ಜ್ಯೋತಿ ವೃತ್ತ, ಬಲ್ಮಠ ಮುಖ್ಯ ರಸ್ತೆಯಲ್ಲಿ ಸ್ವಚ್ಛತೆ
Team Udayavani, Dec 11, 2017, 11:41 AM IST
ಮಹಾನಗರ: ಶ್ರೀ ರಾಮಕೃಷ್ಣ ಮಿಷನ್ ನೇತೃತ್ವದ 4ನೇ ಹಂತದ ಸ್ವಚ್ಛ ಮಂಗಳೂರು ಅಭಿಯಾನದ 6ನೇ ವಾರದ ಸ್ವಚ್ಛತಾ ಕಾರ್ಯ ರವಿವಾರ ಮಂಗಳೂರು ವ್ಯಾಪ್ತಿಯ ಜ್ಯೋತಿ ವೃತ್ತ ಹಾಗೂ ಬಲ್ಮಠ ಮುಖ್ಯ ರಸ್ತೆಯಲ್ಲಿ ಜರಗಿತು. ಸ್ವಾಮಿ ಜಿತಕಾಮಾನಂದಜಿ ಸಾನ್ನಿಧ್ಯದಲ್ಲಿ ಮನಪಾ ಸದಸ್ಯ ವಿನಯರಾಜ್ ಹಾಗೂ ಜಪ್ಪು ಬಂಟರ ಸಂಘದ ಅಧ್ಯಕ್ಷ ಸುನೀಲ್ ಶೆಟ್ಟಿ 6ನೇ ವಾರದ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಡಾ| ರಾಜೇಂದ್ರ ಪ್ರಸಾದ್, ಲೆಕ್ಕ ಪರಿಶೋಧಕ ಶಿವಕುಮಾರ್ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕರ್ತರೊಂದಿಗೆ ಸ್ವತಃ ಸ್ವಾಮೀಜಿಯವರು ಪೊರಕೆ ಹಿಡಿದು ಕಸ ಗುಡಿಸಿದರು. ಸುಮಾರು ಇನ್ನೂರಕ್ಕೂ ಅಧಿಕ ಮಂದಿ ಪಾಲ್ಗೊಂಡರು.
ಶ್ರಮದಾನ
ಮೊದಲಿಗೆ ಇನ್ನೂರು ಜನರನ್ನು 6 ತಂಡಗಳಾಗಿ ವಿಭಾಗಿಸಿಲಾಯಿತು. ಜಪ್ಪು ಬಂಟರ ಸಂಘದ ಸದಸ್ಯರು ಕೆಎಂಸಿ ಆಸ್ಪತ್ರೆಯಿಂದ ಕಲೆಕ್ಟರ್ಸ್ ಗೇಟ್ ವರೆಗಿನ ರಸ್ತೆ, ಪುಟ್‌ಪಾತ್ ಹಾಗೂ ಮಾರ್ಗ ವಿಭಾಜಕಗಳನ್ನು ಗುಡಿಸಿ ಸ್ವಚ್ಛಗೊಳಿಸಿದರು. ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳು ಪ್ರಾಧ್ಯಾಪಕಿ ಪ್ರೇಮಲತಾ ಶೆಟ್ಟಿ ಮಾರ್ಗದರ್ಶನದಲ್ಲಿ ಜ್ಯೋತಿ ವೃತ್ತದಿಂದ ಲೈಟ್‌ಹೌಸ್ ಹಿಲ್ ರಸ್ತೆಯ ಎರಡೂ ಬದಿಗಳನ್ನು ಸ್ವಚ್ಛಗೊಳಿಸಿದರು.
