ಅಪಾಯಕಾರಿ ಎಲ್‌ಟಿಡಿ ಬಾಕ್ಸ್‌ಗೆ ಮುಕ್ತಿ; ಮೆಸ್ಕಾಂ ಎದುರಿನ ಡಿವೈಡರ್‌ನಲ್ಲಿ ಹೊಸ ಪೆಟ್ಟಿಗೆ
Team Udayavani, Mar 9, 2020, 5:31 AM IST
ಮಹಾನಗರ: ಅನೇಕ ತಿಂಗಳುಗಳಿಂದ ಡೇಂಜರ್ ಝೋನ್ ಎನಿಸಿಕೊಂಡಿದ್ದ ನಗರದ ಮೆಸ್ಕಾಂ ಎದುರುಗಡೆ ಇರುವಂತಹ ಬಾಯ್ದೆರೆದ ವಿದ್ಯುತ್ ಸರಬರಾಜು (ಎಲ್‌ಟಿಡಿ) ಪೆಟ್ಟಿಗೆಯನ್ನು ಇದೀಗ ಸಂಬಂಧಪಟ್ಟ ಇಲಾಖೆ ಸರಿಪಡಿಸಿ, ಅಲ್ಲೇ ಹೊಸ ಪೆಟ್ಟಿಗೆ ಅಳವಡಿಸಿದೆ.
ಮೆಸ್ಕಾಂ ಎದುರುಗಡೆ ಇರುವಂತಹ ಡಿವೈಡರ್‌ನಲ್ಲಿ ಬಾಯ್ದೆರೆದುಕೊಂಡ ಸ್ಥಿತಿಯಲ್ಲಿ ಎಲ್‌ಟಿಡಿ ಬಾಕ್ಸ್ ಇತ್ತು. ನಡೆದಾಡುವವರಿಗೆ, ವಾಹನ ಸವಾರರಿಗೆ ಇದು ಅಪಾಯ ಸೂಚಿಸುತ್ತಿತ್ತು. ಇದೀಗ ಸರಿಪಡಿಸಲಾಗಿದ್ದು, ಹೊಸ ಪೆಟ್ಟಿಗೆ ಅಳವಡಿಸಲಾಗಿದೆ. ಅದೇ ರೀತಿ ಇದೇ ರಸ್ತೆಯ ಕಾಪಿಕಾಡ್ ಬಳಿ ಡಿವೈಡರ್‌ನಲ್ಲಿ ಇದ್ದಂತಹ ಎರಡು ಅಪಾಯಕಾರಿ ವಿದ್ಯುತ್ ಸರಬರಾಜು ಪೆಟ್ಟಿಗೆಯನ್ನು ಕೂಡ ಬದಲಾವಣೆ ಮಾಡಲಾಗಿದೆ.
ನಗರ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯುತ್ ಸಂಪರ್ಕ ಹಾಗೂ ಸರಬರಾಜು ವ್ಯವಸ್ಥೆ ಸಮರ್ಪಕವಾಗಿ ನಿರ್ವಹಣೆ ಆಗದಿರುವ ಕಾರಣ ಸಾರ್ವಜನಿಕರಿಗೆ ಎದುರಾಗಿರುವ ಅಪಾಯದ ಕುರಿತಂತೆ “ಸುದಿನ’ವು “ವಿದ್ಯುತ್-ಆಪತ್ತು ಇರಲಿ ಎಚ್ಚರ’ ಎಂಬ ಶೀರ್ಷಿಕೆಯಡಿಯಲ್ಲಿ ಅಭಿಯಾನ ಕೈಗೊಂಡಿತ್ತು. ಅಭಿಯಾನದ ಪರಿಣಾಮವಾಗಿ ಮೆಸ್ಕಾಂ, ಮಹಾನಗರ ಪಾಲಿಕೆ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳು ಸಭೆ ನಡೆಸಿ, ನಗರದಲ್ಲಿ ವಿದ್ಯುತ್‌ನಿಂದ ಶಾಕ್ ಹೊಡೆಯಬಹುದಾದ ಅಪಾಯಕಾರಿ ಸ್ಥಳಗಳಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳುವ ಮೂಲಕ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದ್ದರು.
ನಗರ ವ್ಯಾಪ್ತಿಯಲ್ಲಿ ಅಪಾಯ ಸೂಚಿಸುತ್ತಿರುವ ಪ್ಯಾನಲ್ ಬಾಕ್ಸ್‌ಗಳ ನಿರ್ವಹಣೆಯನ್ನು ಈಗಾಗಲೇ ನಿರ್ವಹಿಸಿದ್ದು, ಬಲ್ಮಠ, ಜ್ಯೋತಿ, ಪಿವಿಎಸ್, ಬಲ್ಲಾಳ್‌ಬಾಗ್ ಸಹಿತ ವಿವಿಧ ಕಡೆಗಳಲ್ಲಿ ರಸ್ತೆಗಳ ಡಿವೈಡರ್‌ಗಳಲ್ಲಿ ಅಳವಡಿಸಿದ್ದ ಬೀದಿ ದೀಪಗಳ ಪ್ಯಾನಲ್ ಬೋರ್ಡ್‌ಗಳನ್ನು ಬದಲಾವಣೆ ಮಾಡಲಾಗಿದೆ.
ನಗರದಲ್ಲಿರುವ ಟ್ರಾನ್ಸ್‌ಫಾಮರ್‌ಗಳಲ್ಲಿ ಬಾಯ್ದೆರೆದುಕೊಂಡಿರುವ ಎಲ್‌ಟಿಡಿ ಬಾಕ್ಸ್‌ಗಳನ್ನು ಮೆಸ್ಕಾಂ ಈಗಾಗಲೇ ಗುರುತಿಸಿದ್ದು, ಮಂಗಳೂರು ನಗರ ಮತ್ತು ಉಳ್ಳಾಲ ಪ್ರದೇಶಗಳಲ್ಲಿ ಒಟ್ಟಾರೆ 270 ಹೊಸ ಎಲ್‌ಟಿಡಿ ಬಾಕ್ಸ್‌ಗಳನ್ನು ಅಳವಡಿಸಿದೆ. ನಗರದ ಇನ್ನೂ ಎಲ್ಲೆಲ್ಲಿ ಕೆಟ್ಟು ಹೋಗಿರುವ ಬಾಕ್ಸ್ ಗಳಿವೆ ಸಹಿತ ವಿದ್ಯುತ್ ಶಾಕಿಂಗ್ ಸ್ಪಾಟ್‌ಗಳ ಬಗ್ಗೆ ಇಲಾಖೆ ಮಾಹಿತಿ ಸಂಗ್ರಹಿಸುವ ಕೆಲಸ ಮಾಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BJP ದೂರು ಬೆನ್ನಲ್ಲೇ ಗೆಹ್ಲೋಟ್ ಅಖಾಡಕ್ಕೆ; ಸಿ.ಟಿ.ರವಿಗೆ ರಾಜ್ಯಪಾಲ ಬುಲಾವ್?
Mangaluru; ಶೀಘ್ರವೇ ರಾತ್ರಿಯೂ ಪ್ರವಾಸಿಗರಿಗೆ ಬೀಚ್ಗೆ ಪ್ರವೇಶ
Koteshwara: ಹುತಾತ್ಮ ಯೋಧ ಅನೂಪ್ ಪೂಜಾರಿ ಮನೆಗೆ ಖಾದರ್, ಸೊರಕೆ ಭೇಟಿ
ನಾಡಿದ್ದು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜತೆ ರಾಜಿ ಸಭೆ
ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.