ಪುಚ್ಚಾಡಿ ಅಣೆಕಟ್ಟು ನೀರಿನ ಮಟ್ಟ ಇಳಿಕೆ
Team Udayavani, Jan 4, 2019, 5:50 AM IST
ಕಿನ್ನಿಗೋಳಿ : ಗ್ರಾಮೀಣ ಪ್ರದೇಶದಲ್ಲಿ ಅಣೆಕಟ್ಟುಗಳು ಕೃಷಿ ಭೂಮಿಗೆ ನೀರು ಒದಿಗಿಸುವ ಜೀವಾಳವಾಗಿದೆ. ಈ ನಿಟ್ಟಿನಲ್ಲಿ ಕಿನ್ನಿಗೋಳಿ ಸಮೀಪದ ಕಿಲೆಂಜೂರುವಿನಲ್ಲಿ ನಂದಿನಿ ನದಿಗೆ ಪ್ರತಿ ವರ್ಷದಂತೆ ಈ ಬಾರಿಯೂ ಅಣೆಕಟ್ಟಿಗೆ ಹಲಗೆ ಹಾಕಲಾಗಿದೆ ಆದರೇ ಪ್ರತಿ ವರ್ಷದಂತೆ ನೀರಿಕ್ಷಿತ ಮಟ್ಟದಲ್ಲಿ ನೀರು ಸಂಗ್ರಹ ಆಗಿಲ್ಲ. ನಂದಿನಿ ನದಿ ನೀರಿನ ಹರಿವು ಕಡಿಮೆಯಾಗಿದ್ದು ರೈತರು ಕಂಗಾಲಾಗಿದ್ದಾರೆ.
ನಂದಿನಿ ನದಿ ದಡದಲ್ಲಿ ನೂರಾರು ಎಕ್ರೆ ಕೃಷಿಭೂಮಿಯಿದ್ದು ರೈತರು ಕೃಷಿ ಚಟುವಟಿಕೆಗಳಿಗೆ ನಂದಿನಿ ನದಿಯನ್ನೇ ಅವಲಂಬಿಸಿದ್ದಾರೆ. ಮೂಡುಬಿದಿರೆಯ ಕನಕಗಿಯಿಂದ ಹಳೆಯಂಗಡಿ ಸಮೀಪದ ಪಾವಂಜೆವರೆಗೆ ನದಿಗೆ ಅಲ್ಲಲ್ಲಿ ಅಣೆಕಟ್ಟುಗಳನ್ನು ಕಟ್ಟಲಾಗಿದ್ದು ಪ್ರತೀ ವರ್ಷ ನವೆಂಬರ್ ಮೊದಲ ವಾರದಲ್ಲಿ ಅಣೆಕಟ್ಟುಗಳಿಗೆ ಬಾಗಿಲು ಹಾಕಲಾಗುತ್ತದೆ. ಅದರಂತೆ ಈ ಬಾರಿಯೂ ಅಣೆಕಟ್ಟುಗಳ ಬಾಗಿಲು ಹಾಕಲಾಗಿದ್ದು ನೀರಿನ ಹರಿವು ಕಡಿಮೆಯಾದುದರಿಂದ ನೀರು ಸಂಗ್ರಹಣೆಯೂ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ.
ಸಂಪ್ರದಾಯದ ಕಟ್ಟ
ಪುಚ್ಚಾಡಿಯಲ್ಲಿ ಕಟ್ಟಲಾಗಿದ್ದ ಅಣೆಕಟ್ಟು ಹಿಂದಿನ ಕಾಲದಿಂದಲ್ಲೂ ಅತ್ಯಂತ ಪ್ರಸಿದ್ಧಿ ಪಡೆದಿದೆ. ಪುಚ್ಚಾಡಿ ಅಣೆಕಟ್ಟಿಗೆ ಬಾಗಿಲು ಹಾಕಿದರೆ ಸಾವಿರಾರು ಎಕ್ರೆ ಕೃಷಿ ಪ್ರದೇಶಕ್ಕೆ ನೀರುಣಿಸುವುದು ಮಾತ್ರವಲ್ಲದೆ ನೂರಾರು ಬಾವಿಗಳಲ್ಲಿ ನೀರಿನ ಒರತೆ ಹೆಚ್ಚಾಗಿ ಕುಡಿಯುವ ನೀರಿನ ಸಮಸ್ಯೆ ನೀಗುತ್ತದೆ.
