ನೀರಿನ ಪೈಪ್‌ಗಾಗಿ ರಸ್ತೆ ಅಗೆತ: ಗ್ರಾಮಸ್ಥರ ಪ್ರತಿಭಟನೆ
Team Udayavani, Jan 29, 2018, 12:44 PM IST
ಬಜಪೆ : ರಸ್ತೆ ಡಾಮರುಗೊಂಡ ಮಾರನೆ ದಿನವೇ ಕಂದಾವರ ವ್ಯಾಪ್ತಿಯ ಮಹಿಳೆಯೊರ್ವರು ನೀರು ಸರಬರಾಜಿನ ಪೈಪ್‌ಗಾಗಿ ರಸ್ತೆ ಅಗೆದಿದ್ದು ಗ್ರಾಮಸ್ಥರು ತೀವ್ರವಾಗಿ ಪ್ರತಿಭಟಿಸಿದರು. ಜಿಲ್ಲಾ ಮತ್ತು ಇತರೆ ರಸ್ತೆಗಳ-ನವೀಕರಣ ಯೋಜನೆಯಡಿ 1ಕೋಟಿ ರೂ. ಅನುದಾನದಲ್ಲಿ ಬಜಪೆ ವಿಮಾನ ನಿಲ್ದಾಣ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದ ಎರಡು ದಿನದಲ್ಲಿ ಈ ಅಗೆತ ನಡೆದಿದೆ. ಜ.15ರಂದು ಈ ರಸ್ತೆ ಕಾಮಗಾರಿಗೆ ಶಾಸಕ ಕೆ. ಅಭಯಚಂದ್ರ ಅವರು ಗುದ್ದಲಿ ಪೂಜೆ ನಡೆಸಿದ್ದರು. ಇಲ್ಲಿನ ಗ್ರಾಮಸ್ಥರು ಈ ಹದೆಗೆಟ್ಟ ರಸ್ತೆಯ ಬಗ್ಗೆ ಹಲವಾರು ಬಾರಿ ಪ್ರತಿಭಟನೆ ನಡೆಸಿ, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರು.
ಯಾಕೆ ಅಗೆತ ?
ಮಳವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹಿಳೆಯೊರ್ವರಿಗೆ ನೀರಿನ ಸರಬರಾಜಿನ ಪೈಪು ಬಂದಿಲ್ಲ. ಈ ಬಗ್ಗೆ ಪಂಚಾಯತ್‌ಗೆ ಹಲವು ಬಾರಿ ಮನವಿ ಮಾಡಿದ್ದರು. ಇದು ಈಡೇರದಿದ್ದಾಗ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ನೀರು ಸಂಪರ್ಕಕ್ಕಾಗಿ ಡಾಮರುಗೊಂಡ ರಸ್ತೆಯನ್ನು ಅಗೆಯಲು ಸಿದ್ದರಾಗಿದ್ದರು. ಇದಕ್ಕೆ ಗುತ್ತಿಗೆದಾರರು ಸಮ್ಮತಿಸಿದ್ದರು ಎಂದು ಹೇಳಲಾಗಿದೆ. ಬಳಿಕ ಪರಿಸ್ಥಿತಿ ಹದಗೊಳಿಸಲು ಬಜಪೆ ಪೊಲೀಸರು ಸ್ಥಳಕ್ಕೆ ಬರಬೇಕಾಯಿತು.
ಹಣ ಕಟ್ಟಿದರೆ ಮಳವೂರು ಗ್ರಾ.ಪಂ.ನೀರು
ಈಗಾಗಲೇ ಮಳವೂರು ವೆಂಟೆಡ್ ಡ್ಯಾಂನ ನೀರು ಈ ಪ್ರದೇಶಕ್ಕೆ ಸರಬರಾಜು ಮಾಡಲು ಪೈಪುಗಳ ಜೋಡಣೆಯಾಗಿದೆ. ಸದ್ಯದಲ್ಲಿ ನೀರು ಸಂಪರ್ಕ ಕಲ್ಪಿಸಲಾಗುವುದು. ಸಂಪರ್ಕದ ಬಾಬ್ತು ಹಣ ಕಟ್ಟಿದರೆ ನೀರು ನೀಡಲಾಗುವುದು.
– ಪ್ರಸಿಲ್ಲಾ
ಗ್ರಾಮ ಪಂಚಾಯತ್ ಸದಸ್ಯೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
MUST WATCH
ಹೊಸ ಸೇರ್ಪಡೆ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.