ಹುಟ್ಟುಹಬ್ಬದ ನೆಪದಲ್ಲಿ ನೆನಪಾದ ಕಾರಂತರ ಶಾಲೆ 

Team Udayavani, Sep 27, 2018, 10:14 AM IST

27-sepctember-1.gif

ಪುತ್ತೂರು: ಡಾ| ಶಿವರಾಮ ಕಾರಂತರ ಹುಟ್ಟುಹಬ್ಬ ಆಚರಣೆಗೆ ಸಿದ್ಧತೆ ಶುರುವಾಗಿದೆ. ಆದರೆ ಕಾರಂತರ ಹೆಸರನ್ನು ಚಿರಸ್ಥಾಯಿ ಆಗಿಸುವ ನಿಟ್ಟಿನಲ್ಲಿ ಕಾರಂತರ ಹೆಸರಿನಲ್ಲೇ ಇರುವ ಶಾಲೆ ಅಪಾಯಕಾರಿ ಅಂಚಿಗೆ ತಲುಪಿದೆ. ಪುತ್ತೂರು ಬಸ್‌ನಿಲ್ದಾಣದ ಮಗ್ಗುಲಲ್ಲೇ ಇದೆ ಡಾ| ಶಿವರಾಮ ಕಾರಂತ ಪ್ರೌಢಶಾಲೆ. ಬಸ್‌ ನಿಲ್ದಾಣಕ್ಕೆ ಸಾಗುವ ಎರಡೂ ರಸ್ತೆಗ ಳನ್ನು ಕವಲೊಡೆದು ಕೊಡುವುದೇ ಇದೇ ಶಾಲೆಯ ಜಾಗ. ಆದರೆ ಒಂದು ಕಡೆಯಲ್ಲಿ ಮಾತ್ರ ಶಾಲಾ ಕಟ್ಟಡವೇ ಆವರಣ ಗೋಡೆ. ಇದುವೇ ಇದೀಗ ಅಪಾಯಕಾರಿಯಾಗಿದೆ.

ಹಳೆ ಕಟ್ಟಡ ಎಂಬ ಕಾರಣಕ್ಕೆ ಗಟ್ಟಿ ಮುಟ್ಟು ನಿಜ. ಆದರೆ ವಿದ್ಯಾರ್ಥಿಗಳು, ಶಾಲಾ ಸಿಬಂದಿ ಜೀವ ಅದಕ್ಕಿಂತ ಹೆಚ್ಚು ಪ್ರಾಮುಖ್ಯತೆ ಪಡೆ ಯುತ್ತದೆ. ಇದೇ ಕಾರಣಕ್ಕೆ ಈಗ ಈ ಶಾಲಾ ಕಟ್ಟಡ ಚರ್ಚಾ ವಿಷಯವಾಗಿದೆ. ಮಾತ್ರವಲ್ಲ ಡಾ| ಶಿವರಾಮ ಕಾರಂತರ ಹುಟ್ಟುಹಬ್ಬದ ಆಚರಣೆಗೆ ಸಿದ್ಧತೆ ನಡೆಯುವ ಹಂತದಲ್ಲಿ ಮತ್ತೆ ಇದು ಮುನ್ನೆಲೆಗೆ ಬಂದಿದೆ.

ಕಾಯಕಲ್ಪ ನೀಡಬೇಕಿದೆ
ಈ ಶಾಲಾ ಕಟ್ಟಡ ಒಂದು ರೀತಿಯಲ್ಲಿ ಆವರಣ ಗೋಡೆಯಾಗಿ ನಿಂತಿದೆ. ಶಾಲಾ ಕೊಠಡಿಯ ಒಳಗಿರುವ ಬೆಂಚು ಹಾಗೂ ರಸ್ತೆಯಲ್ಲಿ ಸಂಚರಿಸುವ ಘನ ವಾಹನಗಳ ನಡುವೆ ಶಾಲಾ ಗೋಡೆ ಮಾತ್ರವೇ ಇದೆ. ವಾಹನ ಬಂದು ಈ ಗೋಡೆಗೆ ಅಪ್ಪಳಿಸುವ ಮೊದಲು, ಸಂಬಂಧಪಟ್ಟವರು ಗಮನ ಹರಿಸುವ ಅಗತ್ಯವಿದೆ. ಕಾರಂತರ ಹುಟ್ಟು ಹಬ್ಬದ ನೆಪದಲ್ಲಾದರೂ ಶಾಲೆ ಗೊಂದು ವ್ಯವಸ್ಥಿತ ಕಾಯಕಲ್ಪ ನೀಡುವ ಅಗತ್ಯವಿದೆ.

