ಜೋಡುಪಾಲ: ರವಿವಾರವೂ ಮುಂದುವರಿದ ಕಾರ್ಯಾಚರಣೆ
Team Udayavani, Aug 20, 2018, 9:27 AM IST
ಸುಳ್ಯ: ಜೋಡುಪಾಲ ದುರಂತ ಸ್ಥಳದಲ್ಲಿ ರವಿವಾರವೂ ಕಾರ್ಯಾಚರಣೆ ನಡೆದು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ನಾಪತ್ತೆ ಆಗಿರುವ ಇಬ್ಬರ ಪತ್ತೆಗೆ ಎನ್‌ಡಿಆರ್‌ಎಫ್ ಶೋಧ ಮುಂದುವರಿಸಿದೆ. ರವಿವಾರ ಬೆಳಗ್ಗೆ ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳ, ಗೃಹರಕ್ಷಕ ಪಡೆ ಹಾಗೂ ಸ್ವಯಂಸೇವಕರು ಕಾರ್ಯಾಚರಣೆ ನಡೆಸಿ ಹಲವರನ್ನು ಸುರಕ್ಷಿತ ಸ್ಥಳಕ್ಕೆ ದಾಟಿಸಿದ್ದಾರೆ. ಇಬ್ಬರು ಮಕ್ಕಳನ್ನು ರಕ್ಷಿಸಿ, ಪಾಕೃತಿಕ ಪರಿಹಾರ ಕೇಂದ್ರಕ್ಕೆ ತರ ಲಾಯಿತು. ಕೆಲವು ಕುಟುಂಬಗಳು ಪರಿಹಾರ ಕೇಂದ್ರಗಳಿಗೆ ಬರಲು ಒಪ್ಪಿಲ್ಲ. ಗಾಳಿಬೀಡು ಮೂಲಕ ಮಡಿಕೇರಿ ಕಡೆಗೆ ತೆರಳಿರುವವರನ್ನು ಅಗತ್ಯ ಬಿದ್ದರೆ ಸ್ಥಳಾಂತರಿಸಲಾಗುವುದು ಎಂದು ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿ ಮಾಹಿತಿ ನೀಡಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ 100ಕ್ಕೂ ಅಧಿಕ ಮನೆಗಳಿಗೆ ಬೀಗ ಹಾಕಿ ಜನರನ್ನು ಸ್ಥಳಾಂತರಿಸಲಾಗಿದೆ.
848 ಮಂದಿ ರಕ್ಷಣೆ
ಒಟ್ಟು 848 ನೋಂದಾಯಿತ ಕುಟುಂಬಗಳ ಪೈಕಿ 384 ಮಂದಿ ಅರಂ ತೋಡು, ಸಂಪಾಜೆ, ಕಲ್ಲುಗುಂಡಿ ಕೇಂದ್ರ ಗಳಲ್ಲಿ ತಂಗಿದ್ದಾರೆ. ಉಳಿದವರು ಸಂಬಂಧಿಕರ ಮನೆ ಗಳಲ್ಲಿದ್ದಾರೆ. ನೆರವು ಸಾಮಗ್ರಿಗಳು ತುಂಬಿದ್ದು, ಆರೋಗ್ಯ ತಪಾಸಣೆ ಪ್ರಗತಿಯಲ್ಲಿದೆ.
