ಕೆಯ್ಯೂರಿನ ಕುಟುಂಬಕ್ಕೆ ಧನ ಸಹಾಯ, ವಿದ್ಯಾಭ್ಯಾಸಕ್ಕೆ ನೆರವು
Team Udayavani, Dec 20, 2018, 11:09 AM IST
ಕೆಯ್ಯೂರು: ಕೆಯ್ಯೂರು ಗ್ರಾಮದ ದಲಿತ ಕುಟುಂಬವೊಂದರ ಹೆಣ್ಣು ಮಕ್ಕಳು ಅನುಭವಿಸುತ್ತಿದ್ದ ಸಂಕಷ್ಟದ ಜೀವನದ ಕುರಿತು ಬುಧವಾರ ‘ಉದಯವಾಣಿ’ ಸುದಿನದಲ್ಲಿ ‘ಹೆತ್ತವರಿಲ್ಲದ ನಾಲ್ವರು ಹೆಣ್ಣು ಮಕ್ಕಳಿಗೆ ಸೂರೂ ಇಲ್ಲ’ ಎನ್ನುವ ತಲೆಬರಹದಡಿಯಲ್ಲಿ ಪ್ರಕಟಗೊಂಡ ವರದಿಗೆ ಸ್ಪಂದನೆ ದೊರೆತಿದ್ದು, ಆ ಕುಟುಂಬಕ್ಕೆ ಧನ ಸಹಾಯ, ವಿದ್ಯಾಭ್ಯಾಸಕ್ಕೆ ನೆರವು ನೀಡಲು ದಾನಿಗಳು ಮುಂದೆ ಬಂದಿದ್ದಾರೆ.
10 ಸಾವಿರ ರೂ. ನೆರವು
ಹೆಸರು ತಿಳಿಸಲು ಇಚ್ಛಿಸದ ದಾನಿಯೊಬ್ಬರು ಪರಿಚಿತರ ಮೂಲಕ ಈ ಬಡ ಕುಟುಂಬಕ್ಕೆ 10 ಸಾವಿರ ರೂ. ಧನಸಹಾಯ ನೀಡಿದ್ದಾರೆ. ಜತೆಗೆ ಮನೆ ನಿರ್ಮಾಣಕ್ಕೆ ತನ್ನಿಂದಾದ ಸಹಕಾರವನ್ನೂ ನೀಡುವುದಾಗಿಯೂ ಅವರು ಭರವಸೆ ಇತ್ತಿದ್ದಾರೆ. 10 ಸಾವಿರ ರೂ. ನಗದನ್ನು ನಾಲ್ವರು ಹೆಣ್ಣುಮಕ್ಕಳ ಅಜ್ಜಿ ಭಾಗೀರಥಿ ಅವರಿಗೆ ಹಸ್ತಾಂತರಿ ಸಲಾಯಿತು. ಪದವಿ ವ್ಯಾಸಂಗ ಮಾಡುತ್ತಿರುವ ನೇತ್ರಾ ಅವರ ಒಂದು ವರ್ಷದ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸುವುದಾಗಿ ಬೆಂಗಳೂರಿನ ವಿದ್ಯಾಮಾತಾ ಫೌಂಡೇಶನ್ ಅಧ್ಯಕ್ಷ ಭಾಗೇಶ್ ರೈ ತಿಳಿಸಿದ್ದಾರೆ. ವರದಿ ಗಮನಿಸಿದ ಅವರು, ವಾರದೊಳಗೆ ಅವರ ಮನೆಗೆ ಭೇಟಿ ನೀಡಿ ಅವರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ‘ಉದಯವಾಣಿ’ ಪ್ರತಿನಿಧಿಗೆ ತಿಳಿಸಿದ್ದಾರೆ.
ಪಿಂಚಣಿ ಬಂದರೆ ಊಟ
ಧನಸಹಾಯ ಸ್ವೀಕರಿಸಿದ ಬಳಿಕ ಭಾಗೀರಥಿ ಅವರು ಮಾತನಾಡಿ, ತನಗೆ ಪಿಂಚಣಿ ರೂಪದಲ್ಲಿ ತಿಂಗಳಿಗೆ 600 ರೂ. ಬರುತ್ತದೆ (ಈಗ ಅದು 1,000 ರೂ.ಗೆ ಹೆಚ್ಚಳವಾಗಿದೆ. ಅದಿನ್ನೂ ಕೈಸೇರಿಲ್ಲ). ಆ ಸಂದರ್ಭದಲ್ಲಿ ಅಂಗಡಿಯಿಂದ ಅಕ್ಕಿ ತಂದು ಮನೆಯಲ್ಲಿರುವ ನಾವು ಹೊಟ್ಟೆ ತುಂಬಾ ಊಟ ಮಾಡುತ್ತೇವೆ. ಉಳಿದ ದಿನ ಪಡಿತರ ಅಂಗಡಿಯ ಬಿಳಿ ಅಕ್ಕಿಯ ಊಟವನ್ನೇ ಮಾಡುತ್ತೇವೆ. ಈ ಧನ ಸಹಾಯದಿಂದ ಒಪ್ಪೊತ್ತಿನ ಊಟಕ್ಕೆ ಸಹಾಯ ಆಯಿತು ಎಂದವರು ಆನಂದ ಬಾಷ್ಪದೊಂದಿಗೆ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.