ನಗರದ ವಿವಿಧೆಡೆ ಸ್ವಚ್ಛತೆ ಜಾಗೃತಿ ಶಿಬಿರ
ರಾಮಕೃಷ್ಣ ಮಿಷನ್ ಸ್ವಚ್ಛತಾ ಜನ ಸಂಪರ್ಕ ಅಭಿಯಾನ
Team Udayavani, May 5, 2019, 6:15 AM IST
ಮಹಾನಗರ: ರಾಮಕೃಷ್ಣ ಮಿಷನ್ ಮಾರ್ಗದರ್ಶನದಡಿ ಆಯೋಜನೆ ಮಾಡಲಾಗುತ್ತಿರುವ ಸ್ವಚ್ಛತಾ ಜನ ಸಂಪರ್ಕ ಅಭಿಯಾನವನ್ನು ಎಪ್ರಿಲ್ ತಿಂಗಳಲ್ಲಿ ನಗರದ ಹಲವೆಡೆ ಹಮ್ಮಿಕೊಳ್ಳಲಾಯಿತು.
ಎ. 1ರಿಂದ 29ರ ವರೆಗೆ ಸ್ವಚ್ಛತಾ ಜನಸಂಪರ್ಕ ಅಭಿಯಾನದ ಕಾರ್ಯಕ್ರಮಗಳು ಜರಗಿದವು. 5 ತಿಂಗಳಲ್ಲಿ 116 ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಸ್ವಚ್ಛತೆಯ ಕುರಿತು ಜಾಗೃತಿ ಮಾಡಲಾಯಿತು. ಸುಮಾರು 3,400ಕ್ಕೂ ಅಧಿಕ ಜನರು ಕಸ ನಿರ್ವ ಹಣೆ ಮಾಡಲು ಮೂರು ಮಡಕೆ ಸಾಧನಕ್ಕಾಗಿ ಹೆಸರುಗಳನ್ನು ನೋಂದಾ ಯಿಸಿಕೊಂಡಿದ್ದಾರೆ.
ಪ್ರಾತ್ಯಕ್ಷಿಕೆ
ಹಂಪನಕಟ್ಟೆಯಲ್ಲಿರುವ ಕೋಡ್ ಕ್ರಾಪ್ಟ್ ಸಿಬಂದಿಗೆ ಸ್ವಚ್ಛತೆಯ ಕುರಿತು ವಿಶೇಷ ಕಾರ್ಯಾಗಾರವನ್ನು ನಡೆಸಲಾಯಿತು. ಹಸಿಕಸ ಒಣಕಸದ ವಿಂಗಡಣೆ ಮಾಹಿತಿ ಮತ್ತು ಮೂರು ಮಡಕೆ ವಿಧಾನದ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಯಿತು. ಅಭಿಯಾನದ ಪ್ರಧಾನ ಸಂಯೋಜಕ ಉಮಾನಾಥ್ ಕೋಟೆಕಾರ್ ಸ್ವಚ್ಛತೆಯ ಮಹತ್ವದ ಕುರಿತು ಮಾತನಾಡಿದರು. ಪೃಥ್ವಿ ಶೇಟ್ ಸ್ವಾಗತಿಸಿದರು. ಲಿಖೀತಾ ವಂದಿಸಿದರು.
ಸ್ವಚ್ಛತಾ ಜನ ಸಂಪರ್ಕ ಅಭಿಯಾನದ 100ನೇ ಕಾರ್ಯಕ್ರಮ ಕ್ಯಾಂಪ್ಕೋ ಪ್ರಧಾನ ಕಚೇರಿಯಲ್ಲಿ ಜರಗಿತು. ಸ್ವಚ್ಛತಾ ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜೀ ಸ್ವಚ್ಛತೆಯ ವಿಷ ಯದಲ್ಲಿ ಸಾರ್ವಜನಿಕರ ಸಹಭಾಗಿತ್ವ ಕುರಿತು ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಅಧ್ಯಕ್ಷತೆ ವಹಿಸಿದ್ದರು. ಸಹಕಾರ ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್, ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸುರೇಶ್ ಭಂಡಾರಿ ಉಪಸ್ಥಿತರಿದ್ದರು. ಟಿ.ಎಸ್. ಭಟ್ ಸ್ವಾಗತಿಸಿದರು. ಅರುಣಾ ಶೆಟ್ಟಿ ವಂದಿಸಿದರು.