ಸ್ಥಳಾಂತರ ಪ್ರಕ್ರಿಯೆ ಮಧ್ಯಾಹ್ನದ ವೇಳೆ ಕೊನೆಗೊಂಡಿತ್ತು. ರಕ್ಷಣಾ ದಳದ ಆಯ್ದ ಸಿಬಂದಿ ಬಸಪ್ಪ ಅವರ ಪತ್ನಿ ಗೌರಮ್ಮ ಮತ್ತು ಸಂಬಂಧಿ ಮಂಜುಳಾ ಅವರಿಗಾಗಿ ಗುಡ್ಡ ಬಿದ್ದ ಸ್ಥಳ ಹಾಗೂ ತೋಡು, ನದಿ ಭಾಗಗಳಲ್ಲಿ ಶೋಧ ನಡೆಯುತ್ತಿದೆ. ನದಿಯ ಸೇತುವೆ, ಕಿಂಡಿ ಅಣೆಕಟ್ಟಿ ನಲ್ಲಿ ಮರಗಳು ಸಿಲುಕಿದ್ದು, ಅವುಗಳ ತೆರವು ಕಾರ್ಯ ಆರಂಭ ವಾಗಿ, ನೀರಿನ ಹರಿವು ಹೆಚ್ಚಿದೆ.
ಮಂಜು ಕವಿದ ವಾತಾವರಣ
ಜೋಡುಪಾಲದಲ್ಲಿ ಮಧ್ಯಾಹ್ನವೇ ಮಂಜು ಕವಿದಿತ್ತು. ಆಗಾಗ ಗಾಳಿ, ಮಳೆಯಾಗಿದೆ. ಹೊಟೇಲ್ ಬಳಿ 100 ಮೀ. ಉದ್ದಕ್ಕೆ ಗುಡ್ಡ ಕುಸಿದಿದೆ. ರಸ್ತೆ ಯುದ್ದಕ್ಕೂ ಗುಡ್ಡ ಕುಸಿಯುತ್ತಿದ್ದು, ತೆರವಿಗೆ ಆರೇಳು ತಿಂಗಳೇ ಬೇಕು.
ಅಲ್ಲಲ್ಲಿ ಬ್ಯಾರಿಕೇಡ್
ಸಂಪಾಜೆ ರಸ್ತೆಯ ಮೂರು ಕಡೆ ಬ್ಯಾರಿಕೇಡ್ ಅಳವಡಿಸಿ ಜನರ ಸಂಚಾರ ನಿಯಂತ್ರಿಸಲಾಯಿತು. ಬೀಗ ಹಾಕಿದ ಮನೆಗಳ ಸ್ಥಿತಿಗತಿ ನೋಡಲು ಹೊರಟವರಿಗೂ ಪ್ರವೇಶ ನೀಡಲಿಲ್ಲ.
ಕಂದಾಯ ಸಚಿವರ ಭೇಟಿ
ಜೋಡುಪಾಲ ದುರಂತ ಸ್ಥಳ ಹಾಗೂ ಅರಂತೋಡು, ಕಲ್ಲುಗುಂಡಿ, ಸಂಪಾಜೆ ಪರಿಹಾರ ಕೇಂದ್ರಗಳಿಗೆ ಕಂದಾಯ ಸಚಿವ ಆರ್.ವಿ. ದೇಶಪಾಂಡೆ, ಸಚಿವ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ’ಸೋಜಾ, ಹರೀಶ್ ಕುಮಾರ್ ಹಾಗೂ ಪರಿಹಾರ ಕೇಂದ್ರಗಳಿಗೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಅಂಗಾರ, ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್, ಎಸ್‌ಪಿ ಡಾ| ರವಿಕಾಂತೇಗೌಡ, ಸಹಾ
ಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿ, ತಹಶೀಲ್ದಾರ್ ಕುಂಞಮ್ಮ, ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕ ಬಿ.ಕೆ. ಕುಸುಮಾಧರ್ ಭೇಟಿ ನೀಡಿ ಪರಿಶೀಲಿಸಿದರು.
ಎರಡು ಕುಟುಂಬ ಸ್ಥಳಾಂತರ
ಮರ್ಕಂಜ ಗ್ರಾಮದ ಉಬ್ರಾಳ ಮಾವಜಿ ಎಂಬಲ್ಲಿ ಗುಡ್ಡ ಕುಸಿತದ ಭೀತಿ ಉಂಟಾಗಿದೆ. ಕೇಶವ ಗೌಡ ಹಾಗೂ ಮೇದಪ್ಪ ಮನೆಯವರು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.