ಕಟ್ಟಡ ತೆರವಿಗೆ ಮನವಿ
ವಿದ್ಯಾರ್ಥಿಗಳನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಈಗ ಶಾಲಾ ಶಿಕ್ಷಕರ ಕೊಠಡಿ ಹಾಗೂ ಕಂಪ್ಯೂಟರ್‌ ಕೊಠಡಿ ಇದೆ. ರಸ್ತೆ ಅಂಚಿನ ಕಟ್ಟಡದಲ್ಲಿ ಕುಳಿತುಕೊಳ್ಳಲು ಎಲ್ಲರೂ ಭಯಪಡುತ್ತಾರೆ. ಆದ್ದರಿಂದ ಇದು ಅನಾಥವಾಗಿ ಬಿದ್ದಿದೆ. ಆದ್ದರಿಂದ ಈ ಕಟ್ಟಡವನ್ನು ತೆರವು ಮಾಡಿ, ಈ ಜಾಗದಲ್ಲಿ ಕ್ರೀಡಾಂಗಣಕ್ಕೆ ವ್ಯವಸ್ಥೆ ಮಾಡುವಂತೆ ಶಾಲಾ ವತಿಯಿಂದ ಮನವಿ ಮಾಡಲಾಗಿತ್ತು. ಕನಿಷ್ಠ, ಬದಿಯ ಎರಡು ಕೊಠಡಿಗಳನ್ನು ತೆರವು ಮಾಡಿದರೂ ಸಾಕಿತ್ತು. ಆದರೆ ಇಲಾಖೆ ಇದಾವುದನ್ನೂ ಮಾಡದೆ, ಜಿ.ಪಂ. ಅಧ್ಯಕ್ಷರ ನಿಧಿಯನ್ನು ಬಳಸಿಕೊಂಡು 2.5 ಲಕ್ಷ ರೂ. ಅನುದಾನ ಮಂಜೂರು ಮಾಡಿತು. ಕಿಟಕಿಗೆ ಎಸ್ಟಿಮೇಟ್‌ ತೆಗೆದುಕೊಂಡು ಹೋದವರ ಸುಳಿವೇ ಇಲ್ಲ. ಉಳಿದಂತೆ ಅರೆಬರೆ ಕಾಮಗಾರಿ ನಡೆಸಿ, ಕೈ ತೊಳೆದುಕೊಂಡಿತು. ಬಳಿಕ ಕಾಮಗಾರಿ ನಡೆದಿಲ್ಲ.

ಬಸ್‌ ಢಿಕ್ಕಿ 
ಸೆ. 18ರಂದು ಖಾಸಗಿ ಬಸ್ಸೊಂದು ಡಾ| ಶಿವರಾಮ ಕಾರಂತರ ಪ್ರೌಢಶಾಲೆಯ ಆವರಣಕ್ಕೆ ಢಿಕ್ಕಿ ಹೊಡೆದಿತ್ತು. ಸಂಜೆ 6ರ ಸುಮಾರಿಗೆ ಅಪಘಾತ ಸಂಭವಿಸಿದ ಕಾರಣ, ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ ಬಸ್‌ ಶಾಲಾ ಆವರಣ ಗೋಡೆಯನ್ನು ಮುರಿದು ಒಳನುಗ್ಗಿತ್ತು. ಇದೇ ಬಸ್‌ ಶಾಲಾ ಗೋಡೆಗೆ ಅಪ್ಪಳಿಸುವ ಸಂಭವ ಹೆಚ್ಚಿತ್ತು. ಇದರ ಹಿಂದೆ ಹಲವು ವಾಹನಗಳು ಇದೇ ಕಟ್ಟಡವನ್ನು ಸವರಿಕೊಂಡು ಹೋದ ನಿದರ್ಶನ ಇದೆ. ಈ ಶಾಲಾ ಎರಡು ಕೊಠಡಿಗಳನ್ನು ತೆರವು ಮಾಡಿ, ಮುಂಬರುವ ಸಾಂಭವ್ಯಾ ಅನಾಹುತ ತಪ್ಪಿಸಿ ಎಂದು ಮೊರೆ ಇಡುತ್ತಿದ್ದಾರೆ.

ಕ್ರಮದ ಭರವಸೆ
ಇರುವ ಕೊಠಡಿಯಲ್ಲಿ ಕ್ರೀಡಾ ಸಲಕರಣೆ, ಕಂಪ್ಯೂಟರ್‌ ಕೊಠಡಿ ಇದೆ. ಕಂಪೌಂಡ್‌ ಶಾಲಾ ಕೊಠಡಿ ಗೋಡೆ ಆಗಿರುವುದರಿಂದ ತೊಂದರೆ ಇದೆ. ಈ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸಿ, ಕ್ರಮ ಕೈಗೊಳ್ಳಲಾಗುವುದು.
– ಸುಕನ್ಯಾ ಡಿ.ಎನ್‌., 
ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರು

ಗಣೇಶ್‌ ಎನ್‌. ಕಲ್ಲರ್ಪೆ 

ಟಾಪ್ ನ್ಯೂಸ್

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23 ಶಾಲೆಗೆ ಬಾಂಬ್ ಬೆದರಿಕೆ ಹಾಕಿದ 12ನೇ ತರಗತಿ ವಿದ್ಯಾರ್ಥಿ

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

6-kaup-3

Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

5-bng

Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!

ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ

Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

1(1

Sullia: ಮುಳುಗಿದ ಅಂಗನವಾಡಿಗೆ ಹೊಸ ಜಾಗ

7-aishwarya

Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್‌ ಸೂಚನೆ

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23 ಶಾಲೆಗೆ ಬಾಂಬ್ ಬೆದರಿಕೆ ಹಾಕಿದ 12ನೇ ತರಗತಿ ವಿದ್ಯಾರ್ಥಿ

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.