ದಶಕದ ಬೇಡಿಕೆಗೆ ಮರುಜೀವ

ಮಂಗಳೂರು ವ್ಯಾಪ್ತಿ ನೈಋತ್ಯ ರೈಲ್ವೇಗೆ ಸೇರ್ಪಡೆ ಹಕ್ಕೊತ್ತಾಯ

Team Udayavani, Nov 20, 2020, 6:20 AM IST

ದಶಕದ ಬೇಡಿಕೆಗೆ ಮರುಜೀವ

ನೆರೆ ರಾಜ್ಯಗಳ ಹಿಡಿತದಲ್ಲಿರುವ ರೈಲ್ವೇ ವಲಯಕ್ಕೆ ಒಳಪಟ್ಟ ಕರಾವಳಿ ಭಾಗದ ರೈಲ್ವೇ ಬೇಡಿಕೆಗೆ ಪ್ರಾತಿನಿಧ್ಯ ಸಿಗಬೇಕಾದರೆ ಮಂಗಳೂರು ಪ್ರತ್ಯೇಕ ವಲಯವಾಗಬೇಕು. ಈ ಕೂಗು ಹಲವು ವರ್ಷಗಳದ್ದು. ಅದಿನ್ನೂ ಈಡೇರಿಲ್ಲ. ಕೊನೇಪಕ್ಷ ಮಂಗಳೂರು ವಲಯ ರಚನೆಗೆ ಪೂರಕವೆನಿಸುವ ಕರಾವಳಿ ಭಾಗದ ಉಳ್ಳಾಲ ಸೇತುವೆಯಿಂದ ತೋಕೂರುವರೆಗಿನ 30 ಕಿ.ಮೀ. ವ್ಯಾಪ್ತಿಯನ್ನು ನೈಋತ್ಯ ರೈಲ್ವೇ ವಲಯಕ್ಕೆ ಸೇರಿಸಬೇಕಿದೆ. ಈ ಅಗತ್ಯವನ್ನು ಮನಗಂಡು ರೈಲ್ವೇ ಮಂಡಳಿಯು ಒಪ್ಪಿಗೆ ನೀಡಿದ್ದು, ಅಧಿಸೂಚನೆ ಹೊರಡಿಸಬೇಕಿದೆ. ಇದಕ್ಕೆ ಸಂಬಂಧಪಟ್ಟ ಕಡತ 6 ವರ್ಷಗಳಿಂದ ಒಂದಿಂಚೂ ಅಲುಗಾಡಿಲ್ಲ. ಈಗ ಮಂಗಳೂರನ್ನು ನೈಋತ್ಯ ವಲಯಕ್ಕೆ ಸೇರಿಸಲು ಕರಾವಳಿಗರು ಸಂಘಟಿತರಾಗಬೇಕಿದೆ. ಜನಪ್ರತಿನಿಧಿಗಳೂ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಈ ಹಿನ್ನೆಲೆಯಲ್ಲಿ ಕರಾವಳಿಗರ ಬೇಡಿಕೆಯನ್ನು ಸರಕಾರಗಳಿಗೆ ತಲುಪಿಸಿ ಕನಸು ನನಸಾಗಿಸುವುದೇ ಉದಯವಾಣಿ ಅಭಿಯಾನದ ಆಶಯ.

ಮಂಗಳೂರು: ಶತಮಾನದ ಇತಿಹಾಸ ಹೊಂದಿ ರುವ ಮಂಗಳೂರಿನ ರೈಲ್ವೇಯ ಬಡತನ ಕೇಳುವಂತಿಲ್ಲ. ಯಾಕೆಂದರೆ ಇದುವರೆಗೂ ಆಡಳಿತಾತ್ಮಕವಾಗಿ ತನ್ನದೇ ಆದ ಒಂದು ಪ್ರಬಲ ವ್ಯವಸ್ಥೆಯನ್ನು ಹೊಂದಿಯೇ ಇಲ್ಲ. ಆದ ಕಾರಣ ರೈಲ್ವೇ ಸೇವೆ ಕರಾವಳಿ ಜನತೆಗೆ ವರವಾಗಿಲ್ಲ. ಮೂರು ವಿಭಾಗಗಳಲ್ಲಿ ಹಂಚಿಹೋಗಿರುವ ಮಂಗಳೂರು ರೈಲ್ವೇ ವಿಭಾಗ ಪ್ರತ್ಯೇಕ ರೈಲ್ವೇ ವಲಯವೂ ಆಗಲಿಲ್ಲ, ಅತ್ತ ನೈಋತ್ಯ ವಲಯಕ್ಕೂ ಸೇರದೆ ತ್ರಿಶಂಕು ಸ್ಥಿತಿಯಲ್ಲಿದೆ.

