ಕೋವಿ ಠಾಣೆಯಲ್ಲಿ: ಕಾಡು ಪ್ರಾಣಿಗಳು ನಾಡಿನಲ್ಲಿ!


Team Udayavani, Apr 21, 2018, 8:20 AM IST

Leopard-20-4.jpg

ಸುಬ್ರಹ್ಮಣ್ಯ: ಕಾಡುಪ್ರಾಣಿಗಳ ಹಾವಳಿಯಿಂದ ತತ್ತರಿಸಿದ ಸುಳ್ಯ ಭಾಗದ ಕೆಲವು ಕಾಡಂಚಿನ ಗ್ರಾಮದ ಕೃಷಿಕರಿಗೆ ಈಗ ಮತ್ತೂಂದು ಆತಂಕ ಎದುರಾಗಿದೆ. ಇದುವರೆಗೆ ಕಾಡಾನೆ, ಕಾಡು ಹಂದಿ, ಕಡವೆ, ಕಾಡಮ್ಮೆ, ಕೋತಿ ಇತ್ಯಾದಿ ಕಾಡುಪ್ರಾಣಿಗಳು ಅತಿಯಾಗಿ ಕಾಡುತ್ತಿದ್ದವು. ಇವುಗಳ ಸಾಲಿನಲ್ಲಿ ಚಿರತೆ ಕೂಡ ಈಗ ಸೇರಿಕೊಂಡಿದೆ. ತಾಲೂಕಿನ ಕೆಲ ಜನವಸತಿ ಪ್ರದೇಶ ಗಳಲ್ಲಿ ಇತ್ತೀಚೆಗೆ ಚಿರತೆಗಳ ಉಪಟಳ ಹೆಚ್ಚಿರುವುದು ಈ ಭಾಗದಲ್ಲಿ ಭಯದ ವಾತಾವರಣವನ್ನು ನಿರ್ಮಿಸಿದೆ.

ಸುಬ್ರಹ್ಮಣ್ಯ ಅರಣ್ಯ ವಿಭಾಗ ಅರಣ್ಯ ವ್ಯಾಪ್ತಿಯ ಕೆಲವು ಕಡೆಗಳಲ್ಲಿ ಚಿರತೆ ದಾಳಿ ಪ್ರಕರಣಗಳು ನಡೆದಿವೆ. ಸುಬ್ರಹ್ಮಣ್ಯ, ಕೈಕಂಬ ಬಾಳುಗೋಡು, ಹರಿಹರ, ದೇವಚಳ್ಳ, ಮಡಪ್ಪಾಡಿ, ಕಲ್ಮಕಾರು, ಕೊಲ್ಲಮೊಗ್ರು, ಐನಕಿದು ಈ ಜನವಸತಿ ಪ್ರದೇಶಗಳಲ್ಲಿ ವಾಸವಿದ್ದು, ಕೃಷಿ ಚಟುವಟಿಕೆ ನಡೆಸುತ್ತಿರುವ ಮನೆಗಳಲ್ಲಿ  ಕೃಷಿಕರು ಸಾಕಿದ  ನಾಯಿ, ಬೆಕ್ಕುಗಳ ಮೇಲೆ ಚಿರತೆಗಳು ದಾಳಿ ನಡೆಸಿವೆ. ಕೃಷಿಕರ ಮನೆಯ ಸಾಕು ಪ್ರಾಣಿಗಳು ಚಿರತೆಗೆ ಆಹಾರವಾಗುತ್ತಿವೆ. ಹೀಗಿದ್ದು ಇದುವರೆಗೆ ಮನೆಯವರು ಅರಣ್ಯ ಇಲಾಖೆಗೆ ದೂರು ನೀಡಿಲ್ಲ. ಮನೆಯಲ್ಲಿ ಕಟ್ಟಿ ಹಾಕಿದ ಸ್ಥಳದಿಂದಲೇ ರಾತ್ರಿ ಹೊತ್ತು ಹೊಂಚು ಹಾಕಿ ದಾಳಿ ನಡೆಸುತ್ತಿರುವುದಾಗಿ ಮನೆಯ ಸಂತ್ರಸ್ತ ಮಂದಿ ಹೇಳುತ್ತಿದ್ದಾರೆ.

