ದಿನ ಪತ್ರಿಕೆ ಓದಿ ಜ್ಞಾನ ವೃದ್ಧಿಸಿ: ಡಾ| ರೊನಾಲ್ಡ್
ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗನದರ್ಶನ ಶಿಬಿರ
Team Udayavani, Apr 9, 2019, 6:00 AM IST
ಪೆರ್ಮನ್ನೂರು: ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳಲ್ಲಿನ ಕಲಿಕೆಯ ಜತೆಗೆ ದಿನಪತ್ರಿಕೆಗಳನ್ನು ಓದಿ, ದೃಶ್ಯ ಮಾಧ್ಯಮಗಳನ್ನು ವೀಕ್ಷಿಸಿ ಜ್ಞಾನವನ್ನು ವೃದ್ಧಿಸಿಕೊಳ್ಳ ಬೇಕು ಎಂದು ಕರ್ನಾಟಕ ಲೋಕ ಸೇವಾ ಆಯೋಗದ ಸದಸ್ಯ ಡಾ| ಅನಿಲ್ ರೊನಾಲ್ಡ್ ಫೆರ್ನಾಂಡಿಸ್ ಹೇಳಿದರು.
ಫೋಕಸ್ ಸಂಸ್ಥೆ ಮಂಗಳೂರು ಮತ್ತು ಪೆರ್ಮನ್ನೂರು ವಲಯ ಚರ್ಚ್‌ಗಳ ಪರಿಷತ್‌ನ ಸಹಕಾರದಲ್ಲಿ ಎ. 7ರಂದು ಪೆರ್ಮನ್ನೂರು (ತೊಕ್ಕೊಟು) ಸೈಂಟ್ ಸೆಬಾಸ್ಟಿಯನ್ ಚರ್ಚ್ ಸಭಾಂಗಣದಲ್ಲಿ ಎಸೆಸೆಲ್ಸಿ , ಪಿಯುಸಿ ವಿದ್ಯಾರ್ಥಿಗಳಿಗಾಗಿ ನಡೆದ ವೃತ್ತಿ ಮಾರ್ಗದರ್ಶನ ಶಿಬಿರದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು.
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಮೂಲಕ ತಮ್ಮ ಜೀವನದ ಸದೃಢ ಭವಿಷ್ಯವನ್ನು ರೂಪಿಸಬಹುದು ಎಂದು ಅವರು ಸಲಹೆ ಮಾಡಿದರು.
ವಿದ್ಯಾರ್ಥಿಗಳು ತಮ್ಮ ಮುಂದಿನ ಶಿಕ್ಷಣವನ್ನು ಅಯ್ಕೆ ಮಾಡುವಾಗ ಹೆತ್ತವರ, ಪೋಷಕರ ಅಭಿಪ್ರಾಯದಂತೆ ಆಯ್ಕೆ ಮಾಡುವುದು ಸರಿಯಲ್ಲ, ತಮ್ಮ ಆಸಕ್ತಿಯ ವಿಷಯವನ್ನು ತಾವೇ ಆಯ್ಕೆ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪೆರ್ಮನ್ನೂರು ಚರ್ಚಿನ ಪ್ರಧಾನ ಗುರು ವಂ| ಜೆ.ಬಿ. ಸಲ್ಡಾನ್ಹಾ ಮಾತನಾಡಿ, ವಿದ್ಯಾರ್ಥಿಗಳು ಸುಶಿಕ್ಷತರಾಗಿ ನಮ್ಮ ದೇಶದಲ್ಲಿ ಸೇವೆ ಮಾಡುವ ನಿರ್ಧಾರ ತೆಗೆದು ಕೊಳ್ಳಬೇಕು. ಈ ದೇಶದ ಉತ್ತಮ ಪ್ರಜೆ, ಉತ್ತಮ ನಾಯಕರಾಗಿ ಒಳ್ಳೆಯ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿ ಯುವಕರ ಮೇಲಿದೆ ಎಂದು ಹೇಳಿದರು. ಪ್ರೊ| ನಾರ್ಬರ್ಟ್ ಲೋಬೋ, ಪ್ರೊ| ಸ್ಟೀವನ್ ಕ್ವಾಡ್ರಸ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಫೋಕಸ್ ಸಂಸ್ಥೆಯ ಸಂಚಾಲಕ ಸುಶೀಲ್ ನೊರೋನ್ಹಾ, ಪೆರ್ಮನ್ನೂರು ಚರ್ಚ್‌ನ ಉಪಾಧ್ಯಕ್ಷ ಮೆಲ್ವಿನ್ ಡಿ’ಸೋಜಾ, ಕಾರ್ಯದರ್ಶಿ ರೊನಾಲ್ಡ್ ಫೆರ್ನಾಂಡಿಸ್ ವೇದಿಕೆಯಲ್ಲಿದ್ದರು.
ಸಂಸ್ಥೆಯ ಅಧ್ಯಕ್ಷ ಪಿಯುಸ್ ಡಿ’ಸೋಜಾ ಸ್ವಾಗತಿಸಿ, ಕಾರ್ಯದರ್ಶಿ ಡೆನಿಟಾ ಡಿ’ಸೋಜಾ ವಂದಿಸಿದರು. ಜಾನ್ ಡಿ’ಸೋಜಾ ನಿರ್ವಹಿಸಿದರು. ಸಂಸ್ಥೆಯ ನಿಕಟ ಪೂರ್ವ ಅಧ್ಯಕ್ಷ ಪ್ರದೀಪ್ ಡಿ’ಸೋಜಾ, ಮಾಜಿ ಅಧ್ಯಕ್ಷ ಮೌರಿಸ್ ಡಿ’ಸೋಜಾ, ಪ್ರಮುಖರಾದ ಫ್ರಾÂಕಿ ಕುಟಿನ್ಹೊ, ಸಿರಿಲ್ ಡಿ’ಸೋಜಾ, ಬಾಸಿಲ್ ರೊಡ್ರಿಗಸ್, ಸಂತೋಷ್ ಡಿ’ಸೋಜಾ, ರೋಶನ್ ಫೆರಾವೊ, ಮೆಲ್ವಿನ್ ಡಿ’ಸೋಜಾ, ಮೇರಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ
Pro Kabaddi League: ಪಾಟ್ನಾ ಪೈರೆಟ್ಸ್ ಪರಾಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.