ಚುನಾವಣೆ ನೀತಿ ಸಂಹಿತೆ ನಡುವೆಯೇ ಹೊಂಡ ಗುಂಡಿಗಳಿಗೆ ಮುಕ್ತಿ
Team Udayavani, Apr 4, 2018, 11:34 AM IST
ಮೂಲ್ಕಿ: ನಾಲ್ಕು ತಿಂಗಳಿನಿಂದ ಕಿಲ್ಪಾಡಿ ಗ್ರಾ.ಪಂ. ವ್ಯಾಪ್ತಿಯ ರಾಜ್ಯ ಹೆದ್ದಾರಿಯಲ್ಲಿದ್ದ ಹೊಂಡಗುಂಡಿಗಳು ಈಗ ಮುಕ್ತಿ ಪಡೆದಿವೆ. ಅದು ಚುನಾವಣೆ ನೀತಿ ಸಂಹಿತೆ ಸಮಯದಲ್ಲಿ! ಹೌದು. ಇದು ಮಂಗಳವಾರ ಮಧ್ಯಾಹ್ನ 12 ಗಂಟೆಯಿಂದ ಸುಮಾರು ಮೂರು ಗಂಟೆಗಳ ಕಾಲ ಪುನರೂರು ಕಡೆಯಿಂದ ಕಿಲ್ಪಾಡಿ ಪಂಚಾಯತ್ ಕಚೇರಿಯ ಎದುರಿನ ರಸ್ತೆಯ ಉದ್ದಕ್ಕೂ ಮೂವರು ವ್ಯಕ್ತಿಗಳು ಕೆಲಸ ಮಾಡಿ ಹೊಂಡ- ಗುಂಡಿ ಮುಚ್ಚಿದ್ದರು.
ಅಷ್ಟಕ್ಕೂ ಈ ಕೆಲಸ ಮಾಡಿದವರು ಬೇರೆ ಯಾರು ಅಲ್ಲ ಅದೇ ರಸ್ತೆಯಲ್ಲ ಪ್ರಯಾಣಿಸಿ ಕಹಿ ಅನುಭವ ಹೊಂದಿರುವ ಪಂ. ಅಧ್ಯಕ್ಷ ಶ್ರೀಕಾಂತ್ ರಾವ್ ಮತ್ತು ಸದಸ್ಯ ನಾಗರಾಜ್. ಇವರೊಂದಿಗೆ ಒಬ್ಬ ಸಿಬಂದಿಯೂ ಕೈಜೋಡಿಸಿದರು. ಡಾಮರು ಹುಡಿಗಳನ್ನು ಹೊಂಡಕ್ಕೆ ತುಂಬಿಸಲು ನೆರವಾಗಿದ್ದು ಪಂ.ಅಧ್ಯಕ್ಷರ ಮಾರುತಿ 800 ಕಾರು! ಅದರಲ್ಲೇ ಮಣ್ಣು, ಡಾಮರು ಹುಡಿ ತಂದು ಎಲ್ಲ ಹೊಂಡ-ಗುಂಡಿಗಳನ್ನು ಮುಚ್ಚಿ ಸಾರ್ವಜನಿಕರಿಂದ ಶಹಬ್ಟಾಸ್ ಗಿರಿ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.