೂರು ಅಭಿಯಾನದ 5ನೇ ಹಂತದ 19ನೇ ರವಿವಾರದ ಶ್ರಮದಾನದ ಉದ್ಘಾಟನ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಿತಿ ಮೀರಿದ ಪೈಪೋಟಿ, ಒತ್ತಡ, ಮೇಲಾಟಗಳ ಮನಸ್ಸನ್ನು ಸ್ವಚ್ಛಗೊಳಿಸಿ ತಿಳಿಗೊಳಿಸಬೇಕಾದ ಅನಿವಾರ್ಯವಿದೆ. ಅಂತಹ ಕಾರ್ಯಕ್ಕೂ ಈ ಅಭಿಯಾನದಲ್ಲಿ ಒತ್ತು ನೀಡುತ್ತಿರುವುದು ಸಂತೋಷದ ವಿಚಾರ. ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಸ್ವಚ್ಛತೆಯ ಬೆಳಕು ಹರಿಯಲಿ, ಸ್ವಚ್ಛತಾ ಆಂದೋಲನ ಯಶಸ್ವಿಯಾಗಲಿ. ನಾಲ್ಕು ವರ್ಷಗಳಿಂದ ಸ್ವಚ್ಛತಾ ಆಂದೋಲನ ದೇಶಾದ್ಯಂತ ನಡೆಯುತ್ತಿದೆ. ದೇಶದ ಬೇರೆ ಪ್ರದೇಶಗಳಿಗೆ ಹೋಲಿಸಿದರೆ ಮಂಗಳೂರು ನಗರ ಅತ್ಯಂತ ಹೆಚ್ಚು ಸ್ವಚ್ಛ ನಗರವಾಗಿ ಗೋಚರವಾಗುತ್ತಿರುವು ದಕ್ಕೆ ಸ್ವಚ್ಛತಾ ಅಭಿಯಾನ ಹಾಗೂ ಇಲ್ಲಿನ ಜನತೆಯ ಪ್ರಜ್ಞಾವಂತಿಕೆ ಎಂದರು.
ರಾಜ್ಯ ಹಾಲು ಉತ್ಪಾದಕರ ಒಕ್ಕೂಟ, ದಕ್ಷಿಣ ಕನ್ನಡ ಇದರ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಜಿ.ವಿ. ಹೆಗಡೆ, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಜಯ ದೇವಪ್ಪ ಶ್ರಮದಾನಕ್ಕೆ ಚಾಲನೆ ನೀಡಿದರು.
ಜನಾಂದೋಲನವಾಗಲಿ
ಮತ್ತೂಬ್ಬ ಅತಿಥಿ ಜಯದೇವಪ್ಪ ಮಾತ ನಾಡಿ, ಸಮಾಜಮುಖೀ ಕಾರ್ಯಗಳ ಮೂಲಕ ಸಮಾನ ಮನಸ್ಕರನ್ನು ಒಗ್ಗೂಡಿಸಿ ಸ್ವಚ್ಛತಾ ಅಭಿಯಾನ ನಡೆಸುತ್ತಿರುವ ರಾಮ ಕೃಷ್ಣ ಮಿಷನ್ ಕಾರ್ಯ ಶ್ಲಾಘನೀಯ. ಮನಸ್ಸಿನ ಹಿತವನ್ನು ಕಾಪಾಡುವ ಕಾರ್ಯ ವನ್ನು ಆಶ್ರಮ ಕೈಗೊಳ್ಳುತ್ತಿದೆ. ಇದೊಂದು ಜನಾಂದೋಲನ ಆಗಬೇಕು. ಇದು ಸರ್ವರ ಕೆಲಸವಾಗ ಲಿ. ಹೆಚ್ಚು ಜನರು ಈ ಕಾರ್ಯದಲ್ಲಿ ಕೈಜೋಡಿಸಿದಾಗ ಈ ಅಭಿಯಾನಕ್ಕೆ ಬಲ ಬರುತ್ತದೆ ಎಂದರು.
ಅಭಿಯಾನದ ಪ್ರಮುಖರಾದ ಉಮಾ ನಾಥ್ ಕೋಟೆಕಾರ್, ರಂಜನ್ ಬೆಳ್ಳರ್ಪಾಡಿ, ಅನಿರುದ್ಧ ನಾಯಕ್, ಶಿವರಾಮ್ ಆಡೂರ್, ಬಾಲ ಕೃಷ್ಣ ನಾೖಕ್, ಶಿವರಾಜ್ ಪೂಜಾರಿ, ಸುನಂದಾ ಶಿವರಾಂ, ನಿಹಾಲ್ ಶೆಟ್ಟಿ ಮೊದ ಲಾ ದ ವರು ಉಪಸ್ಥಿತರಿದ್ದರು.