ನೀರು ಸಂಗ್ರಹಣೆ ಕಡಿಮೆ
ಪ್ರತೀ ವರ್ಷದಂತೆ ಈ ಬಾರಿ ಪುಚ್ಚಾಡಿ ಅಣೆಕಟ್ಟಿಗೆ ನವೆಂಬರ್‌ನಲ್ಲಿ ಬಾಗಿಲು ಹಾಕಲಾಗಿದೆ. ಪ್ರತೀ ವರ್ಷ ಬಾಗಿಲು ಹಾಕಿದ ಮೂರು ಅಥವಾ ನಾಲ್ಕು ದಿನದಲ್ಲಿ ಅಣೆಕಟ್ಟಿನಲ್ಲಿ ನೀರು ಸಂಗ್ರಹಗೊಂಡು ತಗ್ಗು ಪ್ರದೇಶದ ಕೃಷಿ ಭೂಮಿಗೆ ನೀರು ಹರಿಯುತ್ತದೆ. ಆದರೆ ಈ ಬಾರಿ ಅಣೆಕಟ್ಟಿನ ಬಾಗಿಲು ಹಾಕಿದರೂ ನಿರೀಕ್ಷಿತ ಮಟ್ಟದಲ್ಲಿ ನೀರು ಸಂಗ್ರಹಣೆ ಆಗಿಲ್ಲ. ಇನ್ನೂ ಕೆಲವು ತಿಂಗಳಲ್ಲಿ ನೀರು ಸಂಗ್ರಹಣೆ ಕಡಿಮೆಯಾಗುವ ಸಾಧ್ಯತೆ ಇದ್ದು ರೈತರು ಕಂಗಾಲಾಗಿದ್ದಾರೆ.
ಕಡಿಮೆ ಪ್ರಮಾಣದಲ್ಲಿ ನೀರು
ಅಣೆಕಟ್ಟು ಇಲ್ಲದ ದಿನಗಳಿಂದಲೂ ಪುಚ್ಚಾಡಿಯಲ್ಲಿ ಮಣ್ಣು ಮತ್ತು ಬೈಹುಲ್ಲಿನಿಂದ ಕಟ್ಟೆಯನ್ನು ಕಟ್ಟಿ ಕೃಷಿ ಭೂಮಿಗೆ ನೀರು ಒದಗಿಸಲಾಗುತ್ತಿದೆ. ಆದರೆ ಈ ಬಾರಿ ನೀರಿನ ಪ್ರಮಾಣ ಕಡಿಮೆಯಾಗಿದೆ.
– ಪ್ರಸನ್ನ ಎಲ್. ಶೆಟ್ಟಿ
ಅತ್ತೂರಗುತ್ತು, ಕಾರ್ಯದರ್ಶಿ,
ಪುಚ್ಚಾಡಿ ನೀರು ಬಳಕೆದಾರರ ಸಂಘ
ನೀರು ಖಾಲಿಯಾಗುವ ಸಾಧ್ಯತೆ
ನೀರಿನ ಅಭಾವದಿಂದಾಗಿ ಈಗ ಸಮಸ್ಯೆ ಉದ್ಭವಿಸಿದೆ. ಒಂದು ತಿಂಗಳೊಳಗೆ ನೀರು ಸಂಪೂರ್ಣ ಖಾಲಿಯಾಗುವ ಸಾಧ್ಯತೆ ಇದೆ.
– ಜನಾರ್ದನ ಕಿಲೆಂಜೂರು,
ಕಟೀಲು ಗ್ರಾ.ಪಂ. ಸದಸ್ಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.