ರಾಮಕೃಷ್ಣ  ಮಿಷನ್‌ “ಸ್ವತ್ಛ ಮಂಗಳೂರು’ ಅಭಿಯಾನ ನಾಳೆ ಸಮಾರೋಪ


Team Udayavani, Jul 27, 2018, 9:55 AM IST

11mnramakrishnamutt.jpg

ಮಂಗಳೂರು: ರಾಮಕೃಷ್ಣ ಮಿಷನ್‌ ನೇತೃತ್ವದಲ್ಲಿ ಕಳೆದ ನವೆಂಬರ್‌ನಿಂದ 40 ರವಿವಾರಗಳಲ್ಲಿ ಮಂಗಳೂರು ನಗರದಲ್ಲಿ ನಡೆದ “ಸ್ವತ್ಛ ಮಂಗಳೂರು’ ಅಭಿಯಾನದ ನಾಲ್ಕನೇ ವರ್ಷದ ಸಮಾರೋಪ ಜು. 28ರಂದು ಸಂಜೆ 4ಕ್ಕೆ ನಡೆಯಲಿದೆ ಎಂದು ಶ್ರೀ ರಾಮಕೃಷ್ಣ ಮಿಷನ್‌ ಮುಖ್ಯಸ್ಥರಾದ ಶ್ರೀ ಜಿತಕಾಮಾನಂದ ಸ್ವಾಮೀಜಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿ ರವಿವಾರ ಮುಂಜಾನೆ 7ರಿಂದ 10 ಗಂಟೆ ವರೆಗೆ ನಡೆಯುತ್ತಿದ್ದ ಸ್ವತ್ಛತಾ ಕೈಂಕರ್ಯದಲ್ಲಿ 100-200 ಕಾರ್ಯಕರ್ತರು ನಗರದ ಬೇರೆ ಬೇರೆ ಸ್ಥಳಗಳಲ್ಲಿ ಸ್ವತ್ಛತೆ ಕೈಗೊಂಡಿದ್ದಾರೆ. ಜತೆಗೆ ಪಾರ್ಕ್‌ಗಳ ನಿರ್ಮಾಣ, ನೂತನ ಬಸ್‌ ತಂಗುದಾಣ ನಿರ್ಮಾಣ, ನಾಮ ಫಲಕಗಳ ನವೀಕರಣ, ಅನಧಿಕೃತ ಪೋಸ್ಟರ್‌ ತೆರವುಗೊಳಿಸಿ ಗೋಡೆಗಳಿಗೆ ಅಂದವಾದ ಚಿತ್ರ ಬರೆಸಿ ಆಕರ್ಷಕವಾಗಿಸುವುದು ಸೇರಿದಂತೆ ಅನೇಕ ಚಟುವಟಿಕೆಗಳನ್ನು ಮಾಡಲಾಗಿದೆ. ಅತೀ ಹೆಚ್ಚು ತ್ಯಾಜ್ಯ ಬೀಳುತ್ತಿದ್ದ ಸುಮಾರು 30 ಸ್ಥಳಗಳನ್ನು ಸ್ವತ್ಛಗೊಳಿಸಿ ಅಲ್ಲಿ ಹೂಗಿಡಗಳನ್ನಿಟ್ಟು ಸುಂದರಗೊಳಿಸ ಲಾಗಿದೆ. ಅನಧಿಕೃತ‌ ಪೋಸ್ಟರ್‌, ಬ್ಯಾನರ್‌ ಹಾವಳಿ ನಿಯಂತ್ರಿಸುವಲ್ಲಿ ಯಶಸ್ವಿಯಾ ಗಿದ್ದೇವೆ ಎಂದರು.