ಭಯ ಮೂಡಿಸಿದ ಚಿರತೆ
ಚಿರತೆ ದಾಳಿ ಪ್ರಕರಣದಿಂದ ಈ ಭಾಗದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಇಲ್ಲಿ ತನಕ ಕಾಡಾನೆಗಳ ಅಲ್ಲಲ್ಲಿ ಪ್ರತ್ಯಕ್ಷವಾಗಿ, ಭಯದ ವಾತಾವರಣ ನಿರ್ಮಿಸಿದ್ದವು. ಆನೆಗಳ ದಾಳಿಯಿಂದ ಚೇತರಿಸಿಕೊಳ್ಳುವ ಮೊದಲೇ ಚಿರತೆ ದಾಳಿ ಈ ಭಾಗದ ಜನರನ್ನು ಇನ್ನಷ್ಟು ಆಂತಕಕ್ಕೆ ಒಡ್ಡಿದೆ.

ಗೂಡು ನಿರ್ಮಾಣ
ದೇವಚಳ್ಳ ಗ್ರಾಮದ ದೊಡ್ಡಕಜೆ ಪರಿಸರದ ನಿವಾಸಿಗಳ ಪ್ರತಿ ಮನೆಯ ನಾಯಿಗಳು ಕೂಡ ಚಿರತೆಗೆ ಬಲಿಯಾಗಿವೆ. ಸಂಜೆ 4ರ ಬಳಿಕ ಈ ಭಾಗದಲ್ಲಿ ಚಿರತೆಗಳು ದಾಳಿ ನಡೆಸಲು ಶುರು ಮಾಡುತ್ತವೆ. ಹೀಗಾಗಿ ಈ ಭಾಗದ ಪ್ರತಿ ಮನೆಯಲ್ಲಿ ಸಾಕು ನಾಯಿಗಳಿಗೆ ಗೂಡು ನಿರ್ಮಿಸಿಕೊಂಡಿದ್ದಾರೆ. ಚಿರತೆಗಳು ನಾಡಿಗೆ ದಾಳಿ ಇಡುವುದಷ್ಟೆ ಭೀತಿ ಅಲ್ಲ, ಅರಣ್ಯದಂಚಿನ ವಾಸಿಗಳು ಕಾಡಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಕಟ್ಟಿಗೆ, ಸೊಪ್ಪು ಇತ್ಯಾದಿಗಳ ಸಂಗ್ರಹಕ್ಕೆ ಕೃಷಿಕರು ಕಾಡಿಗೆ ತೆರಳಲು ಭಯಕಾಡಲಾರಂಭಿಸಿದೆ. ದನಕರುಗಳನ್ನು ಮೇಯಲು ಕಾಡಿಗೆ ಬಿಡುವಂತಿಲ್ಲ.

ಕೃಷಿಕರು ಕಂಗಾಲು
ಕೃಷಿ ಉತ್ಪನ್ನ ಹಾಳುಗೆಡುತ್ತಿರುವ ಕಾಡುಪ್ರಾಣಿಗಳು ನಿದ್ದೆಕೆಡಿಸಿದೆ. ಮಳೆಯ ಆಗಮನದಿಂದ ಹಸಿರಾಗಿದ್ದ ಫಸಲನ್ನು ರಕ್ಷಿಸುವ ಜವಬ್ದಾರಿ ಒಂದೆಡೆಯಾದರೆ, ಚಿರತೆಗಳು ಜೀವ ಭಯವನ್ನು ಹುಟ್ಟುಹಾಕಿವೆ.

ತಟ್ಟಿದ ನೀತಿ ಸಂಹಿತೆ ಬಿಸಿ
ದಾಳಿ ಮಾಡುವ ಚಿರತೆ ಹಾಗೂ ಇತರೆ ಕಾಡು ಪ್ರಾಣಿಗಳನ್ನು ಬೆದರಿಸಿ ರಕ್ಷಣೆ ಪಡೆಯುವ ಎಂದರೆ ಕೋವಿಗಳು ಕೂಡ ಇಲ್ಲ. ಚುನಾವಣೆ ಹಿನ್ನಲೆಯಲ್ಲಿ ಪರವಾನಿಗೆ ಪಡೆದ ಕೋವಿಗಳನ್ನು ರೈತರು ಠಾಣೆಗಳಲ್ಲಿ ಡೆಪಾಸಿಟ್‌ ಇರಿಸಿದ್ದಾರೆ. ಕೋವಿಯನ್ನು ಹೊರತುಪಡಿಸಿ ಇತರೆ ಓಡಿಸುವ ತಂತ್ರಗಳಿಗೆ ಕಾಡು ಪ್ರಾಣಿಗಳು ಬಗ್ಗುತ್ತಿಲ್ಲ. ಹೀಗಾಗಿ ಬೆದರಿಸಿ ಓಡಿಸಿ ಫಸಲು ಮತ್ತು ಜೀವ ರಕ್ಷಣೆ ಮಾಡುವ ಎಂದರೆ ಅದು ಕೂಡ ಈಗಿನ ಸ್ಥಿತಿಯಲ್ಲಿ ಸಾಧ್ಯವಾಗುತ್ತಿಲ್ಲ. ಹೀಗಾಗಿ ರಕ್ಷಣೆಗೆ ಯಾವುದೇ ಪರಿಕರ ಇಲ್ಲದೆ ಕೈ ಚೆಲ್ಲಿ ಕುಳಿತುಕೊಳ್ಳುವ ಸರದಿ ಕಾಡಿನಂಚಿನ ರೈತರದ್ದಾಗಿದೆ.

