ಶಿವಗಿರಿ – ಕುಕ್ಕಾಜೆ: ಕಳಪೆ ಕಾಮಗಾರಿ-ಮೋರಿ ನಾಪತ್ತೆ!
Team Udayavani, Jul 11, 2018, 2:15 AM IST
ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಶಿವಗಿರಿ ಕುಕ್ಕಾಜೆ ರಸ್ತೆಯಲ್ಲಿ ಗುತ್ತಿಗೆ ದಾರರು ನಡೆಸಿದ ಕಳಪೆ ರಸ್ತೆ ಕಾಮಗಾರಿಯಿಂದಾಗಿ ನೀರು ಹರಿಯುವ ಮೋರಿಯೇ ನಾಪತ್ತೆಯಾಗಿದ್ದು, ಸ್ಥಳೀಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಾಜಿ ಶಾಸಕ ವಸಂತ ಬಂಗೇರ ಅವರು ತಮ್ಮ ಕೊನೆಯ ಅವಧಿಯಲ್ಲಿ ಗ್ರಾಮಾಂತರ ಪ್ರದೇಶಗಳ ರಸ್ತೆಗಳಲ್ಲಿ ಪ್ರತಿ ವರ್ಷ ಮಳೆಯ ನೀರಿನ ತೇವಾಂಶದಿಂದ ಹೊಂಡಗಳು ನಿರ್ಮಾಣವಾಗುತ್ತಿದ್ದು, ಇದನ್ನು ತಪ್ಪಿಸಲು ಕಾಂಕ್ರಿಟ್ ಕಾಮಗಾರಿ ಮೂಲಕ ಶಾಶ್ವತ ರಸ್ತೆ ನಿರ್ಮಾಣಕ್ಕೆ ಶಿಲಾನ್ಯಾಸಗೈದಿದ್ದರು. ಅದರಂತೆ ಕರಾಯ ಗ್ರಾಮದ ಶಿವಗಿರಿ ಕುಕ್ಕಾಜೆಯಲ್ಲಿ ಕೆ.ಆರ್.ಐ.ಡಿ.ಎಲ್. ಯೋಜನೆಯಡಿ 50 ಲಕ್ಷ ರೂ. ವೆಚ್ಚದಲ್ಲಿ 800 ಮೀ. ರಸ್ತೆಗೆ ಅನುದಾನ ಮಂಜೂರಾಗಿತ್ತು.
ಆದರೆ ಗುತ್ತಿಗೆದಾರರು ಕಳಪೆ ಮಟ್ಟದ ಕಾಮಗಾರಿ ನಡೆಸಿದಲ್ಲದೆ ನಿಗಮ ನಿಗದಿಪಡಿಸಿದ ಸಾಂದ್ರತೆಯಲ್ಲಿ (ದಪ್ಪ) ಕಾಂಕ್ರೀಟ್ ಹಾಕದೆ ಬೇಕಾಬಿಟ್ಟಿ ಕಾಮಗಾರಿ ನಡೆಸಿದ್ದಾರೆ. ರಸ್ತೆ ಕಾಮಗಾರಿ ದಾಖಲೆಯನ್ನು ಹಿಡಿದು ನಿಗಮ ನಿಗದಿಪಡಿಸಿದ ಮೋರಿ ಎಲ್ಲಿ ಎಂದು ಪ್ರಶ್ನಿಸಿದಾಗ, ಗುತ್ತಿಗೆದಾರರು ಉತ್ತರ ನೀಡಲು ಚಡಪಡಿಸಿದ್ದಾರೆ. ಕಾಮಗಾರಿ ನಿಗದಿಯಾದ ಕಾಂಕ್ರೀಟ್ ಸಾಂದ್ರತೆ ರಸ್ತೆಯ ಮಧ್ಯಭಾಗದಲ್ಲಿ ಎರಡು ಇಂಚು ದಪ್ಪ ಹಾಗೂ ರಸ್ತೆ ಬದಿಗೆ 4 ಇಂಚು ಅಳವಡಿಸಿ ಯಾರಿಗೂ ಅನುಮಾನ ಬಾರದಂತೆ ಕಾಮಗಾರಿ ಮುಗಿಸುವ ಹಂತದಲ್ಲಿದ್ದಾರೆ ಎಂದು ಜನರು ಆರೋಪಿಸಿದ್ದಾರೆ.
ಕಾಮಗಾರಿ ಇನ್ನೆರಡು ಕಿ.ಮೀ. ಬಾಕಿ ಇದ್ದು, ಕೊನೆಯ ಹಂತದಲ್ಲಿದೆ. ಪ್ರಸ್ತುತ ಕಾಮಗಾರಿಯನ್ನು ಇಂಟರ್‌ನೆಟ್ ನಲ್ಲಿ ಗುತ್ತಿಗೆ ಪಡೆದು ಪಂಚಾಯತ್ ಗಮನಕ್ಕೆ ಬಾರದೆ ಬಿಲ್ಲು ಪಡೆದು ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady: ಶಂಕಿತ ಲವ್‌ಜೆಹಾದ್: ಬೀದಿಯಲ್ಲೇ ಪತಿಗೆ ಹಲ್ಲೆ!
Kadaba: ಹಳೆಸ್ಟೇಶನ್ ಬಳಿಯ ಬಂಕ್‌ನಲ್ಲಿ ಫುಲ್ ಟ್ಯಾಂಕ್ ಡೀಸೆಲ್ ತುಂಬಿಸಿ ಪರಾರಿ!
Bantwala: ಬ್ರಹ್ಮರಕೂಟ್ಲು ಟೋಲ್: ಜಗಳದ ವೀಡಿಯೋ ವೈರಲ್
Missing: ಸುಳ್ಯದಿಂದ ಬೆಂಗಳೂರಿಗೆ ತೆರಳಿದ್ದ ಯುವಕ ನಾಪತ್ತೆ
Belthangady: ಕಾಜೂರು ದರ್ಗಾ ಶರೀಫ್‌ನಲ್ಲಿ ಜ.24ರಿಂದ ಫೆ.2ವರೆಗೆ ಉರೂಸ್ ಸಂಭ್ರಮ
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್