ತುಳು ನಾಟಕ ಪರ್ಬದಲ್ಲಿ ಸಂಸ್ಮರಣೆ
Team Udayavani, Mar 31, 2018, 10:23 AM IST
ಮಹಾನಗರ: ಕನ್ನಡ ಚಲನಚಿತ್ರ ಕ್ಷೇತ್ರದಲ್ಲಿ ವರನಟ ರಾಜ್ ಕುಮಾರ್‌ರಂತೆ ತುಳು ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಕೆ. ಎನ್. ಟೇಲರ್ ಪ್ರಾತಃ ಸ್ಮರಣೀಯರಾಗಿದ್ದಾರೆ ಎಂದು ತುಳು ರಂಗ ನಿರ್ದೇಶಕ ಕದ್ರಿ ನವನೀತ ಶೆಟ್ಟಿ ಹೇಳಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಮಹಾನಗರ ಪಾಲಿಕೆ ವತಿಯಿಂದ ಪುರಭವನದಲ್ಲಿ ನಡೆಯುತ್ತಿರುವ 8 ದಿನಗಳ ತುಳು ನಾಟಕ ಪರ್ಬದಲ್ಲಿ 5ನೇ ದಿನವಾದ ಬುಧವಾರ ನಡೆದ ಕಾರ್ಯಕ್ರಮದಲ್ಲಿ ತುಳುರಂಗ ಭೂಮಿಯ ದಿಗ್ಗಜ ಕೆ.ಎನ್. ಟೇಲರ್‌ರವರ ಸಂಸ್ಮರಣೆಯಲ್ಲಿ ನುಡಿನಮನ ಸಲ್ಲಿಸಿ ಅವರು ಮಾತನಾಡಿದರು.
ರಂಗ ಚಟುವಟಿಕೆಗೆ ಆಧುನಿಕ ಸ್ಪರ್ಶ
ಕಾರ್ಕಳದ ಕಡಂದಲೆಯ ನಾರಾಯಣ ಅವರು ಮಂಗಳೂರಿಗೆ ಬಂದು ತನ್ನ ನಿಕಟ ಬಂಧುಗಳ ಟೈಲರ್ ಅಂಗಡಿಯಲ್ಲಿ ಕೆಲಸ ಮಾಡುತ್ತಾ ವೃತ್ತಿ ಕಲಿತು ಕೆ.ಎನ್. ಟೈಲರ್ ಎಂದು ಗುರುತಿಸಿಕೊಂಡರು. ನಾಟಕದ ಮೇಲಿನ ಅಭಿಮಾನದಿಂದ ತನ್ನ ವೃತ್ತಿಯಲ್ಲಿ ನಷ್ಟ ಹೊಂದಿ ಮುಂಬಯಿಗೆ ಹೋಗಿ ಬಳಿಕ ವೃತ್ತಿ, ಪ್ರವೃತ್ತಿಯಲ್ಲಿ ಯಶಸ್ಸು ಕಂಡರು. ಊರಿಗೆ ಬಂದು ಟೈಲರ್ ವೃತ್ತಿ ಮುಂದುವರಿಸಿದರು. ನಾಟಕ ಕ್ಷೇತ್ರಕ್ಕೆ ಪೂರಕ ವಾತಾವರಣ ಇಲ್ಲದಂತಹ ಸಂದರ್ಭದಲ್ಲಿಯೂ, ಲಭ್ಯ ತಂತ್ರಜ್ಞಾನ ಬಳಸಿ ರಂಗ ಚಟುವಟಿಕೆಗೆ ಆಧುನಿಕ ಸ್ಪರ್ಶ ನೀಡಿದ್ದರು ಎಂದರು.
ಹಿರಿಯ ರಂಗನಟ, ಟೇಲರ್‌ರವರ ಒಡನಾಡಿ ಸೀತಾರಾಮ ಶೆಟ್ಟಿ ದೀಪ ಬೆಳಗಿಸಿ, ಪುಷ್ಪಾರ್ಚನೆ ಮಾಡಿದರು. ಮಮತಾ ಸುರೇಶ್ ಹಾಗೂ ಕುಟುಂಬ ಸದಸ್ಯರು, ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ, ಸದಸ್ಯ ಸಂಚಾಲಕ ಎ. ಶಿವಾನಂದ ಕರ್ಕೇರ, ಡಾ| ವೈ.ಎನ್. ಶೆಟ್ಟಿ, ಚಂದ್ರಶೇಖರ ಗಟ್ಟಿ, ಸುಧಾ ನಾಗೇಶ್, ಡಾ| ವಾಸುದೇವ ಬೆಳ್ಳೆ, ತಾರಾನಾಥ ಗಟ್ಟಿ ಕಾಪಿಕಾಡ್ ಉಪಸ್ಥಿತರಿದ್ದರು.
ಎಲ್ಲ ವಿಭಾಗಗಳಲ್ಲೂ ಭಾಗಿ
ಕೆ.ಬಿ. ಭಂಡಾರಿ ತನ್ನ ಜೀವನವನ್ನು ಸಂಪೂರ್ಣವಾಗಿ ತುಳು ರಂಗಭೂಮಿಗೆ ಅರ್ಪಿಸಿಕೊಂಡು ಏಕಾಂಗಿ ಜೀವನ ನಡೆಸಿದವರು. ತುಳು ರಂಗ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡವರನ್ನು ಮಕ್ಕಳಂತೆ ಪ್ರೀತಿಸುತ್ತಿದ್ದ ಅವರು ತುಳು ರಂಗ ಭೂಮಿಯ ಎಲ್ಲ ವಿಭಾಗಗಳಲ್ಲೂ ತೊಡಗಿಸಿಕೊಂಡಿದ್ದರು ಎಂದರು.
ರಂಗಕಲಾವಿದ ನಿರಂಜನ್ ಸಾಲ್ಯಾನ್ ದೀಪ ಪ್ರಜ್ವಲನ ಮಾಡಿ, ಪುಷ್ಪಾರ್ಚನೆ ನಡೆಸಿದರು. ಕೆ.ಬಿ. ಭಂಡಾರಿಯವರ ಕುಟುಂಬದ ಪ್ರತಿನಿಧಿಯಾಗಿ ಕಿಶನ್‌ಚಂದ್ ಮಾಡ, ಅಕಾಡೆಮಿ ಅಧ್ಯಕ್ಷ ಎ. ಸಿ. ಭಂಡಾರಿ, ಮನಪಾ ಸದಸ್ಯರಾದ ಎಂ. ಅಬ್ದುಲ್ ಅಜೀಜ್, ದೀಪಕ್ ಪೂಜಾರಿ ಉಪಸ್ಥಿತರಿದ್ದರು.
ಕೆ.ಬಿ. ಭಂಡಾರಿ ನೆಂಪು
ತುಳು ನಾಟಕ ಪರ್ಬದ 6ನೇ ದಿನದ ಕಾರ್ಯಕ್ರಮದಲ್ಲಿ ಕೆ.ಬಿ. ಭಂಡಾರಿ ಅವರ ನೆಂಪು ಕಾರ್ಯಕ್ರಮ ಜರಗಿತು. ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯೆ ಸರೋಜಿನಿ ಶೆಟ್ಟಿ ನುಡಿನಮನ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.