ರೇಷನಿಂಗ್‌ ಎಫೆಕ್ಟ್ ;ಕೆಲವೆಡೆಗೆ ಇನ್ನೂ ತಲುಪಿಲ್ಲ ನೀರು!

ನೀರು ಸರಬರಾಜು; ಹಲವೆಡೆ ಸಹಜ ಸ್ಥಿತಿ;ಕೆಲವೆಡೆ ಯಥಾಸ್ಥಿತಿ

Team Udayavani, Apr 25, 2019, 6:04 AM IST

2404MLR33-WATER

ತುಂಬೆಯಿಂದ ಬಂದ ನೀರು, ನಗರಕ್ಕೆ ಸರಬರಾಜಾಗಲು ಇರುವ ಬೆಂದೂರ್‌ನ ಶುದ್ಧೀಕರಣ ಘಟಕದಲ್ಲಿ ಟ್ಯಾಂಕರ್‌ ವ್ಯವಸ್ಥೆಯನ್ನು ಸಿದ್ಧಗೊಳಿಸಲಾಗಿದೆ.

ರೇಷನಿಂಗ್‌ ಆರಂಭವಾದ ಮೇಲೆ ನಗರದಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಿರುವುದು ಸುದಿನ ತಂಡ ಕೆಲವು ಪ್ರದೇಶಗಳಿಗೆ ಭೇಟಿ ನೀಡಿದಾಗ ತಿಳಿದು ಬಂದಿದೆ. ಈ ಕುರಿತು ಸಂಬಂಧ ಪಟ್ಟವರ ಗಮನ ಸೆಳೆಯುವ ಪ್ರಯತ್ನ ಇಲ್ಲಿದೆ.

ಮಹಾನಗರ: ನಗರದಲ್ಲಿ ರೇಷನಿಂಗ್‌ ಆರಂಭವಾದ ಬಳಿಕ ಸಮರ್ಪಕವಾಗಿ ನಮಗೆ ನೀರು ಬರುತ್ತಿಲ್ಲ. ಪಾಲಿಕೆಯಲ್ಲಿ ಕೇಳಿದರೆ ತಾಂತ್ರಿಕ ಸಮಸ್ಯೆ ಅನ್ನುತ್ತಾರೆ. ಕೆಲವೆಡೆ ಸ್ವಲ್ಪ ಮಟ್ಟಿಗೆ ಸಮಸ್ಯೆ ಇದೀಗ ನಿವಾರಣೆಯಾಗುತ್ತಿದೆಯಾದರೂ ಕೆಲವೆಡೆ ಇನ್ನೂ ಸಮಸ್ಯೆ ಇದೆ. ಹೀಗೆ ಆದರೆ ಮೇ ತಿಂಗಳಿನಲ್ಲಿ ಹೇಗಿರಬಹುದು?.. ಎನ್ನುತ್ತಾ ನಗರದ ನೀರಿನ ಸಮಸ್ಯೆಯನ್ನು ವಿವರಿಸಿದವರು ಮಂಗಳಾದೇವಿ ನಿವಾಸಿ ಯಶೋದಾ.

