ಪ್ಲಾಸ್ಟಿಕ್‌ ಬದಲು ಬಟ್ಟೆ ಚೀಲಗಳ ಬಳಸಿ: ಏಕಗಮ್ಯಾನಂದ ಶ್ರೀ

ಬೆಂದೂರ್‌ವೆಲ್‌: ರಾಮಕೃಷ್ಣ ಮಿಷನ್‌ "ಸ್ವಚ್ಛ ಮಂಗಳೂರು' ಅಭಿಯಾನ

Team Udayavani, Apr 22, 2019, 6:06 AM IST

2104MLR18

ಮಹಾನಗರ: ರಾಮಕೃಷ್ಣ ಮಿಷನ್‌ ಮಾರ್ಗದರ್ಶನದಲ್ಲಿ ನಗರದಲ್ಲಿ ನಡೆಯುತ್ತಿರುವ ಸ್ವಚ್ಛತಾ ಅಭಿಯಾನದ 5ನೇ ವರ್ಷದ 20ನೇ ರವಿವಾರದ ಶ್ರಮದಾನ ಎ. 21ರಂದು ಬೆಳಗ್ಗೆ 7.30ಕ್ಕೆ ಆರಂಭಗೊಂಡಿತು.

ಬೆಂದೂರ್‌ವೆಲ್‌ ವೃತ್ತದಲ್ಲಿ ಪ್ರಮುಖ ರಾದ ಶಿವರಾಮ ಅಡೂxರ್‌, ಶ್ರದ್ಧಾ ಅವರು ಅಭಿಯಾನಕ್ಕೆ ಚಾಲನೆ ನೀಡಿದರು.

ನೂತನವಾಗಿ ಬಿಡುಗಡೆಗೊಳಿಸಿದ ಬಟ್ಟೆಯ ಕೈಚೀಲಗಳನ್ನು ವಿತರಿಸಿ ಮಾತನಾಡಿದ ಸ್ವಚ್ಛತಾ ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ ಅವರು, “ಪರಿಸರಕ್ಕೆ ಮಾರಕವಾಗುವ ಪ್ಲಾಸ್ಟಿಕ್‌ ಚೀಲಗಳ ಬಳಕೆ ಕಡಿಮೆ ಮಾಡುವಂತಾಗಲು ಬಟ್ಟೆಯಿಂದ ತಯಾರಿಸಿದ ಚೀಲಗಳನ್ನು ಉಪಯೋ ಗಿಸಬೇಕು. ಪರಿಸರ ಸ್ನೇಹಿ ವಸ್ತುಗಳನ್ನು ಉಪಯೋಗಿಸಲು ಬೇರೆಯವರನ್ನೂ ಪ್ರೇರೇಪಿಸಬೇಕು. ಅಂದಾಗ ಮಾತ್ರ ನಮ್ಮ ಭಾವೀ ಜನಾಂಗಕ್ಕೆ ಉತ್ತಮ ಸಮಾಜವನ್ನು ಬಿಟ್ಟು ಕೊಡಲು ಸಾಧ್ಯ. ಆ ನಿಟ್ಟಿನಲ್ಲಿ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ. ಅನಗತ್ಯ ವಸ್ತುಗಳ ಉಪಯೋಗ ನಿಲ್ಲಬೇಕು. ಮರುಬಳಕೆ ನಮ್ಮ ಮಂತ್ರವಾಗಬೇಕು. ಆ ನಿಟ್ಟಿನಲ್ಲಿ ಪ್ರತಿದಿನ ನಡೆಯುವ ಅಭಿಯಾನದಲ್ಲಿ ಸ್ವಚ್ಛ ತೆಯೊಂದಿಗೆ ಈ ವಿಷಯಕ್ಕೂ ಒತ್ತು ನೀಡಲಾಗುವುದು ಎಂದರು.

