1974ರ ಮಹಾಪ್ರವಾಹದ ನೆನಪು!
Team Udayavani, Aug 11, 2019, 5:38 AM IST
ತುಂಬಿ ಹರಿಯುತ್ತಿರುವ ನೇತ್ರಾವತಿ ನದಿ.
ಮಂಗಳೂರು: ಜಿಲ್ಲೆಯಲ್ಲಿ ಎರಡು ದಿನಗಳಲ್ಲಿ ನದಿಗಳು ಅಪಾಯದ ಮಟ್ಟ ಮೀರಿ ಉಕ್ಕಿ ಹರಿದಿದ್ದು, 1974ರ ಮಹಾ ಪ್ರವಾಹವನ್ನು ನೆನಪಿಸುವಂತೆ ಮಾಡಿದೆ.
ನೇತ್ರಾವತಿ, ಕುಮಾರಧಾರ ನದಿಗಳ ಜತೆಗೆ ಉಪನದಿಗಳು ಕೂಡ ಉಕ್ಕಿ ಹರಿದಿದ್ದು, ಸಾಕಷ್ಟು ನಷ್ಟ, ಹಾನಿ ಉಂಟು ಮಾಡಿದೆ. ಸದ್ಯದ ಪರಿಸ್ಥಿತಿಯಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದ್ದರೂ ಜನರು ಮಾತ್ರ ಭಯ, ಆತಂಕಗಳಿಂದ ಹೊರಬಂದಿಲ್ಲ.
ನೇತ್ರಾವತಿ ಮತ್ತು ಕುಮಾರಧಾರ ಎರಡು ದಿನಗಳಿಂದ ಆಪಾಯ ಮಟ್ಟ ಮೀರಿ ಹರಿದಿದೆ. ಶನಿವಾರ ತುಂಬೆಯಲ್ಲಿ ನೇತ್ರಾವತಿ ಮಟ್ಟ 11.06 ಮೀ. ತಲುಪಿದ್ದು, ಇದು ಅಪಾಯ ಮಟ್ಟಕ್ಕಿಂತ 3 ಮೀ. ಅಧಿಕವಾಗಿದೆ. ನದಿ ಆಸುಪಾಸು ಜಲಾವೃತಗೊಂಡಿದ್ದು, ಪ್ರವಾಹ ಪೀಡಿತ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಉಪ್ಪಿನಂಗಡಿಯಲ್ಲಿ ನದಿ ಅಪಾಯದ ಮಟ್ಟ 26.5 ಮೀ. ಆಗಿದ್ದು, 31 ಮೀ.ಗೆ ತಲುಪಿತ್ತು. ಹಲವು ಕಡೆ ರಾಷ್ಟ್ರೀಯ ಹೆದ್ದಾರಿಗೂ ನೀರು ನುಗ್ಗಿದೆ. ಸಂಜೆಯ ವೇಳೆಗೆ ತುಂಬೆಯಲ್ಲಿ 8.5 ಮೀ. ಮತ್ತು ಉಪ್ಪಿನಂಗಡಿಯಲ್ಲಿ 26.5 ಮೀ.ಗೆ ಇಳಿದಿತ್ತು.
4 ಅಡಿ ನೀರು ಬಾಕಿ ಇತ್ತು
ನೇತ್ರಾವತಿ ನದಿಯಲ್ಲಿ ಶುಕ್ರವಾರ 4 ಅಡಿ ನೀರು ಜಾಸ್ತಿಯಾಗುತ್ತಿದ್ದರೆ, 1974ರ ಜು.25ರಂದು ಬಂದಿದ್ದ ಮಹಾ ಪ್ರವಾಹದ ನೀರಿನ ಮಟ್ಟ ತಲುಪುತ್ತಿತ್ತು ಎಂದು ಪಾಣೆಮಂಗಳೂರಿನ ನಿವಾಸಿಗಳು ವಿವರಿಸಿದ್ದಾರೆ. 1974ರಲ್ಲಿ ಬಂದಿದ್ದ ಮಹಾ ಪ್ರವಾಹ ಸಂದರ್ಭ ಪಾಣೆಮಂಗಳೂರು ನೇತ್ರಾವತಿ ಸೇತುವೆಯ ಮೇಲೆ ಸುಮಾರು 1 ಅಡಿ ನೀರು ನಿಂತಿತ್ತು. ಹೆದ್ದಾರಿಗಳ ಮೇಲೆ ಆಳೆತ್ತರ ನೀರು ಹರಿದಿತ್ತು. ಸಾವಿರಾರು ಕುಟುಂಬಗಳು ಆಸ್ತಿಪಾಸ್ತಿ ಕಳೆದುಕೊಂಡು ನಿರ್ಗತಿಕರಾಗಿದ್ದರು. ಸುಮಾರು ಎರಡು ದಶಕದ ಬಳಿಕ ಇಷ್ಟು ದೊಡ್ಡ ಮಟ್ಟದಲ್ಲಿ ನೇತ್ರಾವತಿ ನದಿಯ ನೀರಿನ ಏರಿಕೆಯಾಗಿದೆ ಎನ್ನಲಾಗುತ್ತಿದೆ.
ಧೈರ್ಯ ತುಂಬುವ ಕೆಲಸ ಮಾಡಿದ ಜನಪ್ರತಿನಿಧಿಗಳು
ಮಂಗಳೂರು/ಉಡುಪಿ: ಕರಾವಳಿ, ಪಶ್ಚಿಮ ಘಟ್ಟ ಮತ್ತು ತಪ್ಪಲು ಪ್ರದೇಶಗಳು ಭಾರೀ ಮಳೆ- ನೆರೆಯಿಂದ ತತ್ತರಿಸಿದ್ದು, ಸಂಕಷ್ಟದಲ್ಲಿ ಸಿಲುಕಿರುವ ಜನರಿಗೆ ನೆರವಾಗಲು ಅಧಿಕಾರಿಗಳು, ಎನ್‌ಡಿಆರ್‌ಎಫ್, ಗೃಹರಕ್ಷಕ ಸಿಬಂದಿ, ಅಗ್ನಿಶಾಮಕ ದಳದ ಸಿಬಂದಿ ಯುದೊœàಪಾದಿಯಲ್ಲಿ ದಿನದ ಇಪ್ಪತ್ತನಾಲ್ಕು ತಾಸು ಕೂಡ ಕಾರ್ಯತತ್ಪರರಾಗಿದ್ದಾರೆ. ಇವರ ಜತೆಗೆ ಸಂತ್ರಸ್ತರ ನೋವಿಗೆ ಕಿವಿಯಾಗಿ ಸ್ಪಂದಿಸುವಲ್ಲಿ ಜನಪ್ರತಿನಿಧಿಗಳೂ ಸೇರಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.