ಹಸಿಕಸ ನಿರ್ವಹಣೆ
ಪತಂಜಲಿ ಯೋಗ ಶಿಕ್ಷಣ ಪ್ರತಿ ಷ್ಠಾನದ ವತಿಯಿಂದ ಮಲ್ಲಿಕಟ್ಟೆಯ ಸುಮ ಸದನದಲ್ಲಿ 101ನೇ ಸಂಪರ್ಕ ಅಭಿಯಾನದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಲ್ಲೂರ ಸಚಿನ್ ಶೆಟ್ಟಿ ಮೂರು ಮಡಕೆಯಲ್ಲಿ ಹಸಿಕಸವನ್ನು ಹಾಕಿ ನಿರ್ವಹಣೆ ಮಾಡುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಯೋಗ ಶಿಕ್ಷಕ ಸುಬ್ರಮಣ್ಯ ಬಿ., ಪ್ರಭಾ, ಸತ್ಯವತಿ ಶೆಟ್ಟಿ, ಕೀರ್ತಿ ಆಚಾರ್ ಮತ್ತಿತರರಿದ್ದರು.
ಸ್ವಚ್ಛ ಗರೋಡಿ ತಂಡದ ಸದಸ್ಯರು ಸರ್ವಮಂಗಳ ಹಾಲ್ನಲ್ಲಿ ಜನ ಸಂಪರ್ಕ ಅಭಿಯಾನದ 102ನೇ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಮನಪಾ ಸದಸ್ಯೆ ಆಶಾ ಡಿ’ಸಿಲ್ವಾ ಮುಖ್ಯ ಅಭ್ಯಾಗತರಾಗಿ ಪಾಲ್ಗೊಂಡು ಹಸಿಕಸ ನಿರ್ವಹಣೆಯ ಮಹತ್ವದ ಬಗ್ಗೆ ತಮ್ಮ ಅನುಭವಗಳ ಬಗ್ಗೆ ಹಂಚಿಕೊಂಡರು. ಪೂಜಾ ರಾವ್ ನಿರೂಪಿಸಿದರು. ಪ್ರಕಾಶ ಗರೋಡಿ ಕಾರ್ಯಕ್ರಮದ ನೇತೃತ್ವ ವಹಿಸಿಕೊಂಡಿದ್ದರು.
ಶ್ರೀ ವೀರ ವಿನಾಯಕ ಜನಸೇವಾ ಟ್ರಸ್ಟ್ – ಬೊಕ್ಕಪಟ್ಣ ಅಕ್ಷಯ ಸಭಾಂಗಣದಲ್ಲಿ ಯುವಜನ ಸಂಘದ ಸಹಯೋಗದಲ್ಲಿ 103ನೇ ಕಾರ್ಯಕ್ರಮವನ್ನು ಆಯೋ ಜಿಸಲಾಯಿತು. ಅಭಿಯಾನದ ಹಿರಿಯ ಸ್ವಯಂಸೇವಕ ಕಮಲಾಕ್ಷ ಪೈ ಸ್ವಚ್ಛತೆ ಮಹತ್ವ, ಮನೆಯ ಮಟ್ಟದಲ್ಲಿ ಕಸದ ನಿರ್ವ ಹಣೆಯ ಬಗ್ಗೆ ತಿಳಿಸಿದರು. ಯೋಗೀಶ್ ಸಾಲ್ಯಾನ್ ಮುಖ್ಯ ಅತಿಥಿಯಾಗಿದ್ದರು. ಕಿಶೋರ್ ಬೊಕ್ಕಪಟ್ಣ ಕಾರ್ಯಕ್ರಮವನ್ನು ಸಂಯೊಜಿಸಿದರು. ಸಚಿನ್ ಪಾಟ್ ಕಾಂಪೋಸ್ಟಿಂಗ್ ಬಗ್ಗೆ ತಿಳಿಸಿದರು.
