ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಏಕಾಹ ಭಜನೆ
Team Udayavani, Dec 21, 2018, 3:15 AM IST
ಮಹಾನಗರ: ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಬುಧವಾರ ಮುಕ್ಕೋಟಿ ಏಕಾದಶಿಯಂದು ಮುಂಜಾನೆ 6ಕ್ಕೆ ಪ್ರಾರಂಭಗೊಂಡ ಏಕಾಹ ಭಜನೆ ನಿರಂತರ 24ಗಂಟೆ ನಡೆಯಿತು. ಊರ ಹಾಗೂ ಇತರ ಜಿಲ್ಲೆಗಳಿಂದ ಆಗಮಿಸಿದ 30ಕ್ಕೂ ಅಧಿಕ ಭಜನ ಮಂಡಳಿಗಳು ಶ್ರೀ ವೀರ ವೇಂಕಟೇಶ ದೇವರ ದಿವ್ಯ ಸನ್ನಿಧಾನದಲ್ಲಿ ತಮ್ಮ ಸೇವೆ ಸಲ್ಲಿಸಿದರು.
ಗುರವಾರ ಮುಕ್ಕೋಟಿ ದ್ವಾದಶಿ ಆಚರಣೆಯ ಪ್ರಯುಕ್ತ ಪ್ರಾತಃಕಾಲ 5.30ಕ್ಕೆ ಏಕಾಹ ಭಜನೆಯ ಮಂಗಲ ನಡೆಯಿತು. ಶ್ರೀ ದೇವರು ಪುಷ್ಪಾಲಂಕೃತ ಬೆಳ್ಳಿ ಲಾಲ್ಕಿಯಲ್ಲಿ ವಿ.ಟಿ. ರಸ್ತೆಯಲ್ಲಿರುವ ಶ್ರೀ ದೇವರ ತೀರ್ಥಕ್ಕೆ ತೆರಳಿ ತೀರ್ಥಸ್ನಾನ ಹಾಗೂ ಪೂಜೆ ನಡೆದ, ಬಳಿಕ ಪೇಟೆಯಲ್ಲಿ ಉತ್ಸವ ಸಾಗಿತು. ಮಧ್ಯಾಹ್ನ ಮಹಾಪೂಜೆಯ ಬಳಿಕ ಪ್ರಸಾದ ವಿತರಣೆ ನಡೆಯಿತು. ರಾತ್ರಿ ಪೂಜೆಯ ಬಳಿಕ ಸಣ್ಣ ರಥೋತ್ಸವ ನಡೆಯಿತು. ದೇಗುಲದ ಪ್ರಧಾನ ಅರ್ಚಕರಾದ ನರಸಿಂಹ ಭಟ್, ಹರೀಶ್ ಭಟ್, ದೇಗುಲದ ಮೊಕ್ತೇಸರರಾದ ಸಿ.ಎಲ್. ಶೆಣೈ, ಕೆ.ಪಿ. ಪ್ರಶಾಂತ್ ರಾವ್, ರಾಮಚಂದ್ರ ಕಾಮತ್ ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.