ಕೆಲವು ದಿನಗಳಲ್ಲಿ ನೀರಿನ ಸಮಸ್ಯೆ ಎದುರಿಸುತ್ತಿದ್ದ ನಗರದ ಆಯ್ದ ಕೆಲವು ಪ್ರದೇಶಗಳಿಗೆ ಬುಧವಾರ “ಸುದಿನ’ ತಂಡ ಭೇಟಿ ನೀಡಿದಾಗ ಇಂತಹ ಹಲವು ಸಮಸ್ಯೆ-ಅಭಿಪ್ರಾಯ-ಆಗ್ರಹಗಳು ವ್ಯಕ್ತವಾಯಿತು. ಈ ಪೈಕಿ ಬುಧವಾರ ನೀರು ಸರಬರಾಜು ಇದ್ದ ಹಿನ್ನೆಲೆಯಲ್ಲಿ ಸೋಮವಾರ – ಮಂಗಳವಾರ ನಗರದಲ್ಲಿ ಕೇಳಿ ಬರುತ್ತಿದ್ದ ಆಕ್ರೋಶ ಸ್ವಲ್ಪ ಕಡಿಮೆಯಾಗಿದೆ. ಆದರೂ ನಗರದ ಎತ್ತರ ಪ್ರದೇಶದ ಮನೆಗಳು/ ಕೆಲವು ವಾರ್ಡ್‌ಗಳ 3-4 ಬಡಾವಣೆಗಳಿಗೆ ಸಮರ್ಪಕವಾಗಿ ನೀರು ಬರುತ್ತಿಲ್ಲ ಎಂಬ ದೂರು ಇನ್ನೂ ಇದೆ.
ರೇಷನಿಂಗ್‌ ಕಾರಣದಿಂದ 2 ದಿನ ಖಾಲಿಯಾಗಿದ್ದ ಪೈಪ್‌ನಲ್ಲಿ “ಏರ್‌ಲಾಕ್‌’ ಆಗಿ ಹಲವು ಮನೆಗಳಿಗೆ ನೀರು ಇನ್ನೂ ತಲುಪಿಲ್ಲ. ಈ ಪೈಕಿ ಹೆಚ್ಚಿನ ಮನೆಗಳಿಗೆ ಪಾಲಿಕೆಯ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಯಿತಾದರೂ ಇನ್ನುಳಿದವರು ಪಕ್ಕದ ಬಾವಿಯ ನೀರನ್ನೇ ಆಶ್ರಯಿಸುತ್ತಿದ್ದಾರೆ. ಬುಧವಾರ ನೀರು ಸರಬರಾಜು ಇದ್ದ ಕಾರಣದಿಂದ ಟ್ಯಾಂಕರ್‌ ಬಳಕೆ ಕೂಡ ನಗರದಲ್ಲಿ ಕಡಿಮೆಯಾಗಿತ್ತು.

2-3 ದಿನಕ್ಕೊಮ್ಮೆ
ಬರುವಲ್ಲಿಯೇ ಸಮಸ್ಯೆ!
ಹಲವು ವರ್ಷಗಳಿಂದಲೇ ಎರಡು-ಮೂರು ದಿನಗಳಿಗೊಮ್ಮೆ ನೀರು ಬರುತ್ತಿದ್ದ ಪ್ರದೇಶಗಳಲ್ಲಿ ಈಗ ನಿರಂತರ ನೀರು ಬರುತ್ತಿದ್ದರೂ ಸಮಸ್ಯೆ ಇತ್ಯರ್ಥವಾಗಿಲ್ಲ ಎಂಬುದು ಸತ್ಯ. “ಸುದಿನ’ ಭೇಟಿ ನೀಡಿದ ಪ್ರಕಾರ ಮಂಗಳಾದೇವಿ, ಗೋರಿಗುಡ್ಡ, ಕುಲಶೇಖರ, ಅತ್ತಾವರ, ಮೇರಿಹಿಲ್‌, ಕೋಡಿಕಲ್‌, ಅಶೋಕ್‌ನಗರ, ದಂಬೇಲ್‌, ಸುಂಕದಕಟ್ಟೆ, ಬೋಳೂರು, ಬಂದರ್‌, ಕಂದುಕ, ಕೃಷ್ಣನಗರ, ನಂದಿಗುಡ್ಡ, ಸುರತ್ಕಲ್‌ ಸಹಿತ ಆಯ್ದ ಭಾಗಗಳಿಗೆ ಇನ್ನೂ ರೇಷನಿಂಗ್‌ ಎಫೆಕ್ಟ್ ಕಡಿಮೆ ಆದಂತೆ ಕಾಣುತ್ತಿಲ್ಲ. ಪೈಪ್‌ಗ್ಳಲ್ಲಿ “ಏರ್‌ಲಾಕ್‌’ ಆಗಿ ನೀರು ಸರಾಗವಾಗಿ ಹರಿಯುವುದು ಇಲ್ಲಿ ಕಷ್ಟವಾಗಿದ್ದು ಒಂದು ಕಾರಣವಾದರೆ, ಇನ್ನೊಂದೆಡೆ, ಎತ್ತರ ಪ್ರದೇಶದ ಭಾಗಕ್ಕೆ ನೀರಿನ ಸರಾಗ ಹರಿಯುವಿಕೆ ಕಷ್ಟವಾಗುತ್ತಿರುವುದು ಮತ್ತೂಂದು ಕಾರಣ. ಈ ಮಧ್ಯೆ, ಫ್ಲ್ಯಾಟ್‌ನವರು ಬೃಹತ್‌ ಗಾತ್ರದ ನೀರಿನ ಸಂಪು ಇಟ್ಟಿರುವುದರಿಂದ ರೇಷನಿಂಗ್‌ ಮಾಡಿದ ಅನಂತರ ಬರುವ ನೀರು ನೇರವಾಗಿ ಸಂಪುಗೆ ಬೀಳುತ್ತಿದ್ದು, ಅಕ್ಕ ಪಕ್ಕದ ಸಿಂಗಲ್‌ ಲೈನ್‌ಗೆ ನೀರು ಸರಬರಾಜು ತಡವಾಗುತ್ತಿದೆ. ಆ ಸಮಯಕ್ಕೆ ಮತ್ತೆ ರೇಷನಿಂಗ್‌ ಆರಂಭವಾದರೆ ಸಿಂಗಲ್‌ ಲೈನ್‌ಗೆ ನೀರು ಹೋಗುವುದೇ ಅಪರೂಪ ಎನಿಸಿದೆ.

