ಜನಸಾಮಾನ್ಯರಿಗೆ ವರ, ಶ್ರೀಮಂತರಿಗೆ ಬರೆ
Team Udayavani, Feb 2, 2018, 10:33 AM IST
ಈ ಸಾಲಿನ ಕೇಂದ್ರ ಬಜೆಟ್ ಬಡವರ ಪರ ಮತ್ತು ಶ್ರೀಮಂತರಿಗೆ ಬರೆ ಎಂಬಂತಾಗಿದೆ. ಕೃಷಿ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಶಿಕ್ಷಣ, ಮೂಲ ಸೌಕರ್ಯ ಹಾಗೂ ತಂತ್ರಜ್ಞಾನ ಕ್ಷೇತ್ರಗಳಿಗೆ ಮಹತ್ವ ನೀಡಲಾಗಿದೆ. ಅಬಕಾರಿ ಹಾಗೂ ಸೇವಾ ತೆರಿಗೆಯ ಬದಲಿಗೆ ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಪರಿಚಯಿಸಿದ್ದರಿಂದ ಇವುಗಳ ಯಾವುದೇ ಪ್ರಸ್ತಾವ ಇಲ್ಲ. ಆದರೆ ಸೀಮಾ ಶುಲ್ಕ (ಕಸ್ಟಮ್ಸ್) ಹಾಗೂ ಆದಾಯ ತೆರಿಗೆಯ ಪ್ರಸ್ತಾವವಿದೆ.
ಮೂಲ ಸೌಕರ್ಯಕ್ಕೆ ಅತ್ಯುತ್ತಮ ಬಜೆಟ್. ಒಟ್ಟು 600 ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೆ, ಬೆಂಗಳೂರಿನ ಸಬ್ ಅರ್ಬನ್ ರೈಲ್ವೆಗೆ 17 ಸಾವಿರ ಕೋಟಿ ರೂ., ಭಾರತ್ ಮಾಲಾ ಯೋಜನೆಯಡಿ 5.35 ಲಕ್ಷ ಕೋಟಿ ರೂ. ವಿನಿಯೋಗ, ಗ್ರಾಮೀಣ ಭಾಗದ ಪ್ರತಿ ಮನೆಗೆ ವಿದ್ಯುತ್ ಸಂಪರ್ಕಕ್ಕೆ ಹಣ, ಸ್ವಚ್ಚ ಭಾರತ ಅಭಿಯಾನದ ಅಂಗವಾಗಿ 2 ಕೋಟಿ ಶೌಚಾಲಯಗಳ ನಿರ್ಮಾಣದ ಗುರಿ, ಉಜ್ವಲ ಯೋಜನೆಯಡಿ 8 ಕೋಟಿ ಮಹಿಳೆಯರಿಗೆ ಉಚಿತ ಅಡುಗೆ ಅನಿಲ ಸಂಪರ್ಕ, ಅಮೃತ ಯೋಜನೆಯಡಿ ನಗರದ ಎಲ್ಲಾ ಮನೆಗಳಿಗೆ ನೀರಿನ ಸಂಪರ್ಕಕ್ಕೆ ಅನುದಾನ, ಗ್ರಾಮೀಣ ಪ್ರದೇಶಗಳಿಗೆ 5 ಲಕ್ಷ ವೈಫೈ- ಹಾಟ್ ಸ್ಪಾಟ್ -ಇವೆಲ್ಲವೂ ಮೂಲ ಸೌಕರ್ಯ ಅಭಿವೃದ್ಧಿಗೆ ಪೂರಕ.
ಇಪ್ಪತ್ತ ನಾಲ್ಕು ಹೊಸ ಸರಕಾರಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆ, ಬಿ-ಟೆಕ್ ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಫೆಲೋಶಿಪ್, ಬುಡಕಟ್ಟು ವಿದ್ಯಾರ್ಥಿಗಳಿಗಾಗಿ ನವೋದಯ ಮಾದರಿಯ ಏಕಲವ್ಯ ವಸತಿ ಶಾಲೆಗಳ ಸ್ಥಾಪನೆ-ಎಲ್ಲವೂ ಶಿಕ್ಷಣ ಕ್ಷೇತ್ರಕ್ಕೆ ಉತ್ತೇಜನಕಾರಿ.
ಆರೋಗ್ಯ ಕ್ಷೇತ್ರಕ್ಕೂ ಗಮನ ಪರವಾಗಿಲ್ಲ. ಕುಟುಂಬ- ಆರೋಗ್ಯ ವಿಮೆ ಯೋಜನೆಯಡಿ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ವರೆಗಿನ ವಿಮೆ,ನ್ಯಾಷನಲ್ ಹೆಲ್ತ್ ವೆನ್‌ನೆಸ್ ಸ್ಕೀಮ್ ಇತ್ಯಾದಿ ಉಲ್ಲೇಖನೀಯ.