ಮಂಗಳೂರು ರೈಲ್ವೇಯ ವ್ಯಾಪ್ತಿಯು ಪ್ರಸ್ತುತ ದಕ್ಷಿಣ ರೈಲ್ವೇ ವಲಯ, ಮಹಾರಾಷ್ಟ್ರ ಮತ್ತು ಗೋವಾದ ಪಾರುಪತ್ಯ ಹೊಂದಿರುವ ಕೊಂಕಣ ರೈಲ್ವೇ ನಿಗಮ ಹಾಗೂ ನೈಋತ್ಯ ರೈಲ್ವೇ ವಲಯದಲ್ಲಿ ಹಂಚಿಹೋಗಿದೆ. ಆದ್ದರಿಂದ ವ್ಯವಸ್ಥಿತ, ಸರ್ವಾಂ ಗೀಣ ಅಭಿವೃದ್ಧಿ ದೊಡ್ಡ ಕೊರತೆಯಾಗಿದೆ. ಪ್ರತೀ ಬಾರಿ ಈ ಭಾಗದ ಜನರ ರೈಲ್ವೇ ಬೇಡಿಕೆಗಳು ಅಥವಾ ರೈಲು ಸೌಲಭ್ಯ ಗಳ ವಿಚಾರ ಬಂದಾಗ ಕೇಳು ವವರೇ ಇಲ್ಲ ವಾಗಿದೆ. ಹಾಗಾಗಿ ಅನ್ಯಾಯ- ತಾರತಮ್ಯ ಸಾಮಾನ್ಯವಾಗಿದೆ.

ಮಂಗಳೂರು ರೈಲ್ವೇ ಭಾಗವನ್ನು ಹೊಸ ವಲಯವನ್ನಾಗಿ ಘೋಷಿ ಸು ವಂತೆ ಕರಾವಳಿಗರು ಆಗ್ರಹಿಸು ತ್ತಿದ್ದಾರೆ. ಆದರೆ ಅದಕ್ಕೆ ದಕ್ಷಿಣ ರೈಲ್ವೇ ಮತ್ತು ಕೇರಳದಿಂದ ತಡೆ ಯಾಗು ತ್ತಿದೆ. ಮಂಗಳೂರು ರೈಲ್ವೇ ವಲಯ ರಚನೆ ಕೂಗು ಜೋರಾದಾಗ ತಾಂತ್ರಿಕ ಸಬೂಬು ನೀಡಿ ನಿರಾ ಕರಿಸ ಲಾಗುತ್ತಿದೆ. ಆದ್ದರಿಂದ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಹೋರಾಟಗಾರರೂ ಮತ್ತೆ ಸಂಘಟಿತ ರಾಗಬೇಕಿದೆ. ಅದಕ್ಕಿಂತ ಮೊದಲು ಕನಿಷ್ಠ ಮಂಗಳೂರು ವಿಭಾಗವನ್ನು ನೈಋತ್ಯ ರೈಲ್ವೇಗೆ ಸೇರಿಸಲು ಹೋರಾಟ ರೂಪಿಸಬೇಕಾಗಿದೆ.