20,000 ಮನೆ ಭೇಟಿ: ಸ್ವತ್ಛತಾ ಅಭಿಯಾನದ ಸಂಚಾಲಕರಾದ ಸ್ವಾಮಿ ಶ್ರೀ ಏಕಗಮ್ಯಾನಂದಜಿ ಅವರು ಮಾತನಾಡಿ, ಪ್ರತೀದಿನ ಸುಮಾರು 100 ಮನೆಗಳಿಗೆ ಭೇಟಿ ನೀಡಿ 170ರಷ್ಟು ಕಾರ್ಯಕ್ರಮ ಮಾಡಲಾಗಿದೆ. 20 ಸಾವಿರ ಮನೆಗಳನ್ನು ಖುದ್ದಾಗಿ ಸಂಪರ್ಕಿಸಲಾಗಿದೆ. ಹಸಿಕಸ ಒಣಕಸದ ವಿಂಗಡನೆ ಮತ್ತು ನಿರ್ವಹಣೆ, ಮಣ್ಣಿನ ಮಡಕೆ ಗೊಬ್ಬರ ತಯಾರಿಸುವ ಪರಿ, ಬಯೋಬಿನ್‌ ವಿತರಣೆ, ಒಣಕಸ ಹಾಕಲು ಚೀಲಗಳ ವಿತರಣೆ ಇತ್ಯಾದಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸ್ವತ್ಛತಾ ಸೇನಾನಿಗಳು
108 ಶಾಲೆಗಳಲ್ಲಿ ಸ್ವತ್ಛ ಮನಸ್ಸು ಅಭಿಯಾನ ಮಾಡಲಾಗಿದೆ. ಮೊದಲಿಗೆ 10,757 ವಿದ್ಯಾರ್ಥಿಗಳನ್ನು ಸ್ವತ್ಛತಾ ಸೇನಾನಿಗಳೆಂದು ಆಯ್ಕೆ ಮಾಡಲಾಯಿತು. ಸ್ವತ್ಛತಾ ಚಿಂತನ, ಸ್ವತ್ಛತಾ ಸ್ಪರ್ಧಾ, ಸ್ವತ್ಛತಾ ದಿವಸ್‌, ಸ್ವತ್ಛತಾ ಮಂಥನ ಹಾಗೂ ಸ್ವತ್ಛತಾ ದರ್ಶನ ಎಂಬ ಪರಿಕಲ್ಪನೆಯಲ್ಲಿ ಒಟ್ಟು ಸುಮಾರು 500 ಕಾರ್ಯಕ್ರಮಗಳನ್ನು ನಡೆಸಲಾಗಿದೆ. 60 ಸಂಪನ್ಮೂಲ ವ್ಯಕ್ತಿಗಳು ಪ್ರತಿ ತಿಂಗಳು ನಿಗದಿತ ಶಾಲೆಗೆ ತೆರಳಿ ಸ್ವತ್ಛತೆಯ ಕುರಿತು ಮೂಡಿಸಿದ್ದಾರೆ. ಪ್ರತೀ ಶಾಲೆಯಿಂದ ಐವರಂತೆ 500 ವಿದ್ಯಾರ್ಥಿಗಳನ್ನು ಸ್ವತ್ಛ ಮಂಗಳೂರು ರಾಯಭಾರಿಗಳು ಎಂದು ಆಯ್ಕೆ ಮಾಡಿ ವಿಶೇಷ ತರಬೇತಿ ನೀಡಲಾಗಿದೆ. ಜಾದೂವಿನ ಮೂಲಕವೂ ಶುಚಿತ್ವದ ಮಹತ್ವವನ್ನು ತಿಳಿಸಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಉಮಾನಾಥ ಕೋಟೆಕಾರ್‌, ದಿಲ್‌ರಾಜ್‌ ಆಳ್ವ, ರಂಜನ್‌ ಉಪಸ್ಥಿತರಿದ್ದರು.

100 “ಸ್ವತ್ಛ ಗ್ರಾಮ’
ಸ್ವಾಮಿ ಶ್ರೀ ಏಕಗಮ್ಯಾನಂದಜಿ ಮಾತನಾಡಿ, ಮಂಗಳೂರಿಗೆ ಸೀಮಿತವಾಗಿದ್ದ ಸ್ವತ್ಛತಾ ಅಭಿಯಾನ ವ®ಚು° ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸ ಬೇಕೆಂಬ ಆಶಯದೊಂದಿಗೆ ನಾಲ್ಕನೇ ಹಂತದ ಅಭಿಯಾನದಲ್ಲಿ ಬಂಟ್ವಾಳ ತಾಲೂಕು ಹಾಗೂ ಮಂಗಳೂರು ತಾಲೂಕಿನ 100 ಗ್ರಾಮಗಳಲ್ಲಿ ಸ್ವತ್ಛತಾ ಅಭಿಯಾನ ಹಮ್ಮಿಕೊಳ್ಳಲಾಯಿತು. ದ.ಕ. ಜಿ.ಪಂ. ನೆರವಿನೊಂದಿಗೆ ತಿಂಗಳಲ್ಲಿ ಒಂದು ಶ್ರಮ ದಾನದಂತೆ 700 ಶ್ರಮದಾನ ನಡೆಸಲಾಗಿದೆ. ಸುಮಾರು 30 ಗ್ರಾಮಗಳಿಗೆ ಕುಡಿಯುವ ನೀರಿನ ಘಟಕ, ನಾಮ ಫಲಕಗಳ ಅಳವಡಿಕೆ, ಅವಶ್ಯವಿದ್ದೆ‌ಡೆ ಶೌಚಾಲಯಗಳ ದುರಸ್ತಿ, ನೂತನ ವೈಯಕ್ತಿಕ ಶೌಚಾಲಯಗಳ ನಿರ್ಮಾಣದಂತಹ ಕಾರ್ಯಗಳು ಚಾಲ್ತಿಯಲ್ಲಿವೆ ಎಂದರು. 

ಟಾಪ್ ನ್ಯೂಸ್

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆMandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sand 1

Padubidri: ಮರಳು ಅಕ್ರಮ ಸಾಗಾಟ; ವಶ

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

Mangaluru: Ambedkar – Constitution should not be a tool for anyone: BL Santosh

Mangaluru: ಅಂಬೇಡ್ಕರ್‌ – ಸಂವಿಧಾನ ಯಾರಿಗೂ ಟೂಲ್‌ ಆಗಬಾರದು: ಕೈ ವಿರುದ್ದ ಸಂತೋಷ್‌ ಟೀಕೆ

7(1

Lalbagh: ಇಂದಿನಿಂದ ಕರಾವಳಿ ಉತ್ಸವ ಸಂಭ್ರಮ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Surjewala

Pegasus spyware ಬಗ್ಗೆ ಸುಪ್ರೀಂಕೋರ್ಟ್‌ ತನಿಖೆ ನಡೆಸಲಿ: ಸುರ್ಜೇವಾಲಾ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

1-ronak

National Badminton: ರೋಣಕ್‌ ಚೌಹಾಣ್‌ ಸೆಮಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.