ಮುದ್ರಾ ಯೋಜನೆಯಡಿ ಹೆಚ್ಚಿನ ಸಾಲ, ಸ್ವ ಉದ್ಯೋಗ ಮಾಡುವವರಿಗೆ 10 ಲಕ್ಷ ರೂ. ವರೆಗೆ ಸಾಲ- ಉದ್ಯೋಗ ಸೃಷ್ಟಿಗೆ ಸೂಕ್ತ ಕ್ರಮ. ನಗದು ಅಪಮೌಲ್ಯದಿಂದಾಗಿ ಹಾಗೂ ಸರಕು ಮತ್ತು ಸೇವಾ ತೆರಿಗೆಯಿಂದಾಗಿ ಸಣ್ಣ ಉದ್ಯಮಗಳಿಗೆ ಹೊಡೆತವಾದ್ದರಿಂದ, ಅವುಗಳನ್ನು ಉತ್ತೇಜಿಸಲೂ ಗಮನಹರಿಸಿರುವುದು ಸ್ವಾಗತಾರ್ಹ.
ಆದಾಯ ತೆರಿಗೆ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡದಿದ್ದರೂ, ಆದಾಯ ಕರದ ಮೇಲಿನ ಸೆಸ್ ಅನ್ನು ಶೇ. 3 ರಿಂದ ಶೇ. 4ಕ್ಕೆ ಏರಿಸಲಾಗಿದೆ. ನೌಕರ ವೃಂದಕ್ಕೆ ಕೊಡುಗೆಯಾಗಿ 40 ಸಾವಿರ ರೂ. ವರೆಗೆ ಸ್ಟ್ಯಾಂಡರ್ಡ್ ಡಿಡಕ್ಷನ್‌ನ್ನು ಒದಗಿಸಲಾಗಿದೆ.
ಹಿರಿಯ ನಾಗರಿಕರಿಗೆ ಸಿಗುವ ಬ್ಯಾಂಕಿನ ಬಡ್ಡಿಯ ಮೇಲೆ 50 ಸಾವಿರ ರೂ. ವರೆಗೆ ಟಿಡಿಎಸ್ ಇಲ್ಲ. ಸೆಕ್ಷನ್ 80 ಟಿಟಿಬಿಯ ಪ್ರಕಾರ 50 ಸಾವಿರ ರೂ. ವರೆಗಿನ ಬಡ್ಡಿಯ ಮೇಲೆ ತೆರಿಗೆ ವಿನಾಯಿತಿ ಇದೆ.
ಸೆಕ್ಷನ್ 80 ರಡಿ ಮೆಡಿಕ್ಲೇಮ್ ಡಿಡಕ್ಷನನ್ನು 50 ಸಾವಿರ ರೂ. ಗೆ ಏರಿಸಲಾಗಿದೆ. ಹಿರಿಯ ನಾಗರಿಕರ ಬಡ್ಡಿ ಆಧಾರಿತ ಜೀವ ವಿಮಾ ಯೋಜನೆಯಲ್ಲಿ ಹೂಡಿಕೆಯ ಮಿತಿಯನ್ನು 7.50 ಲಕ್ಷ ರೂ. ಗಳಿಂದ 15 ಲಕ್ಷ ರೂ. ಗೆ ಏರಿಸಲಾಗಿದೆ. ಇದು ಹಿರಿಯ ನಾಗರಿಕರಿಗೆ ವರದಾನ.ಈ ಬಾರಿ ದೀರ್ಘಕಾಲದ (1ವರ್ಷದಿಂದ ಮೇಲ್ಪಟ್ಟ) ಶೇರುಗಳು ಹಾಗೂ ಮ್ಯೂಚುವಲ್ ಫಂಡ್‌ನ 1 ಲಕ್ಷ ರೂ. ಕ್ಕಿಂತ ಮೇಲ್ಪಟ್ಟ ಆದಾಯದ ಮೇಲೆ ಶೇ. 10 ತೆರಿಗೆ ವಿಧಿಸಲಾಗಿದೆ. ಇದು ಶೇರು ಹಾಗೂ ಮ್ಯೂಚುವಲ್ ಫಂಡ್ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಎಲೆಕ್ಟ್ರಾನಿಕ್ ಇನ್‌ಕಮ್ ಟ್ಯಾಕ್ಸ್ ಅಸೆಸ್‌ಮೆಂಟನ್ನು ಅಳವಡಿಸಲಾಗಿದೆ. ಇದರಿಂದಾಗಿ ಹೆಚ್ಚಿನ ಪಾರದರ್ಶಕತೆ ಹಾಗೂ ಪರಿಣಾಮಕಾರಿ ಆಡಳಿತವನ್ನು ಅಪೇಕ್ಷಿಸಬಹುದು.
