ಜನರ ನಡುವೆ ಇದ್ದರೆ ಗೌರವ; ಹುದ್ದೆ , ಪೋಷಾಕಿನಿಂದಲ್ಲ


Team Udayavani, Sep 17, 2018, 11:14 AM IST

poshak.png

ಮಂಗಳೂರು: ಮಂಗಳೂರು ಧರ್ಮ ಪ್ರಾಂತದ ನೂತನ ಬಿಷಪ್‌ ರೆ| ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ ಅವರು ತಮ್ಮ ಅಧಿಕೃತ ಧರ್ಮ ಕ್ಷೇತ್ರ ರೊಜಾರಿಯೊ ಕೆಥೆಡ್ರಲ್‌ನಲ್ಲಿ ಮೊದಲ ಬಲಿ ಪೂಜೆಯನ್ನು ರವಿವಾರ ಸಮರ್ಪಿಸಿದರು. ಬಳಿಕ ಜರಗಿದ ಸಮ್ಮಾನ ಸಮಾರಂಭದಲ್ಲಿ ಸಮ್ಮಾನಕ್ಕೆ ಉತ್ತರಿಸಿದ ನೂತನ ಬಿಷಪ್‌, ಗೌರವ ಬರುವುದು ಹುದ್ದೆಯಿಂದಲ್ಲ; ಜನರ ಮಧ್ಯೆ ಕೆಲಸ ಮಾಡುವುದರಿಂದ ಎಂದರು.

ಕೆಥೆಡ್ರಲ್‌ನ ರೆಕ್ಟರ್‌ ಫಾ| ಜೆ.ಬಿ. ಕ್ರಾಸ್ತಾ, ಭಾರತದ ಪೋಪ್‌ ಪ್ರತಿನಿಧಿಯ ಕೌನ್ಸಿಲರ್‌ ಮೊ| ಕ್ಸೇವಿಯರ್‌ ಡಿ. ಫೆರ್ನಾಂಡಿಸ್‌, ಧರ್ಮ ಪ್ರಾಂತದ ನಿವೃತ್ತ ವಿಕಾರ್‌ ಜನರಲ್‌ ಮೊ| ಡೆನಿಸ್‌ ಮೊರಾಸ್‌ ಪ್ರಭು, ಸೈಂಟ್‌ ಅಲೋಶಿಯಸ್‌ ಶಿಕ್ಷಣ ಸಂಸ್ಥೆಗಳ ರೆಕ್ಟರ್‌ ಫಾ| ಡಯನೇಶಿಯಸ್‌ ವಾಸ್‌, ಧರ್ಮ ಪ್ರಾಂತದ ಪಿಆರ್‌ಒ ಫಾ| ವಿಜಯ್‌ ವಿಕ್ಟರ್‌ ಲೋಬೊ, ಕೆಥೆಡ್ರಲ್‌ನ ಗುರುಗಳಾದ ಫಾ| ರೋಕಿ ಫೆರ್ನಾಂಡಿಸ್‌, ಫಾ| ವಿಕ್ಟರ್‌ ಡಿ’ಸೋಜಾ, ಫಾ| ಫ್ಲೆàವಿಯನ್‌ ಲೋಬೊ, ಗ್ಲಾ  éಡ್‌ಸಮ್‌ ಹೋಮ್‌ ರೆಕ್ಟರ್‌ ಫಾ| ಅನಿಲ್‌ ಫೆರ್ನಾಂಡಿಸ್‌ ಬಲಿಪೂಜೆಯಲ್ಲಿ ಸಹಭಾಗಿಗಳಾದರು.

ನಾನು ಜನರ ಜತೆಗೆ ನಡೆದಾಗ ಮಾತ್ರ ನನ್ನ ಪೋಷಾಕು, ದಂಡ ಮತ್ತು ಕಿರೀಟಗಳಿಗೆ ಗೌರವ ಲಭಿಸುತ್ತದೆ. ನಾನೊಬ್ಬನೇ ಹೋದರೆ ಇದು ಯಾವುದೋ ವೇಷ ಎಂದು ಜನರು ಪರಿಗಣಿಸುತ್ತಾರೆ. ಗೌರವ ವಿರುವುದು ನಾನು ಧರಿಸಿದ ಬಟ್ಟೆ, ದಂಡ ಅಥವಾ ಕಿರೀಟಕ್ಕಲ್ಲ; ಜನರ ಜತೆ ಬೆರೆತು ಜೀವಿಸಿದಾಗ ಮಾತ್ರ. ಶನಿವಾರ ಮುಖಂಡರು ಮತ್ತು ಸಹಸ್ರಾರು ಜನ ನನ್ನ ದೀಕ್ಷಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಒಗ್ಗಟ್ಟಿನ ಸಂಕೇತ. ಈ ಏಕತೆ ಇನ್ನಷ್ಟು ಹೆಚ್ಚಳವಾಗಬೇಕು ಎಂದು ಆಶಿಸಿದರು. 