ಸ್ಫೂರ್ತಿಯ ಅಭಿಯಾನ
ಸಮಾಜಸೇವಕಿ ಶ್ರದ್ಧಾ ಮಾತನಾಡಿ, ಯಾವುದೇ ಕಾರ್ಯಕ್ರಮವನ್ನಾದರೂ ಆರಂಭಿಸುವುದು ಸುಲಭ; ಆದರೆ ಅದನ್ನು ನಿರಂತರವಾಗಿ, ಶ್ರದ್ಧೆಯಿಂದ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರು ವುದು ಕಷ್ಟ. ದೇಶದ ಇತರೆಡೆಗಳಂತೆ ಬೆಂಗಳೂರಿನಲ್ಲಿಯೂ ನಾವು ಸ್ವತ್ಛತಾ ಅಭಿಯಾನವನ್ನು ಅರಂಭಿಸಿದ್ದೆವು. ಆದರೆ ಅದನ್ನು ಮುನ್ನಡೆಸಲು ಸಾಧ್ಯವಾಗಲಿಲ್ಲ. ಅದರೆ ಸ್ವಚ್ಛ ಮಂಗಳೂರು ಅಭಿಯಾನ ಅತ್ಯಂತ ಶಿಸ್ತಿನಿಂದ, ಯೋಜನಾಬದ್ಧವಾಗಿ ನಾಲ್ಕೂವರೆ ವರ್ಷಗಳಿಂದ ನಡೆಯು ತ್ತಿರುವುದನ್ನು ಕಂಡಾಗ ಅದ್ಭುತವೇ ಅನಿಸುತ್ತದೆ. ಇದು ಕೇವಲ ಸ್ವಚ್ಛತಾ ಅಭಿ ಯಾನವಲ್ಲ, ನಮ್ಮಂತವರಿಗೆ ಸ್ಫೂರ್ತಿಯ ಅಭಿಯಾನವಾಗಿದೆ. ಬೆಂಗಳೂರಿಗೆ ಹೋಗಿ ಶ್ರಮದಾನವನ್ನು ಆರಂಭಿಸಲು ಸ್ಫೂರ್ತಿ ನೀಡಿದ ಮಂಗಳೂರಿಗೆ ಧನ್ಯವಾದ ಎಂದು ಶುಭಹಾರೈಸಿದರು.

ಕಿಶೋರ್‌ ಕುಮಾರ್‌, ಕೋಡಿಬೆಟ್ಟು ರಾಜಲಕ್ಷ್ಮೀ, ವಾಸಂತಿ ನಾಯಕ್‌, ರವಿ ಕೆ.ಆರ್‌., ಸುನಂದಾ ಶಿವರಾಂ, ಶಶಿರೇಖಾ, ಯೋಗಲಕ್ಷ್ಮೀ, ಹರ್ಷಿತಾ, ಶಬರಿಕುಮಾರಿ, ಶ್ರವಣಿ ಮೊದಲಾದವರು ಭಾಗವಹಿಸಿದ್ದರು.

