ಮಂಗಳೂರಿನ 8 ಕಡೆ ಪಡಿತರ ಅಂಗಡಿ ಬಂದ್‌


Team Udayavani, Jul 27, 2017, 8:10 AM IST

Ration-26-7.jpg

ವಿತರಕರು – ಸರಕಾರ ಹಗ್ಗಜಗ್ಗಾಟ: ಚೀಟಿದಾರರ ಪರದಾಟ

ಮಂಗಳೂರು: ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವರ ತವರು ಜಿಲ್ಲೆಯಲ್ಲೇ ಈಗ ಪಡಿತರ ಚೀಟಿದಾರರಿಗೆ ಸಕಾಲಕ್ಕೆ ಪಡಿತರ ಸಾಮಗ್ರಿ ಸಿಗುತ್ತಿಲ್ಲ. ಅಷ್ಟೇ ಅಲ್ಲ ಪಡಿತರ ಅವ್ಯವಸ್ಥೆ ಸರಿಪಡಿಸಲು ಸರಕಾರ ಜಾರಿಗೊಳಿಸಿರುವ ಕೆಲವೊಂದು ನಿಯಮಗಳಿಂದ ಬೇಸತ್ತು ಈಗಾಗಲೇ ಮಂಗಳೂರಿನ ಎಂಟು ಪಡಿತರ ಅಂಗಡಿಗಳು ಬಾಗಿಲು ಮುಚ್ಚಿವೆ. ಈ ರೀತಿ ಸರಕಾರ ಮತ್ತು ಪಡಿತರ ವಿತರಕರ ಸಂಘದ ನಡುವಿನ ಹಗ್ಗಜಗ್ಗಾಟದಿಂದಾಗಿ ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಉಂಟಾಗಿದೆ.

ಸಮರ್ಪಕವಾಗಿ ಪಡಿತರ ವಿತರಿಸುವ ಉದ್ದೇಶದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಈ ಹಿಂದೆ ಸರಕಾರ ಕೂಪನ್‌ ವ್ಯವಸ್ಥೆ ಜಾರಿಗೊಳಿಸಿತ್ತು. ಅನಂತರ ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ಕೂಪನ್‌ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿತ್ತು. ಆದರೆ ಪಡಿತರ ವಿತರಣೆಯಲ್ಲಿ ವಂಚನೆ, ನೈಜ ಫಲಾನುಭವಿಗಳಿಗೆ ಪಡಿತರ ಒದಗಿಸದೆ ಅದನ್ನು ಇತರರಿಗೆ ಮಾರಾಟ ಮಾಡಿ ಲಾಭ ಗಳಿಸುತ್ತಿದ್ದ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಮತ್ತು ಪಾರದರ್ಶಕ ಪಡಿತರ ಸೇವೆ ನೀಡುವ ಉದ್ದೇಶದಿಂದ ರಾಜ್ಯದ ನ್ಯಾಯಬೆಲೆ ಅಂಗಡಿಗಳಲ್ಲಿ ಪೋಸ್‌ (ಪಾಯಿಂಟ್‌ ಆಫ್ ಸೇಲ್‌ = ಪಿಒಎಸ್‌) ಯಂತ್ರ ಅಳವಡಿಸಲಾಗಿತ್ತು. ಇದು ಪಡಿತರ ವಿತರಕರ ಅಸಮಾಧಾನಕ್ಕೆ ಕಾರಣವಾಗಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಸರಕಾರದ ಈ ಕ್ರಮದಿಂದ ಬೇಸತ್ತು ಮಂಗಳೂರಿನ 8 ಕಡೆ ನ್ಯಾಯಬೆಲೆ ಅಂಗಡಿಗಳನ್ನೇ ವಿತರಕರು ಬಂದ್‌ ಮಾಡಿದ್ದಾರೆ. ಬೋಳಾರ, ಮಲ್ಲಿಕಟ್ಟೆ, ಶಕ್ತಿನಗರ, ಕೋಡಿಕಲ್‌, ಬಿಜೈ ಮತ್ತು ಸುರತ್ಕಲ್‌ನ ಮೂರು ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ನ್ಯಾಯಬೆಲೆ ಅಂಗಡಿಗಳು ಈಗಾಗಲೇ ಬಾಗಿಲು ಹಾಕಿವೆ. ಇದರಿಂದ ಆ ಭಾಗದ ಪಡಿತರ ಚೀಟಿದಾರರಿಗೆ ಪಡಿತರ ಪಡೆಯಲು ತೀವ್ರ ಸಮಸ್ಯೆ ಉಂಟಾಗುತ್ತಿದೆ.