ಮಂಗಳಾದೇವಿ
ವ್ಯಾಪ್ತಿಯಲ್ಲಿ ಸಮಸ್ಯೆ
ಮಂಗಳಾದೇವಿ ವಾರ್ಡ್‌ನ ಬಹುತೇಕ ಭಾಗಗಳಿಗೆ ನೀರು ರೇಷನಿಂಗ್‌ ಸಮಯ ಹೊರತುಪಡಿಸಿ ಉಳಿದ ಸಮಯದಲ್ಲಿ ನೀರು ಬರುತ್ತಿದೆ. ಆದರೆ, ಎಂದಿನಂತೆ ಉತ್ತಮ ಪ್ರಮಾಣದಲ್ಲಿ ಬರುತ್ತಿಲ್ಲ ಎಂಬುದು ಕೆಲವರ ವಾದ. ಆದರೆ, ಇಲ್ಲಿನ ಶಿವನಗರ ವ್ಯಾಪ್ತಿಯ ಒಂದು ಬಡಾವಣೆಗೆ 7 ದಿನಗಳಿಂದ ಪಾಲಿಕೆ ನೀರು ಬರಲಿಲ್ಲ. ಇಲ್ಲಿ 7 ಮನೆಗಳಿವೆ. ನಳ್ಳಿ ನೀರು ಸಿಗದ ಕಾರಣಕ್ಕಾಗಿ ಪಾಲಿಕೆ ವತಿಯಿಂದ ಟ್ಯಾಂಕರ್‌ ಸಹಾಯದಿಂದ ನೀರು ಪಡೆದುಕೊಳ್ಳುತ್ತಿದ್ದಾರೆ. ಇದೇ ರೀತಿ ದೇವರಾಜ ಕಾಂಪೌಂಡ್‌ನ‌ ಸುಮಾರು 4-5 ಮನೆ, ಮಾರ್ನಮಿಕಟ್ಟೆಯಲ್ಲಿ 3 ಮನೆಗೆ ನೀರು ಬರುತ್ತಿಲ್ಲ. ಸುಭಾಷ್‌ನಗರದಲ್ಲಿಯೂ ಇದೇ ಸಮಸ್ಯೆಯಿದೆ. ಇದೇ ರೀತಿ ಸೆಂಟ್ರಲ್‌ ವಾರ್ಡ್‌, ಕಂಟೋನ್ಮೆಂಟ್‌ ವಾರ್ಡ್‌, ಬೋಳೂರು ವಾರ್ಡ್‌ನ ಕೆಲವು ಮನೆಗಳಿಗೆ ನೀರಿನ ಸಮಸ್ಯೆ ಇದೆ.