ಶ್ರಮದಾನ
ಸ್ವಯಂಸೇವಕರು ಬೆಂದೂರ್‌ವೆಲ್‌- ಬಲ್ಮಠ ಮುಖ್ಯರಸ್ತೆಗಳಲ್ಲಿ ಶ್ರಮದಾನವನ್ನು ಕೈಗೊಂಡರು. ಮಹಿಳಾ ಕಾರ್ಯಕರ್ತರು ಬೆಂದೂರವೆಲ್‌ ವೃತ್ತದಲ್ಲಿ ಸ್ವಚ್ಛತಾ ಕಾರ್ಯ ಮಾಡಿದರು. ಮೋಹನ್‌ ಕೊಟ್ಟಾರಿ, ಹಿರಿಯ ಕಾರ್ಯಕರ್ತರು ಬಲ್ಮಠದತ್ತ ಸಾಗುವ ಮಾರ್ಗಗಳಲ್ಲಿದ್ದ ಕಸ-ಮಣ್ಣು ಗುಡಿಸಿ ಸ್ವತ್ಛಗೊಳಿಸಿದರು. ಬೆಂದೂರ್‌ ವೆಲ್‌ ವೃತ್ತದಿಂದ ಬಲ್ಮಠ ಸಾಗುವ ರಸ್ತೆಯ ಎಡಬದಿಯ ಕಾಲು ದಾರಿಯಲ್ಲಿ ಮೂರು ಸ್ಥಳಗಳನ್ನು ಸಾರ್ವಜನಿಕರು ತ್ಯಾಜ್ಯ ಬಿಸಾಕುವ ತಾಣಗಳನ್ನಾಗಿ ಮಾರ್ಪಡಿಸಿದ್ದರು. ಅವುಗಳನ್ನು ಮೆಹಬೂಬ್‌ ಖಾನ್‌, ಸುಧೀರ್‌ ನೊರೊನ್ಹ, ಉಮಾಕಾಂತ ಸುವರ್ಣ, ಕಾರ್ಯಕರ್ತರು ತೆಗೆದು ಸ್ವಚ್ಛಗೊಳಿಸಿದರು. ಬಳಿಕ ಅಲ್ಲಿ ಆಲಂಕಾರಿಕ ಗಿಡಗಳನ್ನಿಟ್ಟು ಅಂದಗೊಳಿಸಲಾಗಿದೆ. ರಾಮಚಂದ್ರ ಶೆಟ್ಟಿ, ದಿನೇಶ್‌ ಕಾರ್ಯಕರ್ತ ರೊಡಗೂಡಿ ಅದೇ ರಸ್ತೆಯ ಮೂರು ಕಡೆಗಳಲ್ಲಿ ಕಿತ್ತುಹೋಗಿದ್ದ ಫ‌ುಟಪಾತ್‌ ಕಲ್ಲುಗಳನ್ನು ಸರಿಪಡಿಸಿದರು.

ಇನ್ನೊಂದು ಬದಿಯಲ್ಲಿ ವಿಟuಲದಾಸ್‌ ಪ್ರಭು, ಬಾಲಕೃಷ್ಣ ಭಟ್‌, ಕಾರ್ಯಕರ್ತರು ಸುಮಾರು ಒಂದು ಲೋಡ್‌ ಮಿಕ್ಕಿ ಕಟ್ಟಡ ತ್ಯಾಜ್ಯ, ಮುರಿದು ಬಿದ್ದ ಕಾಂಕ್ರೀಟ್‌ ಕಂಬ ಇತ್ಯಾದಿ ತ್ಯಾಜ್ಯಗಳನ್ನು ಜೇಸಿಬಿ ಬಳಸಿ ತೆರವುಗೊಳಿಸಿದರು. ಬಾಲಕೃಷ್ಣ ನಾೖಕ್‌ ಮಾರ್ಗಸೂಚಕ ರಿಪ್ಲೆಕ್ಟರ್‌ ಫಲಕಗಳನ್ನು ನೀರಿನಿಂದ ತೊಳೆದು ಸ್ವಚ್ಛಗೊಳಿಸಿದರು.

ವಿಖ್ಯಾತ್‌ ಬ್ಯಾನರ್‌ ಪೋಸ್ಟ್ರರ್‌ ತೆರವುಗೊಳಿಸಿದರು. ಕಮಲಾಕ್ಷ ಪೈ, ಯುವತಿಯರು ಅಂಗಡಿ, ಮನೆಗಳಿಗೆ ತೆರಳಿ ಸ್ವಚ್ಛತೆಯ ಕರಪತ್ರ ನೀಡಿ ಜಾಗೃತಿ ಕಾರ್ಯಕ್ರಮ ನಡೆಸಿಕೊಟ್ಟರು.ಅಭಿಯಾನದ ಪ್ರಮುಖ ದಿಲ್‌ರಾಜ್‌ ಆಳ್ವ ಉಮಾನಾಥ್‌ ಕೋಟೆಕಾರ್‌ ಶ್ರಮದಾನದ ನೇತೃತ್ವ ವಹಿಸಿದ್ದರು.

