ಮರುಗಿದ ತೂಗು ಸೇತುವೆಗಳ ಸರದಾರ !
ಹಳ್ಳಿ ಬೆಸೆದ ಬಳ್ಳಿ ಸೇತುವೆ ಕಳಚಿ ಬಿತ್ತು
Team Udayavani, Aug 13, 2019, 5:16 AM IST
ಸುಳ್ಯ: ಪ್ರತಿ ಮಳೆಗಾಲದಲ್ಲಿ ಹೊರಜಗತ್ತಿನ ಸಂಪರ್ಕ ಕಡಿದುಕೊಳ್ಳುತ್ತಿದ್ದ ಎಷ್ಟೋ ಹಳ್ಳಿಗಳ ಜನರ ಬದುಕಿಗೆ ಸಂಪರ್ಕ ಸೇತುವಾದವರು ತೂಗುಸೇತುವೆಗಳ ಸರದಾರ ಪದ್ಮಶ್ರೀ ಪುರಸ್ಕೃತ ಸುಳ್ಯದ ಗಿರೀಶ್ ಭಾರದ್ವಾಜ್. ಅವರು ರಾಜ್ಯಾದ್ಯಂತ ನಿರ್ಮಿಸಿದ 8 ತೂಗುಸೇತುವೆಗಳು ಮಹಾಮಳೆಯಲ್ಲಿ ಕೊಚ್ಚಿಹೋಗಿವೆ. ಇದರಿಂದಾಗಿ ಭಾರದ್ವಾಜ್ ಮಮ್ಮಲ ಮರುಗಿದ್ದಾರೆ.
ಭಾರದ್ವಾಜ್ ಅವರು ಹೆತ್ತ ತಾಯಿಯಂತೆ ಮಮತೆಯಲ್ಲಿ ನಿರ್ಮಿಸಿದ ಬೆಳಗಾವಿ ಜಿಲ್ಲೆಯ ಹುಕ್ಕೇರಿ, ರಾಮದುರ್ಗ, ಮೊದಗ, ಉತ್ತರ ಕನ್ನಡ ಜಿಲ್ಲೆಯ ಸಹಸ್ರಲಿಂಗ, ಡೋಂಗ್ರಿ, ಕುಮಟಾ, ಬಾಳೆಹೊನ್ನೂರು ಸಮೀಪದ ಕಾಂಡ್ಯ ಸೇತುವೆ, ಬೆಳ್ತಂಗಡಿ ತಾಲೂಕಿನ ಮುಗೇರಡ್ಕ ತೂಗುಸೇತುವೆಗಳಿಗೆ ಹಾನಿ ಉಂಟಾಗಿದೆ. ಕೆಲವು ಹಾನಿಗೀಡಾದರೆ, ಮತ್ತೆ ಕೆಲವು ಸೇತುವೆಗಳ ರೋಪ್, ಪಿಲ್ಲರ್ ಕಳಚಿವೆ. ಕೆಲವು ವರ್ಷಗಳ ಹಿಂದೆ ನಿರ್ಮಿಸಿದ ಮುಗೇರಡ್ಕ ತೂಗು ಸೇತುವೆ ಸಂಪೂರ್ಣ ನಾಶವಾಗಿದೆ.
ಹಳ್ಳಿ ಬೆಸೆದ ಬಳ್ಳಿ ಸೇತುವೆ
ದೇಶಾದ್ಯಂತ ಗಿರೀಶ್ ಭಾರದ್ವಾಜ್ ಸುಮಾರು 137 ತೂಗು ಸೇತುವೆಗಳನ್ನು ನಿರ್ಮಿಸಿದ್ದಾರೆ. ಇದು ಅವರಿಗೆ ವ್ಯವಹಾರ ಅಲ್ಲ; ಊರಿಂದ ಊರಿಗೆ ಸ್ನೇಹ, ಪ್ರೀತಿ, ಸಂಬಂಧ ಬೆಸೆಯುವ ಕಾಯಕ. ಕೆಲಸ ಮುಗಿಸಿ ಲೆಕ್ಕಾಚಾರ ಚುಕ್ತಾ ಮಾಡಿ ಸಂಬಂಧ ಕಡಿದುಕೊಳ್ಳುವವರೇ ತುಂಬಿರುವ ಈ ಕಾಲದಲ್ಲಿ ಭಾರದ್ವಾಜ್ ತಾನು ನಿರ್ಮಿಸಿದ ತೂಗು ಸೇತುವೆಯನ್ನು, ಆಯಾ ಊರಿನ ಜನರನ್ನು ಎಂದಿಗೂ
ಮರೆತಿಲ್ಲ. ಸಣ್ಣಪುಟ್ಟ ಸಮಸ್ಯೆ ಬಂದಾಗಲೂ ಅತ್ಯಂತ ಸ್ನೇಹ ಭಾವದಿಂದ, ಕಾಳಜಿಯಿಂದ ಧಾವಿಸುತ್ತಿದ್ದರು.
ಸಣ್ಣ ಪುಟ್ಟ ಹಾನಿ ಕಂಡಿದ್ದೆ. ಆದರೆ ಈ ಮಟ್ಟದ ಹಾನಿಯ ವಿಷಯ ತಿಳಿದು ನೋವು ತಡೆಯಲಾಗುತ್ತಿಲ್ಲ. ಅಲ್ಲಿನ ಜನರು ಸಂಕಟ ಪದೇ ಪದೇ ನೆನಪಾಗಿ ಮನಸ್ಸು ಮರುಗುತ್ತಿದೆ. ಅವರ ಮುಂದಿನ ಬದುಕು ಹೇಗೆ, ಏನು ಎಂಬ ಚಿಂತೆ ಕಾಡುತ್ತಿದೆ.
– ಗಿರೀಶ್ ಭಾರದ್ವಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod:ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; 10 ಮಂದಿಗೆ ಅವಳಿ ಜೀವಾವಧಿ ಸಜೆ
Bus ಪ್ರಯಾಣ ದರ ಏರಿಕೆ; ಮೊದಲು ಉದ್ದೇಶ ಅರಿಯಲಿ: ಖಾದರ್
Hunsur: ಹೊಸ ವರ್ಷಾಚರಣೆ: ಕೇಕ್ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ
“ನಿಮ್ಹಾನ್ಸ್ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು
Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.