ಹಿರಿಯರಾದ ವಿಟ್ಠಲದಾಸ್ ಪ್ರಭು ಹಾಗೂ ಶುಭೋದಯ ಆಳ್ವ ತಲಾ ಒಂದೊಂದು ಗುಂಪಿಗೆ ಮಾರ್ಗದರ್ಶನ ನೀಡಿ ಜ್ಯೋತಿ ಸರ್ಕಲ್‌ನಿಂದ ಹಂಪನಕಟ್ಟೆಯತ್ತ ಸಾಗುವ ರಸ್ತೆ ಹಾಗೂ ಅಕ್ಕಪಕ್ಕದ ಸ್ಥಳಗಳನ್ನು ಸ್ವಚ್ಛಗೊಳಿಸಿದರು. ಬಲ್ಮಠ
ರಸ್ತೆಯಲ್ಲಿದ್ದ ಮಣ್ಣಿನ ಗುಡ್ಡೆಯನ್ನು ಜೆಸಿಬಿ ಸಹಾಯದಿಂದ ತೆಗೆದು ಸಮತಟ್ಟುಗೊಳಿಸಿ ಹೆಚ್ಚಿನ ವಾಹನಗಳ ನಿಲುಗಡೆಗೆ ಅವಕಾಶ ಮಾಡಿಕೊಡಲಾಯಿತು. ಸುಮಾರು ಮೂರು ಟಿಪ್ಪರ್‌ಗಳಷ್ಟು ಮಣ್ಣು ಕಲ್ಲು, ಕಸವನ್ನು ತೆಗೆದು ಸಾಗಿಸಲಾಯಿತು.
ಸ್ವಚ್ಛತೆಯೊಂದಿಗೆ ಸೌಂದರೀಕರಣ
ಜ್ಯೋತಿ ವೃತ್ತದ ಬಳಿಯ ತ್ರಿಕೋನಾಕೃತಿಯ ಸ್ಥಳವೊಂದು ಕೊಳೆ ಕಸ ತುಂಬಿಕೊಂಡಿತ್ತು. ಹಿಂದೂ ವಾರಿಯರ್ಸ್ ಸದಸ್ಯರು ಅಲ್ಲಿ ಅನಗತ್ಯವಾಗಿದ್ದ ಕಲ್ಲುಮಣ್ಣುಗಳನ್ನು ತೆಗೆದುಹಾಕಿ ಸ್ವಚ್ಛಗೊಳಿಸಿದರು. ಶಿಥಿಲವಾಗಿದ್ದ ಪಾದಚಾರಿ ಮೆಟ್ಟಿಲುಗಳನ್ನು ಕಾರ್ಮಿಕರನ್ನು ಬಳಸಿ ದುರಸ್ತಿ ಮಾಡಲಾಗಿದೆ.
ಎಂಆರ್ ಪಿಎಲ್ ಮಹಾ ಪ್ರಬಂಧಕ ಬಿ. ಎಚ್. ವಿ. ಪ್ರಸಾದ್ ಸ್ವತಃ ಕಲ್ಲು ಮಣ್ಣುಗಳನ್ನು ಹೊತ್ತು ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕಾರ್ಯಕರ್ತರು ಒಂದು ಕಡೆ ಕಸ ತೆಗೆದು ಸ್ವಚ್ಛಗೊಳಿಸುತ್ತಿದ್ದರೆ ಮತ್ತೂಂದೆಡೆ ಬಸ್ ತಂಗುದಾಣ ಹಾಗೂ ರಸ್ತೆ ಬದಿಯ ರೇಲಿಂಗ್‌ಗಳಿಗೆ ಬಣ್ಣ ಬಳಿಯುತ್ತಿದ್ದರು. ಸುಜಿತ್ ಪ್ರತಾಪ್ ಹಾಗೂ ಕಾರ್ಯಕರ್ತರು ಕಾಲುದಾರಿ ಹಾಗೂ ಜ್ಯೋತಿ ಬಸ್ ತಂಗುದಾಣವನ್ನು ಶುಚಿಮಾಡಿ ಅಲ್ಲಿದ್ದ ರೇಲಿಂಗ್ ಗಳಿಗೆ ಬಣ್ಣ ಬಳಿದು ಸುಂದರಗೊಳಿಸಿದರು.
ಬೆಳಗ್ಗೆ 7:30ರಿಂದ ಸುಮಾರು 10ರ ವರೆಗೆ ಅಭಿಯಾನ ನಡೆಯಿತು. ಕಾಯರ್ತಡ್ಕ ಗ್ರಾಮದ ಯುವಶಕ್ತಿ ಯುವಕ ಸಂಘದ ಸುಮಾರು 20 ಜನ ಸದಸ್ಯರು ಶ್ರಮದಾನದಲ್ಲಿ ಭಾಗವಹಿಸಿದರು. ಎಲ್ಲ ಕಾರ್ಯಕರ್ತರಿಗೂ ಬಲ್ಮಠ ಮಹಿಳಾ ಕಾಲೇಜಿನ ಆವರಣದಲ್ಲಿ ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಸಂಚಾಲಕರಾದ ದಿಲ್‌ರಾಜ್ ಆಳ್ವ ಮತ್ತು ಉಮಾನಾಥ ಕೋಟೆಕಾರ್ ಅವರು ಅಭಿಯಾನದ ನೇತೃತ್ವ ವಹಿಸಿದ್ದರು.