ಮಡಕೆ ಗೊಬ್ಬರದ ಪ್ರಾತ್ಯಕ್ಷಿಕೆ
ನಂತೂರಿನ ಇಡನ್ ಎನ್‌ಕ್ಲೇವ್ ಅಪಾರ್ಟ್‌ಮೆಂಟ್‌ನಲ್ಲಿ ಮಡಕೆ ಗೊಬ್ಬರದ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳ ಲಾಯಿತು. ಬಾಲಕೃಷ್ಣ ನಾೖಕ್ ಸ್ವಚ್ಛತಾ ಅಭಿಯಾನ, ಧ್ಯೇಯೋದ್ದೇಶಗಳು ವಿಷಯದ ಕುರಿತು ಮಾತನಾಡಿದರು. ಬಳಿಕ ಪ್ರಾತ್ಯಕ್ಷಿಕೆ ಜರಗಿತು. ಸುಧೀರ್ ನೋರೊನ್ನಾ 104ನೇ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.
ರಾಮಕೃಷ್ಣ ಮಿಷನ್ ಸ್ವಚ್ಛತಾ ಜನ ಸಂಪರ್ಕ ಅಭಿಯಾನದ 105ನೇ ಕಾರ್ಯ ಕ್ರಮ ಕರಂಗಲಪಾಡಿಯ ಪ್ರಸಿಡೆನ್ಸಿ ಕ್ರೌನ್ ಕೋರ್ಟ್ ಆವರಣದಲ್ಲಿ ಜರಗಿತು. ನಮ್ಮ ತ್ಯಾಜ್ಯ ನಮ್ಮ ಹೊಣೆಎಂಬ ವಿಷಯದ ಕುರಿತು ಉಮಾನಾಥ್ ಕೋಟೆಕಾರ್, ಸರಿತಾ ಶೆಟ್ಟಿ ಮಾತನಾಡಿದರು. ಹಸಿಕಸ ನಿರ್ವಹಣೆಗಾಗಿ ಮಡಕೆಗಳು ಬೇಕಾದವರ ಹೆಸರುಗಳನ್ನು ನೋಂದಾ ಯಿಸಿಕೊಳ್ಳಲಾಯಿತು.
ಬಜಾಲ್ನಲ್ಲಿರುವ ಕರ್ನಾಟಕ ಗೃಹ ಮಂಡಳಿ ಬಡಾವಣೆಯಲ್ಲಿರುವ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ 106ನೇ ಜನ ಸಂಪರ್ಕ ಕಾರ್ಯಕ್ರಮವನ್ನು ನಡೆಸಲಾಯಿತು. ಉಮಾನಾಥ್ ಕೋಟೆಕಾರ್ ಮಾತನಾಡಿ, ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನ ನಡೆದು ಬಂದ ಬಗ್ಗೆ ತಿಳಿಸಿಕೊಟ್ಟರು. ಸಚಿನ್ ಶೆಟ್ಟಿ ಹಸಿಕಸವನ್ನು ಮನೆಯಲ್ಲಿ ನಿರ್ವಹಿಸುವ ಕುರಿತು ಮಾಹಿತಿ ನೀಡಿ ಪ್ರಾತ್ಯಕ್ಷಿಕೆ ನೀಡಿದರು. ಪದ್ಮನಾಭ ರಾವ್, ಗಣೇಶ್ ಮೂಲ್ಯ, ಚಂದ್ರಕಲಾ ಆಚಾರ್, ದಿವಾಕರ್ ಆಚಾರ್ ಮತ್ತಿತರರು ಪಾಲ್ಗೊಂಡರು. ಉದಯ ಕೆ.ಪಿ. ಸಂಘಟಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.