Bantwala; ಯಶಸ್ವಿಯಾಗಿ ನಡೆದ ವೀರ-ವಿಕ್ರಮ ಜೋಡಿ ಕಂಬಳ; ಇಲ್ಲಿದೆ 2 ಕಂಬಳಗಳ ಫಲಿತಾಂಶ
Team Udayavani, Mar 17, 2024, 1:03 PM IST
ಸಂಗ್ರಹ ಚಿತ್ರ ಬಳಸಲಾಗಿದೆ
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಹೋಕ್ಕಾಡಿಗೋಳಿಯಲ್ಲಿ ನಡೆದ ಎರಡು ಕಂಬಳಗಳು ಸಂಪನ್ನವಾಗಿದೆ. ಇದೇ ಮೊದಲ ಬಾರಿಗೆ ಒಂದೇ ಊರಿನಲ್ಲಿ ಏಕಕಾಲಕ್ಕೆ ಎರಡು ಕಂಬಳಗಳು ನಡೆದಿದೆ.
ಹಿಂದೆ ಒಂದು ಕಂಬಳ ನಡೆಯುತ್ತಿದ್ದ ಹೊಕ್ಕಾಡಿಗೋಳಿಯಲ್ಲೇ ಶ್ರೀ ಮಹಿಷಮರ್ದಿನಿ ಕಂಬಳ ಸಮಿತಿಯ ವತಿಯಿಂದ ರಶ್ಮಿತ್ ಶೆಟ್ಟಿ ಕೈತ್ರೋಡಿ ಅಧ್ಯಕ್ಷತೆಯಲ್ಲಿ ಒಂದು ಕಂಬಳ ನಡೆದರೆ, ಮತ್ತೊಂದು ಕಂಬಳ ಅಲ್ಲೇ ಪಕ್ಕದ ಕೊಡಂಗೆಯಲ್ಲಿ ಶ್ರೀ ವೀರ-ವಿಕ್ರಮ ಕಂಬಳ ಸಮಿತಿ ವತಿಯಿಂದ ಸಂದೀಪ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಎರಡೂ ಕಂಬಳಗಳ ಜೋಡುಕರೆಗಳಿಗೆ ವೀರ-ವಿಕ್ರಮ ಎಂದೇ ಹೆಸರಿಡಲಾಗಿತ್ತು.
ಹೊಕ್ಕಾಡಿಗೋಳಿ ಕಂಬಳಕ್ಕೆ ಸಂಬಂಧಿಸಿ ಜಾಗದ ಗೊಂದಲದ ಕಾರಣದಿಂದ ಹಿಂದೆ ಜ. 13ರಂದು ನಿಗದಿಯಾಗಿದ್ದ ಕಂಬಳವು ಬಳಿಕ ಮುಂದೂಡಲ್ಪಟ್ಟಿತ್ತು. ಆದರೆ ಮುಂದೆ ಶ್ರೀ ಮಹಿಷಮರ್ದಿನಿ ಕಂಬಳ ಸಮಿತಿಯು ಹಿಂದಿನ ಸ್ಥಳದಲ್ಲೇ ಕಂಬಳ ನಡೆಸಲು ತೀರ್ಮಾನಿಸಿದರೆ, ಶ್ರೀ ವೀರ-ವಿಕ್ರಮ ಕಂಬಳ ಸಮಿತಿಯು ಕೊಡಂಗೆಯಲ್ಲಿ ಹೊಸ ಕರೆಗಳನ್ನು ನಿರ್ಮಿಸಿ ಕಂಬಳ ಆಯೋಜಿಸಿದೆ. ಜಿಲ್ಲಾ ಕಂಬಳ ಸಮಿತಿಯು ಕೊಡಂಗೆ ಕಂಬಳಕ್ಕೆ ಅವಕಾಶ ನೀಡಿ ಇನ್ನೊಂದು ತಂಡದ ಜತೆ ಮಾತುಕತೆ ನಡೆಸಿದರೂ ವಿಫಲವಾಗಿತ್ತು. ಹೀಗಾಗಿ ಹೊಕ್ಕಾಡಿಗೋಳಿ ಕಂಬಳ ಆಯೋಜನೆಯ ವಿರುದ್ಧ ಕಾನೂನು ಹೋರಾಟ ನಡೆಸಿದರೂ ಹೈಕೋರ್ಟ್ ಹಿಂದೆ ನಡೆಯುತ್ತಿದ್ದ ಸ್ಥಳದಲ್ಲಿ ನಡೆಯುವ ಕಂಬಳಕ್ಕೆ ತಡೆ ನೀಡಲು ನಿರಾಕರಿಸಿತ್ತು. ಇದೀಗ ಎರಡೂ ಕಡೆ ಕಂಬಳ ಕೂಟ ಯಶಸ್ವಿಯಾಗಿ ನಡೆದಿದೆ.