ಸ್ವಚ್ಛ ಪುತ್ತೂರು ಹಂತ 2
ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ರವಿವಾರ ಪುತ್ತೂರಿನಲ್ಲಿ ಎರಡನೇ ಹಂತದ ಸ್ವಚ್ಛ ಪುತ್ತೂರು ಅಭಿಯಾನಕ್ಕೆ ಮಿನಿ ವಿಧಾನ ಸೌಧದ ಮುಂದೆ ಚಾಲನೆಯನ್ನು ನಗರಸಭಾ ಸದಸ್ಯ ರಾಜೇಶ್ ಬನ್ನೂರು ಹಾಗೂ ಪುಳು ಈಶ್ವರ ಭಟ್ ನೀಡಿದರು. ನಗರಸಭಾ ಸದಸ್ಯ ಜೋಹಾರ್ ನಿಸಾರ್ ಸಹಿತ ಅನೇಕರು ಭಾಗವಹಿಸಿದ್ದರು. ಮುಖ್ಯ ಸಂಯೋಜಕ ಕೃಷ್ಣ ಉಪಾಧ್ಯಾಯ ನಿರೂಪಿಸಿ, ಸ್ವಾಗತಿಸಿದರು. ಜಿ. ಕೃಷ್ಣ ಹಾಗೂ ಶ್ಯಾಮ ಸುದರ್ಶನ ಭಟ್ ಹೊಸಮೂಲೆ ಕಾರ್ಯಕ್ರಮ ಸಂಯೋಜಿಸಿದರು.
ಜಾಗೃತಿ ಕಾರ್ಯ
ಕಸ ಹೆಕ್ಕುವ ಕಾರ್ಯಕರ್ತರು ಒಂದಿಷ್ಟು ಅಂಗಡಿ ವರ್ತಕರನ್ನು ಸಂಪರ್ಕಿಸಿ ಅಂಗಡಿಯ ಸುತ್ತಮುತ್ತಲಿನ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಆಗ್ರಹಿಸಿದರು. ಸಾರ್ವಜನಿಕರೊಬ್ಬರು ಸ್ವಚ್ಛಗೊಳಿಸಿದ ಜಾಗವನ್ನು ಕಸ ತಂದು ಸುರಿದದ್ದನ್ನು ಕಂಡು ಸ್ವಚ್ಛ ಮಂಗಳೂರು ಕಾರ್ಯಕರ್ತರು ಅವರಿಂದಲೇ ಅದನ್ನು ಪುನಃ ಸ್ವಚ್ಛಗೊಳಿಸಿದ ಅಪರೂಪದ ಘಟನೆ ಜರಗಿತು. ಅಲ್ಲಲ್ಲಿ ಜೋತು ನೇತಾಡುತ್ತಿದ್ದ ಇನ್ನೂರಕ್ಕೂ ಅಧಿಕ ಬ್ಯಾನರ್‌ಗಳನ್ನು ರಸ್ತೆಯ ಮಾರ್ಗ ವಿಭಜಕಗಳ ದೀಪದ ಕಂಬಗಳಿಂದ ತೆರವುಗೊಳಿಸಲಾಯಿತು.
ಸಕ್ರಿಯ ಯುವ ಕಾರ್ಯಕರ್ತ ಸೂರಜ್ ನೇತೃತ್ವ ವಹಿಸಿದ್ದರು. ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳು ಬಲ್ಮಠ ಪರಿಸರದ ಸುಮಾರು ಇನ್ನೂರು ಮನೆ ಮನೆಗೆ ತೆರಳಿ ಸ್ವಚ್ಛತಾ ಜಾಗೃತಿ ಉಂಟು ಮಾಡಿದರು. ರಾಮಕೃಷ್ಣ ಮಿಷನ್ ಹೊರತಂದಿರುವ ‘ಸಂಕಲ್ಪ’ ಎಂಬ ಕರಪತ್ರ ನೀಡಿ ಅಲ್ಲಲ್ಲಿ ಕಸ ಬಿಸಾಡದಂತೆ ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
State Budget Meeting: ಇಂದಿನಿಂದ ಸಿಎಂ ಬಜೆಟ್ ಪೂರ್ವಭಾವಿ ಸರಣಿ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.