ಶತಮಾನದ ಇತಿಹಾಸ
ಮಂಗಳೂರಿನ ರೈಲ್ವೇ ಸಂಪರ್ಕ ಜಾಲ 1907ರಲ್ಲಿ ಆರಂಭಗೊಂಡಿದ್ದು, ಶತಮಾನದ ಇತಿಹಾಸವಿದೆ. ಆದರೆ ಮಂಗಳೂರು ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ರೈಲ್ವೇ ಜಾಲ ಹೆಚ್ಚು ಅಭಿವೃದ್ಧಿಯಾಗಿಯೇ ಇಲ್ಲ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳು ರೈಲ್ವೇ ಸೌಲಭ್ಯಗಳಿಂದ ವಂಚಿತವಾಗಿವೆ. ರೈಲ್ವೇ ಇಲಾಖೆಯು ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂಬ ಅಸಮಾಧಾನ ಸಹಜವಾಗಿಯೇ ಈ ಭಾಗದ ಜನರಲ್ಲಿ ಈಗಲೂ ಇದೆ.

ಕೇಂದ್ರ ಸರಕಾರ ಮತ್ತು ರೈಲ್ವೇ ಮಂಡಳಿಯ ನಿರಂತರ ನಿರ್ಲಕ್ಷ್ಯವೇ ಮಂಗಳೂರು ರೈಲ್ವೇ ವಿಭಾಗದ ಬೇಡಿಕೆ ಹುಟ್ಟಲು ಕಾರಣ. ಒಂದು ರೈಲು ವಲಯ ರಚಿಸಬೇಕಾದರೆ ಕನಿಷ್ಠ 600ರಿಂದ 700 ಕಿ.ಮೀ. ವ್ಯಾಪ್ತಿ ಹೊಂದಿರಬೇಕು. ಆದರೆ ದಕ್ಷಿಣ ರೈಲ್ವೇ ವಲಯಕ್ಕೆ ಒಳಪಟ್ಟಿರುವ ಮಂಗಳೂರು ವಿಭಾಗ ರಚನೆಗೆ ಇಷ್ಟೊಂದು ವ್ಯಾಪ್ತಿ ಹೊಂದಿಲ್ಲ ಎಂಬ ಕಾರಣ ನೀಡಿ ಜನರ ಬೇಡಿಕೆಯನ್ನು ಅವಗಣಿಸಲಾಗುತ್ತಿದೆ.

ಪ್ರಸ್ತಾವ ಮತ್ತೆ ಮುನ್ನೆಲೆಗೆ
ತೋಕೂರು ಮತ್ತು ಮಂಗಳೂರು ಸೆಂಟ್ರಲ್‌ ರೈಲ್ವೇ ನಿಲ್ದಾಣವನ್ನು ಒಳಗೊಂಡ ಮಂಗಳೂರು ಸಂಕೀರ್ಣವನ್ನು ನೈಋತ್ಯ ರೈಲ್ವೇ ವ್ಯಾಪ್ತಿಯಲ್ಲಿರುವ ಮೈಸೂರು ವಿಭಾಗಕ್ಕೆ ಜೋಡಿಸುವ ಈ ಹಿಂದಿನ ಪ್ರಸ್ತಾವ ಈಗ ಮುನ್ನೆಲೆಗೆ ಬಂದಿದೆ. ಈ ಬೇಡಿಕೆಯೂ ಹೊಸದೇನಲ್ಲ, ಸುಮಾರು 16 ವರ್ಷಗಳಷ್ಟು ಹಳೆಯದು. ಈಗ ಇದಾದರೂ ಈಡೇರಬೇಕೆಂಬ ಕೂಗು ಜೋರಾಗುತ್ತಿದೆ. ಏಕೆಂದರೆ ತೋಕೂರಿನಿಂದ ಮಂಗಳೂರು ಸೆಂಟ್ರಲ್‌ ವರೆಗಿನ ವ್ಯಾಪ್ತಿಯನ್ನು ನೈಋತ್ಯ ವಲಯಕ್ಕೆ ಸೇರಿಸಲು 2004ರಲ್ಲಿ ರೈಲ್ವೇ ಮಂಡಳಿ ಆದೇಶಿಸಿತ್ತು. ಆದರೆ ಮಂಗಳೂರು-ಹಾಸನ ರೈಲು ಮಾರ್ಗದಲ್ಲಿ ಹಳಿ ಪರಿವರ್ತನೆ ನಡೆಯತ್ತಿದ್ದ ಕಾರಣ ಅಧಿಸೂಚನೆ ಹೊರಡಿಸಿರಲಿಲ್ಲ.