ನೀರಿಲ್ಲದ 12 ದಿನ!
ಶೇಡಿಗುರಿ ನಿವಾಸಿ ವಾಲ್ಟರ್‌
ಡಿ’ಕೋಸ್ಟ ಹೇಳುವ ಪ್ರಕಾರ, ಶೇಡಿಗುರಿಯಿಂದ ದಂಬೇಲ್‌ಗೆ ಹೋಗುವ ದಾರಿಯಲ್ಲಿ ಫಲ್ಗುಣಿ ನಗರಕ್ಕೆ ಹೋಗುವ ಸಮೀಪ 10-15 ಮನೆಗಳಿಗೆ 12 ದಿನಗಳಿಂದ ನೀರು ಬರುತ್ತಿಲ್ಲ. ಹಲವು ಸಮಯದ ಹಿಂದಿನಿಂದ ಈ ಸಮಸ್ಯೆ ಇದೆ. ಈ ಬಗ್ಗೆ ಸ್ಥಳೀಯ ಕಾರ್ಪೊರೇಟರ್‌ ಅವರಿಗೆ ಹೇಳಿದರೂ ಸಮಸ್ಯೆ ಪರಿಹಾರವಾಗಲಿಲ್ಲ.

ಕರಾವಳಿ ಮೈದಾನ ಪಂಪ್‌ಹೌಸ್‌ನವರಲ್ಲಿ ವಿಚಾರಿಸಿದಾಗ ಅವರು ನೀರು ಬಿಟ್ಟಿದ್ದಾರೆ ಎನ್ನುತ್ತಾರೆ. ಆದರೆ ನಮಗೆ ನೀರು ಬಂದಿಲ್ಲ. ಸಮೀಪದಲ್ಲಿ ಬಾವಿ ಇರುವುದರಿಂದ ಬದುಕಿದ್ದೇವೆ ಎನ್ನುತ್ತಾರೆ.

ಬಾವಿ ಶುಚಿ ಮಾಡಿದರೆ ನೀರು ಲಭ್ಯ
ಉರ್ವಸ್ಟೋರ್‌ ನಿವಾಸಿ ಅನಿಲ್‌ ಅಂಗಡಿಗುಡ್ಡ ಅವರು ಸುದಿನ ಜತೆಗೆ ಮಾತನಾಡಿ, ಅಂಗಡಿಗುಡ್ಡದಲ್ಲಿರುವ ಸಾರ್ವಜನಿಕ ಬಾವಿಯಲ್ಲಿ ನೀರು ಇದ್ದರೂ ಬಾವಿಯ ಒಳಗಡೆ ಬೆಳೆದ ಮರ ಉಪಯೋಗ ಮಾಡುವುದಕ್ಕೆ ಅಡ್ಡಿಯಾಗಿದೆ. ಈ ಹಿಂದೆ ಇದೇ ಬಾವಿಯನ್ನು ಉಪಯೋಗಿಸುತ್ತಿದ್ದರು. ಬಾವಿಯನ್ನು ಶುಚಿಗೊಳಿ ಸಿದರೆ ನೀರು ಉಪಯೋಗಕ್ಕೆ ಬಹುದು ಎನ್ನುತ್ತಾರೆ.

