ಜಿಲ್ಲೆಯಲ್ಲಿ ಪಡಿತರ ಚೀಟಿ ಇ-ಕೆವೈಸಿ; ಸುಳ್ಯ ಮೊದಲ ಸ್ಥಾನಿ, ಪುತ್ತೂರು ಕೊನೆಯ ಸ್ಥಾನಿ
Team Udayavani, Sep 18, 2021, 6:16 AM IST
ಪುತ್ತೂರು: ದ.ಕ. ಜಿಲ್ಲೆಯಲ್ಲಿ ಪಡಿತರ ಚೀಟಿ ಇ- ಕೆವೈಸಿ ಪ್ರಕ್ರಿಯೆಗೆ ಸಂಬಂಧಿಸಿ ಸೆ. 15ರ ವರೆಗೆ ಶೇ. 87.90ರಷ್ಟು ಪ್ರಗತಿ ದಾಖಲಾಗಿದೆ. ಶೇ. 12.10 ಮಂದಿ ನೋಂದಣಿ ಮಾಡಿಸಲು ಬಾಕಿ ಇದ್ದಾರೆ. ಶೇಕಡಾವಾರು ನೋಂದಣಿಯಲ್ಲಿ ಸುಳ್ಯ ತಾಲೂಕು ಜಿಲ್ಲೆಗೆ ಮೊದಲ ಸ್ಥಾನದಲ್ಲಿ ಇದೆ. ಪುತ್ತೂರು ಕೊನೆಯ ಸ್ಥಾನದಲ್ಲಿ ಇದೆ. ಕಡಬ ತಾಲೂಕು ಪುತ್ತೂರು ತಾಲೂಕಿನಲ್ಲೇ ಸೇರಿದೆ.
ಅರ್ಹ ಫಲಾನುಭವಿಗಳಿಗೆ ಪಡಿತರ ಒದಗಿಸುವ ನಿಟ್ಟಿನಲ್ಲಿ ಕೆವೈಸಿ ಪ್ರಕ್ರಿಯೆ ನಡೆಯುತ್ತಿದ್ದು, ಆಹಾರ ಇಲಾಖೆ ದಿನಾಂಕ ವಿಸ್ತರಿಸುವ ಮೂಲಕ ಬಾಕಿ ಇರುವ ಪಡಿತರ ಚೀಟಿ ಫಲಾನುಭವಿಗಳಿಗೆ ಅವಕಾಶ ಒದಗಿಸಿದೆ.
ಪುತ್ತೂರು ತಾಲೂಕಿನಲ್ಲಿ 45,256 ಪಡಿತರ ಚೀಟಿ ಇದ್ದು, 1,80,531 ಸದಸ್ಯರಿದ್ದಾರೆ. ಇದರಲ್ಲಿ 34,809 ಪಡಿತರ ಚೀಟಿಯ 1,56,192 ಸದಸ್ಯರ ಕೆವೈಸಿ ಪೂರ್ಣಗೊಂಡಿದೆ. 10,447 ಪಡಿತರ ಚೀಟಿಯ 24,339 ಸದಸ್ಯರ ಕೆವೈಸಿ ಬಾಕಿ ಇದೆ. ಪಡಿತರ ಸದಸ್ಯರ ಲೆಕ್ಕದಲ್ಲಿ ಈ ತನಕ ಶೇ. 86.52 ಪ್ರಗತಿ ಕಂಡಿದೆ.
ಸುಳ್ಯ ತಾಲೂಕಿನಲ್ಲಿ 20,520 ಪಡಿತರ ಚೀಟಿ ಇದ್ದು 80,205 ಸದಸ್ಯರಿದ್ದಾರೆ. ಇದರಲ್ಲಿ 16,853 ಪಡಿತರ ಚೀಟಿಯ 73,768 ಸದಸ್ಯರ ಕೆವೈಸಿ ಪೂರ್ಣಗೊಂಡಿದೆ. 3,667 ಪಡಿತರ ಚೀಟಿಯ 6,437 ಸದಸ್ಯರ ಕೆವೈಸಿ ಬಾಕಿ ಇದೆ. ಪಡಿತರ ಸದಸ್ಯರ ಲೆಕ್ಕದಲ್ಲಿ ಈ ತನಕ ಶೇ. 91.97 ಪ್ರಗತಿ ಕಂಡಿದೆ.
