ಭಾಷಾ ಸಾಮರಸ್ಯದಿಂದ ಧರ್ಮ ಸಮನ್ವಯ ಸಾಧ್ಯ’
Team Udayavani, Mar 6, 2018, 11:30 AM IST
ಸುಬ್ರಹ್ಮಣ್ಯ (ಕೊಳಂಬೆ ಪುಟ್ಟಣ್ಣ ಗೌಡ ವೇದಿಕೆ) : ಭಾಷಾ ಸಾಮರಸ್ಯ ಧರ್ಮ ಸಮನ್ವಯಕ್ಕೆ ಕಾರಣವಾಗಿ ಉತ್ತಮ ಸಂಸ್ಕಾರ, ಸಂಸ್ಕೃತಿಗೆ ಮೂಲವಾಗುತ್ತದೆ. ಮಾನವಕುಲ ಒಂದೇ ಎನ್ನುವ ತತ್ವದಲ್ಲಿ “ಅವ ಬೇರೆ ಅಲ್ಲ, ಇವ ಬೇರೆ ಅಲ್ಲ, ಎಲ್ಲ ನಮ್ಮವರೇ’ ಎಂಬುವುದು ಜೀವಪರ ದೃಷ್ಟಿಯೂ, ಜೀವಂತಿಕೆಯ ಸೃಷ್ಟಿಯೂ ಹೌದು ಎಂದು 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಎ.ಪಿ. ಮಾಲತಿ ನುಡಿದರು.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾಹಿತ್ಯವೆಂದರೆ ಎಲ್ಲರನ್ನೂ ತನ್ನೊಳಗೆ ತಂದು ಎಲ್ಲರಿಗೂ ಸಂತೋಷ, ಆನಂದ ಹಂಚುವುದು. ಸಾಹಿತ್ಯ ಒಂದು ಸಂಸ್ಕೃತಿಯ ಭಾಷೆ. ಅದು ಭಾಷಾ ಪ್ರಪಂಚ. ಭಾಷೆಗೂ-ಸಂಸ್ಕೃತಿಗೂ ನಿಕಟ ಸಂಬಂಧವಿದೆ. ಚಿತ್ರಕಲೆ, ನೃತ್ಯ ವೈವಿಧ್ಯ, ಗ್ರಾಮೀಣ ಹಾಡುಗಳು, ಪಾಡªನ, ಯಕ್ಷಗಾನ, ಜನಪದ ಸಾಹಿತ್ಯ ಇತ್ಯಾದಿ ಚಿಂತನೆಗಳನ್ನು ತೆರೆದಿಡುವುದು ಸಾಹಿತ್ಯದ ಮೂಲಕವೇ ಎಂದು ಹೇಳಿದರು.
ಮಕ್ಕಳಲ್ಲಿ ಕನ್ನಡ ಭಾಷೆ, ಒಲವು ಬೆಳೆಯಲು ಬಾಲ್ಯವೇ ಸಕಾಲ. ನಿರಂತರ ಓದು, ಬರವಣಿಗೆ, ಆಲಿಸುವಿಕೆ, ಕೇಳುವಿಕೆ, ಸೃಜನಶೀಲ ಮನಸ್ಸನ್ನು ಪುಷ್ಟೀಕರಿಸುತ್ತದೆ. ಸಾಹಿತ್ಯ ಬರವಣಿಗೆಯಲ್ಲಿ ಸಾಧನೆಯ ಸಾಕ್ಷತ್ಕಾತವಾಗಬೇಕಿದ್ದರೆ, ಸತತ ಪ್ರಯತ್ನ, ಶಿಸ್ತು, ಏಕಾಗ್ರತೆ, ಛಲ ಅತ್ಯಗತ್ಯ. ಸಾಹಿತ್ಯ ಸಮ್ಮೇಳನಗಳು ಶಾಲಾ ಆವರಣದಲ್ಲಿ ನಡೆದರೆ ಉತ್ತಮ. ಜನಪ್ರಿಯ ಸಾಹಿತಿಗಳನ್ನು ಶಾಲೆಗೆ ಕರೆಯಿಸಿ, ಅವರ ಜತೆ ಸಂವಾದ, ಮಾತುಕತೆಗಳು ಆಗಬೇಕು. ಸಾಹಿತ್ಯಪರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕಿದೆ. ಇದರಿಂದ ಮಕ್ಕಳಲ್ಲಿ ಆಸಕ್ತಿ ವೃದ್ಧಿಗೆ ಕಾರಣವಾಗುತ್ತದೆ ಎಂದು ಮಾಲತಿ ತಿಳಿಸಿದರು.
ಅನುವಾದದ ಮಹತ್ವ
ಜಗತ್ತಿನ ಬೇರೆ ಬೇರೆ ಭಾಷೆಗಳ ಪುಸ್ತಕಗಳು ಎಷ್ಟೇ ಚೆನ್ನಾಗಿದ್ದರೂ, ಆ ಭಾಷೆ ತಿಳಿಯದ ಓದುಗರಿಗೆ ಅವು ಕಬ್ಬಿಣದ ಕಡಲೆ. ಅನುವಾದವಾದರೆ ಮಾತ್ರ ಆ ಪುಸ್ತಕವನ್ನು ಓದಲು ಸಾಧ್ಯವಾಗುತ್ತದೆ. ಸಾಹಿತ್ಯದ ಓದಿಗೆ ಭಾಷೆ ಮುಖ್ಯ ಅಲ್ಲ. ಆ ಓದು ನಮ್ಮ ಸಾಹಿತ್ಯದ ಹಸಿವನ್ನು ಹಿಂಗಿಸಿ, ಜ್ಞಾನ ಹೆಚ್ಚಿಸಿ ಮತ್ತಷ್ಟು ಓದಿಗೆ ಪ್ರೇರಣೆ ನೀಡುವಂತಿರಬೇಕು. ಅನುವಾದ ಮಾಡುವವರಿಗೆ ಭಾಷಾ ಜ್ಞಾನದಲ್ಲಿ ಕೃತಿಯ ವಸ್ತುವಿನ ಬಗ್ಗೆ ಪೂರ್ಣ ಮಾಹಿತಿಯಿದ್ದು, ಸೃಜನಶೀಲ ಮನಸ್ಸಿನಿಂದ ಮೂಲ ಲೇಖಕನ ಕಲ್ಪನೆಗೆ ಸ್ಪಂದಿಸುವ ಮನೋಭಾವ ಆವಶ್ಯಕ ಎಂದು ವಿಶ್ಲೇಷಿಸಿದರು.
ಸಮ್ಮೇನಾಧ್ಯಕ್ಷರನ್ನು ಸುಬ್ರಹ್ಮಣ್ಯ ಕೆಎಸ್‌ಎಸ್ ಕಾಲೇಜಿನ ಉಪನ್ಯಾಸಕ ಮನೋಹರ ಪರಿಚಯಿಸಿದರು. ದುರ್ಗಾಕುಮಾರ್ ನಾಯರ್‌ಕೆರೆ ನಿರೂಪಿಸಿದರು.
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.