ಆ ಬಳಿಕ ಇತರ ರೈಲ್ವೇ ವಲಯಗಳ ತೀವ್ರ ಲಾಬಿಯೂ ಸಹಿತ ಹಲವಾರು ಕಾರಣಗಳಿಂದ ಆದೇಶ ಜಾರಿಯಾಗಲೇ ಇಲ್ಲ. ಈ ಮಧ್ಯೆ 2004ರ ಆದೇಶವನ್ನು ಜಾರಿಗೊಳಿಸಲು ಅವಕಾಶ ಕೋರಿ ನೈಋತ್ಯ ರೈಲ್ವೇ ವಲಯವು 2014ರಲ್ಲಿ ಮತ್ತೆ ರೈಲ್ವೇ ಮಂಡಳಿಗೆ ಮನವಿ ಮಾಡಿತು. ಪ್ರಯೋಜನವಾಗಿರಲಿಲ್ಲ. ಈಗ ಮತ್ತೆ ಫೆಬ್ರವರಿಯಲ್ಲಿ ನೈಋತ್ಯ ರೈಲ್ವೇ ವಲಯದವರು ಆದೇಶ ಜಾರಿಗೊಳಿಸಲು ಕೋರಿದರು. ಎಂಟು ತಿಂಗಳಾದರೂ ಇದಕ್ಕೆ ಸಂಬಂಧಿಸಿದ ಕಡತ ಅಲುಗಾಡದಿರುವುದು ಕರಾವಳಿಗರನ್ನು ಮತ್ತೆ ರೊಚ್ಚಿಗೆಬ್ಬಿಸಿದೆ.

ಪೇಶಾವರಕ್ಕೆ ರೈಲು ಸಂಚಾರ ಇತಿಹಾಸ
1907ರಲ್ಲಿ ಮದ್ರಾಸ್‌-ಮಂಗಳೂರು ರೈಲುಮಾರ್ಗ ಆರಂಭಗೊಂಡಿದ್ದು ಮದ್ರಾಸ್‌ನ ಗವರ್ನರ್‌ ಮಂಗಳೂರಿಗೆ ಬಂದು ವೆಸ್ಟ್‌ಕೋಸ್ಟ್‌ ರೈಲು ಅನ್ನು ಉದ್ಘಾಟಿಸಿದ್ದರು. ಆಗ ದೇಶದಲ್ಲಿದ್ದ 3 ರೈಲುಗಳ ಪೈಕಿ ಇದು ಒಂದಾಗಿತ್ತು. 1929ರಲ್ಲಿ ಇಲ್ಲಿಂದ ಪೇಶಾವರಕ್ಕೆ ಗ್ರ್ಯಾಂಡ್‌ ಟ್ರಂಕ್‌ ರೈಲು ಆರಂಭಗೊಂಡಿತು ಮತ್ತು ಭಾರತ ಉಪಖಂಡದ ಅತ್ಯಂತ ಉದ್ದದ ರೈಲು ಸಂಚಾರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 1930ರಲ್ಲಿ ಈಗಿನ ರೈಲು ನಿಲ್ದಾಣ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. 2007ರಲ್ಲಿ ಶತಮಾನೋತ್ಸವ ಆಚರಿಸಲಾಯಿತು. 1979ರಲ್ಲಿ ಹಾಸನ-ಮಂಗಳೂರು, 1983ರಲ್ಲಿ ಮಂಗಳೂರು-ಎನ್‌ಎಂಪಿಟಿ, 1996ರಲ್ಲಿ ಮಂಗಳೂರು-ರೋಹಾ ( ಕೊಂಕಣ್‌ ಎಕ್ಸ್‌ಪ್ರೆಸ್‌) ರೈಲು ಪ್ರಾರಂಭವಾಯಿತು. ಜಾರ್ಜ್‌ ಫೆರ್ನಾಂಡೀಸ್‌ ಅವರ ಪ್ರಬಲ ಇಚ್ಛಾಶಕ್ತಿಯೊಂದಿಗೆ ಕೊಂಕಣ ರೈಲ್ವೇ ಯೋಜನೆಯನ್ನು ಕಾರ್ಯಗತಗೊಳಿಸದಿರುತ್ತಿದ್ದರೆ ಕರಾವಳಿಯ ರೈಲು ಸಂಪರ್ಕದ ಸ್ಥಿತಿ ಇನ್ನೂ ಶೋಚನೀಯವಾಗಿರುತ್ತಿತ್ತು.

