ಅವಿಭಜಿತ ಜಿಲ್ಲೆಯಲ್ಲಿ ರಕ್ತ ಸಂಗ್ರಹದಲ್ಲಿ ಚೇತರಿಕೆ
Team Udayavani, Dec 18, 2020, 1:24 AM IST
ಉಡುಪಿ/ಮಂಗಳೂರು: ಕೊರೊನಾ ಲಾಕ್‌ಡೌನ್ ವೇಳೆ ರಕ್ತ ಸಂಗ್ರಹದ ಕೊರತೆ ಎದುರಾಗಿದ್ದ ಅವಿಭಜಿತ ದ.ಕ. ಜಿಲ್ಲೆಯ ರಕ್ತನಿಧಿಗಳಲ್ಲಿ ರಕ್ತ ಸಂಗ್ರಹ ಪ್ರಮಾಣದಲ್ಲಿ ತುಸು ಏರಿಕೆಯಾಗಿದೆ.
ಕೊರೊನಾದ ಬಳಿಕ ಸಂಘ-ಸಂಸ್ಥೆಗಳು ಹಾಗೂ ಕಾಲೇಜುಗಳಲ್ಲಿ ನಡೆಯುತ್ತಿದ್ದ ರಕ್ತದಾನ ಶಿಬಿರಗಳು ಸ್ಥಗಿತವಾಗಿ ರಾಜ್ಯಾದ್ಯಂತ ರಕ್ತದ ಅಭಾವ ಎದುರಾಗಿತ್ತು. ಪ್ರಸ್ತುತ ಅವಳಿ ಜಿಲ್ಲೆಯಲ್ಲಿ ರಕ್ತ ಸಂಗ್ರಹದ ಪ್ರಮಾಣದಲ್ಲಿ ಬಹಳ ಎನ್ನುವಷ್ಟು ಏರಿಕೆಯಾಗದಿದ್ದರೂ ಬೇಡಿಕೆಗೆ ತಕ್ಕಂತೆ ಸಂಗ್ರಹವಿದೆ ಎನ್ನುವುದು ನೆಮ್ಮದಿಯ ವಿಚಾರ.
ಉಡುಪಿಯಲ್ಲಿ ವಾರ್ಷಿಕ ಸರಾಸರಿ 10,000 ಯೂನಿಟ್ ರಕ್ತ ಸಂಗ್ರಹ ವಾಗು ತ್ತದೆ. ಆದರೆ ಈ ವರ್ಷದಲ್ಲಿ ಮಾರ್ಚ್ 1ರಿಂದ ಡಿ. 6ರ ವರೆಗೆ 4,811 ಯೂನಿಟ್ ಸಂಗ್ರಹವಾಗಿದೆ. 2019ರ ಇದೇ ಅವಧಿಯಲ್ಲಿ 6,021 ಯೂನಿಟ್ ರಕ್ತ ಸಂಗ್ರಹ ವಾಗಿತ್ತು. 1,210 ಯೂನಿಟ್ ಕಡಿಮೆಯಾಗಿದೆ. ಕೊರೊನಾಕ್ಕೆ ಮುನ್ನ ಮಣಿಪಾಲ ಹಾಗೂ ಜಿಲ್ಲಾ ರಕ್ತನಿಧಿಯಲ್ಲಿ ಪ್ರತಿ ವಾರದ ಶಿಬಿರದ ಮೂಲಕ ದಾನಿ ಗಳಿಂದ 250 ಯುನಿಟ್ ಹಾಗೂ ತಿಂಗಳಿಗೆ 1,500 ಯುನಿಟ್ ಸಂಗ್ರವಾಗುತ್ತಿತ್ತು.
ದ.ಕ. ಜಿಲ್ಲೆಯಲ್ಲಿ ಪ್ರಸ್ತುತ ಇಲ್ಲಿಯವರೆ 5,341 ಯೂನಿಟ್ ರಕ್ತ ಸಂಗ್ರಹವಾಗಿದೆ. 2019ರ ಇದೇ ಅವಧಿಯಲ್ಲಿ 10,000 ಯೂನಿಟ್ ಸಂಗ್ರಹ ವಾಗಿತ್ತು. ಕಳೆದ ಬಾರಿಗೆ ಹೋಲಿಸಿ ದರೆ ಈ ಬಾರಿ 4,659 ಯೂನಿಟ್ ಕೊರತೆ ಇದೆ. ಇಲ್ಲಿಯವರೆಗೆ 1,064 ಯೂನಿಟ್ ವಿತರಿಸಲಾಗಿದೆ.
