ನಿವೃತ್ತ ನ್ಯಾ| ಕೆ.ಟಿ. ಶಂಕರನ್‌ಗೆ ಧರ್ಮಶ್ರೀ ಪ್ರಶಸ್ತಿ ಪ್ರದಾನ
Team Udayavani, Feb 13, 2017, 3:45 AM IST
ಈಶ್ವರಮಂಗಲ: ರಾಮಾಯಣ, ಮಹಾ ಭಾರತ ಕಾಲದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಪ್ರತ್ಯೇಕ ಪಂಗಡಗಳಲ್ಲಿ ವಿಭಾಗಗೊಂಡಿತ್ತು. ಆದರೆ ಈ ಕಾಲದಲ್ಲಿ ಇವೆರಡು ಎಲ್ಲರಲ್ಲೂ ಸೇರಿಕೊಂಡಿವೆ. ಗೌರವ ತರುವ ಆಯ್ಕೆಯ ವಿವೇಚನೆ ನಮ್ಮಲ್ಲಿರಬೇಕು ಎಂದು ಮೈಸೂರು ಸಂಸ್ಥಾನದ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಅವರು ರವಿವಾರ ಹನುಮಗಿರಿಯಲ್ಲಿ ನಡೆಯುತ್ತಿರುವ ಭಕ್ತಾಂಜನೇಯ ಸಹಿತ ಶ್ರೀ ಕೋದಂಡರಾಮ ರಾಮ ದೇವರ ಮತ್ತು ಬಾಲಗಣಪತಿ ದೇವರ ಪ್ರತಿಷ್ಠಾ ಬ್ರಹ್ಮಕಲಶ “ಶ್ರೀ ರಾಮೋತ್ಸವ’ದ 2017ರ ಧರ್ಮಶ್ರೀ ಪ್ರಶಸ್ತಿಯನ್ನು ಕೇರಳ ಉಚ್ಚ ನ್ಯಾಯಾಲಯದ ನಿವೃತ್ತ ನಾಯಮೂರ್ತಿ ಕೆ.ಟಿ. ಶಂಕರನ್ ಅವರಿಗೆ ಪ್ರದಾನ ಮಾಡಿ ಮಾತನಾಡಿದರು.
ಸಂಸ್ಕಾರ, ದೇಶ ಪ್ರೇಮದ ಜವಾಬ್ದಾರಿ
ಕೇರಳ ಉಚ್ಚ ನ್ಯಾಯಾಲಯದ ನಿವೃತ್ತ ನಾಯಮೂರ್ತಿ ಕೆ.ಟಿ. ಶಂಕರನ್ ಧರ್ಮಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಹಿಂದೆ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟವಿತ್ತು. ಆದರೆ ಇಂದು ಮಕ್ಕಳಿಗೆ ವಿಮಾನ ಖರೀದಿಸಿ ಕೊಡುವಷ್ಟು ಹೆತ್ತವರು ಶಕ್ತರಿದ್ದಾರೆ. ಇದರ ಜತೆಗೆ ಸಂಸ್ಕಾರ, ದೇಶಪ್ರೇಮ ಬೆಳೆಸುವ ಜವಾಬ್ದಾರಿಯು ಅವರ ಮೇಲೆ ಇದೆ ಎಂದರು.
ಕೇರಳ ರಾಜ್ಯದಲ್ಲಿ ಹೆಣ್ಣು ಮಕ್ಕಳು ಕಾಣೆಯಾಗುವ ದೊಡ್ಡ ಪ್ರಕರಣಗಳೇ ನಡೆಯುತ್ತಿತ್ತು. ಬಹಿರಂಗವಾಗಿ ತಿಳಿಸಿ
ವಿಮಾನ ನಿಲ್ದಾಣಗಳ ಮೂಲಕ ಚಿನ್ನ ಸಾಗಾಟ ನಡೆಸುವಷ್ಟು ಕೆಟ್ಟ ವ್ಯಕ್ತಿಗಳು ಸಂಘಟನಾತ್ಮಕವಾಗಿ ಬೆಳೆದಿದ್ದಾರೆ. ಡ್ರಗ್ಸ್, ಸ್ಮಗ್ಲಿಂಗ್, ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಪ್ರತಿಯೊಬ್ಬರೂ ಪ್ರತಿಜ್ಞೆ ಮಾಡಬೇಕು ಎಂದರು.