ಹೊಕ್ಕಾಡಿಗೋಳಿ ಮಹಿಷಮರ್ದಿನಿ ಕಂಬಳದಲ್ಲಿ ಕೂಟದಲ್ಲಿ ಒಟ್ಟು 115 ಕೋಣಗಳ ಭಾಗವಹಿಸಿದ್ದವು. ಕನೆಹಲಗೆ ವಿಭಾಗದಲ್ಲಿ ಎರಡು ಜೊತೆ, ಅಡ್ಡಹಲಗೆ ವಿಭಾಗದಲ್ಲಿ ಎರಡು ಜೊತೆ, ಹಗ್ಗ ಹಿರಿಯ ವಿಭಾಗದಲ್ಲಿ ಏಳು ಜೊತೆ, ನೇಗಿಲು ಹಿರಿಯ ವಿಭಾಗದಲ್ಲಿ 15 ಜೊತೆ, ಹಗ್ಗ ಕಿರಿಯ ವಿಭಾಗದಲ್ಲಿ 11 ಜೊತೆ, ನೇಗಿಲು ಕಿರಿಯ ವಿಭಾಗದಲ್ಲಿ 30 ಜೊತೆ ಮತ್ತು ನೇಗಿಲು ಸಬ್ ಜೂನಿಯರ್ ವಿಭಾಗದಲ್ಲಿ 48 ಕೋಣಗಳಿದ್ದವು.
ಹೊಕ್ಕಾಡಿಗೋಳಿ ಕೊಡಂಗೆ ಕಂಬಳದಲ್ಲಿ 99 ಜೊತೆ ಕೋಣಗಳು ಭಾಗವಹಿಸಿದ್ದವು. ಕನೆಹಲಗೆ ವಿಭಾಗದಲ್ಲಿ ಒಂದು ಜೊತೆ, ಅಡ್ಡಹಲಗೆ ವಿಭಾಗದಲ್ಲಿ ಮೂರು ಜೊತೆ, ಹಗ್ಗ ಹಿರಿಯ ವಿಭಾಗದಲ್ಲಿ ಆರು ಜೊತೆ, ನೇಗಿಲು ಹಿರಿಯ ವಿಭಾಗದಲ್ಲಿ 11 ಜೊತೆ, ಹಗ್ಗ ಕಿರಿಯ ವಿಭಾಗದಲ್ಲಿ 12 ಜೊತೆ, ನೇಗಿಲು ಕಿರಿಯ ವಿಭಾಗದಲ್ಲಿ 36 ಜೊತೆ ಮತ್ತು ನೇಗಿಲು ಸಬ್ ಜೂನಿಯರ್ ವಿಭಾಗದಲ್ಲಿ 30 ಕೋಣಗಳು ಭಾಗವಹಿಸಿದ್ದವು.
ಫಲಿತಾಂಶಗಳು
ಹೊಕ್ಕಾಡಿಗೋಳಿ “ವೀರ – ವಿಕ್ರಮ” ಜೋಡುಕರೆ ಕಂಬಳ ಕೂಟದ ಫಲಿತಾಂಶ
ಕನೆಹಲಗೆ (6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)
ಕಾಂತಾವರ ಬೇಲಾಡಿ ಬಾವ ಅಶೋಕ್ ಶೆಟ್ಟಿ
ಹಲಗೆ ಮೆಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ
ಅಡ್ಡ ಹಲಗೆ
ಪ್ರಥಮ: ನಾರಾವಿ ಯುವರಾಜ್ ಜೈನ್
ಹಲಗೆ ಮೆಟ್ಟಿದವರು: ಭಟ್ಕಳ ಹರೀಶ್
ದ್ವಿತೀಯ: ನೇರಳ ಕಟ್ಟೆ ಕೊಡ್ಲಾಡಿ ಅದ್ವಿನ್ ರವಿರಾಜ್ ಶೆಟ್ಟಿ
ಹಲಗೆ ಮೆಟ್ಟಿದವರು: ಭಟ್ಕಳ ಹರೀಶ್
ಹಗ್ಗ ಹಿರಿಯ
ಪ್ರಥಮ: ಮಿಜಾರು ಪ್ರಸಾದ್ ನಿಲಯ ಪ್ರಖ್ಯಾತ್ ಶಕ್ತಿ ಪ್ರಸಾದ್ ಶೆಟ್ಟಿ “ಎ”
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
ದ್ವಿತೀಯ: ನಂದಳಿಕೆ ಶ್ರೀಕಾಂತ್ ಭಟ್ “ಬಿ”
ಓಡಿಸಿದವರು: ನಕ್ರೆ ಪವನ್ ಮಡಿವಾಳ
ಹಗ್ಗ ಕಿರಿಯ
