ಕೆಂಬಣ್ಣದ ಚಂದಮಾಮನನ್ನು ಕಣ್ತುಂಬಿದ ಜನತೆ
Team Udayavani, Feb 1, 2018, 9:27 AM IST
ಮಂಗಳೂರು/ಉಡುಪಿ: ಬುಧವಾರ ನಡೆದ ಖಗ್ರಾಸ ಚಂದ್ರಗ್ರಹಣದಲ್ಲಿ ಕೆಂಬಣ್ಣದ ಚಂದಮಾಮನನ್ನು ಉಭಯ ಜಿಲ್ಲೆಗಳ ಸಾವಿರಾರು ಮಂದಿ ನೋಡಿ ಕಣ್ತುಂಬಿಕೊಂಡರು.
ಆಚಾರನಿಷ್ಠರು ಬೆಳಗ್ಗಿನಿಂದಲೇ ಉಪವಾಸ ಕುಳಿತು ರಾತ್ರಿ ಜಪಪೂಜಾದಿಗಳನ್ನು ನಡೆಸಿದರೆ, ಪುರೋಹಿತರು ಗ್ರಹಣ ಶಾಂತಿ ನಡೆಸಿದರು. ಸಂಜೆ ಸುಮಾರು 7 ಗಂಟೆ ಸುಮಾರಿಗೆ ಗ್ರಹಣಗ್ರಸ್ತ ಚಂದಿರನ ವೀಕ್ಷಣೆಗೆ ಹವ್ಯಾಸಿ ಖಗೋಲ ಶಾಸ್ತ್ರಜ್ಞರ ಸಂಘವು ಮಂಗಳೂರು ಕುಲ ಶೇಖರದ ಕೋರ್ಡೆಲ್ ಹಾಲ್ ಎದುರಿನ ಸ್ಫೂರ್ತಿ ಕಾಂಪ್ಲೆಕ್ಸ್ ಮೇಲುಗಡೆ, ಉಡುಪಿಯಲ್ಲಿ ಪಿಪಿಸಿ ಎಂಬಿಎ ಕಟ್ಟಡದ ಮೇಲೆ, ಮೂಡಬಿದಿರೆಯ ಮಹಾವೀರ ಕಾಲೇಜು ಮೊದಲಾದೆಡೆ ವ್ಯವಸ್ಥೆಯನ್ನು ಮಾಡಲಾಗಿತ್ತು. ಸಂಜೆ ಯಾಗು ತ್ತಿದ್ದಂತೆ ಸ್ಥಳೀಯರು ಅನೇಕ ಮಂದಿ ಇಲ್ಲಿಗೆ ಆಗಮಿಸಿ ಗ್ರಹಣವನ್ನು ಕಣ್ತುಂಬಿಕೊಂಡರು. ಚಂದ್ರಗ್ರಹಣದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ಪ್ರಮುಖ ದೇಗುಲ ಗಳ ಪೂಜೆ, ದೇವರ ದರುಶನದ ಅವಧಿಯಲ್ಲಿ ವ್ಯತ್ಯಯವಾಗಿತ್ತು.
ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇಗುಲವನ್ನು ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮುಚ್ಚಲಾಗಿತ್ತು. ಗ್ರಹಣ ಇದ್ದುದರಿಂದ ಹಗಲಿನಲ್ಲಿ ಯಾವುದೇ ಪೂಜೆ ಪುನಸ್ಕಾರ ಗಳಿಗೆ ಅವಕಾಶ ಇಲ್ಲದಿದ್ದುದರಿಂದ ದೇವಸ್ಥಾನ ಪರಿಸರ ಖಾಲಿ ಖಾಲಿ ಯಾಗಿತ್ತು. ಧರ್ಮಸ್ಥಳದಲ್ಲಿ ಅಪರಾಹ್ನ 2.30ರಿಂದ 8.30ರ ವರೆಗೆ ದೇವರ ದರ್ಶನಕ್ಕೆ ಅವಕಾಶ ವಿರಲಿಲ್ಲ. ಇಲ್ಲೂ ಎಂದಿಗಿಂತ ಜನಸಂದಣಿ ಕಡಿಮೆ ಇತ್ತು.
ಶ್ರೀಕೃಷ್ಣಮಠದಲ್ಲಿ ಬೆಳಗ್ಗೆ 8 ಗಂಟೆಗೆ ಮಹಾಪೂಜೆಯನ್ನು, ಸಂಜೆ ಚಂದ್ರೋದಯದೊಳಗೆ ರಾತ್ರಿ ಪೂಜೆಯನ್ನು ಪರ್ಯಾಯ ಶ್ರೀಪಲಿಮಾರು ಸ್ವಾಮೀಜಿ ನಡೆಸಿದರು. ಕೆಲವು ದೇವಸ್ಥಾನಗಳಲ್ಲಿ ಭೋಜನಪ್ರಸಾದ ಇರಲಿಲ್ಲ. ಶ್ರೀಕೃಷ್ಣಮಠದಲ್ಲಿ ಯಾತ್ರಾರ್ಥಿಗಳಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಕೃಷ್ಣಮಠದಲ್ಲಿ ದೇವರ ದರ್ಶನ ಅಬಾಧಿತವಾಗಿ ನಡೆಯಿತು.
ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಮಧ್ಯಾಹ್ನ 11.30ರಿಂದ ಸಂಜೆ 4 ಗಂಟೆಯ ಸಮಯವನ್ನು ಹೊರತು ಪಡಿಸಿದಂತೆ ಸಾರ್ವ ಜನಿಕರ ದರುಶನಕ್ಕೆ ಅನುವು ಮಾಡಲಾಗಿತ್ತು. ಮಂಗಳಾ ದೇವಿ ದೇವಸ್ಥಾನದಲ್ಲಿ ಮಧ್ಯಾಹ್ನ 1 ಗಂಟೆಯಿಂದ 4 ಗಂಟೆಯ ಹೊರತುಪಡಿಸಿ ಉಳಿದ ಸಮಯದಲ್ಲಿ ದೇವರ ದರುಶನಕ್ಕೆ ಅನುವು ಮಾಡಿಕೊಡಲಾಯಿತು.
ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯದಲ್ಲಿ ಮಧ್ಯಾಹ್ನ 1ರಿಂದ ರಾತ್ರಿ 4 ಗಂಟೆ ಹೊರತುಪಡಿಸಿ ದೇವರ ದರುಶನಕ್ಕೆ ಅವಕಾಶ ನೀಡಲಾಗಿತ್ತು. ಕುದ್ರೋಳಿಯ ಶ್ರೀ ಭಗವತಿ ದೇವಾಲಯದಲ್ಲಿ ದೇವರ ದರುಶನಕ್ಕೆ ಮಧ್ಯಾಹ್ನ 1 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಅವಕಾಶವಿರಲಿಲ್ಲ. ಮನೆಗಳಲ್ಲಿ ರಾತ್ರಿ ಗ್ರಹಣ ಬಿಟ್ಟ ಬಳಿಕ ಆಹಾರ ಸ್ವೀಕರಿಸಿದರು.
ಜನಸಂಚಾರ ವಿರಳ: ಖಗ್ರಾಸ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ನಗರ ದಲ್ಲಿ ಜನಸಾಮಾನ್ಯರ ಓಡಾಟ ವಿರಳವಾಗಿತ್ತು. ಸಾಮಾನ್ಯ ವಾಗಿ ಸಂಜೆಯ ಸಮಯದಲ್ಲಿ ಮಂಗಳೂರಿನ ಜ್ಯೋತಿ ವೃತ್ತ, ಕಂಕನಾಡಿ, ಹಂಪನಕಟ್ಟ, ಪಿವಿಎಸ್ ವೃತ್ತ, ಸ್ಟೇಟ್ ಬ್ಯಾಂಕ್, ಉಡುಪಿಯ ಕಲ್ಸಂಕ, ಬನ್ನಂಜೆ ಸಹಿತ ನಗರದ ಅನೇಕ ರಸ್ತೆಗಳು ಟ್ರಾಫಿಕ್ ಸಮಸ್ಯೆ ಎದು ರಾಗು ತ್ತದೆ. ಆದರೆ ಗ್ರಹಣ ಹಿನ್ನೆಲೆಯಲ್ಲಿ ಟ್ರಾಫಿಕ್ ಮುಕ್ತ ವಾಗಿತ್ತು. ಗ್ರಹಣ ರಾತ್ರಿ ಸಂಭವಿಸಿದ್ದೂ ಸಂಚಾರ ವಿರಳಕ್ಕೆ ಪೂರಕವಾಯಿತು. ಅನೇಕ ಹೊಟೇಲ್‌ಗಳ ವ್ಯವಹಾರವೂ ಕಡಿಮೆಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kotekar Robbery Case: ಮುಂಬಯಿ, ತಮಿಳುನಾಡಿನಲ್ಲಿ ಮತ್ತೆ ನಾಲ್ವರು ವಶಕ್ಕೆ?
Kotekar Robbery: ಮುರುಗೆಂಡಿಗೆ ಚಿನ್ನ ಮತ್ತು ಫಿಯೆಟ್‌ನದ್ದೇ ಮೋಹ !
Mangaluru: ಕೆನರಾ ಶಿಕ್ಷಣ ಸಂಸ್ಥೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿದೀಪ
Mangaluru: ವ್ಯವಹಾರ ಮನಸ್ತಾಪ: ಹಣಕ್ಕಾಗಿ ಬೆದರಿಕೆ, ದೂರು ದಾಖಲು
Karnataka Sports Meet: ಈಜು… ಚಿಂತನ್ ಶೆಟ್ಟಿ , ರಚನಾ ಬಂಗಾರ ಬೇಟೆ