‘ಎಚ್ಚರಿಕೆ ಮಾತು ನಿರ್ಲಕ್ಷಿಸಿದರೆ ಅಪಾಯ’
ಸಮುದ್ರದಲ್ಲಿ ಅಪಾಯದಲ್ಲಿದ್ದ ಇಬ್ಬರನ್ನು ರಕ್ಷಿಸಿದ ಗಂಗಾಧರ್ ನೋವಿನ ಮಾತು
Team Udayavani, Jul 12, 2019, 5:21 AM IST
ಮಹಾನಗರ: ಹಿರಿಯರು, ಅನುಭವಿಗಳ ಮಾತನ್ನು ಗಾಳಿಗೆ ತೂರಿ ‘ನಮಗೆಲ್ಲವೂ ಗೊತ್ತಿದೆೆ; ಯಾರ ಉಪದೇಶ, ಎಚ್ಚರಿಕೆಯ ಮಾತುಗಳ ಅಗತ್ಯವಿಲ್ಲ’ ಎಂದುಕೊಂಡು ಮನಸ್ಸಿಗೆ ತೋಚಿದಂತೆ ವರ್ತಿಸುವುದರಿಂದ ಹೇಗೆ ಅಪಾಯವನ್ನು ಆಹ್ವಾನಿಸಬಹುದು ಎಂಬುದಕ್ಕೆ ಸಸಿಹಿತ್ಲು ಅಗ್ಗಿದ ಕಳಿಯದಲ್ಲಿ ರವಿವಾರ ಸಂಭವಿಸಿದ ದುರ್ಘಟನೆಯೇ ಸಾಕ್ಷಿ.
‘ನೀರಿಗಿಳಿಯಬೇಡಿ; ಅಪಾಯವಿದೆ ಎಂದರೂ ಆ ಯುವಕರು ಕಿವಿಗೊಡಲಿಲ್ಲ. ಮುಕ್ಕಾಲು ಗಂಟೆ ಸಮುದ್ರ ತೀರದಲ್ಲೇ ಕುಳಿತು ಅವರ ಮೇಲೆ ಕಣ್ಣಿಟ್ಟಿದ್ದೆ. ಗಂಟೆಯ ಬಳಿಕವೂ ಅವರು ಮೇಲೆ ಬರುವ ಲಕ್ಷಣ ಕಾಣಿಸದಿದ್ದಾಗ ಸಮೀಪದಲ್ಲೇ ಇರುವ ನನ್ನ ಮನೆಯತ್ತ ಒಮ್ಮೆ ಹೋಗಿ ಬರುತ್ತೇನೆಂದು ಹೊರಟಿದ್ದೆ. ಮನೆ ತಲುಪುವಷ್ಟರಲ್ಲಿ ಅವರು ಅಪಾಯಕ್ಕೆ ಸಿಲುಕಿದ್ದರು. ಬೊಬ್ಬೆ ಕೇಳಿ ಓಡೋಡಿ ಬಂದೆ; ನೋಡುತ್ತೇನೆ … ನಾಲ್ವರನ್ನೂ ಅಲೆಗಳು ಸೆಳೆದೊಯ್ದಿದ್ದವು. ಹರಸಾಹಸಪಟ್ಟು ಇಬ್ಬರನ್ನು ಹೇಗೋ ರಕ್ಷಿಸಿದೆ. ಮತ್ತಿಬ್ಬರನ್ನು ಉಳಿಸಿಕೊಳ್ಳಲು ನನ್ನಿಂದ ಆಗಲೇ ಇಲ್ಲ’ ಎಂದು ಕಣ್ಣೀರು ಹಾಕುತ್ತಾರೆ ಯುವಕರಿಬ್ಬರ ಪಾಲಿಗೆ ಆಪತ್ಬಾಂಧವನಾದ ಮೀನುಗಾರ ಗಂಗಾಧರ ಪುತ್ರನ್.