ಪ್ರಥಮ: ಶಿಬರೂರು ಮುಟ್ಟಿಕಲ್ಲು ಕೀರ್ತನ್ ರಾಜೇಶ್ ಪಾಣಾರ
ಓಡಿಸಿದವರು: ಕಡಂದಲೆ ಮುಡಾಯಿಬೆಟ್ಟು ರೋಹಿತ್ ಪಾಣಾರ್
ದ್ವಿತೀಯ: ಕಕ್ಕೆಪದವು ಕಕ್ಯ ಇಂದಿರಾ ಮಹಾಬಲ ರೈ
ಓಡಿಸಿದವರು: ಉಜಿರೆ ಹೊಸಮನೆ ಸ್ಪಂದನ್ ಶೆಟ್ಟಿ
ನೇಗಿಲು ಹಿರಿಯ
ಪ್ರಥಮ: ಬೆಳ್ಳಿಪ್ಪಾಡಿ ಕೈಪ ಕೇಶವ ಮಾಂಕು ಭಂಡಾರಿ
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
ದ್ವಿತೀಯ: ಮಾಣಿ ಗುತ್ತು ಪ್ರಸನ್ನ ರಘುರಾಮ್ ನಾಯ್ಕ
ಓಡಿಸಿದವರು: ಉಜಿರೆ ಹೊಸಮನೆ ಸ್ಪಂದನ್ ಶೆಟ್ಟಿ
ನೇಗಿಲು ಕಿರಿಯ
ಪ್ರಥಮ: ಹೆಬ್ರಿ ಮಾಡಿಗೆ ಮನೆ ದಿಲೀಪ್ ಶಿವರಾಮ ಹೆಗ್ಡೆ
ಓಡಿಸಿದವರು: ಕಕ್ಕೆಪದವು ಗೌತಮ್ ಗೌಡ
ದ್ವಿತೀಯ: ನಲ್ಲೂರು ಬಜಗೋಳಿ ಶಿವಪ್ರಸಾದ್ ನಿಲಯ ದಿನೀಶ್ ಭಂಡಾರಿ
ಓಡಿಸಿದವರು: ಮಾಳ ಆಧೀಶ್ ಪೂಜಾರಿ
ನೇಗಿಲು ಸಬ್ ಜೂನಿಯರ್
ಪ್ರಥಮ: ಕನಡ್ತ್ಯಾರು ಕೃಷ್ಣ ಶೆಟ್ಟಿ
ಓಡಿಸಿದವರು: ಕಕ್ಕೆಪದವು ಗೌತಮ್ ಗೌಡ
ದ್ವಿತೀಯ: ಪಡು ಸಾಂತೂರು ಕಲ್ಯಾಣಿ ನಿವಾಸ ರಾಮ ದೇಜು ಪೂಜಾರಿ
ಓಡಿಸಿದವರು: ಪಡು ಸಾಂತೂರು ಸುಕೇಶ್ ಪೂಜಾರಿ
ಪ್ರಥಮ ವರ್ಷದ ಹೊಕ್ಕಾಡಿಗೋಳಿ ಕೊಡಂಗೆ “ವೀರ – ವಿಕ್ರಮ” ಜೋಡುಕರೆ ಕಂಬಳ ಕೂಟದ ಫಲಿತಾಂಶ
ಕನೆಹಲಗೆ
ವಾಮಂಜೂರು ತಿರುವೈಲುಗುತ್ತು ನವೀನ್ಚಂದ್ರ ಆಳ್ವ
ಹಲಗೆ ಮೆಟ್ಟಿದವರು: ಬೈಂದೂರು ಬಾಸ್ಕರ ದೇವಾಡಿಗ
ಅಡ್ಡ ಹಲಗೆ
ಪ್ರಥಮ: ಹೊಸ್ಮಾರ್ ಸೂರ್ಯಶ್ರೀ ಜ್ಯೋತಿ ಸುರೇಶ್ ಕುಮಾರ್ ಶೆಟ್ಟಿ
ಹಲಗೆ ಮೆಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ
ದ್ವಿತೀಯ: ಹಂಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ
ಹಲಗೆ ಮೆಟ್ಟಿದವರು: ಮುಳಿಕಾರು ಕೆವುಡೇಲು ಅಣ್ಣಿ ದೇವಾಡಿಗ
ಹಗ್ಗ ಹಿರಿಯ
ಪ್ರಥಮ: ಮೂಡಬಿದ್ರಿ ಕರಿಂಜೆ ವಿನು ವಿಶ್ವನಾಥ ಶೆಟ್ಟಿ “ಎ”
ಓಡಿಸಿದವರು: ಪಣಪೀಲ ಪ್ರವೀಣ್ ಕೋಟ್ಯಾನ್
