ಹಕ್ಕುಪತ್ರ ಸಮಸ್ಯೆ :ಪ್ರಧಾನಿ ರಾಷ್ಟ್ರಪತಿಯವರಿಂದ ಪತ್ರಕ್ಕೆ ಸ್ಪಂದನೆ


Team Udayavani, Mar 14, 2017, 5:13 PM IST

spandane.jpg

ಸುಳ್ಯ: ಇಲ್ಲಿಯ ಜಯನಗರದ ಮಿಲಿಟ್ರಿ ಗ್ರೌಂಡ್‌ನ‌ಲ್ಲಿ ಸುಮಾರು 250 ಕುಟುಂಬಗಳು ವಾಸಿಸುತ್ತಿದ್ದು, ಅವರಿಗೆ ಇನ್ನೂ ಮನೆಗಳ ಸ್ಥಳದ ಹಕ್ಕುಪತ್ರ ದೊರೆತಿಲ್ಲ. ಈ ಜಾಗ ಮಿಲಿಟ್ರಿ ಗ್ರೌಂಡ್‌ ಎಂಬ ಕಾರಣಕ್ಕಾಗಿ ಹಕ್ಕುಪತ್ರ ನೀಡಿಲ್ಲ. ಈ ಸಮಸ್ಯೆಯನ್ನು ನಿವಾರಿಸಬೇಕೆಂದು ಸ್ಥಳೀಯರೊಬ್ಬರು ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿಗೆ ಪತ್ರ ಬರೆದಿದ್ದು, ಅದಕ್ಕೆ ಸ್ಪಂದನ ದೊರೆತಿದೆ.

ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿ ಅವರು ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಕ್ತ ವರದಿ ಕೋರಿದ್ದಾರೆ. ಅದರಂತೆ ಮುಖ್ಯ ಕಾರ್ಯದರ್ಶಿ ಅವರು ಜಿಲ್ಲಾಧಿಕಾರಿಗಳು, ಸಹಾಯಕ ಕಮೀಷನರ್‌ ಅವರ ಮುಖಾಂತರ ತಹಶೀಲ್ದಾರ್‌ ಅವರಿಗೆ ವರದಿ ಸಲ್ಲಿಸಲು ಸೂಚಿಸಿದ್ದಾರೆ. ತಾಲೂಕು ಕಂದಾಯ ಇಲಾಖೆಯ ಸ್ವಾಧೀನದಲ್ಲಿರುವ ಮನೆ ನಿವೇಶನದ ವಿಸ್ತೀರ್ಣ ಸರ್ವೆ ಕಾರ್ಯ ಪೂರ್ಣಗೊಂಡಿದೆ.

ನಿರಂತರ ಪ್ರಯತ್ನ
ಜಯನಗರದಲ್ಲಿ ಮನೆಕಟ್ಟಿ ವಾಸಿಸುತ್ತಿರುವ ಸುಮಾರು 250 ಕುಟುಂಬಗಳ ಮನೆಗಳ ನಿವೇಶನ ಸ್ಥಳ ತಮ್ಮ ಹೆಸರಿಗೆ ಮಂಜೂರಾಗಬೇಕೆಂದು  ಹಲವು ವರ್ಷಗಳಿಂದ ನಿವಾಸಿಗಳು ಪ್ರಯತ್ನ ನಿರತರಾಗಿದ್ದರು. ಇವರೆಲ್ಲಾ ಸುಮಾರು 40-50 ವರ್ಷಗಳಿಂದ ನೆಲೆಸಿದ್ದಾರೆ. ಕೆಲವರು ಬೇರೆಯವರಿಂದ ಜಾಗ ಖರೀದಿಸಿದವರೂ ಇದ್ದಾರೆ. ಎಲ್ಲರಿಗೂ ಮಿಲಿಟರಿ ಗ್ರೌಂಡ್‌ ಎಂಬುದೆ ತೊಡಕಾಗಿದೆ. ಆದ ಕಾರಣ ಇವರ್ಯಾರಿಗೂ ಮನೆ ನಿವೇಶನದ ಹಕ್ಕುಪತ್ರ ದೊರೆತಿಲ್ಲ.

