ರಥಬೀದಿ ವೀರ ವೆಂಕಟೇಶನಿಗೆ ಸ್ವರ್ಣ ಗರುಡ ವಾಹನ
Team Udayavani, May 15, 2019, 6:10 AM IST
ಮಂಗಳೂರು: ರಥಬೀದಿಯ ಶ್ರೀ ವೆಂಕಟರಮಣ ದೇವರ ಸಮರ್ಪಣೆಗೆ ಚಿನ್ನದ ಗರುಡ ವಾಹನ ಸಿದ್ಧಗೊಂಡಿದೆ. ಈ ಚಿನ್ನದ ಗರುಡ ವಾಹನವನ್ನು ಕಲಾತ್ಮಕವಾಗಿ ಸುಂದರ ವಿನ್ಯಾಸಗಳೊಂದಿಗೆ ಕಾರ್ಕಳ ತಾಲೂಕಿನ ಘಾಜಿನಡ್ಕದ ಶಿಲ್ಪಿ ಡಿ.ಪಿ. ಸುದರ್ಶನ ಚಿಪ್ಳೂಣRರ್ ಅವರ ಶ್ರೀ ಸಿದ್ಧಿವಿನಾಯಕ ಎಕ್ಸ್‌ಪೋರ್ಟ್ (ಕಲಾ ಕೇಂದ್ರ)ದಲ್ಲಿ ತಯಾರಿಸಲಾಗಿದೆ.
4 ಅಡಿ ಎತ್ತರದ ಗರುಡ ವಾಹನವನ್ನು ಸುಮಾರು 8 ಕೆಜಿ ಚಿನ್ನ 7 ಕೆಜಿ ಬೆಳ್ಳಿಯನ್ನು ಉಪಯೋಗಿಸಿ 10 ಕುಶಲಕರ್ಮಿಗಳ ತಂಡ 60 ದಿನಗಳ ಅವಧಿಯಲ್ಲಿ ತಯಾರಿಸಿದೆ. ಅತ್ಯಂತ ಸೂಕ್ಷ್ಮ ಉಬ್ಬು ಶಿಲ್ಪ, 9 ನಾಗನ ಹೆಡೆಗಳು ಹಾಗೂ ಅನಂತಶಯನದ ಶಿಲ್ಪ ಹೊಂದಿರುವ ಪದಕವನ್ನು ಇದರಲ್ಲಿ ಕಲಾತ್ಮಕವಾಗಿ ಮೂಡಿಸಲಾಗಿದೆ.
ಗುರುಗಳಾದ ಶ್ರೀ ಕಾಶೀ ಮಠಾಧೀಶ ಶ್ರೀಮತ್ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರಿಂದ ಮೇ 16ರಂದು ಈ ಗರುಡ ವಾಹನವು ಶ್ರೀ ವೀರ ವೆಂಕಟೇಶನಿಗೆ ಸಮರ್ಪಣೆಗೊಳ್ಳಲಿದೆ.
ಈ ಶಿಲ್ಪಕಲೆಯ ರೂವಾರಿ ಡಿ.ಪಿ. ಸುದರ್ಶನ ಚಿಪ್ಳೂಣRರ್ ಅವರು ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ವಿಜೇತ ಶಿಲ್ಪಿ ದಿ| ಡಿ.ಪಿ. ದಿವಾಕರ್ ಚಿಪ್ಳೂಣRರ್ ಅವರ ಪುತ್ರ. ಕಳೆದ 30 ವರ್ಷಗಳಿಂದ ಲೋಹ ಶಿಲ್ಪದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿನ್ನದ ಗರುಡ ವಾಹನ ತಯಾರಿಕಾ ಹೊಣೆಯು ಸಂಸ್ಥೆಗೆ ಆ ಭಗವಂತ ಕೊಟ್ಟ ಸೇವಾವಕಾಶ ಮತ್ತು ತಮ್ಮ ಶಿಲ್ಪಕಲೆಗೆ ದೊರೆತ ಪುರಸ್ಕಾರ ಎಂದು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.