ವಿಜಯಪುರ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ: ಬಿಜೆಪಿ ಖಂಡನೆ
Team Udayavani, Dec 25, 2017, 10:49 AM IST
ಮಹಾನಗರ: ವಿಜಯಪುರ ಆದರ್ಶನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ದಾನಮ್ಮ ಎಂಬ ದಲಿತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆಯು ಒಂದು ಹೀನ ಕೃತ್ಯವಾಗಿದ್ದು, ಈ ಹತ್ಯೆಯನ್ನು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಖಂಡಿಸಿದೆ.
ಇಂತಹ ಅಮಾನವೀಯ, ಭೀಭತ್ಸ ಘಟನೆಗಳಿಂದ ಈ ರಾಜ್ಯದಲ್ಲಿ ಮಹಿಳೆಯರಿಗೆ ಯಾವ ವಿಧದಲ್ಲೂ ರಕ್ಷಣೆ ಇಲ್ಲವೆಂಬುದು ಸಾಬೀತಾಗಿದೆ. ಸಿದ್ದರಾಮಯ್ಯ ಸರಕಾರವು ನಿದ್ರಾವಸ್ಥೆಯಲ್ಲಿದ್ದು, ಇದರ ಭದ್ರತಾ ವೈಫಲ್ಯಕ್ಕೆ ಜಯಪುರದ ಈ ಘಟನೆಯೇ ಸಾಕ್ಷಿ ನುಡಿಯುವಂತಿದೆ.
ಈ ಬಗ್ಗೆ ಸರಕಾರವು ಕೂಡಲೇ ಆರೋಪಿಗಳ ವಿರುದ್ಧ ಕಠಿಣ ಶಿಕ್ಷೆಯನ್ನು ವಿಧಿಸಿ ದಾನಮ್ಮಳ ಕುಟುಂಬಸ್ಥರಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು. ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಪೂಜಾ ಪೈ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂಧ್ಯಾ ವೆಂಕಟೇಶ್, ರಾಜೀವಿ ಕೆಂಪು ಮಣ್ಣು, ಜಿಲ್ಲಾ ಕಾರ್ಯದರ್ಶಿ ಪ್ರಭಾ ಮಾಲಿನಿ, ಮಂಡಲದ ಪದಾಧಿಕಾರಿಗಳಾದ ಪೂರ್ಣಿಮಾ ಎಸ್. ರಾವ್, ವೀಣಾ ಮಂಗಳ, ಪೂರ್ಣಿಮಾ ಅಶೋಕ್ ರಾವ್, ಬಬಿತಾ ರವೀಂದ್ರ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra; ಉದ್ಧವ್ ಮಾತ್ರವಲ್ಲ ಫಡ್ನವಿಸ್ ಬ್ಯಾಗ್ ಕೂಡ ಚೆಕ್: ಬಿಜೆಪಿಯಿಂದ ವಿಡಿಯೋ
Actress: ಸಲ್ಮಾನ್,ಶಾರುಖ್ ಬಳಿಕ ಖ್ಯಾತ ನಟಿಗೆ ಜೀವ ಬೆದರಿಕೆ.. 50 ಲಕ್ಷ ರೂ. ಡಿಮ್ಯಾಂಡ್
Mudbidri: ಕೊಳಚೆ ನೀರು; ಪರಿಹಾರ ಮಾರ್ಗ ತೋರಲೇಕೆ ಹಿಂದೇಟು?
Bajpe: ಹೈಟೆಕ್ ಆಗಲು ಕಾಯುತ್ತಿದೆ ಬಜಪೆ ಮಾರ್ಕೆಟ್
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.