ಜೀವ ಕಸಿದ ನೀರಾಟ
ಬಾಕಿಮಾರು ಗದ್ದೆಯಲ್ಲಿ ನಡೆಯುತ್ತಿದ್ದ ಕೆಸರುಗದ್ದೆ ಕ್ರೀಡೋತ್ಸವದಲ್ಲಿ ಭಾಗಿ ಯಾಗಲು ಬಂದಿದ್ದ ಯುವಕರ ತಂಡದ ಏಳು ಮಂದಿ ಮೊದಲ ಸುತ್ತಿನಲ್ಲಿಯೇ ಪರಾಭವಗೊಂಡಿದ್ದರಿಂದ ಈಜಾಡಲೆಂದು ಕಳಿಯದಲ್ಲಿರುವ ಸಮುದ್ರಕ್ಕೆ ಬಂದಿದ್ದರು. ಈ ಪೈಕಿ ಬಜಪೆಯ ಸುಜಿತ್, ಕಾವೂರಿನ ಗುರುಪ್ರಸಾದ್, ಬಜಪೆಯ ಸೃಜನ್ ಮತ್ತು ಕಾರ್ತಿಕ್ ನಾಲ್ವರು ಸಮುದ್ರಕ್ಕೆ ಇಳಿದಿದ್ದರು.
ಆಗ ಅಲ್ಲೇ ಬಲೆ ಹಾಕಿ ಮೀನು ಹಿಡಿಯುತ್ತಿದ್ದ ಗಂಗಾಧರ ಪುತ್ರನ್ ಅವರು ಇಲ್ಲಿ ಸಮುದ್ರ ಮೀನುಗಾರಿಕೆಗೂ ಕಷ್ಟವಾಗುವಷ್ಟು ಆಳವಿದೆ; ಈಜಬೇಡಿ ಎಂದು ಎಚ್ಚರಿಸಿದ್ದರು. ಅದನ್ನು ಲೆಕ್ಕಿಸದ ಯುವಕರು ‘ನಮಗೆ ಈಜಲು ಬರುತ್ತದೆ… ನಮ್ಮನ್ನು ಕೇಳಲು ನೀವು ಯಾರು’ ಎಂದೆಲ್ಲ ಮರುಪ್ರಶ್ನೆ ಹಾಕಿ ನೀರಿಗಿಳಿದು ಅಪಾಯಕ್ಕೆ ಸಿಲುಕಿದರು. ತತ್‌ಕ್ಷಣ ಧಾವಿಸಿ ಬಂದ ನಾನು ಸೃಜನ್, ಕಾರ್ತಿಕ್ ಅವರನ್ನು ಅಲ್ಲಿರುವ ಅವರ ಇತರ ಗೆಳೆಯರನ್ನು ಕರೆದು ರಕ್ಷಿಸುವ ಕೆಲಸ ಮಾಡಿದೆ. ಉಳಿದಿಬ್ಬರನ್ನು ರಕ್ಷಿಸಲು ಶಕ್ತಿಮೀರಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಮತ್ತೆ ಮನೆಗೆ ಓಡಿ ಹೋಗಿ ಬಲೆ ರೋಪ್ ಮತ್ತು ಟ್ಯೂಬ್ ತಂದು ಬದುಕಿಸಲು ಯತ್ನಿಸಿದೆ. ಆದರೂ ಆಗಲಿಲ್ಲ. ಬಾಕಿಮಾರಿನಲ್ಲಿ ಕ್ರೀಡೋತ್ಸವ ಇದ್ದ ಕಾರಣ ಅಕ್ಕಪಕ್ಕದವರೂ ಸಹಾಯಕ್ಕೆ ಸಿಗಲಿಲ್ಲ’ ಎಂದು ಕಣ್ಣೀರಿಡುತ್ತಾರೆ ಗಂಗಾಧರ್ ಅವರು.
ನೀರುಪಾಲಾಗಿದ್ದ ಸುಜಿತ್ ಮೃತದೇಹ ಸೋಮವಾರ ಹಾಗೂ ಗುರುಪ್ರಸಾದ್ ಮೃತದೇಹ ಮಂಗಳವಾರ ಪತ್ತೆಯಾಗಿತ್ತು.
ಏಳು ವರ್ಷಗಳ ಹಿಂದೆ ಇಲ್ಲಿ ಇದೇ ರೀತಿಯ ದುರ್ಘಟನೆ ಸಂಭವಿಸಿತ್ತು. ಮೀನು ಹಿಡಿಯಲೆಂದು ಬಂದಿದ್ದ ಯುವಕನೋರ್ವ ಸಮುದ್ರದ ಆಳಕ್ಕೆ ಇಳಿದು ಮೃತಪಟ್ಟಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.