ರಥಬೀದಿಯ ಸರಕಾರಿ ಕಾಲೇಜು ಪುನರ್ ನಾಮಕರಣ
Team Udayavani, Oct 22, 2017, 10:40 AM IST
ಮಹಾನಗರ: ನಗರದ ರಥಬೀದಿಯ ಸರಕಾರಿ ಪ್ರಥಮ ದರ್ಜೆ ಕಾಲೇಜನ್ನು ಡಾ| ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಎಂಬುದಾಗಿ ಪುನರ್ ನಾಮಕರಣ ಮಾಡಲಾಗಿದ್ದು, ಅದರ ಉದ್ಘಾಟನೆಯನ್ನು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಶನಿವಾರ ನೆರವೇರಿಸಿದರು.
ಸಚಿವರಿಂದ ಬಿಸಿಯೂಟ ಯೋಜನೆಗೆ ಚಾಲನೆ
ಇದೇ ಸಂದರ್ಭದಲ್ಲಿ ಕಾಲೇಜಿನ ದಶಮಾನೋತ್ಸವ ವರ್ಷಾಚರಣೆಯನ್ನು ಹಾಗೂ ಬಿಸಿಯೂಟ ಯೋಜನೆಯನ್ನು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಉದ್ಘಾಟಿಸಿದರು.
ವಿಸ್ತರಿತ ಕಂಪ್ಯೂಟರ್ ಲ್ಯಾಬ್‌ನ ಉದ್ಘಾಟನೆ ಮತ್ತು ಕಾಲೇಜಿನ ವಿದ್ಯಾರ್ಥಿಗಳ ‘108 ಚಿಂತನೆಗಳು’ ಕೃತಿಯನ್ನು ವಿಧಾನಪರಿಷತ್ ಪ್ರತಿಪಕ್ಷ ಸಚೇತಕ ಕ್ಯಾ| ಗಣೇಶ್ ಕಾರ್ಣಿಕ್ ಅವರು ಬಿಡುಗಡೆಗೊಳಿಸಿದರು.
ಕೋರ್ಸ್‌ಗಳಿಗೆ ಚಾಲನೆ
ನೂತನ ಸ್ನಾತಕ-ಸ್ನಾತಕೋತ್ತರ ಕೋರ್ಸ್‌ಗಳನ್ನು ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸಿದರು. ನೂತನ ಮೆಟ್ರಿಕ್ ಅನಂತರದ ಹಿಂದುಳಿದ ವರ್ಗಗಳ ದೇವರಾಜ ಅರಸು ಮಹಿಳಾ ವಿದ್ಯಾರ್ಥಿ ನಿಲಯದ ಶಂಕು ಸ್ಥಾಪನೆಯನ್ನು ಮಂಗಳೂರು ವಿ.ವಿ. ಕುಲಪತಿ ಪ್ರೊ| ಕೆ. ಭೈರಪ್ಪ ಅವರು ನೆರವೇರಿಸಿದರು. ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜೆ.ಆರ್. ಲೋಬೊ ಅವರು ಅಧ್ಯಕ್ಷತೆ ವಹಿಸಿದ್ದರು.
ಮೇಯರ್ ಕವಿತಾ ಸನಿಲ್, ದಾನಿಗಳು ಹಾಗೂ ಮಹಾ ಪೋಷಕರಾದ ಬೆಂಗಳೂರಿನ ಸೆಂಚುರಿ ರಿಯಲ್ ಎಸ್ಟೇಟ್‌ನ ಡಾ| ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ, ರವೀಂದ್ರ ಪೈ, ಮಾಜಿ ಶಾಸಕ ಯೋಗೀಶ್ ಭಟ್, ಕಾರ್‌ಸ್ಟ್ರೀಟ್ ಪ್ರದೇಶದ ಕಾರ್ಪೊರೇಟರ್ ರಮೀಝಾ ಬಾನು, ರಾಮದಾಸ್, ಮೋಹನ್ ಮೆಂಡನ್, ತಾ.ಪಂಚಾಯತ್ ಅಧ್ಯಕ್ಷ ಮಹಮದ್ ಮೋನು, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ| ಉದಯ ಶಂಕರ್ ಎಚ್., ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷ ಜೆ. ಪಾಂಡುರಂಗ ನಾಯಕ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗುರು ಪ್ರಸಾದ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ| ರಾಜಶೇಖರ ಹೆಬ್ಟಾರ್ ಸಿ. ಸ್ವಾಗತಿಸಿ ಡಾ| ಶಿವರಾಮ ಪಿ. ವಂದಿಸಿದರು. ಡಾ| ಪ್ರಕಾಶ್ ಚಂದ್ರ ಶಿಶಿಲ ನಿರ್ವಹಿಸಿದರು.
ಉದ್ಯಮಿ ಡಾ| ಪಿ. ದಯಾನಂದ ಪೈ ಅವರಿಂದ ದಾನ
ಉದ್ಯಮಿ ಡಾ| ಪಿ. ದಯಾನಂದ ಪೈ ಅವರು ನೀಡಿದ 2.45 ಕೋಟಿ ರೂ. ವೆಚ್ಚದಲ್ಲಿ ಕಾಲೇಜಿನ ನೆಲ ಅಂತಸ್ತಿನ ಕಟ್ಟಡದ 11 ಕೊಠಡಿಗಳನ್ನು ನಿರ್ಮಿಸಲಾಗಿದೆ. ಹಾಗೆಯೇ 1,63,548 ರೂ. ಮೌಲ್ಯದ ಜೆರಾಕ್ಸ್ ಯಂತ್ರ, 42,438 ರೂ.ಬೆಲೆಯ ಒಂದು ಕಲರ್ ಪ್ರಿಂಟರ್ ಹಾಗೂ ಒಂದು ಆಲ್ ಇನ್ ಒನ್ ಫ್ಯಾಕ್ಸ್ ಮತ್ತು ಪ್ರಿಂಟರ್, 1.54 ಲಕ್ಷ ರೂ. ಮೌಲ್ಯದ 4 ಕಂಪ್ಯೂಟರ್, 5,51,560 ರೂ. ವೆಚ್ಚದಲ್ಲಿ 50 ಜತೆ ಡೆಸ್ಕ್, ಬೆಂಚುಗಳು, ಪ್ರಾಂಶುಪಾಲರ ಕೊಠಡಿಗೆ 75 ಸಾವಿರ ರೂ. ಪೀಠೊಪಕರಣ, 92,921 ರೂ. ಕಾಲೇಜಿನ ಹೊಸ ಹೆಸರಿನ 6 ಬೋರ್ಡ್‌ಗಳನ್ನು ಅವರು ದಾನವಾಗಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.