ದುಂದು ವೆಚ್ಚ ನಿಯಂತ್ರಣಕ್ಕೆ ಶೇಷನಾಸ್ತ್ರ !
Team Udayavani, Mar 10, 2018, 1:02 PM IST
ಮಂಗಳೂರು: ಭಾರತದಲ್ಲಿ ಮಹಾಚುನಾವಣೆಗಳೆಂದರೆ ಅಬ್ಬರದ ಪ್ರಚಾರದ ಪರಾಕಾಷ್ಠೆ ಎಂಬ ಹೋಲಿಕೆ ಇತ್ತು. 1951-52ರ ಪ್ರಪ್ರಥಮ ಲೋಕಸಭೆ- ವಿಧಾನಸಭಾ ಚುನಾವಣೆಯಿಂದಲೇ ಇದರ ಆರಂಭ. ಸ್ವತಂತ್ರ ಭಾರತದ ಮೊದಲ ಚುನಾವಣೆ ಸಂದರ್ಭ ಪ್ರಚಾರಕ್ಕೆ ಆಡಳಿತ ಯಂತ್ರವೇ ಮಹತ್ವ ನೀಡಿತ್ತು.
ಮುಂದಿನ ಚುನಾವಣೆಗಳಲ್ಲಿ ಪ್ರಚಾರ ಕಾರ್ಯ ಅಬ್ಬರವನ್ನು ಪಡೆಯಿತು. ಲೋಕಸಭೆ- ವಿಧಾನಸಭೆಗಳಲ್ಲಂತೂ ‘ಮಿತಿಮೀರಿದ’ ಖರ್ಚು ಚುನಾವಣೆಯ ಸ್ವರೂಪದ ಮೇಲೆಯೇ ಬಗೆಬಗೆಯ ವಿಶೇಷವಾಗಿ ಅನಪೇಕ್ಷಣೀಯ ಪ್ರಭಾವಗಳನ್ನು ಬೀರಲು ಆರಂಭಿಸಿತು. ಅಭ್ಯರ್ಥಿಗಳಿಗೆ ಆಯಾ ಪಕ್ಷಗಳು ನೀಡುವ ಚುನಾವಣಾ ವೆಚ್ಚದ ಮೊತ್ತವನ್ನು ಮೀರಿ; ಆ ಅಭ್ಯರ್ಥಿಗಳು ವೈಯಕ್ತಿಕವಾಗಿ ಮೊತ್ತವನ್ನು ಸಂಚಯಿಸುವ ಪ್ರವೃತ್ತಿ ಉಂಟಾಯಿತು.
ಚುನಾವಣಾ ವೆಚ್ಚ ಭರಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅನೇಕ ಪ್ರಾಮಾಣಿಕ ಅಭ್ಯರ್ಥಿಗಳು ಟಿಕೆಟ್ ನಿರಾಕರಿಸಿದ ಪ್ರಸಂಗಗಳೂ ಸಂಭವಿಸಿದವು. ಪ್ರಚಾರ ಭಾಷಣಗಳು ನಡುರಾತ್ರಿ ಕಳೆದು ಮುಂಜಾನೆ ತನಕ ಸಾಗಿದ ಪ್ರಸಂಗಗಳೂ ಸಂಭವಿಸಿದವು. ಮೈಕ್ ಹಾವಳಿ ಬೇರೆ! ರಸ್ತೆಗಳಲ್ಲೂ ಬರೆಹಗಳು ರಾರಾಜಿಸಿದವು. ಈ ದುಂದುವೆಚ್ಚಕ್ಕೆ ಕಡಿವಾಣ ಹಾಕಿದವರು ಪ್ರಧಾನ ಚುನಾವಣಾ ಆಯುಕ್ತರಾಗಿದ್ದ ಟಿ.ಎನ್. ಶೇಷನ್. ಚುನಾವಣಾ ಪ್ರಕ್ರಿಯೆಗಳ ಕಾನೂನುಗಳನ್ನು ಅವರು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿದರು. ಚೆನ್ನೈ ಮೂಲದ ಟಿ.