ಪಂಚಾಯತ್‌ನಿಂದ ದುರಸ್ತಿ; ಹೊಂಡ,ಗುಂಡಿಗಳಿಗೆ ತಾತ್ಕಾಲಿಕ ಮುಕ್ತಿ
Team Udayavani, Jul 21, 2017, 5:55 AM IST
ಸಸಿಹಿತ್ಲು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸಸಿಹಿತ್ಲು ಬೀಚ್‌ಗೆ ಆಗಮಿಸುವ ಪ್ರವಾಸಿಗ ರನ್ನು ಹೊಂಡ,ಗುಂಡಿಗಳಿಂದ ಸ್ವಾಗತಿಸುತ್ತಿದ್ದ ರಸ್ತೆಗೆ ಜು.20ರಂದು ಹಳೆ ಯಂಗಡಿ ಗ್ರಾಮ ಪಂಚಾಯತ್ ತಾತ್ಕಾ ಲಿಕ ಪರಿಹಾರವಾಗಿ ದುರಸ್ತಿ ಕಾರ್ಯ ನಡೆಸಿದೆ.
ಸಸಿಹಿತ್ಲು ಮುಂಡ ಪ್ರದೇ ಶದ ಬೀಚನ್ನು ಪ್ರವೇ ಶಿ ಸುವ ಈ ರಸ್ತೆಯ ಸಮ ಸ್ಯೆ ಬಗ್ಗೆ ಉದಯವಾಣಿ ಸುದಿನದಲ್ಲಿ ಜು.13ರಂದು ವರದಿ ಪ್ರಕಟಗೊಂಡ ಬಳಿಕ ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯರ ವಿಶೇಷ ಸಭೆಯನ್ನು ನಡೆಸಿ ರಸ್ತೆ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಿತ್ತಲ್ಲದೆ, ಈಗಾಗಲೇ ಸುನಾಮಿ ಯೋಜನೆಯಲ್ಲಿ 3 ಕೋ. ರೂ. ವೆಚ್ಚದಲ್ಲಿ ಸಂಪೂರ್ಣವಾಗಿ ಕಾಂಕ್ರೀಟೀ ಕೃತಗೊಳಿಸುವ ಯೋಜನೆ ಇರು ವುದರಿಂದ ತಾತ್ಕಾಲಿಕವಾದರೂ ದುರಸ್ತಿ ಕಾರ್ಯ ನಡೆಸಲು ನಿರ್ಧರಿಸಲಾಗಿದೆ ಎಂದು ಗ್ರಾ. ಪಂ.ತಿಳಿಸಿದೆ.
ಈ ರಸ್ತೆ ಯಲ್ಲಿ ಪ್ರವಾಸಿಗರು ಹಾಗೂ ಮುಂಡ ಪ್ರದೇ ಶದ ನಿವಾಸಿಗಳು ತಮ್ಮ ವಾಹನಗಳ ಮೂಲಕ ಸಂಚ ರಿ ಸು ತ್ತಾರೆ. ಜತೆಗೆ ಸಸಿಹಿತ್ಲಿಗೆ ಬರುವ ಬಸ್ಸುಗಳು ಸಹ ಮುಂಡ ದಲ್ಲಿಯೇ ಸಂಚಾರವನ್ನು ಕೊನೆಗೊಳಿಸುವ ಪ್ರದೇ ಶ ವಾಗಿದ್ದು, ಪ್ರಯಾಣಿಕರು ಹತ್ತಿರದಲ್ಲಿಯೇ ಇರುವ ಬಸ್ ನಿಲ್ದಾಣವನ್ನು ಸಹಬಳಸುತ್ತದ್ದಾರೆ. ಈಗ ಪಂಚಾಯತ್ ಸಿಬಂದಿ ಸಿಮೆಂಟ್ ಮಿಶ್ರಿತ ಕಲ್ಲು ಮಣ್ಣುಹಾಕಿ,ಹೊಂಡ, ಗುಂಡಿಗಳನ್ನು ಮುಚ್ಚಿರುವುದರಿಂದ ತಾತ್ಕಾಲಿಕ ಪರಿ ಹಾರ ಕಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.