ನೆರೆ ಸಂತ್ರಸ್ತರಿಗೆ ರೆಡ್ ಕ್ರಾಸ್ ಕಿಟ್ ವಿತರಣೆ
Team Udayavani, Jul 31, 2018, 7:50 AM IST
ಮಂಗಳೂರು: ಇಲ್ಲಿನ ನೆರೆ ಸಂತ್ರಸ್ತರಿಗೆ ರೆಡ್ ಕ್ರಾಸ್ ಇಂಡಿಯಾ ಸಂಸ್ಥೆಯಿಂದ ಪರಿಹಾರ ಕಿಟ್ ಗಳನ್ನು ಸೋಮವಾರ ವಿತರಿಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಸಹಯೋಗದಲ್ಲಿ ನಡೆದ ಸಮಾರಂಭದಲ್ಲಿ ಸಾಂಕೇತಿಕವಾಗಿ ಕಿಟ್ ಗಳನ್ನು ಅಪರ ಜಿಲ್ಲಾಧಿಕಾರಿ ಕುಮಾರ್ ವಿತರಿಸಿದರು. ಜಿಲ್ಲೆಗೆ ಮೊದಲ ಬಾರಿಗೆ ತಲಾ 5,000 ರೂ. ಮೊತ್ತದ 250 ಪರಿಹಾರ ಕಿಟ್ ಗಳು ಲಭಿಸಿವೆ. 170 ಮಂದಿ ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಕಿಟ್ ಪಡೆದುಕೊಂಡರು. ಬಾಕಿಯುಳಿದವರಿಗೆ ಕಿಟ್ಗಳನ್ನು ತಲಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ರೆಡ್ ಕ್ರಾಸ್ ತಿಳಿಸಿದೆ. ರೆಡ್ ಕ್ರಾಸ್ ನ ಕಿಟ್ ಗಳನ್ನು ಸಾಮಾನ್ಯವಾಗಿ ಯಾವುದೇ ಪ್ರದೇಶದಲ್ಲಿ ನೆರೆ ಬಂದಾಗ ವಿತರಿಸಲಾಗುತ್ತದೆ.
ಮಂಗಳೂರಿನಲ್ಲಿ ಮೇ 29ರಂದು ಸುರಿದ ಭಾರೀ ಮಳೆಯಿಂದ ಅನೇಕ ಮಂದಿ ಸಂತ್ರಸ್ತರಾಗಿದ್ದರು. ಈ ಬಗ್ಗೆ ರಾಜ್ಯ ರೆಡ್ ಕ್ರಾಸ್ನ ಡಾ| ಕುಮಾರ್, ಜಿಲ್ಲಾ ರೆಡ್ ಕ್ರಾಸ್ ಸೊಸೈಟಿ ಸದಸ್ಯರಾದ ರವಿ, ಸಾಕೇತ್ ಸುವರ್ಣ ಅವರು ಸಮೀಕ್ಷೆ ನಡೆಸಿ ದ.ಕ. ರೆಡ್ಕ್ರಾಸ್ ಸೊಸೈಟಿ ಅಧ್ಯಕ್ಷ, ಚಾರ್ಟರ್ಡ್ ಆಕೌಂಟೆಂಟ್ ಶಾಂತಾರಾಮ ಶೆಟ್ಟಿ ಅವರಿಗೆ ವರದಿ ಸಲ್ಲಿಸಿದ್ದರು. ರಾಜ್ಯ ರೆಡ್ಕ್ರಾಸ್ ಅಧ್ಯಕ್ಷ ಬಸ್ರೂರು ರಾಜೀವ ಶೆಟ್ಟಿ ಹಾಗೂ ಶಾಂತಾರಾಮ ಶೆಟ್ಟಿ ಅವರ ಪ್ರಯತ್ನದಿಂದಾಗಿ ಕಿಟ್ ಗಳು ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಬಾರಿಗೆ ಲಭಿಸಿವೆ. ರೆಡ್ ಕ್ರಾಸ್ ಜಿಲ್ಲಾಧ್ಯಕ್ಷ ಶಾಂತಾರಾಮ ಶೆಟ್ಟಿ, ಕಾರ್ಯದರ್ಶಿ ಡಾ| ರಾಜೇಶ್, KUIDFC ಅಧಿಕಾರಿ ಪ್ರಭಾಕರ ಶರ್ಮಾ, ತಹಶೀಲ್ದಾರ್ ಗುರುಪ್ರಸಾದ್, ರೆಡ್ ಕ್ರಾಸ್ ವಿಪತ್ತು ನಿರ್ವಹಣ ಉಪಸಮಿತಿ ಅಧ್ಯಕ್ಷ ವೇಣು ಶರ್ಮ, ಸದಸ್ಯರಾದ ದಿನೇಶ್ ರಾವ್, ನಿತ್ಯಾನಂದ ಶೆಟ್ಟಿ ಉಪಸ್ಥಿತರಿದ್ದರು.
ಕಿಟ್ ನಲ್ಲಿ…
ಅಡುಗೆ ಪರಿಕರ, ಹೊದಿಕೆ, ಸೀರೆ, ಧೋತಿ, ಬಾತ್ ಟವೆಲ್, ಸೊಳ್ಳೆ ಪರದೆ, ಕೊಡೆ, ಬಕೆಟ್ ಸಹಿತ 5,000 ರೂ. ಮೌಲ್ಯದ ವಸ್ತುಗಳನ್ನು ಕಿಟ್ ಒಳಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.