ಕ್ಷೇತ್ರದಿಂದ ಆಶೀರ್ವಾದ
ಮೂಡಬಿದಿರೆ ಆಳ್ವಾಸ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ| ಮೋಹನ ಆಳ್ವ ಮಾತನಾಡಿ ಗುರು, ಸ್ವಾಮಿ ನಿಷ್ಠೆ, ಶಕ್ತಿಯ ಮೇಲೆ ನಂಬಿಕೆ ಇಟ್ಟು ಆದರ್ಶ, ಮರ್ಯಾದೆಯಿಂದ ಸಾಧಿಸುವ ಹಂಬಲವುಳ್ಳ ನಮಗೆ ಹನುಮ ಹಾಗೂ ಶ್ರೀರಾಮನ ಆಶೀರ್ವಾದ ಕ್ಷೇತ್ರದ ಮೂಲಕ ಸಿಗಲಿದೆ ಎಂದು ಹೇಳಿದರು.
ಮೈಸೂರು ಸಂಸ್ಥಾನ ಮಹಾರಾಣಿ ತ್ರಿಶಿಕಾ ಕುಮಾರಿ ಒಡೆಯರ್, ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಟಿ. ಶ್ಯಾಮ ಭಟ್ ಶುಭ ಹಾರೈಸಿದರು. ಕರ್ನಾಟಕದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎನ್. ಕುಮಾರ್ ಅಭಿನಂದನಾ ಭಾಷಣ ಮಾಡಿದರು.
ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖೀಲ ಭಾರತೀಯ ವ್ಯವಸ್ಥಾ ಪ್ರಮುಖ್ ಮಂಗೇಶ್ ಬೇಂಡೆ, ಬೌದ್ಧಿಕ ಪ್ರಮುಖ್ ಶಾಂತರಂಜನ್, ಜೋತಿಷ ವಿಷ್ಣು ನಂಬೂದರಿ, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ, ಧರ್ಮಶ್ರೀ ಪ್ರತಿಷ್ಠಾನದ ಮಹಾಪೋಷಕ ಜಿ.ಕೆ. ಮಹಾಬಲೇಶ್ವರ ಭಟ್ ಕೊನೆತೋಟ, ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿಯ ಸಂಚಾಲಕ ಶಿವರಾಮ ಪಿ. ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ದೇವಿಪ್ರಕಾಶ್ ಶೆಟ್ಟಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಮಹೇಶ್ ಕಜೆ ಕಾರ್ಯಕ್ರಮ ನಿರ್ವಹಿಸಿದರು.
ಇಂದು ಪ್ರತಿಷ್ಠೆ, ಬ್ರಹ್ಮಕಲಶ ಅಭಿಷೇಕ
ಹನುಮಗಿರಿ ಕ್ಷೇತ್ರದಲ್ಲಿ ಫೆ. 13ರಂದು ಬೆಳಗ್ಗೆ ಶ್ರೀರಾಮ ತಾರಕ ಯಜ್ಞ, ಭಕ್ತಾಂಜನೇಯ ಸಹಿತ ಶ್ರೀ ಕೋದಂಡರಾಮ ಪ್ರತಿಷ್ಠೆ, ಬಾಲಗಣಪತಿ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಮಹಾ ಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಲಿದೆ. ಶ್ರೀರಾಮನ ಪಟ್ಟಾಭಿಷೇಕ ಸಂದರ್ಭದಲ್ಲಿ ನಡೆದ ಮುತ್ತಿನ ಅಭಿಷೇಕ ಅಲ್ಲದೇ ಕುಂಕುಮ, ಅರಸಿನ, ಮುಂತಾದ ಅಭಿಷೇಕ ನಡೆಯಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.