ಮರಳು ಸಾಗಿಸಲು ನೇತ್ರಾವತಿ ಮಧ್ಯೆ ರಸ್ತೆ ನಿರ್ಮಾಣ!
Team Udayavani, Feb 1, 2018, 10:56 AM IST
ಉಪ್ಪಿನಂಗಡಿ: ಇಳಂತಿಲ ಸಮೀಪ ನೇತ್ರಾವತಿ ನದಿಯಲ್ಲಿ ಮರಳು ತೆಗೆದು ಹೆದ್ದಾರಿಗೆ ಸಾಗಿಸಲು ನದಿ ಮಧ್ಯೆ ರಸ್ತೆ ನಿರ್ಮಿಸಲಾಗುತ್ತಿದ್ದು, ಪ್ರಾಕೃತಿಕವಾಗಿ ಹರಿಯುವ ನೀರಿಗೆ ತಡೆಯುಂಟಾಗಿದೆ, ನದಿ ನೀರು ಕಲುಷಿತವಾಗುತ್ತಿದೆ ಎಂಬ ದೂರುಗಳು ವ್ಯಕ್ತವಾಗಿವೆ.
ಹೆದ್ದಾರಿ ಚತುಷ್ಪಥ ಕಾಮಗಾರಿ ಸಲುವಾಗಿ ಇಳಂತಿಲ ಸಮೀಪ ಮರಳು ತೆಗೆಯಲು ಎಲ್ ಆ್ಯಂಡ್ ಟಿ ಕಂಪೆನಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ನೀಡಿದೆ. ಆದರೆ ಇದರ ಉಪ ಗುತ್ತಿಗೆ ಪಡೆದವರು ಉಪ್ಪಿನಂಗಡಿಯ ಹಳೆಗೇಟು ಬಳಿ ಹಿಟಾಚಿ ಬಳಸಿ ನೇತ್ರಾವತಿ ನದಿಗೆ ಅಡ್ಡಲಾಗಿ ರಸ್ತೆ ನಿರ್ಮಿಸುತ್ತಿದ್ದು, ಇದು ಅವೈಜ್ಞಾನಿಕ ಎಂಬ ಆರೋಪ ವ್ಯಕ್ತವಾಗಿದೆ.
ಅಡ್ಡಹೊಳೆ-ಬಂಟ್ವಾಳ ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಇಳಂತಿಲ ಗ್ರಾ.ಪಂ. ವ್ಯಾಪ್ತಿಯ ನೇತ್ರಾವತಿ ನದಿಯಲ್ಲಿ ಮರಳು ಬ್ಲಾಕ್ ಒಂದನ್ನು ಜಿಲ್ಲಾಧಿಕಾರಿಯವರು ಕಾಯ್ದಿರಿಸಿದ್ದಾರೆ. ಎಲ್ ಆ್ಯಂಡ್ ಟಿ ಮರಳು ತೆಗೆಯಲು ಮತ್ತೂಂದು ಸಂಸ್ಥೆಗೆ ಗುತ್ತಿಗೆ ವಹಿಸಿದೆ. ಈ ಸಂಸ್ಥೆ ಇಲ್ಲಿ ರಸ್ತೆ ಮಾಡುತ್ತಿದೆ. ಉಪ್ಪಿನಂಗಡಿ ಹಳೆಗೇಟಿನಿಂದ ನದಿಯ ಆಚೆ ಬದಿಗೆ ಲಾರಿಗಳು ಹೋಗಲು ನದಿಗೆ ಮಣ್ಣು ಹಾಕಿ ರಸ್ತೆ ಮಾಡುತ್ತಿದ್ದು, ನೀರಿನ ಹರಿವಿಗೆ ತಡೆಯಾಗಿದೆ. ಈ ಜಾಗಕ್ಕಿಂತ ಕೆಳಗೆ ಕುಡಿಯುವ ನೀರು ಸರಬರಾಜಿನ ಸಂಪ್ ಇದ್ದು, ನೀರು ಕಲುಷಿತವಾಗುತ್ತಿದೆ. ಕೆಸರು ನೀರು ಬರುತ್ತಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಹಿಟಾಚಿ ಬಳಕೆ, ನದಿ ತಿರುವು
ನದಿಯಲ್ಲಿ ಹಿಟಾಚಿ ಯಂತ್ರವನ್ನು ಬಳಸಿ ರಸ್ತೆ ನಿರ್ಮಿಸಲಾಗುತ್ತಿದೆ. ಈ ಹಿಂದೆ ಎರಡು ಕವಲಾಗಿ ಹರಿಯುತ್ತಿದ್ದ ನದಿ ಈಗ ರಸ್ತೆಯಿಂದಾಗಿ ಒಂದೇ ಮಗ್ಗುಲಲ್ಲಿ ಹರಿಯುವಂತಾಗಿದೆ. ನದಿ ಪಾತ್ರದ ಅರ್ಧ ಭಾಗಕ್ಕೆ ಮಣ್ಣು ಹಾಕಿ ಮುಚ್ಚಲಾಗಿದೆ. ಇದರಿಂದ ಮುಂದೆಯೂ ನದಿ ಹರಿವಿಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಸ್ಥಳದಲ್ಲಿದ್ದ ಸಂಸ್ಥೆಯ ಪ್ರತಿನಿಧಿ ಚರಣ್, ಚತುಷ್ಪಥ ರಸ್ತೆ ಕಾಮಗಾರಿ ಸಲುವಾಗಿ ಎಲ್ ಆ್ಯಂಡ್ ಟಿ ಸಂಸ್ಥೆಗೆ ಮರಳು
ತೆಗೆಯಲು ಪರವಾನಿಗೆ ದೊರೆತಿದೆ. ಅವರು ಮತ್ತೂಂದು ಸಂಸ್ಥೆಗೆ ಉಪ ಗುತ್ತಿಗೆ ನೀಡಿದ್ದಾರೆ. ಇದೀಗ ಈ ಸಂಸ್ಥೆಯ
ವತಿಯಿಂದ ಮರಳು ತೆಗೆಯಲು ರಸ್ತೆ ಮಾಡುತ್ತಿದ್ದೇವೆ. ಇದಕ್ಕೆ ಜಿಲ್ಲಾಧಿಕಾರಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ಪರಿಶೀಲಿಸಲು ಸೂಚನೆ
ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಮರಳು ತೆಗೆಯಲು ಎಲ್ ಆ್ಯಂಡ್ ಟಿ ಕಂಪೆನಿಗೆ ಇಳಂತಿಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಮರಳು ತೆಗೆಯಲು ಪರವಾನಿಗೆ ನೀಡಲಾಗಿದೆ. ಆದರೆ ನದಿಯಲ್ಲಿ ರಸ್ತೆ ನಿರ್ಮಿಸಲು ಅವಕಾಶ ನೀಡಿಲ್ಲ. ಈ ರೀತಿಯಾಗಿದ್ದರೆ, ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಪರಿಶೀಲನೆ ನಡೆಸಲು ಸೂಚಿಸುತ್ತೇನೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್ ಲೈಟ್ ಉರಿಯುತ್ತಿಲ್ಲ!
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.