ಎನ್. ಶೇಷನ್ ಅವರು ಐಎಎಸ್ ಅಧಿಕಾರಿ ಆಗಿದ್ದವರು. 1990-96ರ ಅವಧಿಯಲ್ಲಿ ಭಾರತದ ಚೀಫ್ ಎಲೆಕ್ಷನ್ ಕಮಿಷನರ್ ಆಗಿ ಅವರು ಕ್ರಾಂತಿಕಾರಕ ಸ್ವರೂಪದಲ್ಲಿ ಚುನಾವಣಾ ನೀತಿ ನಿಯಮಗಳನ್ನು ಅನುಷ್ಠಾನಿಸಿದರು. ಅಭ್ಯರ್ಥಿಗಳು ನಿಗದಿತ ಮೊತ್ತವನ್ನಷ್ಟೇ ವ್ಯಯಿಸಬೇಕು; ಪ್ರತೀ ವೆಚ್ಚದ ಬಗ್ಗೆ ಆಯೋಗಕ್ಕೆ ಲೆಕ್ಕ ನೀಡಬೇಕು. ಮೀರಿದಲ್ಲಿ ಅಥವಾ ತಪ್ಪಿದಲ್ಲಿ ಅನರ್ಹತೆಯ ಶಿಕ್ಷೆ ಅನಿವಾರ್ಯವಾಗಿತ್ತು.
ಅಂದಿನಿಂದ ಇಂದಿನವರೆಗೂ ಈ ನಿಯಮಾವಳಿ ವಸ್ತುಶಃ ಪಾಲನೆಯಾಗುತ್ತಿದೆ. ಚುನಾವಣಾ ಪ್ರಕ್ರಿಯೆ ನ್ಯಾಯಸಮ್ಮತವಾಗಿ ನಡೆಯುತ್ತಿದೆ ಎಂಬುದನ್ನು ಅಂತಾರಾಷ್ಟ್ರೀಯ ವೀಕ್ಷಕರು ಕೂಡ ಶ್ಲಾಘಿಸುತ್ತಿದ್ದಾರೆ. ಸಂವಿಧಾನದತ್ತ ಕಾನೂನನ್ನು ಪರಿಪೂರ್ಣವಾಗಿ ಅನುಷ್ಠಾನಿಸುವ ಅಧಿಕಾರಿಯ ಬದ್ಧತೆ ಮತ್ತು ಇಚ್ಛಾಶಕ್ತಿಯಿಂದ ನ್ಯಾಯ ಒದಗಣೆ ಸಾಧ್ಯ ಎಂಬ ಮಾತಿಗೆ ಪರಿಪೂರ್ಣ ನಿದರ್ಶನ ಟಿ.ಎನ್. ಶೇಷನ್.
ಲೆಕ್ಕ ಕೊಡಬೇಕು!
ನಿರ್ದಿಷ್ಟ ಅಭ್ಯರ್ಥಿಯೋರ್ವರನ್ನು ಕಾರ್ಯಕರ್ತರು ‘ಜಿಪುಣ’ ಎಂದೇ ಹಿಂದಿನಿಂದ ಉಲ್ಲೇಖೀಸುತ್ತಿದ್ದರು. ಒಂದು ಚುನಾವಣೆಯ ಸಂದರ್ಭದಲ್ಲಿ ಆ ಅಭ್ಯರ್ಥಿಯು ಕಾರ್ಯಕರ್ತರಿಗೆ ಕುಡಿಯಲು ಫ್ರಿಜ್ ನೀರಿನ ಬದಲು ಬಾವಿಯ ನೀರನ್ನೇ ಒದಗಿಸಿದರು. ತಂಪು ನೀರು ಕೇಳಿದ ಕಾರ್ಯಕರ್ತರಿಗೆ ‘ಇಲ್ಲ, ತಂಪು ನೀರು ಕೊಟ್ಟರೆ ಚುನಾವಣಾ ಆಯೋಗಕ್ಕೆ ಲೆಕ್ಕ ಕೊಡಬೇಕಲ್ಲ’ ಅನ್ನುತ್ತಿದ್ದರು!
ಮನೋಹರ ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.