ದ್ವಿತೀಯ: ಮೂಡಬಿದ್ರಿ ಕರಿಂಜೆ ವಿನು ವಿಶ್ವನಾಥ ಶೆಟ್ಟಿ “ಬಿ”
ಓಡಿಸಿದವರು: ಬಾರಾಡಿ ನತೀಶ್
ಹಗ್ಗ ಕಿರಿಯ
ಪ್ರಥಮ: ಕಾರ್ಕಳ ನೆಕ್ಲಾಜೆ ಗುತ್ತು ಪ್ರಜ್ವಲ್ ಪ್ರಖ್ಯಾತ್ ಕೋಟ್ಯಾನ್
ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ
ದ್ವಿತೀಯ: ಮೂಡಬಿದ್ರಿ ಹೊಸಬೆಟ್ಟು ಏರಿಮಾರು ಬರ್ಕೆ ಚೇತನ್ ಚಂದ್ರಹಾಸ ಸಾಧು ಸನಿಲ್
ಓಡಿಸಿದವರು: ಮಾಸ್ತಿಕಟ್ಟೆ ಸ್ವರೂಪ್
ನೇಗಿಲು ಹಿರಿಯ
ಪ್ರಥಮ: ಕಕ್ಕೆಪದವು ಪೆಂರ್ಗಾಲು ಬಾಬು ತನಿಯಪ್ಪ ಗೌಡ
ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ
ದ್ವಿತೀಯ: ಹೊಸ್ಮಾರ್ ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ “ಬಿ”
ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಶೆಟ್ಟಿ
ನೇಗಿಲು ಕಿರಿಯ
ಪ್ರಥಮ: ಮುನಿಯಾಲ್ ಉದಯ ಕುಮಾರ್ ಶೆಟ್ಟಿ “ಎ”
ಓಡಿಸಿದವರು: ಮಾಸ್ತಿಕಟ್ಟೆ ಸ್ವರೂಪ್
ದ್ವಿತೀಯ: ಮುನಿಯಾಲ್ ಉದಯ ಕುಮಾರ್ ಶೆಟ್ಟಿ “ಬಿ”
ಓಡಿಸಿದವರು: ಮಾಸ್ತಿಕಟ್ಟೆ ಸ್ವರೂಪ್
ನೇಗಿಲು ಸಬ್ ಜೂನಿಯರ್
ಪ್ರಥಮ: ಶ್ರೀ ಸ್ವಾಮಿಧಾಮ ಹೊಳೆಕಟ್ಟು ಕುಂಭಾಶಿ
ಓಡಿಸಿದವರು: ಕೋರಿಂಜೆ ಅರುಣ್ ಕುಮಾರ್
ದ್ವಿತೀಯ: ಕಕ್ಕೆಪದವು ಕಿಂಜಾಲು ಶಾಂಭವಿ ಸಂಜೀವ ಶೆಟ್ಟಿ
ಓಡಿಸಿದವರು: ಕಕ್ಕೆಪದವು ಕಿಂಜಾಲು ಪ್ರದೀಪ್ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Deepawali: ಸುಳ್ಯದಲ್ಲಿ ಗಮನ ಸೆಳೆದ ಬಲೀಂದ್ರ ಅಲಂಕಾರ ಸರ್ಧೆ
Bantwala ತಾಲೂಕು ಮಟ್ಟದ ಚಿಣ್ಣರ ಬಣ್ಣ ಮಕ್ಕಳ ಚಿತ್ರಕಲಾ ಸ್ಪರ್ಧೆ
Puttur: ಮುಂಜಾನೆ 3 ಗಂಟೆಗೆ ನಡೆಯಿತು ಅಗಲಿದವರಿಗೆ ಅವಲಕ್ಕಿ ಸಮರ್ಪಣೆ!
ಮರ ಬಿದ್ದು ಸವಾರ ಸಾವು; ಅಪಾಯಕಾರಿ ಮರ ತೆರವಿಗೆ ಅಗ್ರಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.