ತುರ್ತು ಪರಿಸ್ಥಿತಿ ಇರಲಿಲ್ಲ
ಲಾಕ್‌ಡೌನ್ ಸಂದರ್ಭ ಜಿಲ್ಲೆಗಳಲ್ಲಿ ಸರಾಸರಿ 20-30 ಯೂನಿಟ್ ಸಂಗ್ರಹ ವಾಗು ತ್ತಿತ್ತು. ಆ ಸಂದರ್ಭದಲ್ಲಿ ಬೇಡಿಕೆ ಕಡಿಮೆ ಯಿದ್ದ ಕಾರಣ ತುರ್ತು ಪರಿಸ್ಥಿತಿ ಎದುರಾಗಿರಲಿಲ್ಲ. ಜತೆಗೆ ಕೇಂದ್ರದ ವೈದ್ಯಕೀಯ ಸಿಬಂದಿ ತುರ್ತು ಸಂದರ್ಭದಲ್ಲಿ ದಾನಿ ಗಳನ್ನು ಕರೆದು ರಕ್ತ ಸಂಗ್ರಹಿಸುತ್ತಿದ್ದರು. ಪ್ರಸ್ತುತ ಉಡುಪಿಯ ಕೇಂದ್ರದಲ್ಲಿ ಒಬ್ಬ ವ್ಯಕ್ತಿಗೆ 1 ಯೂನಿಟ್ ರಕ್ತ ನೀಡಲಾಗುತ್ತದೆ. ಹೆಚ್ಚು ಅಗತ್ಯವಿರುವವರಿಗೆ ಪರ್ಯಾಯ ರಕ್ತ ಕಲ್ಪಿಸು ವಂತೆ ಮನವಿ ಮಾಡಲಾಗುತ್ತಿದೆ. ಅವರಿಗೆ ಕಷ್ಟವಾದ ಸಂದರ್ಭದಲ್ಲಿ ಸಿಬಂದಿ ದಾನಿಗಳ ಹುಡುಕಾಟ ನಡೆಸುತ್ತಾರೆ.
ಲಾಕ್‌ಡೌನ್ ಸಂದರ್ಭ ಹೋಲಿಸಿದರೆ ರಕ್ತ ಸಂಗ್ರಹದ ಪ್ರಮಾಣ ಅಕ್ಟೋಬರ್ ಬಳಿಕ ಚೇತರಿಕೆಯಾಗಿದೆ. ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಂಡು ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ.
-ಡಾ| ವೀಣಾ ಕುಮಾರಿ, ಮುಖ್ಯಸ್ಥರು, ರಕ್ತನಿಧಿ ಕೇಂದ್ರ, ಜಿಲ್ಲಾಸ್ಪತ್ರೆ, ಉಡುಪಿ
ಜಿಲ್ಲೆಯಲ್ಲಿ ರಕ್ತದ ಕೊರತೆ ಇಲ್ಲ. ಪ್ರಸ್ತುತ ಬೇಡಿಕೆ ಕಡಿಮೆ ಇರುವುದರಿಂದ ತುರ್ತು ಪರಿಸ್ಥಿತಿ ಎದುರಾಗಿಲ್ಲ. ಇದೀಗ ರಕ್ತ ಸಂಗ್ರಹ ಪ್ರಮಾಣದಲ್ಲಿ ಏರಿಕೆಯಾಗಿದೆ.
ಡಾ| ಶರತ್‌ಕುಮಾರ್, ಮುಖ್ಯಸ್ಥರು, ರಕ್ತನಿಧಿ ಕೇಂದ್ರ, ಮಂಗಳೂರು, ದ.ಕ. ಜಿಲ್ಲೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Mudbidri: ರಸ್ತೆಯಲ್ಲೆಲ್ಲ ಹೊಂಡಗಳು ಸಾರ್ ಹೊಂಡಗಳು!
Mangaluru: ಬೇಕು ಇಂದೋರ್ ಮಾದರಿ;ದೇಶದ ನಂ.1 ಸ್ವಚ್ಛ ನಗರ ಇಲ್ಲಿಗೆ ಹೇಗೆ ಅನ್ವಯವಾಗುತ್ತದೆ?
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
MUST WATCH
ಹೊಸ ಸೇರ್ಪಡೆ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.