ದೂರು ಬಂದಿಲ್ಲ
ಈ ಭಾಗದ ಅರಣ್ಯಗಳಲ್ಲಿ ಚಿರತೆಗಳು ಇರುವ ಸಾಧ್ಯತೆ ಹೆಚ್ಚಿವೆ. ಚಿರತೆಗಳಿಂದ ತೊಂದರೆ ಇರುವ ಕುರಿತು ಈವರೆಗೆ ಕೃಷಿಕರು ಯಾರೂ ಅಧಿಕೃತವಾಗಿ ದೂರು ಕೊಟ್ಟಿಲ್ಲ. ಚಿರತೆಗಳು ಇಲ್ಲವೆನ್ನಲು ಬರುವುದಿಲ್ಲ. ದೂರು ಸಲ್ಲಿಸಿದಲ್ಲಿ ಈ ಕುರಿತು ಗಮನಹರಿಸಿ ಅಗತ್ಯ ಎಚ್ಚರಿಕೆ ವಹಿಸಲಾಗುವುದು.
– ತ್ಯಾಗರಾಜ್‌ ಎಚ್‌.ಎಸ್‌., RFO,  ಸುಬ್ರಹ್ಮಣ್ಯ ವಿಭಾಗ

ಸದ್ಯ ಕಂಡುಬಂದಿಲ್ಲ
ಸುಬ್ರಹ್ಮಣ್ಯ ಅರಣ್ಯ ವಿಭಾಗದಲ್ಲಿ ಕಳೆದ ವರ್ಷ ತಾನು ಕರ್ತವ್ಯ ನಿರ್ವಹಿಸುತ್ತಿದ್ದೆ. ಆ ವೇಳೆ ಚಿರತೆ ದಾಳಿ ಪ್ರಕರಣ ಕಂಡುಬಂದಿತ್ತು. ಇದೀಗ ಸುಳ್ಯ ಹಾಗೂ ಸುತ್ತಮುತ್ತಲ ಸರಹದ್ದಿನಲ್ಲಿ ಇದುವರೆಗೆ ಅವುಗಳ ಹಾವಳಿ ಕಂಡು ಬಂದಿಲ್ಲ.
– ಮಂಜುನಾಥ, RFO-ಸುಳ್ಯ

— ಬಾಲಕೃಷ್ಣ  ಭೀಮಗುಳಿ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-bantwala-1

Bantwala: ನವ ದಂಪತಿ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತ; ಪತ್ನಿ ಮೃತ್ಯು, ಪತಿ ಗಂಭೀರ

Belthangady ಅಂಗಮಾರಿ ರೋಗ ಲಕ್ಷಣ: ಪರಿಶೀಲನೆ

Belthangady ಅಂಗಮಾರಿ ರೋಗ ಲಕ್ಷಣ: ಪರಿಶೀಲನೆ

Untitled-1

Uppinangady ವಿವಾಹಿತೆ ನಾಪತ್ತೆ: ದೂರು ದಾಖಲು

Suresh ಬಲ್ನಾಡು ಅವರಿಗೆ ಸಾಂಬಾರ ಕೃಷಿಕ ಪ್ರಶಸ್ತಿ ಪ್ರದಾನ

Suresh ಬಲ್ನಾಡು ಅವರಿಗೆ ಸಾಂಬಾರ ಕೃಷಿಕ ಪ್ರಶಸ್ತಿ ಪ್ರದಾನ

Engineer Bantwal ಜಯಂತ್‌ ಬಾಳಿಗ ಅವರಿಗೆ ಪ್ರತಿಷ್ಠಿತ ಮಿಲೇನಿಯಂ ಟೆಕ್ನಾಲಿಜಿ ಪ್ರಶಸ್ತಿ

Engineer Bantwal ಜಯಂತ್‌ ಬಾಳಿಗ ಅವರಿಗೆ ಪ್ರತಿಷ್ಠಿತ ಮಿಲೇನಿಯಂ ಟೆಕ್ನಾಲಿಜಿ ಪ್ರಶಸ್ತಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.