ಅವಿನಾಶ್ ಅಂಚನ್, ಹಿರಿಯ ಕಾರ್ಯಕರ್ತರು ಕಸದರಾಶಿಯಿಂದ ತುಂಬಿದ್ದ ಬ್ಲಾಕ್ ಸ್ಪಾಟ್ ಜಾಗವನ್ನು ತ್ಯಾಜ್ಯಮುಕ್ತಗೊಳಿಸಿದರು. ಅಲ್ಲಿದ್ದ ಕಲ್ಲು ಮಣ್ಣುಗಳನ್ನು ತೆಗೆದು ಸಮತಟ್ಟು ಗೊಳಿಸ ಲಾಯಿತು. ಬಳಿಕ ಅಲ್ಲಿ ಆಲಂಕಾರಿಕ ಗಿಡ ಗಳನ್ನಿಟ್ಟು ತ್ಯಾಜ್ಯ ಬೀಳುತ್ತಿದ್ದ ಜಾಗವನ್ನು ಅಂದಗೊಳಿಸಲಾಯಿತು.
ಕುಲಶೇಖರ ಚೌಕಿ ಪರಿಸರದಲ್ಲಿರುವ ಮಂಗಳೂರು-ಸೊಲ್ಲಾಪುರ ಹೆದ್ದಾರಿಯ ಇಕ್ಕೆಲಗಳನ್ನು ಮಹಿಳಾ ಕಾರ್ಯಕರ್ತರು ಪೊರಕೆ ಹಿಡಿದು ಸ್ವತ್ಛಗೊಳಿಸಿದರು. ಮತ್ತೂಂದು ತಂಡ ಪುನಿತ್ ಪೂಜಾರಿ, ರವಿ ಕೆ.ಆರ್. ಜತೆ ಸೇರಿ ನಂದಿನಿ ಬಸ್ ನಿಲ್ದಾಣದ ಬಳಿ ಇರುವ ತ್ಯಾಜ್ಯ ರಾಶಿಯನ್ನು ತೆಗೆದು ಹಸನುಗೊಳಿಸಿದರು. ಬಳಿಕ ಅಲ್ಲಿಯೂ ಹೂಗಿಡಗಳನ್ನು ಇರಿಸಿದರು. ಇಂದಿನಿಂದ ಕಸದ ರಾಶಿ ಬೀಳುತ್ತಿದ್ದ ಆ ಎರಡೂ ಸ್ಥಳಗಳಲ್ಲಿ ಸ್ವಚ್ಛ ತಾ ಯೋಧರ ಪಡೆ ನಿರಂತರವಾಗಿ ನಿಗಾ ವಹಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಅಲ್ಲಿ ಮತ್ತೆ ಕಸ ಬೀಳದಂತೆ ಜಾಗೃತೆ ವಹಿಸಲು ವ್ಯವಸ್ಥೆ ಮಾಡಲಾಯಿತು.
ಮೇರ್ಲಪದವು
ರಾಮಕೃಷ್ಣ ಮಿಷನ್ ಮಾರ್ಗದರ್ಶನ ದಲ್ಲಿ ವಳಚ್ಚಿಲ್-ಮೇರ್ಲಪದವಿನಲ್ಲಿ ಸ್ವಚ್ಛತಾ ಕಾರ್ಯಕ್ರಮ ಜರಗಿತು. ಶ್ರೀ ನಾಗನಾಗಿಣಿ ಕ್ಷೇತ್ರದ ಸುತ್ತಮುತ್ತಲಿನ ಪರಿಸರದಲ್ಲಿ ಶ್ರಮದಾನವನ್ನು ನಡೆಯಿತು. ಕಮಲಾಕ್ಷ ಕೊಟ್ಟಾರಿ ಮತ್ತು ವಿನೋದಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸುಮಾರು 70 ಜನ ಸ್ವಯಂ ಸೇವಕರು ಬೆಳಗ್ಗೆ ಸುಮಾರು ಎರಡು ಗಂಟೆಗಳ ಕಾಲ ಬೀದಿಗಳನ್ನು ಗುಡಿಸಿದರು, ಹುಲ್ಲು ತೆಗೆದರು, ಕಲ್ಲು ಮಣ್ಣುಗಳನ್ನು ತೆರವುಗೊ ಳಿಸಿದರು. ರಾಜೇಶ್ ಶೆಟ್ಟಿ, ಡೆನಿjಲ್, ನಿಶಿತಾ, ವಿಜಯಲಕ್ಷ್ಮೀ,ಸೌಮ್ಯಾ, ಶಶಿಧರ, ನವೀನ್ ಮತ್ತಿತರರು ಶ್ರಮದಾನದಲ್ಲಿ ಪಾಲ್ಗೊಂಡರು. ಜಯರಾಂ ಶೆಟ್ಟಿಗಾರ್, ಅಶೋಕ್ ಕೊಟ್ಟಾರಿ ಕಾರ್ಯಕ್ರಮವನ್ನು ಸಂಯೋಜಿಸಿದರು.
