4 ದಶಕದ ಹಿಂದೆ ಕ್ರೈಸ್ತ ಮತವನ್ನಪ್ಪಿದ ಹಿಂದೂ ಕುಟುಂಬ ಮಾತೃಧರ್ಮಕ್ಕೆ

Team Udayavani, Jul 25, 2017, 11:30 AM IST

Religion-24-7.jpg

ಮಂಗಳೂರು: ನಾಲ್ಕುದಶಕ ಹಿಂದೆ ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ಕುಟುಂಬವೊಂದು ಗುರುಪುರದ ವಜ್ರದೇಹಿ ಮಠದಲ್ಲಿ ಸೋಮವಾರ ಹಿಂದೂ ಧರ್ಮಕ್ಕೆ ಮರಳಿದೆ. ಹಿಂದೂ ಜಾಗರಣ ವೇದಿಕೆಯ ಮುಖಂಡರ ನೇತೃತ್ವದಲ್ಲಿ ಸೀಮಿತ ಜನರ ಸಮಕ್ಷಮದಲ್ಲಿ ಜರಗಿದ ಪೂರಕ ವಿಧಿವಿಧಾನಗಳಿಗೆ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಮತಾಂತರ ಬಳಿಕ ಅರುಣ್‌ ಮೊಂತೆರೋ ತನ್ನ ಹೆಸರನ್ನು ಅರುಣ್‌ ಪೂಜಾರಿ ಎಂದು, ಪತ್ನಿ ಸುನೀತಾ ಸಂಗೀತಾ ಆಗಿ, ಆವರ ತಾಯಿ ಐಡಾ ಥಾಮಸ್‌ ಗೌರಿ ಪೂಜಾರ್ತಿಯಾಗಿ, ಅರುಣ್‌ ಅವರ ಇಬ್ಬರು ಪುತ್ರರು ಅಜಯ್ ಹಾಗೂ ಅನೀಶ್‌ ಪೂಜಾರಿ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಅರುಣ್‌ ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದು, ತಮ್ಮ ಕುಟುಂಬದೊಂದಿಗೆ ಮಂಗಳೂರಿನ ಪದವಿನಂಗಡಿಯಲ್ಲಿ ನೆಲೆಸಿದ್ದಾರೆ. ಮಾತೃಧರ್ಮಕ್ಕೆ ಮರಳಿದ ಕುಟುಂಬದ ಸದಸ್ಯರಿಗೆ ಶುದ್ಧಿ ಕಲಶ ಪ್ರೋಕ್ಷಣೆ ನಡೆಯಿತು. ಭವಿಷ್ಯದಲ್ಲಿ ಪವಮಾನ ಪ್ರಾಯಶ್ಚಿತ ಹೋಮ ಹಾಗೂ ಗಣಪತಿ ಹೋಮ ನಡೆಯಲಿದೆ. ಜತೆಗೆ ಕಾನೂನಾತ್ಮಕ ತೊಡಕುಗಳ ನಿವಾರಣೆಗೆ ಕೂಡ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶ್ರೀ ರಾಜಶೇಖರಾನಂದ ಸ್ವಾಮೀಜಿ ತಿಳಿಸಿದ್ದಾರೆ.

‘ಕ್ರೈಸ್ತ ಧರ್ಮಕ್ಕೆ ಮತಾಂತರದ ಬಳಿಕ ಅರುಣ್‌ ಕುಟುಂಬ ಹಲವಾರು ಸಮಸ್ಯೆ ಎದುರಿಸಬೇಕಾಗಿ ಬಂತು. ಮೂರು ತಿಂಗಳ ಹಿಂದೆ ಅರುಣ್‌ ಹಿಂದೂ ಜಾಗರಣ ವೇದಿಕೆಯ ಸದಸ್ಯರನ್ನು ಸಂಪರ್ಕಿಸಿದ್ದು, ಸಂಘಟನೆ ಮುಖಂಡರು ನನ್ನಲ್ಲಿ ವಿಷಯ ತಿಳಿಸಿದ್ದರು. ಯಾವುದೇ ಕಾರಣಕ್ಕೂ ಬಲವಂತದ ಮತಾಂತರಕ್ಕೆ ಅವಕಾಶ ನೀಡಬಾರದು, ಅವರ ಇಚ್ಛೆಯಂತೆ ಆಗುವುದಾದರೆ ಆಗಲಿ ಎಂದು ಸಂಘಟನೆ ಮುಖಂಡರಿಗೆ ನಾನು ತಿಳಿಸಿದ್ದೆ’ ಎಂದು ವಿವರಿಸಿದ್ದಾರೆ. ಅರುಣ್‌ ಮೊಂತೆರೋ ಅವರು ಕಳೆದ ಸುಮಾರು 10 ವರ್ಷಗಳಿಂದ ಗುರುಪುರ ಮಠದ ಜತೆ ಸಂಪರ್ಕ ಇರಿಸಿಕೊಂಡಿದ್ದಾರೆ. ಹಿಂದೂ ಜಾಗರಣ ವೇದಿಕೆ ಪದವಿನಂಗಡಿ ಘಟಕದ ಜತೆ ಕೂಡ ಅವರು ಉತ್ತಮ ಸಂಬಂಧ ಹೊಂದಿದ್ದು, ಅವರ ಜತೆ ತಾನು ಮತ್ತೆ ಹಿಂದೂ ಧರ್ಮಕ್ಕೆ ಮರಳುವ ಇಚ್ಛೆ ವ್ಯಕ್ತಪಡಿಸಿದ್ದರು.