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಲೀಟರಿಗೆ 2 ರೂ. ಇಳಿಸಿರುವುದು ಜನಸಾಮಾನ್ಯರಿಗೆ ನೀಡಿರುವ ಕೊಡುಗೆ. ವಾರ್ಷಿಕ ವಹಿವಾಟು 250 ಕೋಟಿ ರೂ. ಹೊಂದಿರುವ ಕಂಪೆನಿಗಳಿಗೆ ಆದಾಯ ತೆರಿಗೆಯನ್ನು ಶೇ. 25 ಗೆ ಇಳಿಸಲಾಗಿದೆ.
ಶ್ರೀಮಂತರಿಗೆ ಅನನುಕೂಲಕರ ಅಂಶಗಳೂ ಇವೆ. ಕೆಲವು ಸರಕಿನ ಮೇಲೆ ಸೀಮಾ ಶುಲ್ಕವನ್ನು ಏರಿಸಲಾಗಿದೆ. ಬಜೆಟ್‌ನಲ್ಲಿ ಶೇರು ಹಾಗೂ ಮ್ಯೂಚುವಲ್ ಫಂಡ್ಸ್‌ನ ಹೂಡಿಕೆ ಲಾಭದ ಮೇಲೆ ಶೇ. 10 ತೆರಿಗೆ ವಿಧಿಸಲಾಗಿದೆ. ಮೊಬೈಲ್ ಟಿವಿ ಹಾಗೂ ಇನ್ನಿತರ ಕೆಲವು ಉತ್ಪನ್ನಗಳಿಗೆ ಸೀಮಾ ಶುಲ್ಕವನ್ನು ಹೆಚ್ಚಿಸಲಾಗಿದೆ. ಇದಲ್ಲದೆ, ಆದಾಯ ಕರದ ಮೇಲೆ ಇದ್ದ ಶೇ. 3 ಸೆಸ್ ಅನ್ನು ಶೇ. 4ಗೆ ಏರಿಸಲಾಗಿದೆ.
ಕೃಷಿ ಕ್ಷೇತ್ರವನ್ನೂ ಮರೆತಿಲ್ಲ
ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಅವರ ಉತ್ಪಾದನಾ ವೆಚ್ಚದ ಒಂದೂವರೆಪಟ್ಟು ನಿಗದಿಪಡಿಸಲಾಗಿದೆ. ಕೃಷಿಕರಿಗೆ ನೀಡುವ ಸಾಲದ ಗುರಿ ಏರಿಸಲಾಗಿದೆ. ಹೈನುಗಾರಿಕಾ ಉದ್ಯಮದ ಅಭಿವೃದ್ಧಿಗಾಗಿ ಅನುದಾನ ಮೀಸಲಿಡಲಾಗಿದೆ. ಹತ್ತು ಸಾವಿರ ಕೋಟಿ ರೂ. ಮೀನುಗಾರಿಕಾ ಹಾಗೂ ಅಕ್ವಾಕಲ್ಚರ್ ಉತ್ತೇಜನಕ್ಕಾಗಿ ಇರಿಸಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಮೀನುಗಾರಿಕಾ ಹಾಗೂ ಹೈನುಗಾರಿಕಾ ಉದ್ಯಮಗಳಿಗೆ ವಿಸ್ತರಿಸಿರುವುದು ಸೂಕ್ತ.
ಎಸ್. ಎಸ್. ನಾಯಕ್,
ಲೆಕ್ಕಪರಿಶೋಧಕರು, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Flight; ಮಂಗಳೂರು – ಸಿಂಗಾಪುರ ನೇರ ವಿಮಾನ ಕೆಲ ಕಾಲ ಮುಂದಕ್ಕೆ?
Hassan-Mangaluru ಹಳಿ ದ್ವಿಗುಣ: ಅಂತಿಮ ಸ್ಥಳ ಸರ್ವೇಗೆ ಟೆಂಡರ್
ಕ್ಯುಆರ್ ಕೋಡ್ ಬದಲಿಸಿ ಬಂಕ್‌ಗೆ ಲಕ್ಷಾಂತರ ರೂ. ವಂಚನೆ
Tannirbhavi: ಜ. 11, 12ರ ಬೀಚ್ ಉತ್ಸವ, ಸ್ವಚ್ಛತೆ ಸುರಕ್ಷತೆಗೆ ಗರಿಷ್ಠ ಆದ್ಯತೆ: ಡಿಸಿ
Mangaluru ಎಚ್‌ಎಂಪಿ ವೈರಸ್; ಆತಂಕದ ಅಗತ್ಯವಿಲ್ಲ, ಚಳಿಗಾಲದಲ್ಲಿ ಶೀತ, ಜ್ವರ ಸಾಮಾನ್ಯ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.