ರಸ್ತೆ, ತೋಡು ಸ್ವಚ್ಛತಾ ಕಾರ್ಯ
ಸ್ವಚ್ಛ ಪುತ್ತೂರು ತಂಡದಿಂದ ಕಬಕ ಜಂಕ್ಷನ್, ಸುತ್ತಮುತ್ತ ಸ್ವತ್ಛತಾ ಕಾರ್ಯ ಜರಗಿತು. ಡಾ| ಶಶಿಧರ ಕಜೆ, ವಿ.ಸಿ. ನಾಯಕ್ ಶ್ರಮದಾನಕ್ಕೆ ಚಾಲನೆ ನೀಡಿ ಸ್ವತ್ಛತೆಯ ಕುರಿತು ಮಾತನಾಡಿದರು. ಸ್ವಚ್ಛ ಪುತ್ತೂರು ಕಾರ್ಯಕರ್ತರು, ಅಂಬಿಕಾ ಕಾಲೇಜಿನ ಸುಮಾರು 40 ವಿದ್ಯಾರ್ಥಿಗಳು ಕಬಕ ಜಂಕ್ಷನ್, ಸುತ್ತಮುತ್ತಲಿನ ರಸ್ತೆ, ತೋಡುಗಳನ್ನು ಸ್ವಚ್ಛ ಗೊಳಿಸಿದರು. ಸುಮಾರು ಎರಡೂವರೆ ಗಂಟೆಗಳ ಕಾಲ ಸ್ವಚ್ಛ ತಾ ಕಾರ್ಯ ನಡೆಯಿತು. ಪಿಡಿಒ ಆಶಾ, ಪಿ. ಸತೀಶ್ ರಾವ್, ಪ್ರಕಾಶ ದೇವಸ್ಯ, ಶಂಕರ ಮಲ್ಯ, ಗೋಪಾಲಕೃಷ್ಣ ಉಪಾಧ್ಯಾಯ, ದುರ್ಗಾಪ್ರಸಾದ್, ಪ್ರಶಾಂತ ಉಪ್ಪಿನಂಗಡಿ, ಅನೇಕರು ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು. ಅರ್ಷದ್ ಕಬಕ ತಂಪು ಪಾನೀಯ ವ್ಯವಸ್ಥೆ ಮಾಡಿದರು. ಅಭಿಯಾನದ ಪ್ರಮುಖ ಜಿ. ಕೃಷ್ಣ ಕಾರ್ಯಕ್ರಮವನ್ನು ಸಂಯೋಜಿಸಿದರು. ಕಾರ್ಯಕ್ರಮಕ್ಕೆ ಎಂ.ಆರ್. ಪಿ.ಎಲ್. ಸಂಸ್ಥೆ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿದೆ.
ಶ್ರಮದಾನ
ಕುಲಶೇಖರ ಚೌಕಿಯಲ್ಲಿರುವ ಬಸ್ ತಂಗುದಾಣದಿಂದ ಸ್ವಚ್ಛ ತೆಯನ್ನು ಆರಂಭಿಸಲಾಯಿತು. ಪ್ರಥಮದಲ್ಲಿ ಹಿಮ್ಮತ್ ಸಿಂಗ್, ಕಾರ್ಯಕರ್ತರು ಬಸ್ ತಂಗುದಾಣವನ್ನು ಸ್ವಚ್ಛ ಗೊಳಿಸಿದರು. ಮೇಲ್ಛಾವಣಿಯನ್ನೂ ಹತ್ತಿ ಮೇಲಿದ್ದ ಎಲೆ ಕಸ ಕಡ್ಡಿಯನ್ನು ತೆಗೆದು ಸ್ವಚ್ಛಗೊಳಿಸಿದರು. ಬಳಿಕ ಅಲ್ಲಲ್ಲಿ ಅಂಟಿಸಿದ್ದ ಪೋಸ್ಟರ್‌ಗಳನ್ನು ಕಿತ್ತರು. ಆನಂದ ಅಡ್ಯಾರ್, ವಿಖ್ಯಾತ್ ಮತ್ತು ಕಾರ್ಯಕರ್ತರು ಬಣ್ಣ ಬಳಿದು ತಂಗುದಾಣವನ್ನು ಅಂದಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಪದವು ಜಂಕ್ಷನ್- ಶರ್ಬತ್ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್
Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ
Uppunda: ಪಾಳು ಕೆರೆ ಈಗ ಈಜುಕೊಳ!; ಚೌಂಡಿ ಕೆರೆಗೆ ಊರಿನ ಯುವಕರಿಂದ ಕಾಯಕಲ್ಪ
Bajpe: ತಂಗುದಾಣ ತೆರವು, ಪ್ರಯಾಣಿಕರು ಅನಾಥ!
Perfect: ಎಡ್ ಶಿರನ್ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್ ಆದ ಉಡುಪಿಯ ಹುಡುಗ | Video
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.