ನಿಯಮಗಳ ಸಮಸ್ಯೆ
ದ.ಕ. ಜಿಲ್ಲೆಯಲ್ಲಿ ಒಟ್ಟು 493 ನ್ಯಾಯಬೆಲೆ ಅಂಗಡಿಗಳಿದ್ದು, ಈ ಪೈಕಿ ಮಂಗಳೂರು ನಗರ ವ್ಯಾಪ್ತಿಯಲ್ಲಿ 60, ಗ್ರಾಮಾಂತರ ವ್ಯಾಪ್ತಿಯಲ್ಲಿ 120 ಅಂಗಡಿಗಳಿವೆ. ಉಡುಪಿ ಜಿಲ್ಲೆಯಲ್ಲಿ 390 ಅಂಗಡಿಗಳಿವೆ. ಆದಾಯಕ್ಕಿಂತ ಖರ್ಚು ಜಾಸ್ತಿಯಾಗಿ ಮೊದಲೇ ನಷ್ಟದಲ್ಲಿರುವ ನ್ಯಾಯಬೆಲೆ ಅಂಗಡಿದಾರರಿಗೆ ಸರಕಾರದ ಹೊಸ ನಿಯಮಗಳು ಈಗ ಮತ್ತಷ್ಟು ಸಮಸ್ಯೆ ತಂದೊಡ್ಡಿವೆ. ಪರಿಣಾಮ ಅಲ್ಲಲ್ಲಿ ನ್ಯಾಯಬೆಲೆ ಅಂಗಡಿಗಳು ಮುಚ್ಚಲ್ಪಡುತ್ತಿವೆ. ಜಿಲ್ಲೆಯ ಇತರೆಡೆಯೂ ಕೆಲವೆಡೆ ಅಂಗಡಿಗಳನ್ನು ಮುಚ್ಚಲಾಗಿದೆ ಎಂದು ದ.ಕ. ಜಿಲ್ಲಾ ಪಡಿತರ ವಿತರಕರ ಸಂಘದ ಪ್ರಮುಖರೋರ್ವರು ತಿಳಿಸಿದ್ದಾರೆ.

ಕಮಿಷನ್‌ಗಿಂತ ಖರ್ಚು ಹೆಚ್ಚು
ಪಡಿತರ ವಿತರಕರಿಗೆ ಒಂದು ಕೆಜಿ ಪಡಿತರ ವಿತರಿಸಿದರೆ 36 ಪೈಸೆ ಇದ್ದ ಕಮಿಷನನ್ನು ಕಳೆದ ಎಂಟು ತಿಂಗಳಿನಿಂದ 70 ಪೈಸೆಗೆ ಹೆಚ್ಚಳ ಮಾಡಲಾಗಿದೆ. ಇದರ ಪ್ರಕಾರ ಒಂದು ನ್ಯಾಯಬೆಲೆ ಅಂಗಡಿ ವ್ಯಾಪ್ತಿಯಲ್ಲಿ 500 ಮಂದಿ ಪಡಿತರ ಚೀಟಿದಾರರು ಇದ್ದಲ್ಲಿ ಸುಮಾರು 4,000 ರೂ. ಆ ವಿತರಕನಿಗೆ ಸಿಗುತ್ತದೆ. ಆದರೆ ನ್ಯಾಯಬೆಲೆ ಅಂಗಡಿ ಅಂದರೆ ಕನಿಷ್ಠ ಇಬ್ಬರು ಕೆಲಸಗಾರರು, ವಿದ್ಯುತ್‌ ಬಿಲ್‌ ಪಾವತಿ, ಅಂಗಡಿ ಬಾಡಿಗೆ ಎಂದೆಲ್ಲ ತಿಂಗಳಿಗೆ ಕನಿಷ್ಠ 20,000 ರೂ. ವರೆಗೆ ಖರ್ಚು ಬರುತ್ತದೆ. ಈ ಬಗ್ಗೆ ಸರಕಾರ ಗಮನ ಕೊಡದೆ ಕೇವಲ ನ್ಯಾಯಬೆಲೆ ಅಂಗಡಿಯವರ ಮೇಲೆಯೇ ಆರೋಪ ಮಾಡಲಾಗುತ್ತದೆ. ಸಮಸ್ಯೆಗಳ ಬಗ್ಗೆ ಹೇಳಿದಲ್ಲಿ ಪರವಾನಿಗೆ ರದ್ದು ಮಾಡಲಾಗುವುದು ಎನ್ನುತ್ತಾರೆ ಎಂದು ಸಂಘದ ಸದಸ್ಯರು ಹೇಳುತ್ತಾರೆ.

