ನಿವೇಶನ ರಹಿತರನ್ನು ಗುರುತಿಸಲು ಮರುಸಮೀಕ್ಷೆ
ರಾಜೀವ್ ಗಾಂಧಿ ವಸತಿ ನಿಗಮ ನಿರ್ಧಾರ ಎ. 15ರ ವರೆಗೆ ಅವಕಾಶ
Team Udayavani, Mar 20, 2020, 6:00 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ಗ್ರಾಮೀಣ ಪ್ರದೇಶದ ಲ್ಲಿರುವ ನಿವೇಶನರಹಿತರನ್ನು ಗುರುತಿಸುವುದಕ್ಕಾಗಿ ರಾಜ್ಯದಲ್ಲಿ ಮತ್ತೂಮ್ಮೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಯಲಿದೆ. ಈಗಾಗಲೇ ನಡೆಸಿರುವ ಸಮೀಕ್ಷೆಯಲ್ಲಿ 6.61 ಲಕ್ಷ ಮಂದಿ ನಿವೇಶನ ರಹಿತರಿದ್ದಾರೆ. ಅದರಲ್ಲಿ ಹಲವರ ಹೆಸರು ಕೈಬಿಟ್ಟು ಹೋಗಿದೆ ಮತ್ತು ಹೊಸದಾಗಿ ನಮೂದಿಸಲು ಅವಕಾಶ ನೀಡಬೇಕು ಎಂಬ ಬೇಡಿಕೆ ವ್ಯಕ್ತವಾದ್ದ ರಿಂದ ಮರುಸಮೀಕ್ಷೆಗೆ ರಾಜೀವ್ ಗಾಂಧಿ ವಸತಿ ನಿಗಮ ಮುಂದಾಗಿದೆ.
ಕೇಂದ್ರ ಸರಕಾರವು ಸಾಮಾಜಿಕ ಆರ್ಥಿಕ ಜಾತಿ ಗಣತಿ-2011ರಲ್ಲಿ ಕೈ ಬಿಟ್ಟು ಹೋದ ವಸತಿ ಮತ್ತು ನಿವೇಶನ ರಹಿತರ ಸಮೀಕ್ಷೆ ಕೈಗೊಳ್ಳಲು 2018-19ರಲ್ಲಿ ತಿಳಿಸಿತ್ತು. ಅರ್ಹರನ್ನು ಗುರುತಿಸಿ ನಿಗಮದ ವೆಬ್‌ಸೈಟ್‌ನಲ್ಲಿ ನಮೂದಿಸಲು ಕಾಲಾವಕಾಶ ನೀಡಿ ಕೇಂದ್ರ ಸರಕಾರದ ಸೂಚನೆಯಂತೆ ಕಳೆದ ವರ್ಷ ಮಾ. 7ಕ್ಕೆ ಅಂತಿಮಗೊಳಿಸಲಾಗಿತ್ತು. ಆ ಬಳಿಕ ಹೊಸದಾಗಿ ಹೆಸರು ಸೇರ್ಪಡೆಗೆ ಅವಕಾಶವಿರಲಿಲ್ಲ.
ಮತ್ತೂಮ್ಮೆ ಸಮೀಕ್ಷೆ ಯಾಕೆ?
ಸಮೀಕ್ಷೆಯಲ್ಲಿ ನಿವೇಶನರಹಿತರು ಕೈಬಿಟ್ಟು ಹೋಗಿರುವುದಾಗಿ ಮತ್ತು ಹೊಸದಾಗಿ ನಮೂ ದಿಸಲು ಅವಕಾಶ ನೀಡುವಂತೆ ಸಚಿವರು, ಶಾಸಕರು ಮತ್ತು ಜಿಲ್ಲೆಗಳಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಮರುಸಮೀಕ್ಷೆಗೆ ಉದ್ದೇಶಿಸಲಾಗಿದೆ. ಜತೆಗೆ ಪ್ರತೀ ತಿಂಗಳು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿಯೂ ಈ ವಿಚಾರ ಚರ್ಚೆಗೆ ಬರುತ್ತಿತ್ತು. ಆದ್ದರಿಂದ ಇದೊಂದು “ವಿಶೇಷ ಪ್ರಕರಣ’ ಎಂದು ಪರಿಗಣಿಸಿ ಕೈಬಿಟ್ಟು ಹೋಗಿರುವ ಅರ್ಹ ನಿವೇಶನರಹಿತರನ್ನು ನಮೂದಿಸಲು ಅನುಮತಿ ಕೋರಿ ನಿಗಮವು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಅದರಂತೆ ಸರಕಾರ ಅನುಮೋದನೆ ನೀಡಿದೆ.
ಎ. 14 ಅಂತಿಮ ಗಡುವು
ಕೇವಲ ನಿವೇಶನರಹಿತರನ್ನು ನಮೂದಿಸಲು ಮಾತ್ರ ಸದ್ಯ ಅವಕಾಶ ನೀಡಲಾಗಿದೆ. ಎ. 15ರ ಅಂತಿಮ ದಿನಾಂಕವಾಗಿರುತ್ತದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
2018-19ರಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಕೈಬಿಟ್ಟು ಹೋದ ನಿವೇಶನರಹಿತರನ್ನು ಸೇರಿಸಲು ಎ. 15ರ ವರೆಗೆ ಅಂತಿಮ ಅವಕಾಶ ನೀಡಲಾಗಿದೆ. ಈ ಸಮಯದೊಳಗೆ ಅರ್ಹ ನಿವೇಶನರಹಿತರನ್ನು ಗುರುತಿಸಿ ನಿಗಮದ ವೆಬ್‌ಸೈಟ್‌ನಲ್ಲಿ ನಮೂದಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
– ಆರ್. ಸೆಲ್ವಮಣಿ, ಸಿಇಒ, ದ.ಕ. ಜಿ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.