ನೀರು ಲಭ್ಯತೆಗಿಂತ ಲೀಕೇಜ್‌ ಅಧಿಕ!
ತುಂಬೆಯಿಂದ ಸರಬರಾಜಾಗುವ ನೀರು ಅಲ್ಲಲ್ಲಿ ಸೋರಿಕೆಯಾಗುತ್ತಿದೆ. ಅದನ್ನು ಮೊದಲ ಸರಿಪಡಿಸಬೇಕಿದೆ. ಆದರೆ ನಗರದ ಬಹುತೇಕ ಭಾಗದಲ್ಲಿ ನೀರಿನ ಲೀಕೇಜ್‌ ಜಾಸ್ತಿ ಇದೆ. ಲಭ್ಯತೆಗಿಂತ ಲೀಕೇಜ್‌ ಜಾಸ್ತಿ ಇದೆ. ಇದಕ್ಕೆ ಕ್ರಮ ತೆಗೆದುಕೊಳ್ಳಲಿ ಎಂದು ಆಗ್ರಹಿಸಿದವರು ಕಿಶೋರ್‌ ದಂಬೆಲ್‌. ಬಿಜೈಯ ಜಯವರ್ಮ ಹೆಗ್ಡೆ ಹೇಳುವ ಪ್ರಕಾರ, ನೀರು ಸರಬರಾಜಿನ ಸಮಯದ ಬಗ್ಗೆ ಸರಿಯಾದ ಮಾಹಿತಿಯನ್ನು ಪ್ರತೀ ದಿನ ಪ್ರಕಟಿಸಬೇಕು. ಇಲ್ಲದಿದ್ದರೆ ನೀರು ಪೋಲು ಆಗುವ ಸಂಭವವಿದೆ. ಸಾರ್ವಜನಿಕರು ಅನಗತ್ಯವಾಗಿ ನೀರಿಗಾಗಿ ಕಾಯುವ ಪ್ರಮೇಯ ಇರುತ್ತದೆ ಎನ್ನುತ್ತಾರೆ.

ಮಿತ ಬಳಕೆ ಬಹುದೊಡ್ಡ ಕೊಡುಗೆ
ಓಡುವ ಮಳೆ ನೀರನ್ನು ಹಿಡಿದಿಡುವುದು ಒಂದು ರೀತಿಯ ಜಲಸಂರಕ್ಷಣೆಯಾದರೆ ಹಿಡಿದಿಟ್ಟ ನೀರನ್ನು ಜಾಗರೂಕತೆಯಿಂದ ನಿರ್ವಹಿಸುವುದು ಇನ್ನೊಂದು ರೀತಿಯ ಜಲಸಂರಕ್ಷಣೆ. ನೀರಿನ ಸಮಸ್ಯೆಗೆ ಇನ್ಯಾರನ್ನೋ ದೂರುವ ಬದಲು ಇದನ್ನು ಪರಿಹರಿಸುವ ದಿಶೆಯಲ್ಲಿ ನಾನೇನು ಮಾಡಬೇಕು ಎಂಬ ಬಗ್ಗೆ ಚಿಂತಿಸುವುದು ಅವಶ್ಯ. ನೀರಿನ ಅನಗತ್ಯ ಪೋಲು ತಡೆಯಲು ಉಪಯೋಗದಲ್ಲಿ ಒಂದಷ್ಟು ಸ್ವಶಿಸ್ತು ಅಳವಡಿಸಿಕೊಂಡರೆ ಅದು ಜಲಸಂರಕ್ಷಣೆಗೆ ದೊಡ್ಡ ಕೊಡುಗೆಯಾಗುತ್ತದೆ.

ನಳ್ಳಿಗಳನ್ನು ತೆರೆದಿಡಬೇಡಿ
ಇನ್ನೂ ಒಂದೂವರೆ ತಿಂಗಳು ನೀರು ಸಂಕಷ್ಟದ ಕಾಲ. ಕುಡಿಯುವ ನೀರು ಪೂರೈಕೆಯಲ್ಲಿ ರೇಷನಿಂಗ್‌ ಈಗಾಗಲೇ ಆರಂಭಗೊಂಡಿದೆ. ಪಾಲಿಕೆಯ ನೀರು 3 ದಿನಗಳಿಗೊಮ್ಮೆ ಅನಿಯಮಿತ ವೇಳೆಯಲ್ಲಿ ಬರುತ್ತದೆ. ಅನಿಯಮಿತ ವೇಳೆಯಲ್ಲಿ ನೀರು ಬರುವುದರಿಂದ ನಳ್ಳಿ ಒಪನ್‌ ಮಾಡಿ ನೀರು ಬರುತ್ತದೆಯೇ ಎಂದು ನೋಡಿ ಹಾಗೇ ಬಿಟ್ಟು ಬಿಡುವುದು ಬಹಳಷ್ಟು ಕಡೆಗಳಲ್ಲಿ ಕಂಡುಬರುತ್ತದೆ. ನಳ್ಳಿಯನ್ನು ಒಪನ್‌ ಮಾಡಿ ಇಡದೆ ಬಂದ್‌ ಮಾಡುವುದು ಉತ್ತಮ. ಹೆಚ್ಚಿನ ಮನೆಗಳಲ್ಲಿ ಹಗಲು ಹೊತ್ತು ಉದ್ಯೋಗಕ್ಕೆ ತೆರಳುವುದರಿಂದ ಆ ಸಂದರ್ಭ ನೀರು ಬಂದರೆ ಅದು ವ್ಯರ್ಥವಾಗಿ ಹರಿದು ಪೋಲಾಗುವ ಸಂಭವವಿದೆ.