ಫಾ| ಜೆ.ಬಿ. ಕ್ರಾಸ್ತಾ ಅವರು ಬಿಷಪ್‌ ಅವರನ್ನು ಸ್ವಾಗತಿಸಿ ಅಭಿನಂದಿಸಿ, ಶಾಲು ಹೊದೆಸಿ, ತಲೆಗೆ ಪೇಟವನ್ನಿರಿಸಿ, ಹೂಗುತ್ಛ ನೀಡಿ ಸಮ್ಮಾನಿಸಿದರು. ಪಾಲನ ಪರಿಷತ್‌ ಕಾರ್ಯದರ್ಶಿ ಎಂ.ಪಿ. ನೊರೋನ್ಹಾ ಅವರು ಬಿಷಪರನ್ನು ಅಭಿನಂದಿಸಿದರು.

ಮೊ| ಕ್ಸೇವಿಯರ್‌ ಡಿ. ಫೆರ್ನಾಂಡಿಸ್‌ ಅವರು ನೂತನ ಬಿಷಪರಿಗೆ ಪೋಪ್‌ ಪ್ರತಿನಿಧಿಯ ಆಶೀರ್ವಾದಗಳನ್ನು ಸಲ್ಲಿಸಿದರು. ಮೊ| ಡೆನಿಸ್‌ ಮೊರಾಸ್‌ ಪ್ರಭು ಉಪಸ್ಥಿತರಿದ್ದರು. ಕೆಥೆಡ್ರಲ್‌ನ ಉಪಾಧ್ಯಕ್ಷ ಸಿ.ಜೆ. ಸೈಮನ್‌ ವಂದಿಸಿದರು. ಕಾರ್ಯದರ್ಶಿ ಎಲಿಜಬೆತ್‌ ರೋಚ್‌ ಕಾರ್ಯಕ್ರಮ ನಿರೂಪಿಸಿದರು.

ಜತೆಗೂಡಿ ಉತ್ತಮ ಸಮಾಜ ನಿರ್ಮಾಣ
ಈ ಧರ್ಮಪ್ರಾಂತದ ಶಾಶ್ವತ ಮುಖಂಡರು ಏಸು ಕ್ರಿಸ್ತರು. ನಾನು ಕೆಲವು ಸಮಯಕ್ಕೆ ಅದೃಶ್ಯ ದೇವರನ್ನು ಸಾಕಾರರನ್ನಾಗಿ ತೋರಿಸಿ ಕೊಡುವ ಜವಾಬ್ದಾರಿಯನ್ನು ಹೊಂದಿದ್ದೇನೆ. ನಾವೆಲ್ಲರೂ ಜತೆಗೂಡಿ ಉತ್ತಮ ಸಮಾಜ ನಿರ್ಮಾಣ ಮಾಡೋಣ ಎಂದು ನೂತನ ಬಿಷಪ್‌ ಕರೆ ನೀಡಿದರು.

ಟಾಪ್ ನ್ಯೂಸ್

Odisha: ಸಗಣಿ ರಾಶಿಯಲ್ಲಿ ಸಿಕ್ಕಿತು 20 ಲಕ್ಷ ರೂ. ಮೊತ್ತ!

Lashkar-e-Taiba; ಹೆಸರಲ್ಲಿ ಹಾಡು ಹಾಡಿ ಆರ್‌ಬಿಐ ಕಚೇರಿಗೆ ಬೆದರಿಕೆ!

Lashkar-e-Taiba; ಹೆಸರಲ್ಲಿ ಹಾಡು ಹಾಡಿ ಆರ್‌ಬಿಐ ಕಚೇರಿಗೆ ಬೆದರಿಕೆ!

CM-ibrahim

HDK ವಿರುದ್ಧ ಜಮೀರ್‌ ಹೇಳಿಕೆ ತಪ್ಪು: ಸಿ.ಎಂ. ಇಬ್ರಾಹಿಂ

Sidda Speach

B.Z. Zameer Ahmed Khan ‘ಕರಿಯ’ ಎನ್ನಬಾರದಿತ್ತು: ಸಿಎಂ ಸಿದ್ದರಾಮಯ್ಯ

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

rai

BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

byndoor

Kinnigoli: ದ್ವಿಚಕ್ರ ವಾಹನಗಳ ಢಿಕ್ಕಿ; ಸವಾರ ಮೃತ್ಯು

3

Mangaluru: ಅನಧಿಕೃತ ಫ್ಲೆಕ್ಸ್‌ , ಬ್ಯಾನರ್‌ ತೆರವು ಆರಂಭ

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

Ullala: ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

1-maralu

Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Odisha: ಸಗಣಿ ರಾಶಿಯಲ್ಲಿ ಸಿಕ್ಕಿತು 20 ಲಕ್ಷ ರೂ. ಮೊತ್ತ!

accident

Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು

Lashkar-e-Taiba; ಹೆಸರಲ್ಲಿ ಹಾಡು ಹಾಡಿ ಆರ್‌ಬಿಐ ಕಚೇರಿಗೆ ಬೆದರಿಕೆ!

Lashkar-e-Taiba; ಹೆಸರಲ್ಲಿ ಹಾಡು ಹಾಡಿ ಆರ್‌ಬಿಐ ಕಚೇರಿಗೆ ಬೆದರಿಕೆ!

CM-ibrahim

HDK ವಿರುದ್ಧ ಜಮೀರ್‌ ಹೇಳಿಕೆ ತಪ್ಪು: ಸಿ.ಎಂ. ಇಬ್ರಾಹಿಂ

Sidda Speach

B.Z. Zameer Ahmed Khan ‘ಕರಿಯ’ ಎನ್ನಬಾರದಿತ್ತು: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.