ಅರುಣ್‌ ಅವರ ತಾಯಿ ಐಡಾ ಥಾಮಸ್‌ ಮೂಲತಃ ಕಾಸರಗೋಡಿನವರಾಗಿದ್ದು ಹಿಂದೂ ಕುಟುಂಬದಲ್ಲಿ ಜನಿಸಿದ್ದು, 40 ವರ್ಷ ಹಿಂದೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು. ಮೂರು ತಿಂಗಳ ಹಿಂದೆ ಅರುಣ್‌ ತಮ್ಮ ಸಂಘಟನೆ ಸಂಪರ್ಕಿಸಿ ಹಿಂದೂ ಆಗುವ ಹಂಬಲ ವ್ಯಕ್ತಪಡಿಸಿದ್ದರು. ಸದ್ಯದ ಪರಿಸ್ಥಿತಿ ಸರಿ ಇಲ್ಲ ಎಂಬ ಕಾರಣಕ್ಕೆ ಒಂದಷ್ಟು ಕಾಲ ನಾವು ಮುಂದೂಡಿದರೂ ಪದೇ ಪದೇ ಅವರ ಮನವಿಯಿಂದಾಗಿ ವಜ್ರದೇಹಿ ಸ್ವಾಮೀಜಿಯವರನ್ನು ಸಂಪರ್ಕಿಸಿ ಅವರ ಮಾರ್ಗದರ್ಶನದಂತೆ ಅರುಣ್‌ ಕುಟುಂಬವನ್ನು ಮರಳಿ ಹಿಂದೂ ಧರ್ಮಕ್ಕೆ ಸ್ವೀಕರಿಸಲಾಗಿದೆ ಎಂದು ಹಿಂ.ಜಾ.ವೇ. ಜಿಲ್ಲಾ ಕಾರ್ಯದರ್ಶಿ ಶರತ್‌ ತಿಳಿಸಿದ್ದಾರೆ.

ಟಾಪ್ ನ್ಯೂಸ್

7-belagavi

Belagavi: ಕಾಶ್ಮೀರದಲ್ಲಿ 300 ಅಡಿ ಆಳದ ಕಂದಕಕ್ಕೆ ಬಿದ್ದ ಸೇನಾ ವಾಹನ; ಯೋಧರು ಹುತಾತ್ಮ

6-

Kundapura: ಸುಜ್ಞಾನ್‌ ಪಿಯು ಕಾಲೇಜು: ಸಂಭ್ರಮದ ಕ್ರಿಸ್‌ಮಸ್‌ ಆಚರಣೆ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ

Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

5-mudigere

Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್‌

Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್‌

Mangaluru ಮಾದಕವಸ್ತು ಸೇವನೆ: ಇಬ್ಬರ ಬಂಧನ

Mangaluru ಮಾದಕವಸ್ತು ಸೇವನೆ: ಇಬ್ಬರ ಬಂಧನ

4-mng-2

Mangaluru: ಹೆಲಿಕಾಪ್ಟರ್ ಸಂಚಾರ: ಸ್ಥಳ ಬದಲಾವಣೆ

6

Mangaluru; ನಗರದ ಇನ್ನಷ್ಟು ಕಡೆ ಬೀದಿ ಬದಿ ವ್ಯಾಪಾರಸ್ಥರ ವಲಯ: ಮೇಯರ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಅಪ್ಪಣ್ಣ ಹೆಗ್ಡೆ-90ರ ಸಂಭ್ರಮ-ಅಪ್ಪಣ್ಣ ಹೆಗ್ಡೆ ಆತ್ಮವಿಶ್ವಾಸದ ಪ್ರತೀಕ : ಡಾ| ಹೆಗ್ಗಡೆ

ಅಪ್ಪಣ್ಣ ಹೆಗ್ಡೆ-90ರ ಸಂಭ್ರಮ-ಅಪ್ಪಣ್ಣ ಹೆಗ್ಡೆ ಆತ್ಮವಿಶ್ವಾಸದ ಪ್ರತೀಕ : ಡಾ| ಹೆಗ್ಗಡೆ

7-belagavi

Belagavi: ಕಾಶ್ಮೀರದಲ್ಲಿ 300 ಅಡಿ ಆಳದ ಕಂದಕಕ್ಕೆ ಬಿದ್ದ ಸೇನಾ ವಾಹನ; ಯೋಧರು ಹುತಾತ್ಮ

6-

Kundapura: ಸುಜ್ಞಾನ್‌ ಪಿಯು ಕಾಲೇಜು: ಸಂಭ್ರಮದ ಕ್ರಿಸ್‌ಮಸ್‌ ಆಚರಣೆ

Theft Case: ಬೀಗ ಹಾಕಿದ್ದ ಮನೆಗೆ ಕನ್ನ: ಓರ್ವ ಸೆರೆ

Theft Case: ಬೀಗ ಹಾಕಿದ್ದ ಮನೆಗೆ ಕನ್ನ: ಓರ್ವ ಸೆರೆ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.