ಬೇಕಾಬಿಟ್ಟಿ ಮನೋಸ್ಥಿತಿ ಸಲ್ಲದು
ನೀರು ಬೇಕಾದಷ್ಟಿದೆ. ಹಾಗಾಗಿ ಯಥೇತ್ಛ ಬಳಸಬಹುದು ಎಂಬ ಮನೋಸ್ಥಿತಿ ಕರಾವಳಿ ಭಾಗದಲ್ಲಿ ಇನ್ನೂ ದೂರವಾಗಿಲ್ಲ . ಇದರಿಂದ ಹೊರಬರಬೇಕಾಗಿದೆ. ಗೃಹಬಳಕೆಯಲ್ಲಿ ನೀರು ಅವಶ್ಯಕತೆಗಿಂತ ಆದೆಷ್ಟೊ ಹೆಚ್ಚಿನ ಪ್ರಮಾಣದಲ್ಲಿ ಪೋಲು ಆಗುತ್ತಿದೆ. ಬೇಸಿಗೆ ಕಾಲದಲ್ಲಿ ನೀರಿನ ಅಪವ್ಯಯವಾಗದಂತೆ ಮುಂಜಾಗ್ರತೆ ವಹಿಸಿ ಮಳೆ ಪ್ರಾರಂಭವಾಗುವವರೆಗೆ ಲಭ್ಯ ನೀರಿನ ಬಳಕೆಯಲ್ಲಿ ಸ್ವಯಂ ನಿಯಂತ್ರಣ ಅಳವಡಿಸಿಕೊಳ್ಳಬೇಕು. ನೀರು ಯಥೇಚ್ಚವಾಗಿ ಲಭ್ಯವಾಗುತ್ತಿದ್ದ ಸಂದರ್ಭದಲ್ಲಿ 2 ಬಕೆಟ್‌ ನೀರು ಬಳಸುತ್ತಿದ್ದರೆ ಈ ಸಂದರ್ಭ ಅದನ್ನು ಒಂದು ಬಕೆಟ್‌ಗೆ ಇಳಿಸುವುದು, ಗಿಡಗಳಿಗೆ ಕುಡಿಯುವ ನೀರು ಹಾಯಿಸುವ ಬದಲು ಉಪಯೋಗಿಸಿದ ನೀರನ್ನು ಬಳಸುವುದು, ನಳ್ಳಿಗಳನ್ನು ಒಪನ್‌ ಇಟ್ಟು ಪಾತ್ರೆಗಳನ್ನು ತೊಳೆಯುವ ಅಭ್ಯಾಸ ಬಿಟ್ಟು ಪಾತ್ರೆಗಳಲ್ಲಿ ನೀರು ತುಂಬಿಸಿ ಪಾತ್ರೆಗಳನ್ನು ತೊಳೆಯುವುದು, ಬಟ್ಟೆಗಳನ್ನು ಒಗೆಯಲು ಕಡಿಮೆ ನೀರು ಬಳಸುವುದು, ಶೌಚಾಲಯಗಳಲ್ಲಿ ಫÉಶ್‌ಗಳಲ್ಲಿ ನೀರಿನ ಬಳಕೆಯಲ್ಲಿ ಮಿತಿ ನೀರು ಸಂರಕ್ಷಣೆಗೆ ನಾವು ನೀಡುವ ಮಹತ್ವದ ಕೊಡುಗೆಯಾಗಿರುತ್ತದೆ.