ಪಡಿತರ ವಿತರಣೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಪೋಸ್‌ ಯಂತ್ರ ಕಡ್ಡಾಯ ಎಂದು ರಾಜ್ಯ ಸರಕಾರ ನಿಯಮ ಜಾರಿಗೊಳಿಸಿತು. ಆದರೆ ಇದಕ್ಕೆ ಬೇಕಾದ ವ್ಯವಸ್ಥೆಯನ್ನೇ ಮಾಡಿಲ್ಲ. ಕೇವಲ ಯಂತ್ರ ಅಳವಡಿಸಿದರೆ ಸರ್ವರ್‌ ಸಮಸ್ಯೆ ಸೇರಿದಂತೆ ವಿವಿಧ ತೊಂದರೆಗಳು ಉಂಟಾಗುತ್ತವೆ. ಯಂತ್ರ ಅಳವಡಿಸುವುದರಿಂದ ಸರ್ವರ್‌ ಸಮಸ್ಯೆ ತಲೆದೋರಿದರೆ ಅದು ಸರಿಯಾಗುವವರೆಗೆ ಕಾಯುವುದಕ್ಕೆ ಜನರೂ ತಯಾರಿರುವುದಿಲ್ಲ. ಇದು ಅಂಗಡಿಯವರಿಗೂ ತಲೆನೋವು ಎನ್ನುತ್ತಾರೆ ಅವರು.

ಪಾರದರ್ಶಕ ಸೇವೆಗಾಗಿ ಪೋಸ್‌
ಈ ಬಗ್ಗೆ ‘ಉದಯವಾಣಿ’ಗೆ ಪ್ರತಿಕ್ರಿಯಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ. ಖಾದರ್‌, ಪಡಿತರ ಚೀಟಿದಾರರಿಗೆ ಪಾರದರ್ಶಕವಾಗಿ ಪಡಿತರ ಸಿಗಬೇಕು. ಇದಕ್ಕಾಗಿ ರಾಜ್ಯದ ಎಲ್ಲಕಡೆ ಪೋಸ್‌ ಯಂತ್ರ ಅಳವಡಿಸಲಾಗಿದೆ. ವಿತರಕರು ಸಕಾಲಕ್ಕೆ ಪಡಿತರ ವಿತರಿಸದಿರುವುದು, ವಂಚನೆಗಳು ಇದರಿಂದ ಹತೋಟಿಗೆ ಬರಲಿವೆ ಎಂದರು.

ಪಡಿತರ ವಿಳಂಬ?
ಈ ನಡುವೆ ಪಡಿತರ ವಿತರಣೆಯಲ್ಲಿಯೂ ವಿಳಂಬವಾಗುತ್ತಿದೆ ಎಂಬುದು ಪಡಿತರ ಚೀಟಿದಾರರ ಅಳಲು. ಪಡಿತರ ಬಂದಿದೆ ಎಂದು ಮೊಬೈಲ್‌ಗೆ ಸಂದೇಶ ಬರುತ್ತದೆ. ನ್ಯಾಯಬೆಲೆ ಅಂಗಡಿಗೆ ಹೋಗಿ ಕೇಳಿದರೆ ಬಂದಿಲ್ಲ ಅಥವಾ ಸ್ಟಾಕ್‌ ಖಾಲಿಯಾಗಿದೆ ಎನ್ನುತ್ತಾರೆ. ಕೆಲಸ ಬಿಟ್ಟು, ವಾಹನ ಬಾಡಿಗೆ ಮಾಡಿಕೊಂಡು ಬಂದರೆ ಪಡಿತರ ಸಿಗದೇ ಬರಿಗೈಯಲ್ಲಿ ವಾಪಸಾಗ ಬೇಕಾಗುತ್ತದೆ ಎಂದು ಅನಿತಾ ಎಸ್‌. ಭಂಡಾರ್ಕರ್‌ ಹೇಳುತ್ತಾರೆ ಆದರೆ ಸ್ಟಾಕ್‌ ಖಾಲಿಯಾಗುತ್ತಿಲ್ಲ. ಚೀಟಿದಾರರಿಗೆ ಸರಿಯಾಗಿ ಪೂರೈಕೆ ಮಾಡಲಾಗುತ್ತಿದೆ ಎಂದು ಸಂಘದ ಪ್ರಮುಖರು ತಿಳಿಸಿದ್ದಾರೆ.

