ಇಡ್ಯಾದಲ್ಲಿ ತೋಡುಗಳ ಪುನರುಜ್ಜೀವನ ಅಗತ್ಯ
Team Udayavani, Jun 7, 2018, 12:48 PM IST
ಸುರತ್ಕಲ್ : ಇಡ್ಯಾ ಗ್ರಾಮದಲ್ಲಿ (ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪೂರ್ವದಿಕ್ಕಿನಲ್ಲಿ) ಅನಾದಿಯಿಂದಲೂ ಮಳೆನೀರು ಹರಿದು ಹೋಗಲು ಉತ್ತಮ ರೀತಿಯ ಪ್ರಕೃತಿ ನಿರ್ಮಿತ ತೋಡುಗ ಳಲ್ಲಿ ಹೂಳು ತುಂಬಿ ತನ್ನ ಮೂಲ ಸ್ವರೂಪ ಕಳೆದುಕೊಂಡಿದ್ದು, ಸುರಿಯುವ ಸಾಮಾನ್ಯ ಮಳೆಗೂ ಕೃತಕ ನೆರೆ ಉದ್ಭವಿಸಲು ಕಾರಣವಾಗುತ್ತಿದೆ.
ಈ ಹಿಂದೆ ಎತ್ತರದ ಪ್ರದೇಶದಿಂದ ಸಮುದ್ರ ಸೇರುತ್ತಿದ್ದ ಮಳೆ ನೀರು ಇದೀಗ ಅಡೆ ತಡೆಗಳಿಂದ ಹರಿದು ಹೋಗದೆ ನೆರೆ ಪರಿಸ್ಥಿತಿ ಉಂಟಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿನ ಪೂರ್ವ ದಿಕ್ಕಿನ ಬೃಹತ್ ಪ್ರಮಾಣದ ಮಳೆನೀರು ಕೂಡ ಈ ತೋಡುಗಳಲ್ಲೇ ಹರಿದು ಹೋಗುತ್ತಿದ್ದು, ಈಗಲೂ ಈ ವ್ಯವಸ್ಥೆ
ಮುಂದುವರಿದಿದೆ. ಈ ಎಲ್ಲ ನೀರು ಹಲವು ತೋಡುಗಳ ನೆಟ್‌ವರ್ಕ್ ಮೂಲಕ ಒಟ್ಟು ಸೇರಿ ಮುಂದೆ ಸಾಗಿದಂತೆ ತೋಡುಗಳು ಕೂಡ ಅಗಲವಾಗುತ್ತಾ ಸಮುದ್ರವನ್ನು ಸೇರುತ್ತಿದ್ದುವು. ಯಾವುದೇ ರೀತಿಯ ಕೃತಕ ನೆರೆಗಳೂ ಆಗ ಇರುತ್ತಿರಲಿಲ್ಲ.
ಅಗಲ ಕಿರಿದಾದ ಚರಂಡಿ
ಇದೀಗ ಈ ಎಲ್ಲ ಚರಂಡಿಗಳು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡು ಅಗಲ ಕಿರಿದಾಗಿವೆ. ಮೊದಲು ಇಲ್ಲಿನ ರೈತಾಪಿ ಜನರು ತೋಡುಗಳನ್ನು ಸುಸ್ಥಿತಿಯಲ್ಲಿ ಇಡುತ್ತಿದ್ದರು. ಆದರೆ ಈಗ ಗದ್ದೆಗಳೆಲ್ಲ ಮನೆ ನಿವೇಶನಗಳಾಗಿ ಪರಿವರ್ತಿತವಾದ ಕಾರಣ ಅವುಗಳ ನಿರ್ವಹಣೆ ಮಾಡುವ ರೈತರೂ ಇಲ್ಲ ವಾಗಿದ್ದಾರೆ. ಜತೆಗೆ ಆ ತೋಡುಗಳು ಹೂಳಿನಿಂದ ತುಂಬಿವೆ. ಕೆಲವೆಡೆ ಒತ್ತುವರಿಗೊಂಡು ಅಗಲಕಿರಿದಾಗಿವೆ. ಅದರಿಂದಾಗಿ ಸಣ್ಣ ಸಣ್ಣ ಮಳೆಗಳೂ ಕೃತಕ ನೆರೆಯನ್ನು ಉಂಟುಮಾಡುವ ಪರಿಸ್ಥಿತಿ ಬಂದಿದೆ.
ಪುನರುಜ್ಜೀವನಗೊಳಿಸಿ
ನಗರದ ನರನಾಡಿಗಳಂತಿರುವ ಈ ಪ್ರಾಕೃತಿಕ ತೋಡುಗಳ ಸರಮಾಲೆಯನ್ನು ಪುನರುಜ್ಜೀವನಗೊಳಿಸುವುದು ಮತ್ತು ಅಗಲಗೊಳಿಸುವುದು ಅವಶ್ಯವಾಗಿದೆ. ಇಲ್ಲವಾದಲ್ಲಿ ಕೆಲವು ಕಡೆ ಚರಂಡಿಗಳೇ ಮಾಯವಾಗುವ ಪರಿಸ್ಥಿತಿ ಇದೆ. ಈ ಕಾರ್ಯವನ್ನು ಮನಪಾ ಮತ್ತು ಒಳಚರಂಡಿ ಮಂಡಳಿ ಆದ್ಯತೆಯ ನೆಲೆಯಲ್ಲಿ ಮಾಡುವ ಆವಶ್ಯಕತೆ ಇದೆ.
ಕಾಮಗಾರಿ ಪ್ರಗತಿಯಲ್ಲಿ
ಈಗಾಗಲೇ ಮಳೆ ನೀರು ಹರಿದು ಹೋಗಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಹೂಳು ತುಂಬಿದ ತೋಡುಗಳನ್ನು ಸರಿಪಡಿಸುವ ಕಾಮಗಾರಿ ಪ್ರಗತಿಯಲ್ಲಿದೆ.
- ಖಾದರ್,
ಜೆ.ಇ., ಸುರತ್ಕಲ್, ಮನಪಾ
ಸೂಕ್ತ ಕ್ರಮ ಕೈಗೊಳ್ಳಿ
ಸುರತ್ಕಲ್ ಪ್ರದೇಶದಲ್ಲಿ ನೆರೆ ಅಪರೂಪವಾಗಿತ್ತು.ಆದರೆ ಇದೀಗ ಚರಂಡಿ, ತೋಡುಗಳು ಒತ್ತುವರಿಯಾಗಿ ಅಗಲ ಕಿರಿದಾದ ಕಾರಣ ಕೃತಕ ನೆರೆ ಉಂಟಾಗುತ್ತಿದೆ. ಪಾಲಿಕೆ ಸೂಕ್ತ ಕ್ರಮ ಕೈಗೊಂಡಲ್ಲಿ ಈ ಅನಾಹುತ ತಪ್ಪಿಸಬಹುದು.
- ಪ್ರೊ| ರಾಜ್‌ಮೋಹನ್ ರಾವ್,
ಸುರತ್ಕಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
Bus Service launch: ಮಂಗಳೂರು, ಕುಂದಾಪುರಕ್ಕೆ “ಅಂಬಾರಿ ಉತ್ಸವ’
CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ
Rohit Sharma: ತನುಷ್ ಲಯವೇ ಭಾರತ ಟೆಸ್ಟ್‌ಗೆ ಆಯ್ಕೆಗೆ ಕಾರಣ
Central Office: 49 ಹೊಸ ತಾಲೂಕಿಗೆ “ಪ್ರಜಾ ಸೌಧ’ ಸಂಕೀರ್ಣ ಯಾವಾಗ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.