ಬೆಳ್ತಂಗಡಿ ತಾಲೂಕಿನಲ್ಲಿ 47,689 ಪಡಿತರ ಚೀಟಿ ಇದ್ದು 1,91,458 ಸದಸ್ಯರಿದ್ದಾರೆ. ಇದರಲ್ಲಿ 36,220 ಪಡಿತರ ಚೀಟಿಯ 1,68,611 ಸದಸ್ಯರ ಕೆವೈಸಿ ಪೂರ್ಣಗೊಂಡಿದೆ. 11,469 ಪಡಿತರ ಚೀಟಿಯ 22,847 ಸದಸ್ಯರ ಕೆವೈಸಿ ಬಾಕಿ ಇದೆ. ಪಡಿತರ ಸದಸ್ಯರ ಲೆಕ್ಕದಲ್ಲಿ ಈ ತನಕ ಶೇ. 88.07 ಪ್ರಗತಿ ಕಂಡಿದೆ.
ಇದನ್ನೂ ಓದಿ:ಆತಂಕಕಾರಿ ಆಫ್ಘಾನ್ : ಶಾಂಘೈ ಸಹಕಾರ ಒಕ್ಕೂಟ ಸಭೆಯಲ್ಲಿ ಪ್ರಧಾನಿ ಆತಂಕ
ಬಂಟ್ವಾಳ ತಾಲೂಕಿನಲ್ಲಿ 61,690 ಪಡಿತರ ಚೀಟಿ ಇದ್ದು 2,62,829 ಸದಸ್ಯರಿದ್ದಾರೆ. ಇದರಲ್ಲಿ 46,931 ಪಡಿತರ ಚೀಟಿಯ 2,35,076 ಸದಸ್ಯರ ಕೆವೈಸಿ ಪೂರ್ಣಗೊಂಡಿದೆ. 14,759 ಪಡಿತರ ಚೀಟಿಯ 27,753 ಸದಸ್ಯರ ಕೆವೈಸಿ ಬಾಕಿ ಇದೆ. ಪಡಿತರ ಸದಸ್ಯರ ಲೆಕ್ಕದಲ್ಲಿ ಈ ತನಕ ಶೇ. 89.44 ಪ್ರಗತಿ ಕಂಡಿದೆ.
ಮಂಗಳೂರು ತಾಲೂಕಿನಲ್ಲಿ 96,115 ಪಡಿತರ ಚೀಟಿ ಇದ್ದು, 3,88,183 ಸದಸ್ಯರಿದ್ದಾರೆ. ಇದರಲ್ಲಿ 70,630 ಪಡಿತರ ಚೀಟಿಯ 3,36,077 ಸದಸ್ಯರ ಕೆವೈಸಿ ಪೂರ್ಣಗೊಂಡಿದೆ. 25,485 ಪಡಿತರ ಚೀಟಿಯ 52,106 ಸದಸ್ಯರ ಕೆವೈಸಿ ಬಾಕಿ ಇದೆ. ಪಡಿತರ ಸದಸ್ಯರ ಲೆಕ್ಕದಲ್ಲಿ ಈತನಕ ಶೇ. 86.58 ಪ್ರಗತಿ ಕಂಡಿದೆ.
ಏನಿದು ಕೆವೈಸಿ?