ಪೋಸ್‌ ಇಲ್ಲವೇ ಕೂಪನ್‌
ಕೂಪನ್‌ ವ್ಯವಸ್ಥೆ ಜಾರಿಗೊಳಿಸಿದಾಗ ಬೇಡ ಎಂದು ಗಲಾಟೆ ಮಾಡಿದ್ದಲ್ಲದೇ ಅಂಗಡಿ ನಡೆಸಲಾಗುವುದಿಲ್ಲ ಎಂದೂ ಕೆಲ ಅಂಗಡಿದಾರರು ಬರೆದು ಕೊಟ್ಟಿದ್ದರು. ಈಗ ನಿಲ್ಲಿಸಿದ ಅಂಗಡಿ ಬೇಕು ಎಂದು ಕೇಳುತ್ತಿದ್ದಾರೆ. ಪೋಸ್‌ ಯಂತ್ರ ಅಳವಡಿಸದೇ ಇರುವ ಅಂಗಡಿಗಳಲ್ಲಿ, ಇಂಟರ್ನೆಟ್‌ ಸಿಗದೇ ಇರುವೆಡೆಗಳಲ್ಲಿ ಮತ್ತೆ ಕೂಪನ್‌ ವ್ಯವಸ್ಥೆ ಜಾರಿಗೆ ತರಲು ಸರಕಾರ ನಿರ್ಧರಿಸಿದೆ. ಸರ್ವರ್‌ ಸಮಸ್ಯೆ ನೆಪ ಅಷ್ಟೆ. ಇಷ್ಟೆಲ್ಲ ಇಂಟರ್ನೆಟ್‌ ಬಳಕೆ ಮಾಡುತ್ತೇವೆ. ನ್ಯಾಯಬೆಲೆ ಅಂಗಡಿಗಳಲ್ಲಿ ಮಾತ್ರ ಸರ್ವರ್‌ ಸಮಸ್ಯೆ ತಲೆದೋರುವುದಾ? ಎಂದು ಪ್ರಶ್ನಿಸಿರುವ ಸಚಿವ ಯು.ಟಿ. ಖಾದರ್‌ ಅವರು ಸರ್ವರ್‌ ಸಮಸ್ಯೆ ನೆಪವೊಡ್ಡಿ ಯಂತ್ರ ಅಳವಡಿಸಲು ಹಿಂದೇಟು ಹಾಕಿದ್ದ ನ್ಯಾಯಬೆಲೆ ಅಂಗಡಿಗಳು ಕೂಪನ್‌ ವ್ಯವಸ್ಥೆಗೆ ತೆರೆದುಕೊಳ್ಳಬೇಕಾಗುತ್ತದೆ ಎಂದು  ತಿಳಿಸಿದ್ದಾರೆ.

– ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

7

Mangaluru: ಮಹಾಕಾಳಿಪಡ್ಪು ರೈಲ್ವೇ ಅಂಡರ್‌ಪಾಸ್‌; ಕುಂಟುತ್ತಿರುವ ಕಾಮಗಾರಿಗೆ ಬೇಕಿದೆ ವೇಗ

4-ut-khader

Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್

6

Mangaluru: ಅಪಾರ್ಟ್‌ಮೆಂಟ್‌, ಮಾಲ್‌ಗ‌ಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ

5

Mangaluru: ನಗರದಲ್ಲಿ ತೆರೆದುಕೊಂಡ ಗ್ರಾಮೀಣ ಬದುಕು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-sid-male

Udupi; ಸಿದ್ದಾಪುರ ಪರಿಸರದಲ್ಲಿ ಮಳೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.