ದಾಖಲೆ ಹೀಗಿದೆ
1939ರಲ್ಲಿ ಬ್ರಿಟಿಷರ ಕಾಲದಲ್ಲಿ ಜಯನಗರದಲ್ಲಿ 76 ಎಕ್ರೆ ಸ್ಥಳವನ್ನು ಮಿಲಿಟರಿ ಉದ್ದೇಶಕ್ಕಾಗಿ ಮೀಸಲಿರಿಸಿದ್ದು, ಆದರೆ ಆ ಜಾಗದಲ್ಲಿ ಸ್ವಾತಂತ್ರÂ ಪೂರ್ವದಲ್ಲಾಗಲಿ, ಸ್ವಾತಂತ್ರÂ ಅನಂತರದಲ್ಲಾಗಲಿ ಯಾವುದೇ ಮಿಲಿಟ್ರಿ ಚಟುವಟಿಕೆ ನಡೆದಿರಲಿಲ್ಲ.  ಅಲ್ಲದೆ ಮಿಲಿಟರಿಗೆ ಸಂಬಂಧಿಸಿದ ಯಾವುದೇ ಕುರುಹುಗಳು ಇರಲಿಲ್ಲ.  ಕಂದಾಯ ಇಲಾಖೆಯ ದಾಖಲೆಯಲ್ಲಿ ಮಿಲಿಟರಿ ಗ್ರೌಂಡ್‌ ಎಂದು ಕೈಬರಹದ ಉಲ್ಲೇಖ ಒಂದು ಕಡೆ ಇರುವುದು ಹೊರತುಪಡಿಸಿದರೆ ರಕ್ಷಣಾ ಇಲಾಖೆ ಕಡತದಲ್ಲಿ ಈ ಜಾಗದ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಎಂಬ ಅಂಶ ಗೋಚರಿಸಿದೆ.

ಈಗ ಪಹಣಿಯಲ್ಲಿ ದಾಖಲಾತಿ 38.61 ಎಕ್ರೆ ಎಂದಿದೆ. 1939ರಲ್ಲಿ 76 ಎಕ್ರೆ ಮಿಲಿಟರಿ ಗ್ರೌಂಡ್‌ ಮೀಸಲಿರಿಸಿದೆ ಎಂದು ದಾಖಲೆಗಳಿದ್ದರೂ 1994-95ರಲ್ಲಿ ನಡೆಸಿದ ಸರ್ವೆ ಪ್ರಕಾರ 43 ಎಕ್ರೆ ಜಾಗವಿರುವುದಾಗಿ ದಾಖಲೆಗಳು ಹೇಳುತ್ತವೆ. ಅದರಲ್ಲಿ ಕಟ್ಟಡ ದಾರಿ ರಸ್ತೆ 16 ಎಕ್ರೆ. ಮನೆ ನಿವೇಶನ 11 ಎಕ್ರೆ, ಹೌಸಿಂಗ್‌ ಕಾರ್ಪೋರೇಶನ್‌ 2 ಎಕ್ರೆ, ಬಂಜರು ಬೆಟ್ಟ ಪ್ರದೇಶ 5.60 ಎಕ್ರೆ ಇದೆ. ಆದರೆ ಇತ್ತೀಚೆಗೆ ಮಾಡಿದ ಸರ್ವೆ ಪ್ರಕಾರ ಒಟ್ಟು 38.61 ಎಕ್ರೆ ಸ್ಥಳ ಕಂಡು ಬಂದಿದ್ದು, ಈ ಸ್ಥಳದಲ್ಲಿ 250ಕ್ಕೂ ಹೆಚ್ಚು ಮನೆಗಳಿವೆ. ಹಕ್ಕುಪತ್ರಕ್ಕಾಗಿ ಪ್ರಯತ್ನ ಇಲ್ಲಿಯ ನಿವಾಸಿಗಳಿಗೆ ಕಂದಾಯ ಇಲಾಖೆಯಿಂದ ಹಕ್ಕುಪತ್ರ ದೊರೆತಿಲ್ಲ ಎಂಬುದನ್ನು ಬಿಟ್ಟರೆ ನ.ಪಂ.ನಿಂದ ಕಟ್ಟಡ ನಂಬ್ರ ಇದೆ. ಮನೆ ತೆರಿಗೆ ಸ್ವೀಕರಿಸಲಾಗುತ್ತಿದೆ.

