ಕತ್ತಲಲ್ಲಿ ಎಡಪದವು -ಕುಪ್ಪೆ ಪದವು ರಸ್ತೆ


Team Udayavani, Apr 24, 2018, 10:38 AM IST

24-April-3.jpg

ಎಡಪದವು: ಕುಪ್ಪೆಪದವು ಲೋಕೋಪಯೋಗಿ ರಸ್ತೆಯಲ್ಲಿರುವ ವಿದ್ಯುತ್‌ ಕಂಬಗಳಿಗೆ ದಾರಿದೀಪವೇ ಮಾಯಾವಾಗಿದ್ದು ಇದರಿಂದ ಪಾದಚಾರಿಗಳಿಗೆ ಸಂಚಕಾರ ಹಾಗೂ ಅಪಾಯ ಎದುರಾಗಿದೆ.

ಹಲವಾರು ವರ್ಷಗಳಿಂದ ಇಲ್ಲಿ ವಾಹನಗಳು ಕತ್ತಲಲ್ಲಿ ಸಂಚಾರ ಮಾಡುತ್ತಿದೆಯಾದರೂ ವಾಹನ ಚಾಲಕರು, ಜನರು ತಮ್ಮ ಸಮಸ್ಯೆ ಹೇಳದೇ ಸುಮ್ಮ ನಿರುವುದು ಈ ಬಗ್ಗೆ ಯಾವ ಕ್ರಮ ತೆಗೆದುಕೊಳ್ಳದಿರುವುದು ಒಂದು ಕಾರಣವೆಂದು ಹೇಳಲಾಗುತ್ತಿದೆ.

ಇದು ಗ್ರಾಮೀಣ ಪ್ರದೇಶವನ್ನಾವರಿಸಿಕೊಂಡು ಹೋಗುವ ರಸ್ತೆಯಾಗಿದೆ. 6 ವರ್ಷಗಳಿಂದ ಈ ರಸ್ತೆಯ ಬದಿಯಲ್ಲಿರುವ ವಿದ್ಯುತ್‌ ಕಂಬಕ್ಕೆ ದಾರಿ ದೀಪವೇ ಮಾಯಾವಾಗಿದೆ. ಇದರಿಂದ ರಾತ್ರಿವೇಳೆಯಲ್ಲಿ ವಾಹನ ಸಂಚಾರ ಹಾಗೂ ಪಾದಚಾರಿಗಳಿಗೆ ನಡೆದು ಕೊಂಡು ಹೋಗಲು ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದೆ.

ಕಿ.ಮೀಟರ್‌ಗೆ 2 ದಾರಿ ದೀಪ
ಕುಂದೋಡಿಯಿಂದ ಪದ್ರೆಂಗಿಯವರೆಗಿನ ರಸ್ತೆಯ ಬದಿಯಲ್ಲಿರುವ ವಿದ್ಯುತ್‌ ಕಂಬಕ್ಕೆ ದಾರಿದೀಪವೇ ಇಲ್ಲ. ಕುಂದೋಡಿಯ (ಮೈಲು ಕಲ್ಲು) ಕಿ.ಮೀ. ಕಲ್ಲು ನಿಂದ ಒಂದು ಕಿ.ಮೀ.ನಲ್ಲಿ 2 ವಿದ್ಯುತ್‌ ದೀಪಗಳು ಮಾತ್ರ ಕಾಣಿಸುತ್ತವೆ. ಅದು ಕೂಡ ರಾತ್ರಿ ಸರಿಯಾಗಿ ಉರಿಯುತ್ತದೆ ಎಂದು ಹೇಳುವಂತಿಲ್ಲ. 14 ವಿದ್ಯುತ್‌ ಕಂಬಗಳಿಗೆ ದಾರಿದೀಪವೇ ಇಲ್ಲ. ಅದರಲ್ಲಿ ನಿರಂತರ 8 ವಿದ್ಯುತ್‌ ಕಂಬಗಳಲ್ಲಿ ದಾರಿದೀಪವೇ ಇಲ್ಲ. ಒಂದರಲ್ಲಿ ದಾರಿ ದೀಪ ಇದ್ದರೆ ಮತ್ತೆ 2ಕಂಬಗಳಲ್ಲಿ ಇಲ್ಲ, ಹೀಗೆ ಮಧ್ಯೆಮಧ್ಯೆ ಒಂದರಲ್ಲಿ ದಾರಿ ದೀಪಗಳಿವೆ.ದುರ್ಗಾನಗರ ಬಸ್ಸು ನಿಲ್ದಾಣದಲ್ಲಿ ಪಂಚಾಯತ್‌ನಿಂದ 2 ದಾರಿದೀಪಗಳನ್ನು ಹಾಕಿಸಿದ್ದಾರೆ.

ಅಪಘಾತಕ್ಕೆ ಕಾರಣ
ದುರ್ಗಾನಗರ ಸಮೀಪದಲ್ಲಿರುವ ಮಾವಿನ ಮರ ರಸ್ತೆಯ ಬದಿಯಲ್ಲಿಯೇ ಇರುವುದರಿಂದ ರಾತ್ರಿಯಲ್ಲಿ ದಾರಿ ದೀಪ ಇಲ್ಲದ ಕಾರಣ ವಾಹನಕ್ಕೆ ಅಪಾಯ ವಿದೆ. ಈಗಾಗಲೇ ಅಪಘಾತಗಳು ಇಲ್ಲಿ ಸಂಭವಿಸಿವೆ. ತಿರುವುಗಳಿಂದ ಕೂಡಿದ ರಸ್ತೆ ಅಪಘಾತಕ್ಕೆ ಇನ್ನೊಂದು ಕಾರಣವಾಗಿದೆ.