ಪಡಿತರ ಸಾಮಗ್ರಿಯನ್ನು ಅರ್ಹರಿಗೆ ನೀಡುವ ನಿಟ್ಟಿನಲ್ಲಿ ಕೆವೈಸಿ ಜಾರಿ ಗೊಳಿಸಲಾಗಿದೆ. ಪಡಿತರ ಚೀಟಿಯಿಂದ ಮೃತಪಟ್ಟವರ ಹೆಸರು ತೆಗೆಯದಿರುವುದು, ಫಲಾ ನುಭವಿ ಹೊರದೇಶದಲ್ಲಿದ್ದರೂ ಕುಟುಂಬದ ಇತರ ಸದಸ್ಯರು ಪಡಿತರ ಪಡೆಯು ತ್ತಿರುವುದು ಇತ್ಯಾದಿ ಹತ್ತಾರು ಸಮಸ್ಯೆಗಳು ಇರುವ ಕಾರಣ ಇದನ್ನು ನಿಯಂತ್ರಿಸುವ ಉದ್ದೇಶದಿಂದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಪ್ರಕಾರ ಕೆವೈಸಿ ಆರಂಭಿಸಿದೆ. ಹಲವು ಗಡುವು ನೀಡಲಾಗಿದ್ದರೂ ಪೂರ್ಣ ಪ್ರಮಾಣದಲ್ಲಿ ನೋಂದಣಿ ಆಗದಿರುವ ಕಾರಣ ಸೆ. 30ರ ವರೆಗೆ ಕೊನೆಯ ಕಾಲಾವಕಾಶ ನೀಡಲಾಗಿದೆ. ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಚೀಟಿಯಲ್ಲಿ ಹೆಸರು ಹೊಂದಿರುವ ಎಲ್ಲ ಗ್ರಾಹಕರು ಬೆರಳಚ್ಚು ನೀಡಬೇಕು.
ಪಡಿತರ ಸಾಮಗ್ರಿ ರದ್ದು
ಕೆವೈಸಿ ಮಾಡದಿದ್ದರೆ ಪಡಿತರ ಚೀಟಿ ರದ್ದಾಗುವುದಿಲ್ಲ. ಆದರೆ ಆ ಕಾರ್ಡ್‌ನ ಸದಸ್ಯರಿಗೆ ದೊರೆಯುವ ಪಡಿತರ ಸಾಮಗ್ರಿ ಪೂರೈಕೆ ರದ್ದಾಗಲಿದೆ. ಉದಾಹರಣೆಗೆ ಒಂದು ಪಡಿತರ ಕಾರ್ಡ್ ನಲ್ಲಿ 5 ಸದಸ್ಯರಿದ್ದರೆ, ಐವರು ಕೆವೈಸಿ ಮಾಡಿದರೆ ಆ ಎಲ್ಲರಿಗೂ ಪಡಿತರ ಸಿಗುತ್ತದೆ. ಮೂರು ಮಂದಿ ಮಾತ್ರ ಕೆವೈಸಿ ಮಾಡಿದರೆ ಮೂರು ಮಂದಿಗೆ ಪಡಿತರ ಸಿಗುತ್ತದೆ. ಉಳಿದ ಇಬ್ಬರಿಗೆ ಪಡಿತರ ರದ್ದಾಗುತ್ತದೆ. ಆ ಇಬ್ಬರು ಮುಂದಿನ ದಿನಗಳಲ್ಲಿ ಕೆವೈಸಿ ಮಾಡಿದರೆ ಅವರಿಗೆ ಪಡಿತರ ಪಡೆಯಲು ಅವಕಾಶ ಇದೆ. ಕೆವೈಸಿ ಮಾಡದೆ ಇರುವ ಸದಸ್ಯ ಹೊರದೇಶದಲ್ಲಿ ಇರುವುದು ಅಥವಾ ಮೃತಪಪಟ್ಟಿರುವ ಸಾಧ್ಯತೆ ಇದೆ ಎಂದು ಪರಿಗಣಿಸಿ ಪಡಿತರ ಪೂರೈಕೆ ಸ್ಥಗಿತಗೊಳಿಸಲಾಗುತ್ತದೆ. ಬೆಡ್ ರೆಸ್ಟ್, ಕುಷ್ಠರೋಗ, ಅಂಗವಿಕಲತೆ, ಬಯೋಮೆಟ್ರಕ್‌ಗೆ ಬೆರಳು ಸ್ಪಂದಿಸದೆ ಇರುವ ಫಲಾನುಭವಿಗಳಿದ್ದರೆ ಅದಕ್ಕೆ ಸೂಕ್ತ ದಾಖಲೆ ತಂದೊಪ್ಪಿಸಿದಲ್ಲಿ ಅಂಥವರಿಗೆ ಕೆವೈಸಿಯಿಂದ ವಿನಾಯಿತಿ ನೀಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.