ಸಸಿಹಿತ್ಲು ಬೀಚ್ ರಸ್ತೆಗೆ ಹೊಂಡ, ಗುಂಡಿಗಳಿಂದ ಸ್ವಾಗತ?
Team Udayavani, Jul 13, 2017, 3:25 AM IST
ಹಳೆಯಂಗಡಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದು ಕಡಲ ಕ್ರೀಡೆಯಾದ ಸರ್ಫಿಂಗ್‌ನಿಂದ ದೇಶ ವಿದೇಶದ ಪ್ರವಾಸಿಗರನ್ನು ಸೆಳೆಯುತ್ತಿರುವ ಸಸಿಹಿತ್ಲು ಬೀಚ್ ಪ್ರದೇಶ ಅಭಿವೃದ್ಧಿಯಲ್ಲೂ ಮುಂಚೂಣಿಯಲ್ಲಿದ್ದರೂ ಇಲ್ಲಿನ ಬಸ್ ನಿಲ್ದಾಣ ಪ್ರದೇಶದ ರಸ್ತೆ ಮಾತ್ರ ಹೊಂಡ ಗುಂಡಿಗಳಿಂದ ಕೂಡಿದ್ದು ಇಲ್ಲಿ ರಸ್ತೆಯನ್ನು ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಸಸಿಹಿತ್ಲುವಿನ ಕೊನೆಯ ಸಂಪರ್ಕದ ಪ್ರದೇಶವಾಗಿರುವ ಮುಂಡ ಪ್ರದೇಶದಲ್ಲಿರುವ ಸಸಿಹಿತ್ಲು ಬಸ್ ನಿಲ್ದಾಣವೇ ಬೀಚ್ ಪ್ರದೇಶದ ಏಕೈಕ ಪ್ರಮುಖ ಸಂಪರ್ಕದ ರಸ್ತೆಯೂ ಆಗಿದೆ. ಡಾಮರು ರಸ್ತೆಯ ಅನಂತರ ಬೀಚ್‌ನ ಕಾಂಕ್ರೀಟ್ ರಸ್ತೆಯ ನಡುವಿನ ಸುಮಾರು 300 ಮೀ. ರಸ್ತೆಯಲ್ಲಿ ದೊಡ್ಡ ಗಾತ್ರ ಹೊಂಡಗಳು ನಿರ್ಮಾಣ ವಾಗಿವೆ. ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಬೇಕಾದರೆ ಈ ಗುಂಡಿಗಳ ಮೂಲಕವೇ ಸಂಚರಿಸಬೇಕಾಗಿದೆ.
ಈ ರಸ್ತೆಯಲ್ಲಿಯೇ ಬಸ್ಸು, ಕಾರು ಇನ್ನಿತರ ಪ್ರವಾಸಿಗರ ವಾಹನಗಳು, ದ್ವಿಚಕ್ರ ವಾಹನಗಳೂ ಸಹ ಸಂಚರಿಸುತ್ತಿದ್ದು, ಮಳೆಗಾಲವಾದುದರಿಂದ ಹೊಂಡಗಳಲ್ಲಿ ನೀರು ತುಂಬಿದೆ. ಈ ಹೊಂಡಗಳಿಂದ ಕೆಲವೊಂದು ವಾಹನಗಳ ಕೆಳಭಾಗಕ್ಕೂ ಹಾನಿಯಾಗುತ್ತಿದೆ ಎಂದು ಪ್ರಯಾಣಿಕರು ಪತ್ರಿಕೆಯೊಂದಿಗೆ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬೀಚ್ ನಿರ್ವಹಣೆ ಮಾಡುವ ಜಿಲ್ಲಾಡಳಿತವಾಗಲಿ ಅಥವಾ ಹಳೆಯಂಗಡಿ ಗ್ರಾಮ ಪಂಚಾಯತ್ ಆದರೂ ಕನಿಷ್ಠ ತಾತ್ಕಾಲಿಕವಾಗಿ ಹೊಂಡಗಳಿಗೆ ಮಣ್ಣು ತುಂಬಿಸಿದಲ್ಲಿ ಮಳೆಗಾಲದಲ್ಲಾದರೂ ರಕ್ಷಣೆ ನೀಡಿದಂತಾಗುತ್ತದೆ ಎಂದು ಪ್ರವಾಸಿಗರು ಸಲಹೆ ನೀಡುತ್ತಾರೆ.
‘ಸುನಾಮಿ ಯೋಜನೆಯಲ್ಲಿದೆ’
ಈ ಸಮಸ್ಯೆಯ ಬಗ್ಗೆ ಪಂಚಾಯತ್‌ನ ಬೀಚ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಚ್. ವಸಂತ ಬೆರ್ನಾಡ್ ಮಾತನಾಡಿ, ಶಾಸಕ ಕೆ. ಅಭಯಚಂದ್ರ ಅವರು ಸುನಾಮಿ ಯೋಜನೆಯಲ್ಲಿ ಮುಕ್ಕದಿಂದ ಸಸಿಹಿತ್ಲು ಪ್ರದೇಶದವರೆಗೆ ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಈ ರಸ್ತೆಗೆ 3 ಕೋ. ರೂ. ವೆಚ್ಚದಲ್ಲಿ ಸಂಪೂರ್ಣವಾಗಿ ಕಾಂಕ್ರೀ ಟೀಕರಣಗೊಳಿಸುವ ಯೋಜನೆಯನ್ನು ರೂಪಿಸಿದ್ದು, ಮುಂದಿನ ಸೆಪ್ಟಂಬರ್ ತಿಂಗಳಿನಲ್ಲಿ ಕಾಮಗಾರಿ ಪ್ರಾರಂಭ ಆಗಬಹುದು. ಆಗ ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ವೆನ್ಲಾಕ್‌ನಲ್ಲಿ ಅಪರಿಚಿತ ಶವ
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Mangaluru: ಪದವು ಜಂಕ್ಷನ್- ಶರ್ಬತ್ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್
Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.