ದುರಸ್ತಿಗೆ ಕಾಯುತ್ತಿದೆ ಚಾಪಳ್ಳ – ಆರೆಲ್ತಡಿ ರಸ್ತೆ
Team Udayavani, Jul 2, 2018, 2:50 AM IST
ಸವಣೂರು: ಬೆಳಂದೂರು ಜಿ.ಪಂ. ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸವಣೂರು ಗ್ರಾಮದ ಚಾಪಳ್ಳ – ಆರೇಲ್ತಡಿ ರಸ್ತೆ ಹೊಂಡ, ಗುಂಡಿಗಳಿಂದ ಕೂಡಿದ್ದು, ದುರಸ್ತಿಗೆ ಕಾಯುತ್ತಿದೆ. ಆರೇಲ್ತಡಿ ಶಾಲೆ, ಅಂಗನವಾಡಿ, ಆರೇಲ್ತಡಿ ದೈವಸ್ಥಾನ ಹಾಗೂ ಇಲ್ಲಿನ ಜನವಸತಿ ಪ್ರದೇಶಗಳಿಗೆ ಈ ರಸ್ತೆಯ ಮೂಲಕವೇ ಸಂಚರಿಸಬೇಕು. ರಸ್ತೆಯಲ್ಲಿ ಹೊಂಡಗಳೇ ಗೋಚರಿಸುತ್ತಿದ್ದು, ಅದರಲ್ಲಿ ನೀರು ತುಂಬಿಕೊಂಡು ಪಾದಚಾರಿಗಳಿಗೂ ಕೆಸರಿನ ಸಿಂಚನವಾಗುತ್ತಿದೆ. ವಾಹನ ಸವಾರರಿಗೂ ಹೊಂಡಗಳ ಗಾತ್ರದ ಅರಿವಾಗದೆ ಪರದಾಡುತ್ತಿದ್ದಾರೆ. ಈ ರಸ್ತೆಗೆ ಸುಳ್ಯ ಶಾಸಕ ಎಸ್. ಅಂಗಾರ ಹಾಗೂ ಈ ಹಿಂದಿನ ಜಿ.ಪಂ. ಸದಸ್ಯರ ಅನುದಾನದಲ್ಲಿ ಒಟ್ಟು 35 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ಹಾಗೂ ಡಾಮರು ಕಾಮಗಾರಿ ನಡೆದಿದೆ. ಉಳಿದ ಭಾಗ ಡಾಮರು ಕಾಮಗಾರಿಗಾಗಿ ಕಾಯುತ್ತಿದೆ.
ರಸ್ತೆ ದುರಸ್ತಿ ಮಾಡಿ
ನಿತ್ಯ ನೂರಾರು ಜನರು ಈ ರಸ್ತೆಯನ್ನೇ ಅವಲಂಬಿಸಿದ್ದರೂ, ಅವ್ಯವಸ್ಥೆಯಿಂದ ಮುಕ್ತಿ ಸಿಕ್ಕಿಲ್ಲ. ಈ ರಸ್ತೆಯ ಕುರಿತು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತುರ್ತಾಗಿ ಗಮನ ಹರಿಸಿ, ತಾತ್ಕಾಲಿಕವಾಗಿ ಮರಳಿನ ಚರಳುಗಳನ್ನಾದರೂ ಹಾಕಿ, ದುರಸ್ತಿಗೊಳಿಸಬೇಕು. ಇಲ್ಲದಿದ್ದರೆ ಈ ಮಳೆಗಾಲದಲ್ಲಿ ಸಂಚರಿಸುವುದೇ ಅಸಾಧ್ಯವಾದೀತು.
– ಪುಷ್ಪರಾಜ ಆರೇಲ್ತಡಿ, ಸ್ಥಳೀಯ
ಮನವಿ ಮಾಡಲಾಗಿದೆ
ಈ ರಸ್ತೆಯ ಅಭಿವೃದ್ಧಿಗಾಗಿ ಸುಳ್ಯ ಶಾಸಕರು, ಜಿ.ಪಂ. ಸದಸ್ಯರ 35 ಲಕ್ಷ ರೂ.ಗಳ ಅನುದಾನದಲ್ಲಿ ಡಾಮರು, ಕಾಂಕ್ರಿಟ್ ಕಾಮಗಾರಿ ನಿರ್ವಹಿಸಲಾಗಿದೆ. ಅಲ್ಲದೆ, ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಊರವರೊಂದಿಗೆ ಶ್ರಮದಾನದಿಂದ ಕೆಲಸ ಮಾಡಲಾಗಿದೆ. ಈ ರಸ್ತೆಗೆ ಅನುದಾನ ನೀಡುವಂತೆ ಶಾಸಕರಲ್ಲಿ, ಸಂಸದರಲ್ಲಿ ಮನವಿ ಮಾಡಲಾಗಿದೆ. ಅಭಿವೃದ್ಧಿ ದೃಷ್ಟಿಯಲ್ಲಿ ಎಲ್ಲ ಪ್ರಯತ್ನ ಮಾಡಲಾಗುತ್ತಿದೆ.
– ರಾಕೇಶ್ ರೈ ಕೆಡೆಂಜಿ, ಮಾಜಿ ಉಪಾಧ್ಯಕ್ಷರು, ಸವಣೂರು ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.