ಅನಗತ್ಯ ಪ್ರತಿಭಟನೆಗೆ ಅನುಮತಿ ನೀಡದಂತೆ ಮನವಿ
Team Udayavani, Jan 5, 2018, 12:54 PM IST
ನಗರ: ಜಿಲ್ಲೆಯಲ್ಲಿ ದುರುದ್ದೇಶ ಪೂರಿತ ವಿಚಾರಗಳನ್ನೆತ್ತಿಕೊಂಡು ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಕ್ಕೆ ಯಾವುದೇ ಸಂಘಟನೆಗಳಿಗೂ ಅನುಮತಿಯನ್ನು ನೀಡಬಾರದು ಎಂದು ಜಯಕರ್ನಾಟಕ ಪುತ್ತೂರು ತಾಲೂಕು ಘಟಕದಿಂದ ರಾಜ್ಯಪಾಲರಿಗೆ ಸಹಾಯಕ ಕಮೀಷನರ್ ಮೂಲಕ ಮತ್ತು ಪೊಲೀಸ್ ವರಿಷ್ಠಾಧಿಕಾರಿಗೆ ಪುತ್ತೂರು ನಗರ ಪೊಲೀಸ್ ಠಾಣಾಧಿಕಾರಿ ಮೂಲಕ ಮನವಿ ಸಲ್ಲಿಸಲಾಯಿತು.
ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಸರಕಾರಿ ಅಧಿಕಾರಿಗಳು ತೆಗೆದುಕೊಳ್ಳುವ ನಿರ್ಧಾರವನ್ನು
ಬೆಂಬಲಿಸಬೇಕು. ಆದರೆ ಕೆಲವೊಂದು ಸಂಘಟನೆಗಳು ಅಹಿತಕರ ಘಟನೆಗಳು ನಡೆದಾಗ ವಸ್ತುಸ್ಥಿತಿಯನ್ನು ಅರ್ಥ
ಮಾಡಿಕೊಳ್ಳದೆ ಸಂಘಟನೆಗಳ ಸ್ವಪ್ರತಿಷ್ಠೆಗಾಗಿ ಯುವ ಜನಾಂಗವನ್ನು ಮುಂದೆ ಬಿಟ್ಟು ಅವರ ಭವಿಷ್ಯವನ್ನು ಬಲಿಕೊಡುವ ಮತ್ತು ಅದಕ್ಕೆ ಕಾರಣವಾಗುವಂತಹ ಯಾವುದೇ ಸಂಘಟನೆಗಳನ್ನು ಹತ್ತಿಕ್ಕುವ ಕಠಿನವಾದ
ಕ್ರಮಗಳನ್ನು ಕೈಗೊಂಡು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು.
ರಾಜಕೀಯ ಪ್ರೇರಿತವಾಗಿ ನಡೆಸುವಂತಹ ಕಾನೂನುಬಾಹಿರ ಚಟುವಟಿಕೆ ಸಾರ್ವಜನಿಕ ಜೀವನದ ಶಾಂತಿ, ನೆಮ್ಮದಿಯ ವಾತಾವರಣವನ್ನು ಕಲುಷಿತಗೊಳಿಸುತ್ತದೆ. ಕಾನೂನು ಸುವ್ಯವಸ್ಥೆಗಳನ್ನು ಹದಗೆಡಿಸುವ ಹಂತಕ್ಕೆ ತಲುಪುವ ಸಂಘಟನೆಗಳ ನಿಲುವನ್ನು ಜಯಕರ್ನಾಟಕ ಸಂಘಟನೆ ವಿರೋಧಿಸುತ್ತದೆ.
ಕಠಿನ ಕ್ರಮಕ್ಕೆ ಆಗ್ರಹ
ಅದಕ್ಕೆ ಬದಲಾಗಿ ಜನಪರ ಕಾರ್ಯಕ್ರಮಗಳನ್ನು ಯಾವುದೇ ಜಾತಿ, ಮತ ಪಂಥ ಪಕ್ಷ ರಹಿತವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ನಡೆಸುವ ಜನಪರ ಚಳುವಳಿಯನ್ನು ನಮ್ಮ ಸಂಘಟನೆ ಸದಾ ಬೆಂಬಲಿಸುತ್ತದೆ. ಸಮಾಜಘಾತುಕ ಘಟನೆಗಳು ನಡೆದರೆ ಖಡಾಖಂಡಿತವಾಗಿ ಇದನ್ನು ನಮ್ಮ ಸಂಘಟನೆ ವಿರೋಧಿಸುತ್ತದೆ. ಸಾರ್ವಜನಿಕ ಶಾಂತಿ ಕದಡುವ ಎಲ್ಲ ಚಟುವಟಿಕೆಗಳನ್ನು ನಿರ್ಬಂಧಿಸುವ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.