ಮಹಿಳೆಯರಿಗೆ ಸಂಕಷ್ಟ
ನಿತ್ಯ ಹಲವಾರು ಬಸ್ಸುಗಳು, ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ರಾತ್ರಿ ವೇಳೆಯಲ್ಲಿ ರಸ್ತೆ ಬದಿಯಲ್ಲಿ ನಡೆದು ಕೊಂಡು ಹೋಗುವವರಿಗೆ ವಾಹನಗಳು ಸಮೀಪ ಬಂದರೂ ಗೊತ್ತಾಗುವುದಿಲ್ಲ. ಸಂಜೆಯ ಬಳಿಕ ಮಹಿಳೆಯರು ನಡೆದು ಕೊಂಡು ಹೋಗುವುದೇ ಸುರಕ್ಷಿತವಲ್ಲ ಎನ್ನುವಂತಾಗಿದೆ.

ಹೈಟೆಶ್ಶನ್‌ ಕಂಬಕ್ಕೆ ದಾರಿದೀಪ ಹಾಕುವಂತಿಲ್ಲ
ಹೈಟೆಶ್ಶನ್‌ ತಂತಿ ಹಾದೂ ಹೋಗುವ ಕಂಬಕ್ಕೆ ದಾರಿದೀಪ ಹಾಕುವಂತಿಲ್ಲ. ಇಲ್ಲಿ ಹೆಚ್ಚಾಗಿ ಹೈಟೆಶ್ಶನ್‌ ತಂತಿ ಹಾದು ಹೋಗುವ ಕಂಬಗಳು ಈ ರಸ್ತೆಯ ಬದಿಯಲ್ಲಿರುವುದರಿಂದ ದಾರಿ ದೀಪಕ್ಕೆ ಬೇರೆಯೇ ತಂತಿ ಹಾಕಬೇಕಾದ ಕಾರಣ ಇಲ್ಲಿ ದೀಪಗಳು ಉರಿಯಲು ಸಾಧ್ಯವಿಲ್ಲವಾಗಿದೆ.

ಕ್ರಮ ತೆಗೆದುಕೊಳ್ಳಬೇಕಾಗಿದೆ
ರಸ್ತೆಯ ಬದಿಯಲ್ಲಿ ಹೆಚ್ಚಿನವು ಹೈಟೆಶ್ಶನ್‌ ತಂತಿಗಳು ಹಾದು ಹೋಗಿವೆ. ಹೊಸ ಲೈನ್‌ ಗಳಿಗೆ ಪಂಚಾಯತ್‌ ಕಾರ್ಯಯೋಜನೆ ರೂಪಿಸಬೇಕಾಗಿದೆ. ದಾರಿದೀಪಕ್ಕೆ ಬೇರೆಯೇ ಕಂಬಗಳನ್ನು ಹಾಕಬೇಕಾಗಿದೆ. ಈಗ ಚುನಾವಣೆ ಆದ ಕಾರಣ ಇದನ್ನು ತಾಲೂಕು ಕಾರ್ಯನಿರ್ವಾಹಣಾಧಿಕಾರಿಗಳ ಗಮನಕ್ಕೆ ತಂದು ಕ್ರಮ ತೆಗೆದುಕೊಳ್ಳಬೇಕಾಗಿದೆ.
– ಭೋಗಮಲ್ಲಣ್ಣ, ಪಿಡಿಒ,
ಎಡಪದವು ಗ್ರಾಮ ಪಂಚಾಯತ್‌.

ಅಪಘಾತಕ್ಕೆ ಕಾರಣ
ಕಳೆದ ಆರು ವರ್ಷಗಳಿಂದ ಈ ರಸ್ತೆಯಲ್ಲಿ ರಾತ್ರಿ ಕತ್ತಲಲ್ಲಿ ವಾಹನದಲ್ಲಿ ಸಂಚರಿಸುತ್ತಿದ್ದೇನೆ. ಕತ್ತಲಿನಿಂದ ಕೂಡಿದ ಈ ಪ್ರದೇಶದಲ್ಲಿ ಸಂಚರಿಸುವುದು ಭಯವಾಗುತ್ತದೆ. ಕತ್ತಲಲ್ಲಿ ಇಲ್ಲಿರುವ ತಿರುವುಗಳು ಅಪಘಾತಕ್ಕೆ ಕಾರಣವಾಗಬಹುದು ಎಂದು ನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಚಾಲಕರೋರ್ವರು ತಿಳಿಸಿದ್ದಾರೆ.

ಸುಬ್ರಾಯ ನಾಯಕ್‌ ಎಕ್ಕಾರು

ಟಾಪ್ ನ್ಯೂಸ್

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

10

Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ

Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು

Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

de

Mangaluru: ವೆನ್ಲಾಕ್‌ನಲ್ಲಿ ಅಪರಿಚಿತ ಶವ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.