ಈ ವಾರದ ರೇಷನಿಂಗ್‌ ಸ್ಥಗಿತ; ಜಿಲ್ಲಾಡಳಿತ ತೀರ್ಮಾನ
ಮಹತ್ವದ ಬೆಳವಣಿಗೆಯಲ್ಲಿ, ಶಂಭೂರಿನ ಎಎಂಆರ್‌ನ ಡ್ಯಾಂನಲ್ಲಿ ಸಂಗ್ರಹವಾಗಿರುವ ಸ್ವಲ್ಪ ಪ್ರಮಾಣದ ನೀರನ್ನು ತುಂಬೆ ಡ್ಯಾಂಗೆ ಮಂಗಳವಾರ ರಾತ್ರಿಯಿಂದ ಬಿಡಲಾಗಿದ್ದು, ಪರಿಣಾಮವಾಗಿ ತುಂಬೆಯಲ್ಲಿ ನೀರಿನ ಪ್ರಮಾಣ 19 ಸೆಂ.ಮೀ.ಏರಿಕೆಯಾಗಿ, ಸದ್ಯ 5.10 ಮೀಟರ್‌ ನೀರು ಸಂಗ್ರಹವಾಗಿದೆ. ಹಾಗಾಗಿ ನಗರದಲ್ಲಿ ಬುಧವಾರ, ಗುರುವಾರ ನೀರಿನ ರೇಷನಿಂಗ್‌ ರದ್ದುಗೊಳಿಸಲಾಗಿದ್ದು, ಎಂದಿನಂತೆ ನೀರು ಸರಬರಾಜಾಗುತ್ತಿದೆ. ಪಾಲಿಕೆ ನಿಯಮದ ಪ್ರಕಾರ, ಈ ವಾರದಲ್ಲಿ ಬುಧವಾರ-ಗುರುವಾರ ನೀರು ಪಂಪಿಂಗ್‌ ಸ್ಥಗಿತಗೊಳಿಸಿ, ಶುಕ್ರವಾರದಿಂದ ಮತ್ತೆ ನೀರು ಪಂಪಿಂಗ್‌ ಮಾಡಬೇಕಿತ್ತು. ಇದೀಗ ರೇಷನಿಂಗ್‌ ಈ ವಾರದಲ್ಲಿ ತಾತ್ಕಾಲಿಕವಾಗಿ ವಾಪಾಸ್‌ ಪಡೆಯಲಾಗಿದೆ.