3 ರೈಲ್ವೇ ವಲಯದ ವ್ಯಾಪ್ತಿಗೆ
ಉಳ್ಳಾಲ ಸೇತುವೆಯಿಂದ ತೋಕೂರುವರೆಗಿನ 30 ಕಿ.ಮೀ. ಮಾರ್ಗವು ದಕ್ಷಿಣ ರೈಲ್ವೇ ವಲಯಕ್ಕೆ ಸೇರಿಕೊಂಡಿದ್ದರೆ, ಮಹಾರಾಷ್ಟ್ರ ಮತ್ತು ಗೋವಾದ ಕಡೆಯಿಂದ ಹೆಚ್ಚಿನ ರೈಲುಗಳು ಬಂದು ಹೋಗುವ ತೋಕೂರು ನಿಲ್ದಾಣವು ಕೊಂಕಣ ರೈಲ್ವೇಗೆ ಸೇರಿದೆ. ಬೆಂಗಳೂರು- ಹಾಸನದ ಕಡೆಯಿಂದ ಬರುವ ಪಡೀಲ್‌ವರೆಗಿನ ರೈಲ್ವೇ ವ್ಯಾಪ್ತಿಯು ನೈಋತ್ಯ ರೈಲ್ವೇ ವಲಯದ ಅಧೀನದಲ್ಲಿದೆ. ಈ ರೀತಿ ಮೂರು ರೈಲ್ವೇ ವಲಯದ ವ್ಯಾಪ್ತಿಗೆ ಹಂಚಿಕೆಯಾಗಿದೆ.

 ಮಂಗಳೂರು ರೈಲ್ವೇ ನಿಲ್ದಾಣಕ್ಕೆ 100 ವರ್ಷದ ಇತಿಹಾಸ
 ಕೊಂಕಣ, ದಕ್ಷಿಣ, ನೈಋತ್ಯ ರೈಲ್ವೇ ವಲಯಕ್ಕೆ ಒಳಪಟ್ಟಿರುವ ಮಂಗಳೂರು
 ದಕ್ಷಿಣ ರೈಲ್ವೇ ವಲಯಕ್ಕೆ ಸೇರಿದ ತೋಕೂರು-ನೇತ್ರಾವತಿ ಸೇತುವೆ ವರೆಗಿನ 30 ಕಿ.ಮೀ.
 30 ಕಿ.ಮೀ. ವ್ಯಾಪ್ತಿಯನ್ನು ನೈಋತ್ಯ ವಲಯಕ್ಕೆ ಸೇರ್ಪಡೆಗೆ ಹಕ್ಕೊತ್ತಾಯ
 ಮಂಗಳೂರು ವ್ಯಾಪ್ತಿ ನೈಋತ್ಯ ವಲಯಕ್ಕೆ ಸೇರಿದರೆ ಕರಾವಳಿಗೆ ಹೆಚ್ಚಿನ ರೈಲು ಬಲ

- ಕೇಶವ ಕುಂದರ್‌

ಟಾಪ್ ನ್ಯೂಸ್

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

Ravikumar

Session: ಕಾಂಗ್ರೆಸಿಗರ ವೀಡಿಯೋಗೆ ಯಾವ ಬೆಲೆಯೂ ಇಲ್ಲ: ಎಂಎಲ್‌ಸಿ ರವಿಕುಮಾರ್‌

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-KDP

Dakshina Kannada; ಜಿಲ್ಲಾ ಕೆಡಿಪಿ ಸಭೆ: ಕರಾವಳಿ ನಿರ್ಲಕ್ಷ್ಯ ಆರೋಪಿಸಿ ಬಿಜೆಪಿ ಸಭಾತ್ಯಾಗ

police

Bajpe; ದನಗಳನ್ನು ಕಳವು ಮಾಡಿ ವ*ಧೆ: ಇಬ್ಬರ ಬಂಧನ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mandya_SAHITYA

Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.