ಸುರತ್ಕಲ್ ಟೋಲ್‌ಗೇಟ್ ಮುಚ್ಚಲು ಮನವಿ
Team Udayavani, Jul 22, 2018, 1:06 PM IST
ಮಹಾನಗರ: ಸುರತ್ಕಲ್ ಟೋಲ್‌ಗೇಟ್ ಮುಚ್ಚಲು ಹಾಗೂ ಗುಂಡಿ ಮುಕ್ತ ಸಂಚಾರಕ್ಕೆ ಯೋಗ್ಯ ಹೆದ್ದಾರಿಯಾಗಿ ಮಾರ್ಪಡಿಸಲು ಒತ್ತಾಯಿಸಿ ಡಿವೈಎಫ್‌ಐ ನೇತೃತ್ವದಲ್ಲಿ ಸಾರ್ವಜನಿಕರ ನಿಯೋಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನ ನಿರ್ದೇಶಕರಿಗೆ ಮನವಿ ಸಲ್ಲಿಸಿತು.
ಸುರತ್ಕಲ್ ಎನ್‌ಐಟಿಕೆ ಬಳಿಯಿರುವ ಟೋಲ್‌ಗೇಟ್‌ನ್ನು ಮುಚ್ಚಬೇಕೆಂದು ಒತ್ತಾಯಿಸಿ, ಸತತ ಎರಡು ವರ್ಷಗಳಿಂದ ಸಂಘಟನೆಯು ಹೋರಾಟ ಮಾಡುತ್ತಿದೆ. 2018 ಜುಲೈ 30ರ ವರೆಗೆ ಈಗ ಇರುವ ಟೋಲ್‌ಗೇಟ್ ಗುತ್ತಿಗೆದಾರರ ಅವಧಿ ಮುಕ್ತಾಯಗೊಳ್ಳಲಿದ್ದು, ಅನಂತರ ಸುರತ್ಕಲ್ ಟೋಲ್‌ಗೇಟನ್ನು ಮುಚ್ಚಲಾಗುವುದೆಂದು ತಾವು ಭರವಸೆ ನೀಡಿದ್ದೀರಿ. ಅಲ್ಲದೆ ಹೆಜಮಾಡಿ ಟೋಲ್ ಗೇಟ್‌ನೊಂದಿಗೆ ಸುರತ್ಕಲ್ ಟೋಲ್ ಗೇಟ್ ವಿಲೀನವಾಗಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಸುರತ್ಕಲ್ ಟೋಲ್‌ಗೇಟ್ ಮತ್ತು ಹೆಜಮಾಡಿ ಟೋಲ್‌ಗೇಟ್‌ಗೂ ಕೇವಲ 8 ಕಿ.ಮೀ. ಅಂತರವಿದ್ದು, ಸಣ್ಣ ಅಂತರದಲ್ಲಿ ಎರಡೆರಡು ಟೋಲ್‌ಗೇಟ್ ಗಳಿಗೆ ಸುಂಕ ನೀಡಬೇಕಿರುವುದರಿಂದ ಸಾರ್ವಜನಿಕರು, ಲಾರಿ, ಬಸ್, ಕಾರು ಮಾಲಕರು ನಷ್ಟ ಅನುಭವಿಸಲಿದ್ದಾರೆ. ಹಾಗಾಗಿ ಯಾವುದೇ ಕಾರಣಕ್ಕೂ ಮತ್ತೆ ಸುರತ್ಕಲ್ ಟೋಲ್‌ಗೇಟಿನ ಸುಂಕ ವಸೂಲಿ ಗುತ್ತಿಗೆಯನ್ನು ನವೀಕರಿಸಬಾರದು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಹೆದ್ದಾರಿಯಲ್ಲಿ ಗುಂಡಿ
ಸುರತ್ಕಲ್‌ನಿಂದ ನಂತೂರು ವರೆಗಿನ ರಾಷ್ಟ್ರೀಯ ಹೆದ್ದಾರಿ 66 ಸಂಪೂರ್ಣ ಹಾಳಾಗಿದ್ದು ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ. ಕಳಪೆ ಮತ್ತು ಅವೈಜ್ಞಾನಿಕ ಕಾಮಗಾರಿಗಳು ಹೆದ್ದಾರಿ ಯ ಈ ದುಃಸ್ಥಿತಿಗೆ ಕಾರಣ. ಕೂಡಲೇ ಗುಂಡಿಗಳನ್ನು ಮುಚ್ಚಬೇಕು ಮತ್ತು ಸುರತ್ಕಲ್ ಟೋಲ್‌ಗೇಟ್‌ನ ಸುಂಕ ವಸೂಲಿಯನ್ನು ತತ್‌ಕ್ಷಣ ನಿಲ್ಲಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದೆ.
ಡಿವೈಎಫ್‌ಐನ ಜಿಲ್ಲಾಧ್ಯಕ್ಷ ಬಿ. ಕೆ. ಇಮ್ತಿಯಾಜ್, ಜಿಲ್ಲಾ ಕಾರ್ಯದರ್ಶಿಸಂತೋಷ್ ಬಜಾಲ್, ನಗರ ಪಾಲಿಕೆ ಸದಸ್ಯರಾದ ರೇವತಿ ಕೆ. ಪುತ್ರನ್, ಕೆ. ಯು. ಮೂಸಬ್ಬ, ಅಬ್ದುಲ್ ರಹಿಮಾನ್ ಪಕ್ಷಿಕೆರೆ, ರಶೀದ್ ಮುಕ್ಕ, ರಂಜಿತ್, ಅಬ್ದುಲ್ ಸಲಾಂ ಅಂಗರಗುಂಡಿ, ಸತ್ಯಜಿತ್ ಉಪಸ್ಥಿತರಿದ್ದರು.
ನವೀಕರಿಸಿದರೆ ಹೋರಾಟ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸುಂಕ ವಸೂಲಿ ಗುತ್ತಿಗೆಯನ್ನು ನವೀಕರಿಸಿದಲ್ಲಿ ಸಾರ್ವಜನಿಕರನ್ನು ಸಂಘಟಿಸಿ ತೀವ್ರ ಹೋರಾಟಗಳನ್ನು ಹಮ್ಮಿಕೊಳ್ಳ ಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
State Budget Meeting: ಇಂದಿನಿಂದ ಸಿಎಂ ಬಜೆಟ್ ಪೂರ್ವಭಾವಿ ಸರಣಿ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.