ವಿದ್ಯುತ್‌, ನೀರಿನ ಸಂಪರ್ಕ, ರೇಶನ್‌ ಕಾರ್ಡು ಎಲ್ಲ ಇದೆ. ಆದ್ದರಿಂದ ಹಕ್ಕುಪತ್ರಕ್ಕಾಗಿ ನಿವಾಸಿಗಳು ಹೋರಾಟ ನಡೆಸುತ್ತಿದ್ದಾರೆ. 

ಹಕ್ಕುಪತ್ರ ಇಲ್ಲದ ಕಾರಣ, ಇವರೆಲ್ಲರೂ ಸರಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇದೀಗ ಹಕ್ಕೊತ್ತಾಯ ಸಮಿತಿ ರಚಿಸಿಕೊಂಡಿದ್ದು, ಅದರ ಮೂಲಕ ಹೋರಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಜಯನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಿ. ಜಗನ್ನಾಥ ಅವರು, ರಾಷ್ಟÅಪತಿ ಪ್ರಣವ್‌ಮುಖರ್ಜಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. 

ಈ ಬಗ್ಗೆ ಶಾಸಕರು, ಸಂಸದರು ಹಲವು ಬಾರಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸಲು ಸೂಚಿಸಿದ್ದಾರೆ. ತಹಶೀಲ್ದಾರ್‌ ಅವರು ಪರಿಶೀಲನೆ ನಡೆಸಿದ್ದು, ಕೊನೆ ವರದಿ ಸಲ್ಲಿಸಲು ಬಾಕಿ ಇದೆ. ಇತ್ತೀಚೆಗೆ ಜಿಲ್ಲಾಧಿಕಾರಿ ಅವರು ಸುಳ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಸಮಸ್ಯೆ ಬಗೆಹರಿಸಲು ಶಾಸಕರು ಮತ್ತು ಜಿ.ಜಗನ್ನಾಥ ಅವರೊಳಗೆ ಸಮಾಲೋಚನೆ ನಡೆಸಿದ್ದರು. 

ಈ ಪ್ರದೇಶದಲ್ಲಿರುವವರಿಗೆ  ಜಿಲ್ಲಾಧಿಕಾರಿ ಅವರು 94 ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಲು ಸೂಚಿಸಿದ್ದಾರೆ.  ಕಂದಾಯ ಇಲಾಖೆಯಲ್ಲಿ ರುವ ಸಮಸ್ಯೆಯನ್ನು  ಇತ್ಯರ್ಥಪಡಿಸುವುದಾಗಿ ಶಾಸಕರು ಭರವಸೆ ನೀಡಿದ್ದರು. 

ಟಾಪ್ ನ್ಯೂಸ್

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

vidhana-Soudha

Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ

Koppala–women

Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Uppinangady: ತ್ಯಾಜ್ಯ ಸರಿಯಾಗಿ ವಿಂಗಡಿಸಿ ಕೊಡದಿದ್ದರೆ ಕ್ರಮಕ್ಕೆ ಸದಸ್ಯರ ಸಲಹೆ

Bantwal: ಪ್ರವಾಸಕ್ಕೆ ತೆರಳಿದ್ದ ಬಸ್ ಅಪಘಾತ; ಗಾಯಗೊಂಡಿದ್ದ ಮಹಿಳೆ ಮೃ*ತ್ಯು

Bantwal: ಪ್ರವಾಸಕ್ಕೆ ತೆರಳಿದ್ದ ಬಸ್ ಅಪಘಾತ; ಗಾಯಗೊಂಡಿದ್ದ ಮಹಿಳೆ ಮೃ*ತ್ಯು

1

Bantwal: ಅಭಿವೃದ್ಧಿ ಕಾರ್ಯಕ್ಕಿಂತಲೂ ಸಮಸ್ಯೆಗಳ ಸರಮಾಲೆ ಪ್ರಸ್ತಾವಿಸಿದ ಸಾರ್ವಜನಿಕರು

1-ptt

Puttur: ಮುಖ್ಯ ರಸ್ತೆಯ ಚರಂಡಿ ಮೇಲಿನ ಪೈಪ್‌ನಲ್ಲಿ ಸಿಲುಕಿದ ಮಹಿಳೆ!

saavu

Puttur: ಎಸೆಸೆಲ್ಸಿ ವಿದ್ಯಾರ್ಥಿನಿ ಆತ್ಮಹ*ತ್ಯೆ ಯತ್ನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.