ಸ್ವಚ್ಛತೆಯ ಕಲ್ಪನೆ ಮೂಡಿದೆ
ಶಿವರಾಂ ಅಡೂxರ್‌ ಮಾತನಾಡಿ, ಸ್ವಚ್ಛತ ಅಭಿಯಾನ ಹಲವಾರು ಸಂಘ-ಸಂಸ್ಥೆಗಳಿಗೆ ಸ್ಫೂರ್ತಿಯನ್ನು ಕೊಟ್ಟ ಹೆಗ್ಗಳಿಕೆ ಹೊಂದಿದೆ. ನಾಲ್ಕು ವರ್ಷಗಳಿಂದ ಸಾಗಿಬರುತ್ತಿರುವ ಈ ಕಾರ್ಯಕ್ರಮ ನಿಧಾನವಾಗಿ ಜನರಲ್ಲಿ ಸ್ವಚ್ಛತೆಯ ಕಲ್ಪನೆ ಮೂಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಎಲ್ಲರೂ ಸ್ವಚ್ಛತೆಯನ್ನು ಮೈಗೂಡಿಸಿಕೊಂಡರೆ ಸ್ವತ್ಛ ಭಾರತ ಆದಷ್ಟು ಬೇಗ ಸಾಕಾರಗೊಳ್ಳುವುದು ಎಂದರು.

ಬಟ್ಟೆ ಚೀಲಗಳ ವಿತರಣೆ
ಪ್ಲಾಸ್ಟಿಕ್‌ ಕೈ ಚೀಲಗಳು ಪರಿಸರಕ್ಕೆ ಹಾನಿಯನ್ನುಂಟು ಮಾಡುತ್ತಿರುವ ಹಿನ್ನೆಲೆಯಲ್ಲಿ ರಾಮಕೃಷ್ಣ ಮಿಷನ್‌ ವತಿಯಿಂದ ಎಂ.ಆರ್‌.ಪಿ.ಎಲ್‌. ಪ್ರಾಯೋಜಕತ್ವದಲ್ಲಿ ಸಾರ್ವಜನಿಕರಿಗೆ ಬಟ್ಟೆ ಚೀಲಗಳನ್ನು ವಿತರಿಸಿ ಪ್ಲಾಸ್ಟಿಕ್‌ ಉಪಯೋಗ ಕಡಿಮೆ ಮಾಡುವಂತೆ ಜಾಗೃತಿ ಮಾಡಲಾಗುತ್ತಿದೆ. ನಾಲ್ಕು ಕಲ್ಪನೆಗಳಲ್ಲಿ ಈ ಚೀಲಗಳನ್ನು ಹೊರತರಲಾಗಿದೆ. ಮರ ಬೆಳಸಿ-ಪರಿಸರ ಉಳಿಸಿ, ಸ್ವಚ್ಛಭೂಮಿ ಹಸುರುಭೂಮಿ, ಪ್ಲಾಸ್ಟಿಕ್‌ ಬಳಸದೇ ಭೂಮಿ ಉಳಿಸಿ ಇಂತಹ ಸಂದೇಶಗಳನ್ನು ಅವುಗಳ ಮೇಲೆ ಮುದ್ರಿಸಲಾಗಿದೆ. ಒಟ್ಟು ಸುಮಾರು ಆರು ಸಾವಿರ ಚೀಲಗಳನ್ನು ಪ್ರತಿದಿನ ನಡೆಯುವ ಸಂಪರ್ಕ ಅಭಿಯಾನದಲ್ಲಿ ತರಿಸಲಾಗುತ್ತಿದೆ. ಈ ಎಲ್ಲ ಸ್ವಚ್ಛತ ಕಾರ್ಯಕ್ರಮಗಳಿಗೆ ಎಂ.ಆರ್‌.ಪಿ.ಎಲ್‌. ಸಂಸ್ಥೆ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿದೆ.

ಟಾಪ್ ನ್ಯೂಸ್

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IPL: Players from these countries are fully available for the next three seasons of IPL

IPL: ಇನ್ನು ಮೂರು ಸೀಸನ್‌ ಐಪಿಎಲ್‌ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ

1-a-raga-pg

Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-

Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ

9-someshwara

Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ

Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.