ತುಂಬೆ ವೆಂಟೆಡ್‌ ಡ್ಯಾಂನಲ್ಲಿ ನೀರಿನ ಮಟ್ಟ ಕಡಿಮೆಗೊಂಡ ಹಿನ್ನೆಲೆಯಲ್ಲಿ ಎ. 11ರಿಂದಲೇ ನೀರಿನ ರೇಷನಿಂಗ್‌ ನಡೆಸಲು ಜಿಲ್ಲಾಡಳಿತ/ಮನಪಾ ನಿರ್ಧರಿಸಿತ್ತು. ಬಳಿಕ ನಿರ್ಧಾರ ಬದಲಿಸಿ ಚುನಾವಣೆ ಮುಗಿದ ಬಳಿಕ ರೇಷನಿಂಗ್‌ಗೆ ಉದ್ದೇಶಿಸಿದ ಹಿನ್ನೆಲೆಯಲ್ಲಿ ಎ. 18ರ ಸಂಜೆ 6 ಗಂಟೆಯಿಂದ ರೇಷನಿಂಗ್‌ ಆರಂಭವಾಗಿತ್ತು. ಹೀಗಾಗಿ 18ರಿಂದ 20ರ ಬೆಳಗ್ಗೆಯವರೆಗೆ ನೀರಿರಲಿಲ್ಲ. 20ರಂದು ಬೆಳಗ್ಗಿನಿಂದ ಮತ್ತೆ ನೀರು ಸರಬರಾಜು ಆರಂಭಿಸಿ ಎ. 24ರಂದು ಬೆಳಗ್ಗೆಯವರೆಗೆ ನೀರು ಹರಿಸಲು ಉದ್ದೇಶಿಸಿ ಬುಧವಾರ, ಗುರುವಾರ (ಎ. 24, 25)ರೇಷನಿಂಗ್‌ ನಡೆಸಲು ನಿರ್ಧರಿಸಲಾಗಿತ್ತು. ಆದರೆ ತುಂಬೆ ಡ್ಯಾಂನಲ್ಲಿ ಪ್ರಸ್ತುತ ನೀರು ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಈ ವಾರದ ರೇಷನಿಂಗ್‌ ಕೈಬಿಡಲಾಗಿದೆ. ಮುಂದಿನ ವಾರದ ಒಳಗೆ ಉತ್ತಮ ಮಳೆಯಾದರೆ ರೇಷನಿಂಗ್‌ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಮಳೆಯಾಗದಿದ್ದರೆ ಮತ್ತೆ ರೇಷನಿಂಗ್‌ ಈ ಹಿಂದಿನಂತೆ (4 ದಿನ ನೀರು-2 ದಿನ ಸ್ಥಗಿತ) ಜಾರಿಗೊಳ್ಳಲಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ಮಾಹಿತಿ ನೀಡಿ
ಮಹಾನಗರ ವ್ಯಾಪ್ತಿಯಲ್ಲಿ ನೀರಿನ ತೀವ್ರ ಸಮಸ್ಯೆ ಇದ್ದಲ್ಲಿ ತಮ್ಮ ಹೆಸರಿನ ಸಹಿತ “ಉದಯವಾಣಿ’ ಸುದಿನ ವಾಟ್ಸಪ್‌ ನಂಬರ್‌ 9900567000 ಬರೆದು ಕಳುಹಿಸಿ. ಅದನ್ನು ಪ್ರಕಟಿಸಿ ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನ ಮಾಡಲಾಗುವುದು. ಜತೆಗೆ ನೀರು ಉಳಿತಾಯ ಮಾಡುವ ಬಗ್ಗೆ ಅಥವಾ ಮಾದರಿಯಾಗುವ ಪರ್ಯಾಯ ನೀರಿನ ವ್ಯವಸ್ಥೆಯನ್ನು ತಮ್ಮ ಮನೆಗಳಲ್ಲಿ ಸ್ವಯಂ ಅಳವಡಿಸಿಕೊಂಡಿದ್ದರೆ ಅಂತಹ ಯಶೋಗಾಥೆಗಳನ್ನೂ ಕಳುಹಿಸಬಹುದು.

 ಈ ವಾರದ ಶಟ್‌ಡೌನ್‌ ಸ್ಕಿಪ್‌
ಸದ್ಯ ತುಂಬೆ ಡ್ಯಾಂನಲ್ಲಿ ಅಲ್ಪ ಪ್ರಮಾಣದ ನೀರಿನ ಏರಿಕೆಯ ಕಾರಣದಿಂದಾಗಿ ಈ ವಾರದ ಎರಡು ದಿನದ ನೀರು ಪಂಪಿಂಗ್‌ ಸ್ಥಗಿತ (ರೇಷನಿಂಗ್‌)ವನ್ನು ಕೈಬಿಡಲಾಗಿದೆ. ಮುಂದಿನ ವಾರದಲ್ಲಿ ರೇಷನಿಂಗ್‌ ಕಳೆದ ವಾರದಂತೆ ಇರಲಿದೆ. ಒಂದು ವೇಳೆ ಈ ಮಧ್ಯೆ ಮಳೆ ಬಂದು ನೀರಿನ ಪ್ರಮಾಣ ತುಂಬೆಯಲ್ಲಿ ಏರಿಕೆಯಾದರೆ, ರೇಷನಿಂಗ್‌ ಕೈಬಿಡಲಾಗುವುದು.
 - ಶಶಿಕಾಂತ್‌ ಸೆಂಥಿಲ್‌,
ಜಿಲ್ಲಾಧಿಕಾರಿ ದ.ಕ.

ಟಾಪ್ ನ್ಯೂಸ್

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

1-a-ct

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

6

Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ

3

Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್‌ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ

7-lokayuktha

Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ

2

Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BJP Congress;ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರಿಗೆ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Yakshagana Tenku

Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.