ಜಯಕರ್ನಾಟಕ ತಾಲೂಕು ಗೌರವಾಧ್ಯಕ್ಷ ಚಂದ್ರಹಾಸ ರೈ, ತಾಲೂಕು ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಕಾರ್ಯದರ್ಶಿ ಪ್ರಸನ್ನ ಕುಮಾರ್ ರೈ, ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರು, ಕಾರ್ಯದರ್ಶಿ ರμàಕ್, ಜತ್ತಪ್ಪ ಗೌಡ, ವೇಣುಗೋಪಾಲ್, ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾಕ ಘಟಕದ ಸಂಯೋಜಕ ಇಸಾಕ್ ಸಾಲ್ಮರ, ಅಬ್ದುಲ್ ಕುಂಞಿ, ಸುರೇಂದ್ರ ಕುಮಾರ್, ಶಿವನಾಥ್ ರೈ ಮೇಗಿನಗುತ್ತು, ರೋಶನ್ ರೆಬೆಲ್ಲೊ, ಫಾರೂಕ್ ಮುರ, ಕಿಶೋರ್ ಪೂಜಾರಿ, ಅವಿನಾಶ್ ಮೊದಲಾದವರು ಉಪಸ್ಥಿತರಿದ್ದರು.
ಕಠಿನ ನಿರ್ಧಾರ
ಶಾಂತಿ ಕದಡುವ ತಪ್ಪಿತಸ್ಥರನ್ನು ಕಾನೂನಿನಡಿ ಶಿಕ್ಷಿಸುವ, ಮುಂದೆ ಇಂತಹ ತಪ್ಪುಗಳು ಸಂಭವಿಸದಂತೆ ಜಾಗರೂಕತೆಯ ಕ್ರಮ ಕೈಗೊಳ್ಳುವ ಉತ್ತಮ ಅಧಿಕಾರಿ ವರ್ಗವನ್ನು ನಿಷ್ಕ್ರಿಯಗೊಳಿಸುವಂತಹ ಘಟನೆಗಳು ಪುನರಾವರ್ತನೆಯಾಗದಂತೆ ತಡೆಯುವ ಸಲುವಾಗಿ ಸರಕಾರ ಕಠಿನ ನಿರ್ಧಾರ ತೆಗೆದುಕೊಳ್ಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟಿಸುವ ಹಕ್ಕು, ಅವಕಾಶಗಳು ಇದ್ದರೂ ತಮ್ಮ ಬೇಳೆ ಬೇಯಿಸುವುದಕ್ಕಾಗಿ
ಬಳಕೆಯಾಗುತ್ತಿದೆ ಎಂದು ಮುಖಂಡರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಸ್- ಸ್ಕೂಟರ್ ಢಿಕ್ಕಿ ಪ್ರಕರಣ: ಚಿಕಿತ್ಸೆ ಪಡೆಯುತ್ತಿದ್ದ ಮತ್ತೋರ್ವ ಸವಾರ ಕೂಡ ಮೃತ್ಯು
Hubli: ಮುಖ್ಯಮಂತ್ರಿ ನೀತಿ ಗೆಟ್ಟು ಲೋಕಾಯುಕ್ತ ತನಿಖೆಗೆ ಹೋಗುತ್ತಿರುವುದು ನಾಚಿಗೇಡಿನ ಸಂಗತಿ
Hubballi: ಮುಖ್ಯಮಂತ್ರಿ ಸಿದ್ದರಾಮಯ್ಯ ಪೇ ಡಬಲ್ ಸಿಎಂ ಆಗಿದ್ದಾರೆ… :ಬೊಮ್ಮಾಯಿ
Karkala: ಮೃತಪಟ್ಟವರ ಹೆಸರಲ್ಲಿದೆ ಸಾವಿರಾರು ಎಕ್ರೆ ಆಸ್ತಿ!
Mangaluru-ಕಾಸರಗೋಡಿಗೆ ‘ಅಶ್ವಮೇಧ’ ಬಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.